Go to full page →

ಸುಳ್ಳು ಪ್ರವಾದಿಯೊಂದಿಗೆ ಒಂದು ಅನುಭವ ಕೊಕಾಘ 11

1894ನೇ ಇಸವಿಯ ಒಂದು ರಾತ್ರಿ ಅಪರಿಚಿತನಾದ ಒಂದು ಯುವಕನು ಶ್ರೀಮತಿ ವೈಟಮ್ಮನವರನ್ನು ಭೇಟಿಮಾಡಬೇಕೆಂದು ಕೇಳಿಕೊಂಡನು. ಅವನು ಆಸ್ಟ್ರೇಲಿಯಾ ದೇಶದ ವಿಕ್ಟೋರಿಯಾ ರಾಜ್ಯದವನು. ಆದರೆ ಶ್ರೀಮತಿ ವೈಟಮ್ಮನವರು ಅವನನ್ನು ಭೇಟಿ ಮಾಡಲು ನಿರಾಕರಿಸಿದರು. ಆದರೆ ಆ ರಾತ್ರಿ ಅಲ್ಲಿಯೇ ಇರುವಂತೆ ಅವನಿಗೆ ಹೇಳಿದರು. ಮರುದಿನ ಬೆಳಿಗ್ಗೆ ಪ್ರಾರ್ಥನೆಯಾದ ನಂತರ ಎಲ್ಲರೂ ಅವರವರ ಕೆಲಸಕ್ಕೆ ಹೊರಡಲು ಸಿದ್ದರಾದಾಗ, ಆ ಯುವಕನು ಎಲ್ಲರನ್ನೂ ಕುಳಿತುಕೊಳ್ಳುವಂತೆ ಹೇಳಿದನು. ಅವನು ತಾನು ಒಂದು ಸಂದೇಶ ಕೊಡುತ್ತೇನೆಂದು ಹೇಳಿ ತಾನು ಬರೆದುಕೊಂಡು ಬಂದಿದ್ದ ಸಂದೇಶ ಓದಿ ಈ ಲೋಕದಲ್ಲಿ ಜೀವಿಸಿರುವವರ ನ್ಯಾಯವಿಚಾರಣೆಯು ಈಗ ಪರಲೋಕದಲ್ಲಿ ಆರಂಭವಾಗಿದೆ ಅಂದನು. ಆದರೆ ಶ್ರೀಮತಿ ವೈಟಮ್ಮನವರು ಆ ಯುವಕನಿಗೆ “ನಿನ್ನ ಮನಸ್ಸು ಸ್ಥಿಮಿತದಲ್ಲಿಲ್ಲ, ಸತ್ಯವೇದದ ಪ್ರಕಾರ ಹೇಳಿದವುಗಳನ್ನು ನಾವು ನಂಬುತ್ತೇವೆ. ನೀನು ನಮಗೆ ಹೇಳಬೇಕಾಗಿರುವುದನ್ನು ನೇರವಾಗಿ ಹೇಳು’ ಅಂದರು. ಕೊಕಾಘ 11.6

ಅದಕ್ಕೆ ಅವನು ನಾವು ತಕ್ಷಣದಲ್ಲಿಯೇ ಆಸ್ಟ್ರೇಲಿಯಾ ದೇಶವನ್ನು ಬಿಟ್ಟು ಅಮೆರಿಕಾ ದೇಶದ ಮಿಚಿಗನ್ ರಾಜ್ಯದಲ್ಲಿರುವ ಬ್ಯಾಟಲ್ ಕ್ರೀಕ್‌ಗೆ ಹೋಗಬೇಕೆಂಬು ಹೇಳಿದನು. ಶ್ರೀಮತಿ ವೈಟಮ್ಮನವರು ಕಾರಣವೇನೆಂದು ಕೇಳಿದಾಗ, ಬದುಕಿರುವವರ ನ್ಯಾಯ ವಿಚಾರಣೆ ಪರಲೋಕದಲ್ಲಿ ಆರಂಭವಾಗಿದೆ ಎಂಬ ಸಂದೇಶ ಅಲ್ಲಿ ನೀಡಬೇಕಾಗಿದೆ ಎಂದು ಅವನು ಉತ್ತರಿಸಿದನು. ಆಗ ಶ್ರೀಮತಿ ವೈಟಮ್ಮನವರು ದೇವರು ನಮಗೆ ಮಾಡಲಿಕ್ಕೆ ಕೊಟ್ಟಿರುವ ಕಾರ್ಯವು ಇನ್ನೂ ಮುಗಿದಿಲ್ಲ. ಇಲ್ಲಿ ಆತನ ಕಾರ್ಯವು ಮುಗಿದಾಗ, ಖಂಡಿತವಾಗಿಯೂ ನಾವು ಬ್ಯಾಟಲ್ ಕ್ರೀಸ್‌ಗೆ ಹೋಗಬೇಕೆಂದು ದೇವರು ನಮಗೆ ತಿಳಿಸುತ್ತಾನೆ’ ಎಂದು ಹೇಳಿದ ಅವರು ಹಿರಿಯರಾದ ಸ್ಟಾರ್ ಎಂಬುವವರೊಂದಿಗೆ ಮಾತಾಡು ಎಂದು ತಮ್ಮ ಕಾರ್ಯದಲ್ಲಿ ಮಗ್ನರಾದರು. ಕೊಕಾಘ 12.1

ಆ ಯುವಕನು ಹಿರಿಯರಾದ ಸ್ಟಾರ್ರವರಿಗೆ ಶ್ರೀಮತಿ ವೈಟಮ್ಮನವರು ಅಧಿಕಾರಯುಕ್ತವಾಗಿ, ಆದರೆ ಕರುಣೆಯಿಂದ ಮಾತಾಡಿದಾಗ, ನಾನು ತಪ್ಪು ಮಾಡುತ್ತಿದ್ದೇನೆಂಬ ಅರಿವು ನನಗಾಯಿತು’ ಎಂದು ಹೇಳಿದನು. ಆ ಯುವಕನು ಒಂದು ವೇಳೆ ತನ್ನ ತಪ್ಪನ್ನು ಮನವರಿಕೆ ಮಾಡಿಕೊಂಡು, ದೇವರ ಮಾರ್ಗಕ್ಕೆ ಬರಬೇಕೆಂಬ ಉದ್ದೇಶದಿಂದ ಅವನನ್ನು ಶ್ರೀಮತಿ ವೈಟಮ್ಮನವರು ಕೆಲವು ದಿನ ಅಡ್ವಿಂಟಿಸ್ಟ್ ವಿಶ್ವಾಸಿಗಳೊಂದಿಗೆ ಇರುವಂತೆ ಹೇಳಿದರು. ಕೊಕಾಘ 12.2