Go to full page →

ಗ್ರಾಮೀಣ ಪರಿಸರದಲ್ಲಿ ಉತ್ತಮ ಶಾರೀರಿಕ ಆರೋಗ್ಯ ಕೊಕಾಘ 59

ಯಾವಾಗಲೂ ಗಲಭೆ ಹಾಗೂ ಅಸ್ತವ್ಯಸ್ತತೆ ಇರುವ ನಗರ ಪ್ರದೇಶಗಳಲ್ಲಿ ತನ್ನ ಜನರು ವಾಸ ಮಾಡಬೇಕೆಂಬುದು ದೇವರ ಚಿತ್ತವಲ್ಲ. ಅಲ್ಲಿನ ಸದ್ದುಗದ್ದಲದಿಂದ, ತರಾತುರಿಯ ಜೀವನದಿಂದ ಜೀವನ ವ್ಯವಸ್ಥೆಯ ನೈತಿಕ ಸೈರ್ಯವು ಹಾಳಾಗಿರುವುದರಿಂದ ಮಕ್ಕಳು ಹಾಳಾಗದಂತೆ ಅವರನ್ನು ರಕ್ಷಿಸಬೇಕಾದದ್ದು ತಂದೆತಾಯಿಯರ ಕರ್ತವ್ಯ (ಸೆಲೆಕ್ಟ್ರಡ್ ಮೆಸೇಜಸ್, ಸಂಪುಟ 2, ಪುಟ 357, 1902). ಕೊಕಾಘ 59.1

ನಗರಗಳಲ್ಲಿ ಹಸಿರಾದ ಹೊಲಗದ್ದೆಗಳನ್ನು ನೋಡದ, ಎಲ್ಲಿ ನೋಡಿದರೂ ಕಾಂಕ್ರಿಟ್ ಕಟ್ಟಡಗಳು, ಕೊಳಕಾದ ಹಾಗೂ ಕಿರಿದಾದ ರಸ್ತೆಗಳು, ಹೊಗೆ ಮತ್ತು ಮಂಜಿನಿಂದ ಕೂಡಿದ ವಾತಾವರಣದಲ್ಲಿಯೆ ವರ್ಷಗಳ ಕಾಲ ವಾಸಿಸುತ್ತಿರುವವರಿದ್ದಾರೆ, ಅಂತವರನ್ನು ಹಸಿರಾದ ಹೊಲಗದೆ, ಗಿಡ ಮರಗಳು, ಗುಡ್ಡಗಾಡುಗಳು, ಸದಾ ನೀರಿನಿಂದ ಹರಿಯುವ ತೊರೆಗಳು, ಶುಭ್ರವಾದ ನೀಲಿ ಆಕಾಶ ಹಾಗೂ ಉಸಿರಾಡಲು ನಿರ್ಮಲವಾದ ಗಾಳಿ ಇರುವ ಹಳ್ಳಿಗಾಡುಗಳಿಗೆ ಕರೆದುಕೊಂಡು ಹೋದಾಗ, ಆ ದೃಶ್ಯವು ಅವರಿಗೆ ಹೆಚ್ಚುಕಡಿಮೆ ಪರಲೋಕ (ಸರ್ಗ) ದಂತೆ ಕಂಡುಬರುತ್ತದೆ (ದಿ ಮಿನಿಸ್ಟ್ರಿ ಆಫ್ ಹೀಲಿಂಗ್, ಪುಟಗಳು 191, 192, 1905). ಕೊಕಾಘ 59.2