Go to full page →

ದೇವರ ವಾಕ್ಯಕ್ಕೆ ಉನ್ನತಸ್ಥಾನ ಕೊಡಬೇಕು ಕೊಕಾಘ 54

ದೇವರ ವಾಕ್ಯವನ್ನು ಸಮಾಧಾನವಾಗಿಯೂ ಹಾಗೂ ಸ್ಪಷ್ಟವಾಗಿಯೂ ಬೋಧಿಸಬೇಕು. ಜನರಲ್ಲಿ ಉದ್ವೇಗದ ಭಾವನೆ ಉಂಟು ಮಾಡುವುದು ನಮ್ಮ ಕೆಲಸವಲ್ಲ. ಪರಿಶುದ್ಧಾತ್ಮನು ಮಾತ್ರ ದೇವರ ವಾಕ್ಯ ಕೇಳುವವರಲ್ಲಿ ಆರೋಗ್ಯಕರವಾದ ಉತ್ಸಾಹ ಉಂಟು ಮಾಡಬಲ್ಲನು. ದೇವರು ತನ್ನ ಕಾರ್ಯ ಮಾಡಲಿ, ಮನುಷ್ಯರು ಆತನ ಮುಂದೆ ಮೌನವಾಗಿದ್ದು, ಕಾದುಕೊಂಡು ಎಚ್ಚರದಿಂದ ಪ್ರಾರ್ಥಿಸಲಿ, ಜೀವವೂ, ಬೆಳಕು ಆಗಿರುವ ಅಮೂಲ್ಯವಾದ ಪರಿಶುದ್ದಾತನ ಹತೋಟಿಗೆ ಒಳಪಟ್ಟು ಪ್ರತಿಕ್ಷಣವೂ ನಮ್ಮ ದೃಷ್ಟಿಯು ಕ್ರಿಸ್ತನ ಕಡೆಗಿರಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟಗಳು 16, 17, 1894). ಕೊಕಾಘ 54.4

ದೇವರ ವಾಕ್ಯದ ಯಥಾರ್ಥ ಸತ್ಯವನ್ನು ಜನರಿಗೆ ಬೋಧಿಸಬೇಕು. ಅವರು ಅದನ್ನು ಸ್ವೀಕರಿಸಿದಾಗ, ಪವಿತ್ರಾತ್ಮನು ಅವರ ಹೃದಯದಲ್ಲಿ ಕಾರ್ಯ ಮಾಡುವನು. ನಮ್ಮ ಮಾತುಗಳಲ್ಲಿ, ಹಾಡುಗಾರಿಕೆಯಲ್ಲಿ ಹಾಗೂ ಎಲ್ಲಾ ಆತ್ಮೀಕ ವಿಷಯಗಳಲ್ಲಿ ದೇವರ ಮಕ್ಕಳನ್ನು ಪೇರಿಸುವಂತೆ ಶಾಂತಚಿತ್ತದಿಂದಲೂ, ಗಾಂಭೀರ್ಯದಿಂದಲೂ ಹಾಗೂ ದೈವಭಕ್ತಿಯಿಂದಲೂ ನಡೆದುಕೊಳ್ಳಬೇಕು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 2, ಪುಟ 43, 1908). ಕೊಕಾಘ 54.5

ಭಾವೋದ್ವೇಗಗಳನ್ನು ಬಡಿದೆಬ್ಬಿಸುವಂತ ಭಾವನೆಗಳಿಂದಲ್ಲ, ಬದಲಾಗಿ ದೇವರ ವಾಕ್ಯದ ಮೂಲಕ ಜನರು ಸತ್ಯಕ್ಕೆ ವಿಧೇಯರಾಗುವಂತೆ ನಾವು ಮಾಡಬೇಕು. ಆಗ ದೇವವಾಕ್ಯವೆಂಬ ದೃಢವಾದ ಅಸ್ತಿವಾರದ ಮೇಲೆ ನಾವು ಸುರಕ್ಷಿತವಾಗಿ ನಿಲ್ಲಬಹುದು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 3, ಪುಟ 373, 1908). ಕೊಕಾಘ 55.1

*****