Go to full page →

ಮರಣಶಾಸನ ಜಾರಿಯಾದ ನಂತರವೂ ನಗರಗಳಲ್ಲಿ ನೀತಿವಂತರಿರುತ್ತಾರೆ ಕೊಕಾಘ 69

ಸಂಕಟದ ಸಮಯದಲ್ಲಿ ನಾವೆಲ್ಲರೂ ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ಪಲಾಯನ ಮಾಡುತ್ತೇವೆ. ಆದರೂ ದುಷ್ಟರು ಕತ್ತಿ ಹಿಡಿದುಕೊಂಡು ಹಿಂದಟ್ಟುತ್ತಾ ಭಕ್ತರ ಮನೆಗಳನ್ನು ಪ್ರವೇಶಿಸುವರು (ಅಲ್ಲಿ ರೈಟಿಂಗ್ಸ್, 34, 1851). ದೇವಜನರು ನಗರ, ಪಟ್ಟಣ, ಹಳ್ಳಿಗಳನ್ನು ಬಿಟ್ಟು ಪಲಾಯನ ಮಾಡುವಾಗ, ದುಷ್ಟರು ಅವರನ್ನು ಕೊಲ್ಲಲು ಪ್ರಯತ್ನಿಸುವರು. ಆದರೆ ಭಕ್ತರನ್ನು ಕೊಲ್ಲಲು ಎತ್ತುವ ಕತ್ತಿಯು ಮುರಿದು ಶಕ್ತಿಯಿಲ್ಲದ ಹುಲ್ಲಿನಂತೆ ಬಿದ್ದು ಹೋಗುವುದು (ಪುಟಗಳು 284, 285, ಅರ್ಲಿ ರೈಟಿಂಗ್ಸ್, 1858). ಕೊಕಾಘ 69.2

ದೇವರಾಜ್ಞೆಗಳನ್ನು ಕೈಕೊಂಡು ನಡೆಯುವವರನ್ನು ಕೊಲ್ಲಬೇಕೆಂಬ ಮರಣಶಾಸನವು ದಿನವನ್ನು ನಿಗದಿ ಪಡಿಸಿದ್ದರೂ, ಅವರ ಶತ್ರುಗಳು ಕೆಲವು ಪ್ರಕರಣಗಳಲ್ಲಿ ಈ ಶಾಸನವನ್ನು ನಿರೀಕ್ಷಿಸಿಕೊಂಡಿದ್ದು, ನಿಗದಿತ ದಿನಕ್ಕಿಂತ ಮೊದಲೇ ಅವನ್ನು ಕೊಲ್ಲಲು ಪ್ರಯತ್ನಿಸುವರು. ಆದರೆ ನಂಬಿಗಸ್ತರಾದ ಪ್ರತಿಯೊಬ್ಬ ದೇವಭಕ್ತರನ್ನು ಬಲಿಷ್ಠವಾದ ದೇವದೂತರು ರಕ್ಷಿಸುವುದರಿಂದ, ಯಾರೂ ಸಹ ಅವರನ್ನು ದಾಟಿ ಬರಲಾಗದು, ಬಲಿಷ್ಠ ಯೋಧರ ರೂಪದಲ್ಲಿರುವ ದೇವದೂತರು ದೇವಜನರನ್ನು ರಕ್ಷಿಸುವರು (ಗ್ರೇಟ್ ಕಾಂಟ್ರೊವರ್ಸಿ, ಪುಟ 631, 1911). ಕೊಕಾಘ 69.3

*****