Go to full page →

ವ್ಯವಸ್ಥೆಯು ಯಾವಾಗಲೂ ಅಗತ್ಯ ಕೊಕಾಘ 27

ಸಭೆಗಳು ವ್ಯವಸ್ಥಿತವಾದ ರೀತಿಯಲ್ಲಿ ಇರದಿದಲ್ಲಿ, ಶಿಸ್ತುಕ್ರಮವನ್ನು ಅದರಲ್ಲಿ ತರಲಾಗದು. ಅಲ್ಲದೆ ಅವುಗಳಿಗೆ ಭವಿಷ್ಯದಲ್ಲಿ ಯಾವುದೇ ಉತ್ತಮ ನಿರೀಕ್ಷೆ ಇರುವುದಿಲ್ಲವೆಂದು ಶ್ರೀಮತಿ ವೈಟಮ್ಮನವರು ‘ಟೆಸ್ಟಿಮೊನೀಸ್ ಫಾರ್ ದಿ ಚರ್ಚ್‌, ಸಂಪುಟ 1, ಪುಟ 270 ರಲ್ಲಿ ಹೇಳುತ್ತಾರೆ (1862). ಕೊಕಾಘ 27.3

ಸಭೆಯು ಪರಿಪೂರ್ಣವಾದ ರೀತಿಯಲ್ಲಿ ವ್ಯವಸ್ಥಿತವಾಗಿರಬೇಕಾದ ಸಮಯದಲ್ಲಿ ದೇವರ ಸೇವೆಯಲ್ಲಿ ಅವ್ಯವಸ್ಥೆ ಕಂಡುಬರುವಂತೆ ಮಾಡುವ ತನ್ನ ಪ್ರಯತ್ನದಲ್ಲಿ ಸೈತಾನನು ಯಶಸ್ವಿಯಾದಲ್ಲಿ, ಅವನು ಬಹಳ ಸಂತೋಷಪಡುತ್ತಾನೆ. ನಮ್ಮ ಬುದ್ಧಿವಂತರಾದ ಅಡ್ವಿಂಟಿಸ್ಟ್ ಮೂಲ ಮಾರ್ಗದರ್ಶಕರು (Pioneers) ಅಪಾರವಾದ ಶ್ರಮದಿಂದ ಕಟ್ಟಿದ ಈ ಸಭಾವ್ಯವಸ್ಥೆಯನ್ನು ನಾವು ಹಾಳು ಮಾಡದೆ ಅದನ್ನು ಮುಂದುವರಿಸಿಕೊಂಡು ಬರಬೇಕು. ಸಭೆಯಲ್ಲಿ ಗೊಂದಲ ಹುಟ್ಟಿಸಿ ದೇವರ ಸೇವೆಗೆ ಅಡ್ಡಿಯಾಗುವಂತವರನ್ನು ದೂರವಿಡಬೇಕು. ಕೊಕಾಘ 27.4

ಅಂತ್ಯಕಾಲವು ಸಮೀಪಿಸುತ್ತಿರುವಾಗ, ದೇವರ ಮಕ್ಕಳು ಯಾವುದೇ ಧಾರ್ಮಿಕ ಸಂಸ್ಥೆಗೆ ಒಳಪಡದೆ, ಸ್ವತಂತ್ರವಾಗಿ ವರ್ತಿಸುತ್ತಾರೆಂದು ಕೆಲವರು ಆಲೋಚಿಸುತ್ತಾರೆ. ಆದರೆ ದೇವರು ಶ್ರೀಮತಿ ವೈಟಮ್ಮನವರಿಗೆ ಕೊಟ್ಟ ದರ್ಶನದಲ್ಲಿ, ಈ ಸೇವೆಯಲ್ಲಿ ಯಾರೂ ಸಹ ಸಭೆಯೆಂಬ ವ್ಯವಸ್ಥೆಯಿಂದ ಸ್ವತಂತ್ರರಾಗಿರಬಾರದೆಂದು ತಿಳಿಸಿದ್ದಾನೆ. (ಟೆಸ್ಟಿಮೊನೀಸ್, ಸಂಪುಟ 9, ಪುಟಗಳು 257, 258 (1909), ಕೊನೆಯ ಇಕ್ಕಟ್ಟಿನ ಕಾಲವು ಸಮೀಪಿಸುತ್ತಿರುವಾಗ ನಾವು ಹಿಂದೆಂದಿಗಿಂತಲೂ ಹೆಚ್ಚಾಗಿ ಸುವ್ಯವಸ್ಥೆ ಹಾಗೂ ಸಾಮರಸ್ಯದಿಂದ ಇರಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 26 (1892).\ ಕೊಕಾಘ 27.5