Go to full page →

ನ್ಯಾಯತೀರ್ಪಿನ ದಿನವನ್ನು ಗಮನದಲ್ಲಿಟ್ಟು ಜೀವಿಸುವುದು ಕೊಕಾಘ 43

ನಮ್ಮ ನಗರಗಳಲ್ಲಿ ವ್ಯಾಪಾರ, ವ್ಯವಹಾರಗಳಲ್ಲಿ ಮಗ್ನರಾಗಿ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವವರು ತಮ್ಮ ಮೇಲೆ ಇನ್ನೇನು ಬರಲಿರುವ ನ್ಯಾಯತೀರ್ಪಿನ ದಿನದ ಬಗ್ಗೆ ಎಂದಾದರೂ ಆಲೋಚಿಸಿದ್ದಾರೆಯೇ? ಎಂದು ಶ್ರೀಮತಿ ವೈಟಮ್ಮನವರು ತಮ್ಮಲ್ಲಿ ಪ್ರಶ್ನೆ ಹಾಕಿಕೊಂಡಿದ್ದರು. ಅತಿ ಶೀಘ್ರದಲ್ಲಿ ಬರಲಿರುವ ಆ ಮಹಾನ್ಯಾಯತೀರ್ಪಿನ ದಿನವನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡು ನಾವು ಪ್ರತಿಯೊಬ್ಬರೂ ಜೀವಿಸಬೇಕು (ಸೆರ್ಮನ್ಸ್ ಅಂಡ್ ಟಾಕ್ಸ್, ಸಂಪುಟ 1, ಪುಟ 25, 1886). ಕೊಕಾಘ 43.2

ನ್ಯಾಯತೀರ್ಪಿನ ಬಗ್ಗೆ ಗಮನ ಹರಿಸದೆ ನಾವು ಜೀವಿಸಲು ಸಾಧ್ಯವಿಲ್ಲ. ಆ ದಿನವು ಬಹಳ ತಡವಾಗಿದ್ದರೂ, ಈಗ ಹತ್ತಿರದಲ್ಲಿದೆ, ಬಾಗಿಲಲ್ಲಿಯೇ ಇದೆ, ತ್ವರೆಯಿಂದ ಬರಲಿದೆ. ಪ್ರಧಾನ ದೂತನ ತುತ್ತೂರಿ ಶಬ್ದವು ಶೀಘ್ರದಲ್ಲಿಯೇ ಜೀವಿಸಿರುವವರನ್ನು ಬೆಚ್ಚಿ ಬೀಳುವಂತೆ ಮಾಡುತ್ತದೆ ಹಾಗೂ ಸತ್ತಿರುವವರನ್ನು ಪುನರುತ್ಥಾನಗೊಳಿಸುತ್ತದೆ (ಚೈಲ್ಡ್ ಗೈಡನ್ಸ್, ಪುಟಗಳು 560, 561, 1892). ಕೊಕಾಘ 43.3