Go to full page →

ಅಡ್ವೆಂಟಿಸ್ಟ್ ಸಭೆಯ ಕೇಂದ್ರಕಚೇರಿಗಳಲ್ಲಿ ಅಧಿಕಾರದ ದುರುಪಯೋಗ ಕೊಕಾಘ 28

ಅಮೆರಿಕಾ ದೇಶದ ವಾಷಿಂಗ್ಟನ್ ನಗರದಲ್ಲಿರುವ ಜನರಲ್ ಕಾನ್ಫರೆನ್ಸ್ ಜಾಗತಿಯ ಮುಖ್ಯ ಕಚೇರಿಯು ತಪ್ಪಾದ ಆತಿಭಾವುಕತೆಯ (Sentiment) ಅಭಿಪ್ರಾಯ ಮತ್ತು ಸಿದ್ದಾಂತಗಳಿಂದ ಭ್ರಷ್ಟಗೊಂಡಿದೆ. ಮೇಲಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳಿಂದ ಅನ್ಯಾಯವಾದ ಪ್ರಯೋಜನ ಪಡೆದುಕೊಂಡಿದ್ದಾರೆ. ಅವರನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಲು ದೃಢವಾಗಿ ನಿರ್ಧರಿಸಿದ್ದಾರೆ. ಅವರು ಅಧಿಕಾರ ನಡೆಸುತ್ತಾರೆ ಇಲ್ಲವೆ ಹಾಳಾಗುತ್ತಾರೆ.... ಕೊಕಾಘ 28.4

‘ನಮ್ಮ ಅಡ್ವೆಂಟಿಸ್ಟ್ ಕೇಂದ್ರಕಛೇರಿಗಳಲ್ಲಿ ಅಧಿಕಾರವು ಸೊಕ್ಕಿನಿಂದ ಆಡಳಿತ ನಡೆಸುವವರ ಕೈಯಲ್ಲಿದೆ. ತಮ್ಮ ಅಧಿಕಾರವು ತಮ್ಮನ್ನು ದೇವರನ್ನಾಗಿ ಮಾಡಿದೆ ಎಂದು ಅವರು ನೆನಸುತ್ತಾರೆ. ಇದು ನನಗೆ ದಿಗಿಲನ್ನು ಹುಟ್ಟಿಸಿ ಭಯಕ್ಕೆ ಕಾರಣವಾಗಿದೆ. ಎಲ್ಲಿ, ಯಾರಿಂದ ಇಂತಹ ಸೊಕ್ಕಿನ ಅಧಿಕಾರವು ಚಲಾಯಿಸಲ್ಪಡುತ್ತದೋ, ಅದು ಒಂದು ಶಾಪವಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳಿದ್ದಾರೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 321, 1895). ಕೊಕಾಘ 29.1

ಕೆಲವು ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಹೊರಿಸಲಾಗಿದೆ ಹಾಗೂ ಅವರಲ್ಲಿ ಕೆಲವರು ದೇವರ ಸಲಹೆ ಪಡೆದುಕೊಳ್ಳುತ್ತಿಲ್ಲ. ಈ ಜನರಿಗೆ ವಿದೇಶಗಳಲ್ಲಿ ಅಗತ್ಯವಾಗಿ ನಡೆಯಬೇಕಾದ ಸುವಾರ್ತಾ ಸೇವೆಯ ಕಾರ್ಯದ ಬಗ್ಗೆ ಏನು ತಿಳಿದಿದೆ? ಹೆಚ್ಚಿನ ಮಾಹಿತಿ ಒದಗಿಸುವಂತೆ ಜನರು ಪ್ರಶ್ನೆ ಕೇಳಿದಾಗ, ಅದಕ್ಕೆ ಹೇಗೆ ನಿರ್ಧರಿಸಬೇಕೆಂದು ಅವರಿಗೆ ಏನು ತಿಳಿದಿದೆ? ಈ ಅಧಿಕಾರಿಗಳು ತಕ್ಷಣವೇ ಉತ್ತರ ಕೊಟ್ಟರೂ, ವಿದೇಶಗಳಲ್ಲಿರುವ ವ್ಯಕ್ತಿಗಳು ತಮ್ಮ ಪ್ರಶ್ನೆಗೆ ಉತ್ತರಕ್ಕಾಗಿ ಮೂರು ತಿಂಗಳು ಕಾಯಬೇಕಾಗುತ್ತದೆ (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 321,1896). ಕೊಕಾಘ 29.2

ದೂರ ದೇಶಗಳಲ್ಲಿ ಸೇವೆ ಮಾಡುತ್ತಿರುವ ದೇವರ ಸೇವಕರು, ಮೊದಲು ಬ್ಯಾಟಲ್ ಕ್ರೀಕ್‌ನಲ್ಲಿರುವ ಜನರಲ್ ಕಾನ್ಫರೆನ್ಸ್ ಕಚೇರಿಯಿಂದ ಅನುಮತಿ ಪಡೆಯದಿದ್ದಲ್ಲಿ ತಮ್ಮನಿರ್ಣಯವು ಸರಿಯೆಂದು ತಿಳಿದಿದ್ದರೂ, ಅದನ್ನು ಮಾಡಲು ಅವರಿಗೆ ಸಾಧ್ಯವಿಲ್ಲ. ಹೌದು’ ಅಥವಾ ‘ಇಲ್ಲ’ ಎಂಬ ಉತ್ತರಕ್ಕೆ ಅವರು ಕಾದುಕೊಂಡಿರಬೇಕು (ಸ್ಪೆಷಲ್ ಟೆಸ್ಟಿಮೊನೀಸ್ ಎ, ಪುಟ 32, 1896). ಕೊಕಾಘ 29.3

ಜನರಲ್ ಕಾನ್ಫರೆನ್ಸ್ ಕಚೇರಿಗೆ ಒಬ್ಬರನ್ನು ಮಾತ್ರ ಅಧ್ಯಕ್ಷರನ್ನಾಗಿ ಆರಿಸುವುದು ವಿವೇಕದ ಕಾರ್ಯವಲ್ಲ. ಈ ಕಚೇರಿಯ ಕಾರ್ಯವು ವಿಸ್ತಾರಗೊಳ್ಳುತ್ತಿದ್ದು, ಕೆಲವು ವಿಷಯಗಳನ್ನು ಅನಾವಶ್ಯಕವಾಗಿ ಜಟಿಲಗೊಳಿಸಲಾಗಿದೆ. ಭೌಗೋಳಿಕ ಪ್ರದೇಶವನ್ನು ವಿಭಾಗ ಮಾಡಿ ಅಧಿಕಾರದ ಹಂಚಿಕೆಯಾಗಬೇಕು ಅಥವಾ ಈಗಿರುವ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವಂತ ಒಂದು ಯೋಜನೆ ರೂಪಿಸಬೇಕು (ಟೆಸ್ಟಿಮೊನೀಸ್‌ ಟು ಮಿನಿಸ್ಸರ್ಸ್ ಪುಟ 342, 1896). (ಶ್ರೀಮತಿ ವೈಟಮ್ಮನವರು ಈ ಸಲಹೆ ನೀಡಿದಾಗ ನಮ್ಮ ಸಭೆಯು 1863 ರಲ್ಲಿ ಸ್ಥಾಪನೆಯಾಗಿತ್ತು ಹಾಗೂ ಕೇವಲ 3560 ಮಂದಿ ಸದಸ್ಯರು ಮಾತ್ರ ಇದ್ದರೆಂದು ನೆನಪಿಸಲ್ಪಡಬೇಕು), ಆರು ಸೆಕ್ಷನ್ ಆಫೀಸುಗಳು, ಮೂವತ್ತು ಬೋಧಕರು ಮತ್ತು ಜನರಲ್ ಕಾನ್ಫರೆನ್ಸ್ ಸಮಿತಿಯಲ್ಲಿ ಮೂರು ಸದಸ್ಯರು ಮಾತ್ರವಿದ್ದರು. ಆಗ ಜನರಲ್ ಕಾನ್ಫರೆನ್ಸ್ ಅಧ್ಯಕ್ಷರು ಇಂತಹ ಚಿಕ್ಕ ಸಂಸೆಗೆ ಮಾರ್ಗದರ್ಶನ ನೀಡಲು ಸಮರ್ಥರಾಗಿದ್ದರು. ಆದರೆ 1896 ರಲ್ಲಿ ಅಡ್ವೆಂಟಿಸ್ಟ್ ಸೇವೆಯು ಯೂರೋಪ್, ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಖಂಡಗಳಿಗೆ ವಿಸ್ತರಿಸಿದಾಗ, ಒಬ್ಬ ಅಧ್ಯಕ್ಷರು ಅಲ್ಲಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗಲಿಲ್ಲ. ಶ್ರೀಮತಿ ವೈಟಮ್ಮನವರ ಸಲಹೆಯ ಮೇರೆಗೆ ಯೂನಿಯನ್ ಹಾಗೂ ಡಿವಿಜನ್‌ಗಳನ್ನು ಆರಂಭಿಸಲಾಯಿತು. ಕೊಕಾಘ 29.4