Go to full page →

ಪರಲೋಕದ ಸಮಾಧಾನಕರ ಹಾಗೂ ಸ್ನೇಹಮಯ ವಾತವರಣ ಕೊಕಾಘ 173

ಪರಲೋಕದಲ್ಲಿ ಎಲ್ಲವೂ ಅತ್ಯಂತ ಶ್ರೇಷ್ಠವೂ ಹಾಗೂ ಉನ್ನತವೂ ಆಗಿರುತ್ತದೆ. ಎಲ್ಲರೂ ಸಹ ಇತರರ ಸಂತೋಷ ಹಾಗೂ ಒಳ್ಳೆಯದನ್ನು ಬಯಸುತ್ತಾರೆ. ಯಾರೂ ಸಹ ತಮ್ಮ ಸ್ವಾರ್ಥ ಬಯಸುವುದಿಲ್ಲ. ತಮ್ಮ ಸುತ್ತಲಿರುವ ಸಮಾಧಾನಕರ, ಸ್ನೇಹಮಯ ಹಾಗೂ ಸಂತೋಷದ ವಾತಾವರಣವನ್ನು ಪರಿಶುದ್ಧರೆಲ್ಲರೂ ಬಹಳ ಹರ್ಷದಿಂದ ನೋಡುತ್ತಾರೆ (ಟೆಸ್ಟಿಮೊನೀಸ್, ಸಂಪುಟ 2, ಪುಟ 239). ಕೊಕಾಘ 173.4

ನೀತಿ, ಸಮಾಧಾನದ ರಾಜ್ಯವಾಗಿರುವ ಪರಲೋಕದಲ್ಲಿ ಎಲ್ಲವೂ ಪರಿಶುದ್ಧವೂ, ನಿರ್ಮಲವೂ, ಆಶೀರ್ವಾದಕರವೂ ಆಗಿರುತ್ತದೆ. ಅಲ್ಲಿ ಯಾರಿಂದಲೂ ಎಣಿಸಲಾಗದಂತ ಅಸಂಖ್ಯಾತ ನೀತಿವಂತರು ಸಿಂಹಾಸನದಲ್ಲಿ ಆಸೀನರಾಗಿರುವ ದೇವರು ಹಾಗೂ ಯುಜ್ಞದ ಕುರಿಯಾದ ಕ್ರಿಸ್ತನನ್ನು ಯುಗಯುಗಾಂತರಗಳವರೆಗೂ ಸ್ತುತಿಸುತ್ತಾ ಹರ್ಷದಿಂದ ವಾಸಿಸುವರು. ಕೊಕಾಘ 173.5

ಅವರ ಸ್ವರಗಳು ಪರಿಪೂರ್ಣ ಸಾಮರಸ್ಯದಿಂದಿರುತ್ತದೆ. ಅವರು ಎಂದೂ, ಯಾರಿಗೂ ತಪ್ಪು ಮಾಡುವುದಿಲ್ಲ. ಪರಲೋಕದ ರಾಜಕುಮಾರರಾದ ಅವರು ಪರಸ್ಪರ ಸಂತೋಷ ಬಯಸುವುದರಲ್ಲಿ ಮಾತ್ರ ಪ್ರತಿಸ್ಪರ್ಧಿಗಳಾಗಿರುವರು. ಪರಲೋಕದಲ್ಲಿ ಮಹಾನ್ ವ್ಯಕ್ತಿಯಾಗಿರುವವನು, ತನ್ನನ್ನು ತಾನೇ ಇತರಿಗಿಂತ ಕನಿಷ್ಠನೆಂದೆಣಿಸುವನು. ಅಲ್ಲದೆ ಅಲ್ಲಿ ಯಾವ ಗಣನೆಗೂ ಬಾರದವನು ಮಹಾಪ್ರೀತಿ ಹಾಗೂ ಕೃತಜ್ಞತೆ ತೋರಿಸುವನು. ಕೊಕಾಘ 174.1

ಬೌದ್ಧಿಕ ಶಕ್ತಿಯನ್ನು ಯಾರೂ ಸಹ ಮಂಕುಗೊಳಿಸಲಾಗದು. ಸತ್ಯ ಮತ್ತು ಜ್ಞಾನವು ಬಲವಾಗಿಯೂ, ಪರಿಪೂರ್ಣವೂ ಆಗಿದ್ದು ಎಲ್ಲಾ ಸಂದೇಹಗಳನ್ನು ಪರಿಹರಿಸುವುದು. ಪರಲೋಕದಲ್ಲಿ ಸದಾ ಸಂತೋಷದಿಂದಿರುವವರ ಮೇಲೆ ಯಾವುದೇ ರೀತಿಯ ಸಂದೇಹದ ಛಾಯೆಯಾಗಲಿ ಇರುವುದಿಲ್ಲ. ಯಾವುದೇ ಭಿನ್ನಾಭಿಪ್ರಾಯ ಅಥವಾ ಜಗಳವು ಪರಲೋಕದ ಪರಿಪೂರ್ಣವಾದ ಶಾಂತಿಯನ್ನು ಕೆಡಿಸುವುದಿಲ್ಲ. ಅವರಿಗೆ ಕಣ್ಣೀರು, ದುಃಖಗೋಳಾಟವು ಇರುವುದಿಲ್ಲ. ಅಲ್ಲಿರುವ ಎಲ್ಲವೂ ಪರಿಪೂರ್ಣ ಸಾಮರಸ್ಯ, ಪರಿಪೂರ್ಣ ಕ್ರಮಬದ್ಧವಾಗಿಯೂ ಹಾಗೂ ಪರಿಪೂರ್ಣವಾದ ಸ್ವರ್ಗಸುಖದಿಂದಲೂ ಕೂಡಿರುತ್ತದೆ. ಕೊಕಾಘ 174.2

ಪರಲೋಕದಲ್ಲಿ ಎಲ್ಲರೂ ಕನಿಕರ ಹೊಂದಿದ್ದು, ಅಲ್ಲಿ ಪ್ರೀತಿಯು ಕೂಡಿರುತ್ತದೆ. ಯಾವುದೇ ಜಗಳ, ಕಲಹ, ಭಿನ್ನಾಭಿಪ್ರಾಯಗಳು ಅಲ್ಲಿರುವುದಿಲ್ಲ. ಕೊಕಾಘ 174.3