Go to full page →

ಆತ್ಮೀಕ ಬಲಹೀನತೆ ಮತ್ತು ಅಜ್ಞಾನದ ಕಾಲ ಕೊಕಾಘ 28

ನಮ್ಮಲ್ಲಿ ಸಭೆಗಳಲ್ಲಿಯೂ ಒಂದು ಧಾರ್ಮಿಕ ಸುಧಾರಣಾ ಚಳುವಳಿಯು ನಡೆಯಬೇಕು. ಅಮೂಲ್ಯವಾದ ಅವಕಾಶಗಳು ಹಾಗೂ ಪ್ರವಾದನಾತ್ಮಕವಾದ ಮಹಾಬೆಳಕು ಹೊಂದಿ ಆಶೀರ್ವದಿಸಲ್ಪಟ್ಟ ಅಡ್ರೆಂಟಿಸ್ಟ್ ಜನರಲ್ಲಿ ಆತ್ಮೀಕವಾದ ಬಲಹೀನತೆ ಮತ್ತು ಅಜ್ಞಾನ ಆವರಿಸಿಕೊಂಡಿರುವುದರಿಂದ ಅವರಲ್ಲಿ ಧಾರ್ಮಿಕ ಸುಧಾರಣೆ ಕಂಡುಬರಬೇಕು, ಧಾರ್ಮಿಕ ಸುಧಾರಕರಾಗಿ ಅವರು ಬೇರೆ ಸಭೆಗಳಿಂದ ಹೊರಬಂದರು, ಆದರೆ ಅವರು ಈಗ ಅದೇ ಸಭೆಗಳಂತೆ ವರ್ತಿಸುತ್ತಿದ್ದಾರೆ, ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯನ್ನು ಬಿಟ್ಟು ಹೊರಬಂದು ಮತ್ತೊಂದು ಸಭೆ ಸ್ಥಾಪನೆ ಮಾಡಬೇಕಾದ ಅಗತ್ಯವಿಲ್ಲವೆಂದು ನಾನು ನಿರೀಕ್ಷಿಸುತ್ತೇನೆಂದು ಶ್ರೀಮತಿ ವೈಟಮ್ಮನವರು ಹೇಳಿದ್ದಾರೆ (ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಬಗ್ಗೆ ವಿಶ್ವಾಸ ಕಳೆದುಕೊಂಡಿರುವವರ ಬಗ್ಗೆ ಶ್ರೀಮತಿ ವೈಟಮನವರು ನೀಡಿದ ಏಕೈಕ ಹೇಳಿಕೆ ಇದು. 1889ನೇ ಇಸವಿಯಲ್ಲಿ ಅಮೇರಿಕಾ ದೇಶದ ಮಿನ್ನಿಯಾ ಪೊಲೀಸ್‌ನಲ್ಲಿ ನಡೆದ ಜನರಲ್ ಕಾನ್ಫರೆನ್ಸ್ ಸಮಾವೇಶದಲ್ಲಿ ಅವರು ಈ ಸಂದೇಹ ವ್ಯಕ್ತಪಡಿಸಿದ್ದರು. ಅನಂತರ 1915 ರಲ್ಲಿ ಅವರು ಮರಣ ಹೊಂದುವವರೆಗೆ - 26 ವರ್ಷಗಳಲ್ಲಿ - ತಿರುಗಿ ಇಂತಹ ಯಾವುದೇ ಸಂದೇಹದ ಹೇಳಿಕೆಯನ್ನು ಶ್ರೀಮತಿ ವೈಟಮ್ಮನವರು ಕೊಡಲಿಲ್ಲ). ನಾವು ಸಮಾಧಾನದಿಂದ ಸಭೆಯಲ್ಲಿ ಐಕ್ಯತೆಯ ಭಾವನೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ ಮತಾಂಧತೆಯ ವಿರುದ್ಧ ನಾವು ಪ್ರತಿಭಟಿಸಬೇಕೆಂದು ಶ್ರೀಮತಿ ವೈಟಮ್ಮನವರು ಮಿನ್ನಿಯಾ ಪೊಲೀಸ್‌ನಲ್ಲಿ ತಿಳಿಸಿದರು. ಕೊಕಾಘ 28.1

ತಮ್ಮಲ್ಲಿ ಬೆಳಕಿದೆ ಎಂದು ಹೇಳಿಕೊಂಡರೂ, ಅದರಂತೆ ನಡೆಯದಿರುವವರ ವಿಷಯದಲ್ಲಿ ಕ್ರಿಸ್ತನು “ಅಯ್ಯೋ, ಖೂರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್‌ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಆಗಲೇ ಗೋಣಿತಟ್ಟು ಹೊದ್ದುಕೊಂಡು ಬೂದಿಯಲ್ಲಿ ಕೂತುಕೊಂಡು ದೇವರ ಕಡೆಗೆ ತಿರುಗಿಕೊಳ್ಳುತ್ತಿದ್ದರು. ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಮೇಲಾಗಿರುವುದು ಎಂದು ನಿಮಗೆ ಹೇಳುತ್ತೇನೆ. ಎಲೈ ಕಪೆಕರ್ನೌಮೆ (ಪ್ರವಾದನೆಯ ಆತ್ಮದ ಮೂಲಕ ಆತ್ಮೀಕವಾಗಿ ಹೆಚ್ಚಿನ ಬೆಳಕು ಹೊಂದಿರುವ ಸೆವೆಂತ್ ಡೇ ಅಡ್ವೆಂಟಿಸ್ಟರು), ನೀನು ಪರಲೋಕಕ್ಕೆ ಏರಿಸಲ್ಪಡುವಿಯಾ? (ಅಡ್ವೆಂಟಿಸ್ಪೆಗೆ ಪ್ರವಾದನೆಯ ಮೂಲಕ ದೊರೆತ ಅವಕಾಶಗಳ ವಿಷಯದಲ್ಲಿ, ಪಾತಾಳಕ್ಕೆ ಇಳಿಯುವಿ, ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೂದೋಮಿನಲ್ಲಿ ನಡೆದಿದರೆ ಅದು ಇಂದಿನವರೆಗೂ ಉಳಿಯುತ್ತಿತ್ತು’ ಎಂದು ಹೇಳಿದ್ದಾನೆ (ಮತ್ತಾಯ 11:21-23). (ಈ ವಚನಗಳಲ್ಲಿ ಬ್ರ್ಯಾಕೆಟ್‌ನಲ್ಲಿ ಅಂದರೆ ಆವರಣೆ ಚಿಹ್ನೆಯೊಳಗೆ ಕೊಡಲ್ಪಟ್ಟಿರುವ ಅಂಶಗಳು ಶ್ರೀಮತಿ ವೈಟಮ್ಮನವರ ಹೇಳಿಕೆಯಾಗಿದೆ. ಅಂದರೆ ಅಡ್ವೆಂಟಿಸ್ಟರನ್ನು ಕಪೆರ್ನೌಮಿಗೆ ಅವರು ಹೋಲಿಸಿದ್ದಾರೆ (ರಿವ್ಯೂ ಅಂಡ್ ಹೆರಾಲ್ಡ್, ಆಗಸ್ಟ್ 1, 1893). ಕೊಕಾಘ 28.2

ಸೆವೆಂತ್ ಡೇ ಅಡ್ವೆಂಟಿಸ್ಟ್ ಸಭೆಯ ಸ್ಥಿತಿಯು ಲವೊದಿಕಿಯ ಸಭೆಯಂತಿದೆ. ಸಭೆಯಲ್ಲಿ ದೇವರ ಪ್ರಸನ್ನತೆಯಿಲ್ಲ ಎಂದು ಶ್ರೀಮತಿ ವೈಟಮ್ಮನವರು ‘ನೋಟ್‌ಬುಕ್ ಲೀಫ್‌ಲೆಟ್ಸ್, ಸಂಪುಟ 1, ಪುಟ 99 ರಲ್ಲಿ ಹೇಳಿದ್ದಾರೆ’ (1898). ಕೊಕಾಘ 28.3