Go to full page →

ಲೋಕದಲ್ಲಿ ನಡೆಯುವ ಸೂಚಕ ಕಾರ್ಯಗಳು ಕೊಕಾಘ 11

“ಇದಲ್ಲದೆ ಸೂರ್ಯಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವುದು’ ಎಂದು ಕ್ರಿಸ್ತನು ಹೇಳಿದ್ದಾನೆ (ಲೂಕ 21:25; ಮತ್ತಾಯ 24:29; ಮಾರ್ಕ 13:24-26: ಪ್ರಕಟನೆ 6:12-17). ಆತನ ಬರೋಣದ ಈ ಮುನ್ಸೂಚನೆಗಳನ್ನು ನೋಡುವವರು ಈ ಘಟನೆಯು ಹತ್ತಿರದಲ್ಲಿಯೇ ಇದೆ, ಬಾಗಿಲಲ್ಲಿಯೇ ಇದೆ’ ಎಂದು ತಿಳುಕೊಳ್ಳುವರು (ಮತ್ತಾಯ 24:33: ಗ್ರೇಟ್ ಕಾಂಟ್ರೊವರ್ಸಿ ಪುಟಗಳು 37, 38 (1911). ಕೊಕಾಘ 11.1

ದೇಶದೇಶಗಳ ನಡುವೆ ಅಶಾಂತಿಯಿದೆ. ದಿಗ್ಭ್ರಮೆ ಹುಟ್ಟಿಸುವ ಸಮಯ ಬರಲಿದೆ. ಲೋಕದ ಮೇಲೆ ಬರಲಿರುವ ಘಟನೆಗಳ ಬಗ್ಗೆ ಜನರ ಹೃದಯಗಳಲ್ಲಿ ಭಯಹುಟ್ಟುತ್ತದೆ. ಆದರೆ ದೇವರಲ್ಲಿ ವಿಶ್ವಾಸವಿಟ್ಟಿರುವವರು ಎಂತಹ ಚಂಡಮಾರುತದ ನಡುವೆಯೂ ‘ಭಯಪಡಬೇಡಿರಿ: ನಾನೇ ಅಲ್ಲವೇ?’ ಎಂಬ ಕ್ರಿಸ್ತನ ಸ್ವರವನ್ನು ಕೇಳುವರು (ಲೂಕ 24:38: ಸೈನ್ಸ್ ಆಫ್ ದಿ ಟೈಮ್ಸ್ ಅಕ್ಟೋಬರ್ 9, 1901). ಕೊಕಾಘ 11.2

ಆಶ್ಚರ್ಯಕರವಾದ ಹಾಗೂ ಮಹತ್ವಪೂರ್ಣವಾದ ಇತಿಹಾಸವು ಪರಲೋಕದ ಪುಸ್ತಕಗಳಲ್ಲಿ ಬರೆಯಲ್ಪಡುತ್ತಿವೆ. ದೇವರ ಮಹಾದಿನವು ಬರುವುದಕ್ಕೆ ಮೊದಲು ಈ ಘಟನೆಗಳು ನಡೆಯಲಿದೆ. ಈ ಜಗತ್ತಿನಲ್ಲಿರುವ ಎಲ್ಲವೂ ಅಶಾಂತಿಯ ಸ್ಥಿತಿಯಲ್ಲಿರುತ್ತವೆ (1908). ಕೊಕಾಘ 11.3