Go to full page →

ಅಧ್ಯಾಯ-7
ಹಳ್ಳಿಗಾಡಿನಲ್ಲಿ ವಾಸಮಾಡುವುದು ಕೊಕಾಘ 56

ದೈವೀಕ ಮಾದರಿ ಕೊಕಾಘ 56

ದೇವರು ಉಂಟುಮಾಡಿದ ಎಲ್ಲವೂ ಪರಿಪೂರ್ಣ ಸೊಬಗಿನಿಂದ ಕೂಡಿದ್ದು, ಆತನ ಮಕ್ಕಳಾದ ಆದಾಮ ಹವ್ವಳು ಸಂತೋಷವಾಗಿರಲು ಈ ಲೋಕದಲ್ಲಿ ಯಾವುದೂ ಕೊರತೆಯಿರಲಿಲ್ಲ. ಆದಾಗ್ಯೂ ದೇವರು, ವಿಶೇಷವಾಗಿ ಅವರಿಗೋಸ್ಕರ ಏದೆನ್ ತೋಟವನ್ನು ಉಂಟುಮಾಡಿ ಅವರ ಮೇಲೆ ತನಗಿದ್ದ ಅಪಾರ ಪ್ರೀತಿಯನ್ನು ತೋರಿಸಿದನು. ದಿನದ ಒಂದು ಭಾಗವನ್ನು ಅವರು ಸಂತೋಷವಾಗಿ ತೋಟವನ್ನು ನೋಡಿಕೊಳ್ಳುವುದಕ್ಕೂ ಹಾಗೂ ಮತ್ತೊಂದು ಭಾಗವು ದೇವದೂತರನ್ನು ಭೇಟಿಮಾಡಿ ಅವರ ಸಲಹೆ ಸೂಚನೆಗಳನ್ನು ಗಮನವಿಟ್ಟುಕೊಳ್ಳುವುದಕ್ಕೂ ಮತ್ತು ದೇವರ ಧ್ಯಾನ ಮಾಡುವುದಕ್ಕೂ ಮೀಸಲಾಗಿತ್ತು. ಎದೆನ್ ತೋಟವನ್ನು ನೋಡಿಕೊಳ್ಳುವ ಅವರ ಕೆಲಸವು ಶ್ರಮದಾಯಕವಾಗಿರಲಿಲ್ಲ. ಬದಲಾಗಿ ಹಿತಕರವೂ, ಚೇತೋಹಾರಿಯೂ ಆಗಿತ್ತು. ಸೊಗಸಾದ ಈ ತೋಟವು ಅವರ ಮನೆಯೂ ಹಾಗೂ ವಿಶೇಷ ನಿವಾಸವೂ ಆಗಿತ್ತು (ಸ್ಪಿರಿಚುವಲ್‌ ಗಿಫ್ಟ್, ಸಂಪುಟ 3, ಪುಟ 34, 1864). ಕೊಕಾಘ 56.1

ಅನಂತನಾದ ತಂದೆಯಾದ ದೇವರು ತನ್ನ ಮಗನಾದ ಕ್ರಿಸ್ತನಿಗೆ ನೀಡಿದ್ದ ಪರಿಸ್ಥಿತಿಯೇನು? ಗಲಿಲಾಯ ಪರ್ವತ ಪ್ರದೇಶದಲ್ಲಿ ಜನವಸತಿ ಇಲ್ಲದ ಏಕಾಂತವಾದ ಮನೆ, ಪ್ರಾಮಾಣಿಕವಾಗಿ ದುಡಿದು ಜೀವಿಸುತ್ತಿದ್ದ ಕುಟುಂಬ, ದಿನನಿತ್ಯದಲ್ಲಿ ಕಷ್ಟಗಳೊಂದಿಗೆ ಸೆಣಸಾಟ, ತ್ಯಾಗ ಮನೋಭಾವ, ಸಂತೋಷವಾದ ಸೇವೆ, ತಾಳ್ಮೆ, ತಾಯಿಯಾದ ಮರಿಯಳ ಪಕ್ಕದಲ್ಲಿ ಕುಳಿತು ಶಾಸ್ತ್ರಗಳ ಅಧ್ಯಯನ, ಸರಳಜೀವನ, ಹಚ್ಚಹಸುರಾದ ಕಣಿವೆಯಲ್ಲಿ ಪ್ರಶಾಂತವಾದ ಸೂರ್ಯೋದಯ ಹಾಗೂ ಸೂರ್ಯಾಸ್ತಮಾನ, ನಿಸರ್ಗದ ಪವಿತ್ರವಾದ ಶಿಕ್ಷಣ, ಸೃಷ್ಟಿಯ ಅಧ್ಯಯನ ಹಾಗೂ ದೇವರೊಂದಿಗೆ ಪ್ರಾರ್ಥನೆಯ ಮೂಲಕ ಸಂಪರ್ಕ - ಇವೇ ಕ್ರಿಸ್ತನ ಬಾಲ್ಯ ಜೀವನದಲ್ಲಿದ ಪರಿಸ್ಥಿತಿ ಹಾಗೂ ಅವಕಾಶಗಳು (ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟಗಳು 365, 366, 1905). ಕೊಕಾಘ 56.2