Go to full page →

ಕ್ರಿಸ್ತನ ಬರೋಣಕ್ಕೆ ಸಿದ್ಧರಾಗಿ ಕೊಕಾಘ 43

ಪರಲೋಕದವುಗಳ ಮೇಲೆ ಈಗ ಗಮನಹರಿಸುವುದರಲ್ಲಿ ನಮಗೆ ಸಂತೋಷ ಇಲ್ಲದಿದ್ದಲ್ಲಿ ದೇವರಜ್ಞಾನವನ್ನು ಹುಡುಕಲು ಆಸಕ್ತಿ ಇಲ್ಲದಿದ್ದಲ್ಲಿ ಕ್ರಿಸ್ತನ ಗುಣಸ್ವಭಾವವನ್ನು ದೃಷ್ಟಿಸುವಲ್ಲಿ ಆನಂದ ಪಡದಿದಲ್ಲಿ, ಹಾಗೂ ಪವಿತ್ರತೆಯ ಬಗ್ಗೆ ನಮಗೆ ಆಕರ್ಷಣೆ ಇಲ್ಲದಿದ್ದಲ್ಲಿ, ಪರಲೋಕದ ಬಗ್ಗೆ ನಮ್ಮ ನಿರೀಕ್ಷೆಯು ವ್ಯರ್ಥವಾಗಿದೆ ಎಂಬುದು ಖಚಿತ. ಕ್ರಿಸ್ತನ ಚಿತ್ತವನ್ನು ಪರಿಪೂರ್ಣವಾಗಿ ಅನುಸರಿಸುವುದು ಕ್ರೈಸ್ತರಾದ ನಮ್ಮ ಮುಂದೆ ನಿರಂತರವಾಗಿ ಉನ್ನತವಾದ ಗುರಿಯಾಗಿರಬೇಕು ದೇವರು, ಹಾಗೂ ಕ್ರಿಸ್ತನು ತನ್ನನ್ನು ಪ್ರೀತಿಸುವವರಿಗಾಗಿ ಸಿದ್ಧಪಡಿಸಿದ ಪರಲೋಕದ ಬಗ್ಗೆ ಮಾತಾಡಲು ನಾವು ಇಷ್ಟಪಡುತ್ತೇವೆ. ದೇವರ ಈ ಭಾಗ್ಯಕರವಾದ ಭರವಸೆಯ ಬಗ್ಗೆ ನಾವು ಯಾವಾಗಲೂ ಧ್ಯಾನಿಸುತ್ತಿರಬೇಕು (ಟೆಸ್ಟಿಮೊನೀಸ್‌ ಸಂಪುಟ 5, ಪುಟ 745, 1889). ಕೊಕಾಘ 43.4

“ನೀವು ದೇವರೊಂದಿಗೆ ಇಂದು ಅನ್ಯೋನ್ಯತೆಯಲ್ಲಿ ನಡೆಯುತ್ತಿದ್ದಲ್ಲಿ, ಕ್ರಿಸ್ತನು ಈ ದಿನ ಬಂದರೂ, ಆತನನ್ನು ಎದುರಿಸಲು ಸಿದ್ಧರಾಗಿರುವಿರಿ’ (ಇನ್ ಹೆವೆನ್ಲಿಫ್ಲೆಸಸ್‌, ಪುಟ 227, 1891). ಕೊಕಾಘ 43.5

*****