Go to full page →

ಜೀವನದಲ್ಲಿ ಎದುರಿಸಿದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ ಕೊಕಾಘ 178

ನಾವು ಈ ಲೋಕದಲ್ಲಿ ನಮ್ಮ ಜೀವನದಲ್ಲಿ ಎದುರಿಸಿದ ಎಲ್ಲಾ ವಿಧವಾದ ಇಕ್ಕಟ್ಟಿನ ಪರಿಸ್ಥಿತಿಗಳಿಗೆ ವಿವರಣೆ ದೊರೆಯುತ್ತದೆ. ಕೇವಲ ಗಲಿಬಿಲಿ, ನಿರಾಶೆ, ನಮ್ಮ ಯೋಜನೆಗಳ ವಿಫಲತೆ - ಇವೆಲ್ಲವುಗಳು ದೈವೀಕ ಸಾಮರಸ್ಯದಿಂದ ಒಂದು ಮಹೋನ್ನತವಾದ ಯಶಸ್ಸಿನ ಉದ್ದೇಶಕ್ಕಾಗಿ ಮಾಡಿದ್ದ ಯೋಜನೆ ಎಂದು ಕಂಡುಬರುವುದು (ಎಜುಕೇಷನ್ 305), - ಆಗ ಯೇಸುಸ್ವಾಮಿಯು ದೇವರ ಸಿಂಹಾಸನದಿಂದ ಹರಿದು ಬರುವ ಜೀವಕರವಾದ ನದಿಯ ಬಳಿಗೆ ನಮ್ಮನ್ನು ನಡೆಸುವನು. ಅಲ್ಲಿ ಈ ಲೋಕದಲ್ಲಿ ನಮ್ಮ ಗುಣಸ್ವಭಾವಗಳನ್ನು ಪರಿಪೂರ್ಣಗೊಳಿಸಲು ನಮಗೆ ಹೇಗೆ ಕಷ್ಟ ಸಂಕಟ ನಿರಾಶೆಗಳು ಒದಗಿ ಬಂದವೆಂದು ಕ್ರಿಸ್ತನು ನಮಗೆ ವಿವರಿಸುವನು (ಟೆಸ್ಟಿಮೊನೀಸ್ ಸಂಪುಟ 8, ಪುಟ 254). ಕೊಕಾಘ 178.1

ಈ ಲೋಕದಲ್ಲಿ ತಿಳಿದುಕೊಳ್ಳಲು ಕಠಿಣವಾಗಿದ್ದ ಎಲ್ಲಾ ವಿಷಯಗಳು ನಮಗೆ ಸರಳವಾಗಿ ವಿವರಿಸಲ್ಪಡುವವು. ದೇವಕೃಪೆಯ ಎಲ್ಲಾ ವಿಧವಾದ ನಿಗೂಢತೆಗಳು ನಮಗೆ ಪ್ರಕಟಗೊಳ್ಳುತ್ತವೆ. ಇತಿಮಿತಿಯಾದ ನಮ್ಮ ಮನಸ್ಸಿಗೆ ಕೇವಲ ಗಲಿಬಿಲಿ ಉಂಟಾಗಿತ್ತು, ಅಲ್ಲಿ ಅತ್ಯಂತ ಪರಿಪೂರ್ಣವಾದ ಸಾಮರಸ್ಯ ಕಂಡುಬರುತ್ತದೆ. ಅತ್ಯಂತ ಕಷ್ಟಕರವಾದ ಅನುಭವಗಳನ್ನು ನಾವು ಹೊಂದಬೇಕೆಂದು ಅನಂತ ಪ್ರೀತಿಸ್ವರೂಪಿಯಾದ ದೇವರು ಅನುಮತಿ ನೀಡಿದನೆಂದು ಅಲ್ಲಿ ನಮಗೆ ತಿಳಿದುಬರುವುದು, ಕ್ರಿಸ್ತನ ಅಪಾರವಾದ ಕರುಣೆಯನ್ನು ಅರಿತುಕೊಂಡಾಗ, ನಾವು ಹೇಳಲಾರದಂತ ಹರ್ಷದಿಂದ ಸಂತೋಷಪಡುತ್ತೇವೆ (ಟೆಸ್ಟಿಮೊನೀಸ್‌ ಸಂಪುಟ 9, ಪುಟ 286). ಕೊಕಾಘ 178.2