Go to full page →

ಆಹಾರ ಪದಾರ್ಥಗಳನ್ನು ನೀವೇ ಬೆಳೆದುಕೊಳ್ಳಿ ಕೊಕಾಘ 59

ತನ್ನ ಜವರು ಹಳ್ಳಿಗಳಲ್ಲಿ ವಾಸಮಾಡಬೇಕೆಂದು ದೇವರು ಬಯಸುತ್ತಾನೆ. ಅಲ್ಲಿ ಹಿತ್ತಲಿನಲ್ಲಿ ಹಣ್ಣು ಕಾಯಿಪಲ್ಲೆಗಳನ್ನು ಬೆಳೆಯಿರಿ, ಅಂತಹ ಪರಿಸರದಲ್ಲಿ ನಿಮ್ಮ ಮಕ್ಕಳು ನಿಸರ್ಗದಲ್ಲಿ ದೇವರ ಸೃಷ್ಟಿಯೊಂದಿಗೆ ನೇರ ಸಂಪರ್ಕ ಹೊಂದುತ್ತಾರೆ. ನಗರಗಳನ್ನು ಬಿಟ್ಟು ನಿಮ್ಮ ಕುಟುಂಬಗಳನ್ನು ಕರೆದುಕೊಂಡು ಹಳ್ಳಿಗಳಲ್ಲಿ ವಾಸಿಸಿರಿ ಎಂಬುದೇ ನನ್ನ ಸಂದೇಶವಾಗಿದೆ ಎಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಸಲೆಕ್ಟೆಡ್ ಮೆಸೇಜಸ್. ಪುಟಗಳು 357, 358, 1902). ಕೊಕಾಘ 59.3

ಕರ್ತನು ಶ್ರೀಮತಿ ವೈಟಮ್ಮನವರಿಗೆ ತನ್ನ ಜನರಾದ ಅಡ್ವೆಂಟಿಸ್ಟರು ತಮ್ಮ ಕುಟುಂಬಗಳನ್ನು ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ಕರೆದುಕೊಂಡು ಹೋಗಬೇಕೆಂದು ಪದೇ ಪದೇ ದರ್ಶನದಲ್ಲಿ ತಿಳಿಸಿದ್ದಾನೆ, ಆಜ್ಞೆಗಳನ್ನು ಕೈಕೊಂಡು ನಡೆಯುವವರು ಮುಂದೆ ಆಹಾರ ಕೊಂಡುಕೊಳ್ಳುವುದು ಅಥವಾ ಮಾರುವುದು ಬಹಳ ಗಂಭಿದ ಸಮಸ್ಯೆ ಎದುರಿಸಬೇಕಾಗಿರುವುದರಿಂದ, ತಮ್ಮದೇ ಆದ ಸ್ಥಳದಲ್ಲಿ ಹಣ್ಣು, ಕಾಯಿಪಲ್ಲೆ ಬೆಳೆದುಕೊಳ್ಳಬೇಕು. ಹಳ್ಳಿಗಳಲ್ಲಿ ಮನೆಗಳು ಒತ್ತೊತ್ತಾಗಿರುವುದಿಲ್ಲ, ಅಲ್ಲಿ ಶತ್ರುಗಳ ತೊಂದರೆಗಳಿಂದ ನೀವು ಮುಕ್ತರಾಗಿರಬಹುದು. ಆದುದರಿಂದ ದೇವರು ಪದೇ ಪದೇ ನೀಡಿರುವ ಸಲಹೆಗೆ ಕಿವಿಗೊಡಬೇಕಾಗಿದೆ. ಅದೇನೆಂದರೆ ನಗರಗಳನ್ನು ಬಿಟ್ಟು ಹಳ್ಳಿಗಳಲ್ಲಿ ವಾಸ ಮಾಡಬೇಕು (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟ 141, 1904). ಕೊಕಾಘ 59.4