Go to full page →

ಸುಳ್ಳು ಪ್ರವಾದಿಗಳು ಕೊಕಾಘ 11

ಯೆರೂಸಲೇಮು ನಾಶವಾಗುವುದಕ್ಕೆ ಮೊದಲು ಸಂಭವಿಸುವ ಸೂಚನೆಗಳಲ್ಲಿ ಸುಳ್ಳು ಪ್ರವಾದಿಗಳು ಬರುವುದೂ ಸಹ ಒಂದಾಗಿದೆ. ‘ಬಹುಮಂದಿ ಸುಳ್ಳು ಪ್ರವಾದಿಗಳೂ ಸಹ ಎದ್ದು ಅನೇಕರನ್ನು ಮೋಸಗೊಳಿಸುವರು’ ಎಂದು ಕ್ರಿಸ್ತನು ತಿಳಿಸಿದ್ದಾನೆ (ಮತ್ತಾಯ 24:11). ಈಗಾಗಲೇ ಅನೇಕ ಸುಳ್ಳು ಪ್ರವಾದಿಗಳು ಬಂದು, ಜನರನ್ನು ಮೋಸಗೊಳಿಸಿ, ಸಾಕಷ್ಟು ಸಂಖ್ಯೆಯ ಜನರನ್ನು ಸತ್ಯಮಾರ್ಗ ಬಿಟ್ಟುಹೋಗುವಂತೆ ಮಾಡಿದ್ದಾರೆ. ಮಂತ್ರತಂತ್ರವಾದಿಗಳು, ಜ್ಯೋತಿಷಿಗಳು, ಕಣಿ ಹೇಳುವವರು ತಮ್ಮಲ್ಲಿ ಅದ್ಭುತವಾದ ಶಕ್ತಿಯಿದೆ ಎಂದು ಹೇಳಿಕೊಂಡು ಜನರನ್ನು ಮರುಳುಗೊಳಿಸುತ್ತಿದ್ದಾರೆ. ಆದರೆ ಈ ಪ್ರವಾದನೆಯು ಕೊನೆಯ ಕಾಲಕ್ಕಾಗಿಯೂ ಸಹ ಹೇಳಲಟ್ಟಿದೆ. ಸುಳ್ಳುಪ್ರವಾದಿಗಳು ಬರುವುದು ಕ್ರಿಸ್ತನ ಎರಡನೇ ಬರೋಣದ ಸೂಚನೆಯೂ ಆಗಿದೆ (ಡಿಸೈರ್ ಆಫ್ ಏಜಸ್, ಪುಟ 631 (1898). ಕೊಕಾಘ 11.4

ಸುಳ್ಳು ಪ್ರವಾದಿಗಳನ್ನು ನಾವು ಎದುರಿಸೋಣ. ಸುಳ್ಳು ದರ್ಶನಗಳು, ಸುಳ್ಳಾದ ಕನಸುಗಳನ್ನು ಕಂಡವೆಂದು ಜನರು ಹೇಳಿಕೊಳ್ಳುತ್ತಾರೆ. ಆದರೆ ದೇವರ ವಾಕ್ಯವನ್ನು ಅವರೆದುರಿಗೆ ನಿಂತು ನಾವು ಸಾರಬೇಕಾಗಿದೆ. ದೇವರ ಸ್ವರವನ್ನು ನಾವು ನಿರಾಕರಿಸಬಾರದು (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 49 (1894). ದೇವರಿಂದ ನಾವು ಬೋಧಿಸಲ್ಪಟ್ಟಿದ್ದೇವೆಂದು ಹೇಳಿಕೊಂಡು, ಇತರರಿಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸುವವರಲ್ಲಿ ಅನೇಕರು ದೇವರ ಕಾರ್ಯ ಮಾಡುತ್ತೇವೆಂದು ಹೇಳಿಕೊಳ್ಳುತ್ತಾರೆ. ಆದರೆ ಆ ಕಾರ್ಯವನ್ನು ದೇವರು ಅವರಿಗೆ ವಹಿಸಿಲ್ಲ. ಇದರ ಪರಿಣಾಮವಾಗಿ ಗಲಿಬಿಲಿ ಉಂಟಾಗುತ್ತದೆ. ಪ್ರತಿಯೊಬ್ಬರೂ ಸಹ ಮನಃಪೂರ್ವಕವಾಗಿ ತಾನೇ ದೇವರನ್ನು ಹುಡುಕಲಿ. ಆಗ ಅವರು ದೇವರ ಚಿತ್ತವೇನೆಂದು ತಿಳಿದುಕೊಳ್ಳುವರು (ಸೆಲೆಕ್ಟಡ್ ಮೆಸೇಜಸ್, ಸಂಪುಟ 2, ಪುಟ 72). ಕೊಕಾಘ 11.5