Go to full page →

ಪ್ರತಿಯೊಂದು ಶ್ರೇಷ್ಠ ಕಾರ್ಯದ ಪ್ರತಿಫಲ ಕೊಕಾಘ 178

ನಿಸ್ವಾರ್ಥದಿಂದ ಸೇವೆ ಮಾಡಿದವರು ತಮ್ಮ ಶ್ರಮದ ಫಲವನ್ನು ಅನುಭವಿಸುವರು. ಸರಿಯಾದ ಉದ್ದೇಶವಿಟ್ಟು ಮಾಡಿದ ಮಹೋನ್ನತವಾದ ಶ್ರೇಷ್ಠ ಕಾರ್ಯಗಳ ಪ್ರತಿಫಲವು ತೃಪ್ತಿಕರವಾಗಿ ಕೊಡಲ್ಪಡುವುದು. ಆದರೆ ಈ ಲೋಕದಲ್ಲಿ ಮಾಡಿದ ಶ್ರೇಷ್ಠ ಕಾರ್ಯಗಳಿಗೆ ಯಾವುದೇ ಪ್ರತಿಫಲ ಕಂಡುಬಂದಿರುವುದಿಲ್ಲ ಎಷ್ಟೊಂದು ಜನರು ಇಲ್ಲಿ ಪ್ರಾಮಾಣಿಕವಾಗಿ ನಿಸ್ವಾರ್ಥದಿಂದ ದಣಿವಿಲ್ಲದೆ ಇತರರಿಗಾಗಿ ಸೇವೆ ಮಾಡಿದ್ದಾರಲ್ಲವೇ? ಪೋಷಕರು, ತಂದೆತಾಯಿಗಳು ಮತ್ತು ಶಿಕ್ಷಕರು ತಮ್ಮ ಜೀವಮಾನದಲ್ಲಿ ಮಾಡಿದ ಶ್ರಮ ವ್ಯರ್ಥವಾಯಿತೆಂದು ತಿಳಿದು ನಿದ್ರೆಹೋಗಿದ್ದಾರೆ. ಆದರೆ ತಮ್ಮ ಪ್ರಾಮಾಣಿಕತೆಯು ಎಂದಿಗೂ ನಿಂತು ಹೋಗದಂತ ಆಶೀರ್ವಾದದ ಒರತೆಯಂತಿದೆ ಎಂದು ಅವರಿಗೆ ತಿಳಿಯದು. ಆದರೆ ತಾವು ತರಬೇತಿ ನೀಡಿದ ಮಕ್ಕಳು ಇತರರಿಗೆ ಆಶೀರ್ವಾದಕರವಾಗಿಯೂ ಪ್ರೇರಣೆಯೂ ಆಗಿರುವುದೆಂಬ ವಿಶ್ವಾಸ ಅವರಲ್ಲಿರುತ್ತದೆ. ಹಾಗೂ ಇದರ ಪ್ರಭಾವವು ಸಾವಿರದಷ್ಟು ಫಲಕೊಡುತ್ತದೆ (ಲಾಸ್ಟ್ ಡೇ ಈವೆಂಟ್ಸ್, ಪುಟ 304). ಕೊಕಾಘ 178.3

ದೇವರ ಅನೇಕ ಸೇವಕರು ಜಗತ್ತಿನಾದ್ಯಂತ ತಮ್ಮ ಸಂದೇಶಗಳ ಮೂಲಕ ಜನರನ್ನು ಬಲಗೊಳಿಸಿ ಅವರಿಗೆ ಧೈರ್ಯ ಹಾಗೂ ನಿರೀಕ್ಷೆ ನೀಡುತ್ತಿದ್ದಾರೆ. ಅಲ್ಲದೆ ಈ ಸಂದೇಶಗಳು ಕೇಳುಗರ ಹೃದಯಕ್ಕೆ ಆಶೀರ್ವಾದ ತರುತ್ತದೆ. ಆದರೆ ಒಂಟಿಯಾಗಿ ಯಾವುದೋ ಅಜ್ಞಾತ ಸ್ಥಳದಲ್ಲಿ ಸೇವೆ ಮಾಡುತ್ತಿರುವ ದೇವರ ಸೇವಕರಿಗೆ ತಾವು ಕೊಟ್ಟ ಸಂದೇಶದಿಂದಾಗುವ ಫಲಿತಾಂಶಗಳ ಬಗ್ಗೆ ತಿಳಿದಿಲ್ಲ. ಇವರು ಬಿತ್ತಿದ ಬೀಜಗಳಿಂದ ಇತರರು ಆಶೀರ್ವಾದ ದಾಯಕವಾದ ಬೆಳೆಯನ್ನು ಕೊಯ್ಯುತ್ತಾರೆ. ಇವರು ಸಸಿ ನೆಡುತ್ತಾರೆ, ಇತರರು ಅದರ ಹಣ್ಣುಗಳನ್ನು ತಿನ್ನುತ್ತಾರೆ. ಜನರ ರಕ್ಷಣೆಗಾಗಿ ತಾವು ಮಾಡಿದ ಒಳ್ಳೆ ಕಾರ್ಯಗಳಿಂದ ದೇವರ ಸೇವಕರು ತೃಪ್ತರಾಗುತ್ತಾರೆ. ಇದರ ಕ್ರಿಯೆ ಹಾಗೂ ಪ್ರತಿಕ್ರಿಯೆಯು ಇಲ್ಲಿಂದ ಆರಂಭವಾಗುತ್ತವೆ (ಎಜುಕೇಷನ್ 305, 306). ಕೊಕಾಘ 178.4