Go to full page →

ಸೈತಾನನ ಕೆಟ್ಟ ದೂತರು ಮನುಷ್ಯರಂತೆ ಕಾಣಿಸಿಕೊಳ್ಳುವರು ಕೊಕಾಘ 92

ಮನುಷ್ಯರು ದೇವರಿಂದ ತಮ್ಮ ನಿಷ್ಠೆಯನ್ನು ಕಳೆದುಕೊಳ್ಳುವಂತೆ ಮೋಸಗೊಳಿಸಲು ಸೈತಾನನು ಎಲ್ಲಾ ಅವಕಾಶಗಳನ್ನು ಉಪಯೋಗಿಸುತ್ತಾನೆ. ಅವನು ಹಾಗೂ, ಅವನೊಂದಿಗೆ ಪರಲೋಕದಿಂದ ದೊಬ್ಬಲ್ಪಟ್ಟ ಕೆಟ್ಟ ದೂತರು ಜನರನ್ನು ಮರುಳುಗೊಳಿಸಲು ಈ ಲೋಕದಲ್ಲಿ ಮನುಷ್ಯರ ರೂಪದಲ್ಲಿ ಕಾಣಿಸಿಕೊಳ್ಳುವರು. ಅದೇ ಸಮಯದಲ್ಲಿ ದೇವದೂತರೂ ಸಹ ಮನುಷ್ಯರಂತೆ ಕಾಣಿಸಿಕೊಂಡು, ವೈರಿಯಾದ ಸೈತಾನನ ಯೋಜನೆಗಳನ್ನು ಸೋಲಿಸಲು ತಮ್ಮಲ್ಲಿರುವ ಎಲ್ಲಾ ಮಾರ್ಗಗಳನ್ನು ಉಪಯೋಗಿಸುವರು (ಮ್ಯಾನುಸ್ಕ್ರಿಪ್ಟ್ ರಿಲೀಸ್, ಸಂಪುಟ 8, ಪುಟ 399, 1903). ಕೊಕಾಘ 92.1

ಮನುಷ್ಯ ರೂಪದಲ್ಲಿ ಕಾಣಿಸಿಕೊಳ್ಳುವ ಸೈತಾನನ ಕೆಟ್ಟದೂತರು ಸತ್ಯವನ್ನು ತಿಳಿದಿರುವವರೊಂದಿಗೆ ಮಾತಾಡುವರು. ಅವರು ದೇವರ ಸಂದೇಶಕರ ಹೇಳಿಕೆಗಳಿಗೆ ಅನುಮಾನ ಬರುವಂತೆ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಸೆವೆಂತ್ ಡೇ ಅಡ್ವೆಂಟಿಸ್ಟರು ಎಫೆಸದವರಿಗೆ ಪೌಲನು ಬರೆದ ಪತ್ರಿಕೆಯ ಆರನೇ ಅಧ್ಯಾಯದಲ್ಲಿ ಕೊಡಲ್ಪಟ್ಟಿರುವ ಎಚ್ಚರಿಕೆಯನ್ನು ಮರೆತಿದ್ದಾರೆಯೇ? (6:10-18), ನಾವು ಅಂಧಕಾರದ ದುರಾತ್ಮನ ಶಕ್ತಿಗಳ ವಿರುದ್ಧವಾಗಿ ಹೋರಾಡುತ್ತಿದ್ದೇವೆ. ನಮ್ಮ ನಾಯಕನಾದ ಕ್ರಿಸ್ತನ ಮೇಲೆ ನಾವು ಬಲವಾಗಿ ಆತುಕೊಳ್ಳದಿದ್ದಲ್ಲಿ, ಸೈತಾನನು ನಮ್ಮ ಮೇಲೆ ಜಯ ಸಾಧಿಸುತ್ತಾನೆ (ಸೆಲೆಕ್ಟಡ್ ಮೆಸೇಜಸ್, ಸಂಪುಟ 3, ಪುಟ 411, 1903). ಕೊಕಾಘ 92.2

ಸೈತಾನನ ಕೆಟ್ಟ ದೂತರು ನಮ್ಮ ವ್ಯವಸ್ಥೆಗಳಲ್ಲಿ ಬಲವಾದ ಅಪನಂಬಿಕೆ ಉಂಟುಮಾಡಲು ವಿಶ್ವಾಸಿಗಳ ರೂಪದಲ್ಲಿ ಕಾರ್ಯ ಮಾಡುವರು. ಇದೂ ಸಹ ನಮ್ಮಲ್ಲಿ ನಿರಾಶೆ ಉಂಟುಮಾಡಬಾರದು. ಬದಲಾಗಿ ಸೈತಾನನ ಈ ಮಧ್ಯವರ್ತಿ (ಏಜೆಂಟರು ಶಕ್ತಿಗಳ ವಿರುದ್ಧವಾಗಿ ಹೋರಾಡಲು ಬೇಕಾದ ಸಹಾಯಕ್ಕಾಗಿ ನಮ್ಮನ್ನು ದೇವರ ಬಳಿಗೆ ತರುತ್ತದೆ. ಇಂತಹ ದುಷ್ಟಶಕ್ತಿಗಳು ಸೆವೆಂತ್ ಡೇ ಅಡ್ವೆಂಟಿಸ್ಟರು ನಡೆಸುವ ಕೂಟಗಳಲ್ಲಿ ಭಾಗವಹಿಸುತ್ತಾರೆ. ಆದರೆ ಆಶೀರ್ವಾದ ಹೊಂದುವುದಕ್ಕಲ್ಲ, ಬದಲಾಗಿ ದೇವರ ಪರಿಶುದ್ಧಾತ್ಮನ ಪರಿಣಾಮಗಳಿಗೆ ಪ್ರತಿಯಾಗಿ ತಡೆ ಒಡ್ಡಲು ಆ ದುಷ್ಟಶಕ್ತಿಗಳು ಭಾಗವಹಿಸುತ್ತವೆ. (ಮೈಂಡ್, ಕ್ಯಾರೆಕ್ಟರ್ ಅಂಡ್ ಪರ್ಸನಾಲಿಟಿ, ಸಂಪುಟ 2, ಪುಟಗಳು 504, 506, 1909). ಕೊಕಾಘ 92.3