Go to full page →

ಅಧ್ಯಾಯ-9
ಭಾನುವಾರಾಚರಣೆಯ ಶಾಸನಗಳು ಕೊಕಾಘ 70

ದೇವರ ಅಧಿಕಾರಕ್ಕೆ ಸೈತಾನನ ಸವಾಲು ಕೊಕಾಘ 70

ಬಾಬೆಲೆಂಬ ಮಹಾನಗರಿಯು “.... ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು’ (ಪ್ರಕಟನೆ 14:8). ಈ ಕಾರಣದಿಂದ ದೇವರು ಅದನ್ನು ಬಹಿರಂಗವಾಗಿ ಖಂಡಿಸುತ್ತಾನೆ. ಕೊಕಾಘ 70.1

ದೇವರು ಆರುದಿನಗಳಲ್ಲಿ ಈ ಲೋಕವನ್ನು ಉಂಟುಮಾಡಿ ಏಳನೇ ದಿನದಲ್ಲಿ ವಿಶ್ರಮಿಸಿಕೊಂಡನು. ಈ ದಿನವನ್ನು ತನ್ನ ಜನರು ತಲಾತಲಾಂತರಗಳವರೆಗೆ ಕೈಕೊಂಡು ನಡೆಯಬೇಕೆಂದು ದೇವರು ಇದನ್ನು ಆಶೀರ್ವದಿಸಿ ಪರಿಶುದ್ಧವನ್ನಾಗಿ ಮಾಡಿದನು. ಆದರೆ ಅಧರ್ಮ ಸ್ವರೂಪನಾದ ಮನುಷ್ಯನು ದೇವರ ಗರ್ಭಗುಡಿಯಲ್ಲಿ ಕುಳಿತುಕೊಂಡು ತನ್ನನ್ನು ತಾನೇ ಹೆಚ್ಚಿಸಿಕೊಂಡು {2 ಥೆಸಲೋನಿಕ 2:3,4) ಕಾಲಗಳನ್ನೂ, ಕಟ್ಟಳೆಗಳನ್ನೂ ಮಾರ್ಪಡಿಸಲು ಮನಸ್ಸು ಮಾಡುವನು (ದಾನಿಯೇಲನು 7:25). ಈ ಶಕ್ತಿಯು, ತಾನು ದೇವರಿಗೆ ಸರಿಸಮಾನ ಮಾತ್ರವಲ್ಲ, ದೇವರಿಗಿಂತಲೂ ತನ್ನನ್ನು ಹೆಚ್ಚಿಸಿಕೊಂಡು ದೇವರ ವಿಶ್ರಾಂತಿ ದಿನವನ್ನು ಬದಲಾಯಿಸಿತು. ಏಳನೇ ದಿನ ಇರಬೇಕಾದ ಸ್ಥಾನದಲ್ಲಿ ವಾರದ ಮೊದಲನೆ ದಿನವನ್ನು ವಿಶ್ರಾಂತಿ ದಿನವೆಂದು ಇಟ್ಟಿತು. ಕಥೋಲಿಕ್ ಸಭೆಯ ಈ ಸಿದ್ದಾಂತವನ್ನು ಪ್ರೊಟೆಸ್ಟೆಂಟ್ ಸಭೆಗಳು ತೆಗೆದುಕೊಂಡು, ಪರಿಶುದ್ಧವೆಂದು ಎಣಿಸುತ್ತದೆ. ದೇವರ ವಾಕ್ಯದಲ್ಲಿ ಇದನ್ನು “ಜಾರತ್ವ’ ಎಂದು ಕರೆಯಲಾಗಿದೆ (ಅಡ್ವೆಂಟಿಸ್ಟ್ ಬೈಬಲ್ ಕಾಮೆಂಟರಿ, ಸಂಪುಟ 7, ಪುಟ 979 (1900). ಕೊಕಾಘ 70.2

ಕ್ರೈಸ್ತಧರ್ಮ ವ್ಯವಸ್ಥೆಯ ಸಮಯದಲ್ಲಿ ಮಾನವರ ಸಂತೋಷದ ಮಹಾವೈರಿಯಾದ ಸೈತಾನನು ನಾಲ್ಕನೇ ಆಜ್ಞೆಯಾದ ಸಬ್ಬತ್ತಿನ ಮೇಲೆ ವಿಶೇಷವಾದ ದಾಳಿ ಮಾಡಿದನು. ಈ ವಿಷಯವಾಗಿ ಶ್ರೀಮತಿ ವೈಟಮ್ಮನವರು “ಪೇಟ್ರಿಯಾರ್ಕ್ ಅಂಡ್ ಕಿಂಗ್ಸ್ ಪುಸ್ತಕದ 183, 184ನೇ ಪುಟಗಳಲ್ಲಿ ಹೀಗೆ ತಿಳಿಸುತ್ತಾರೆ : ಸೈತಾನನು ಹೇಳಿದ್ದೇನೆಂದರೆ ‘ನಾನು ದೇವರ ಉದ್ದೇಶಕ್ಕೆ ವಿರುದ್ದವಾಗಿ ಕಾರ್ಯಮಾಡುತ್ತದೆ. ದೇವರ ಸೃಷ್ಟಿಯ ಸ್ಮಾರಕವಾದ ಏಳನೇ ದಿನದ ಸಬ್ಬತ್ತನ್ನು ಕಡೆಗಣಿಸಬೇಕೆಂದು ನನ್ನ ಹಿಂಬಾಲಕರಿಗೆ ಅಧಿಕಾರ ನೀಡುತ್ತೇನೆ. ಈ ರೀತಿಯಾಗಿ ದೇವರು ಪರಿಶುದ್ಧವಾಗಿರಲಿ ಎಂದು ಆಶೀರ್ವದಿಸಿದ ದಿನವು ಬದಲಾವಣೆಯಾಯಿತೆಂದು ಜಗತ್ತಿಗೆ ತೋರಿಸುತ್ತೇನೆ. ಸಬ್ಬತ್ ದಿನವು ಜನರ ಮನಸ್ಸಿನಲ್ಲಿ ಉಳಿಯದಂತೆ ಅದರ ನೆನಪನ್ನು ಅಳಿಸಿ ಬಿಡುತ್ತೇನೆ. ಈ ದಿನದ ಬದಲಿಗೆ ದೇವರಿಗೂ ಆತನ ಜನರಿಗೂ ನಡುವೆ ಯಾವುದೇ ಗುರುತಲ್ಲದ ಹಾಗೂ ದೇವರ ವಿಶ್ವಾಸಾರ್ಹವಾದ ಲಿಖಿತ ರೂಪದ ಆಧಾರವಲ್ಲದ ಮತ್ತೊಂದು ದಿನವನ್ನು ಇಡುತ್ತೇನೆ. ಇದನ್ನು ಅಂಗೀಕರಿಸಿಕೊಳ್ಳುವವರು ದೇವರು ಏಳನೇ ದಿನಕ್ಕೆ ಕೊಟ್ಟಿರುವ ಪರಿಶುದ್ಧತೆಯನ್ನು ಈ ದಿನಕ್ಕೆ ತೋರಿಸುವಂತೆ ಮಾಡುತ್ತೇನೆ’ ಪೇಟ್ರಿಯಾರ್ಕ್ ಅಂಡ್ ಕಿಂಗ್ಸ್, ಪುಟಗಳು 183, 184 (1914). ಕೊಕಾಘ 70.3