Go to full page →

ಬೇರೆ ಭಾಷೆಗಳಲ್ಲಿ ಸುಳ್ಳಾಗಿ ಮಾತಾಡುವುದು ಕೊಕಾಘ 91

ಮತಾಂಧತೆ, ಸುಳ್ಳು ಪ್ರಚೋದನೆ, ಬೇರೆ ಭಾಷೆಗಳಲ್ಲಿ ಸುಳ್ಳಾಗಿ ಮಾತಾಡುವುದು ಸುಳ್ಳಾಗಿ ಮತ್ತು ಆಬ್ಬರದ ಕೂಗಾಟ — ಇವೆಲ್ಲವೂ ದೇವರು ಸಭೆಗಳಿಗೆ ಕೊಟ್ಟ ವರಗಳೆಂದು ಪರಿಗಣಿಸಲ್ಪಟ್ಟಿವೆ. ಅನೇಕರು ಇದರಿಂದ ಮೋಸ ಹೋಗುತ್ತಾರೆ. ಇವುಗಳ ಫಲವು ಒಳ್ಳೆಯದಾಗಿರುವುದಿಲ್ಲ. ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ’ ಎಂದು ಕ್ರಿಸ್ತನು ಹೇಳಿದ್ದಾನೆ (ಮತಾಯ 7:16), ಧರ್ಮದ ಬಗೆ ದುರಭಿಮಾನ ಮತ್ತು ಅಬ್ಬರದ ಕೂಗಾಟವು ನಂಬಿಕೆಗೆ ಒಂದು ವಿಶೇಷ ಸಾಕ್ಷಾಧಾರವಾಗಿದೆ ಎಂದು ಪರಿಗಣಿಸಲ್ಪಟಿದೆ. ಬಲವಾದ ಕೂಗಾಟ ಮತ್ತು ಸಂತೋಷದ ಸಮಯವಿಲ್ಲದಿದ್ದರೆ, ಕೆಲವರಿಗೆ ಆರಾಧನೆಯು ತೃಪ್ತಿ ತರುವುದಿಲ್ಲ. ಇದಕ್ಕಾಗಿ ಅವರು ಶ್ರಮಿಸಿ ಅದರಿಂದ ಒಂದು ರೀತಿಯಾದ ಪಚೋದನೆಯ ಭಾವನೆ ಹೊಂದಿಕೊಳ್ಳುತ್ತಾರೆ. ಆದರೆ ಇಂತಹ ಕೂಟಗಳ ಪರಿಣಾಮವು ಯಾವುದೇ ಪ್ರಯೋಜನ ಉಂಟುಮಾಡುವುದಿಲ್ಲ. ಕೂಟಗಳು ಮುಗಿದ ನಂತರ ಸಂತೋಷದ ಪ್ರಚೋದನಾತ್ಮಕ ಭಾವನೆ ಹೋದಾಗ, ಅವರ ಉತ್ಸಾಹವು ಕುಂದಿಹೋಗುತ್ತದೆ. ಯಾಕೆಂದರೆ ಅವರ ಸಂತೋಷವು ದೇವರಿಂದ ಬಂದದ್ದಲ್ಲ (ಲಾಸ್ಟ್ ಡೇ ಈವೆಂಟ್ಸ್, 159). ಬಹು ಗಾಂಭೀರ್ಯದಿಂದಲೂ, ಪ್ರತಿಯೊಬ್ಬರು ಮನಃಪೂರ್ವಕವಾಗಿ ತಮ್ಮನ್ನು ತಗ್ಗಿಸಿಕೊಂಡು, ಹೃದಯಗಳನ್ನು ಶೋಧಿಸಿ, ಕ್ರಿಸ್ತನನ್ನು ಯಥಾರ್ಥವಾಗಿ ಹುಡುಕುವಂತೆ ಪ್ರೇರಿಸುವ ಆರಾಧನೆಯು ಆತ್ಮಿಕ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ (ಟೆಸ್ಟಿಮೊನೀಸ್, ಸಂಪುಟ 1, 412, 1864). ಕೊಕಾಘ 91.4