Go to full page →

ಪ್ರಾಮಾಣಿಕ ಸಾಕ್ಷಿಯು ಹೊಟ್ಟನ್ನು ಗೋಧಿಯಿಂದ ಬೇರ್ಪಡಿಸುತ್ತದೆ ಕೊಕಾಘ 101

ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ದೇವದೂತನನ್ನು ಹೊಟ್ಟನ್ನು ಗೋಧಿಯಿಂದ ಬೇರ್ಪಡಿಸುವುದು ಅಂದರೆ ಜರಡಿ ಹಿಡಿಯುವುದರ ಅರ್ಥವೇನೆಂದು ಕೇಳಿದರು. ಅದಕ್ಕೆ ದೂತನು ಇದು ಲವೋದಿಕಿಯ ಸಭೆಗೆ ಸತ್ಯ ಸಾಕ್ಷಿಯ ಸಲಹೆಯಂತೆ ಪ್ರಾಮಾಣಿಕವಾದ ಸಾಕ್ಷಿಯು ಹೊರಬರುವುದರಿಂದ ಉಂಟಾಗುತ್ತದೆ. ಇದು ಕೇಳುವವರ ಹೃದಯದಲ್ಲಿ ಪರಿಣಾಮಬೀರಿ ಅವರು ದೇವರಾಜ್ಞೆಗಳನ್ನು ಉನ್ನತ ಸ್ಥಾನಕ್ಕೇರಿಸಿ ಪ್ರಾಮಾಣಿಕವಾದ ಸತ್ಯವನ್ನು ತಿಳಿಸುತ್ತಾರೆ. ಕೆಲವರು ಪ್ರಾಮಾಣಿಕವಾದ ಈ ಸಾಕ್ಷಿಯನ್ನು ಸಹಿಸುವುದಿಲ್ಲ. ಅವರು ಇದಕ್ಕೆ ವಿರುದ್ಧವಾಗಿ ಏಳುತ್ತಾರೆ ಮತ್ತು ಇದರಿಂದ ದೇವರ ಜನರಲ್ಲಿ ಗೋಧಿಯಿಂದ ಹೊಟ್ಟು ಬೇರ್ಪಡೆಯಾಗುತ್ತದೆ (ಟೆಸ್ಟಿಮೊನೀಸ್, ಸಂಪುಟ 1, ಪುಟ 181, 1857). ಕೊಕಾಘ 101.1

ನಮ್ಮಲ್ಲಿ ಕೆಲವರು ಆಕಾನನಂತೆ ತಪ್ಪನ್ನು ಒಪ್ಪಿಕೊಳ್ಳುವರು (ಯೆಹೋಶುವನು 7:21, 22). ಆದರೆ ಅವರು ರಕ್ಷಣೆ ಹೊಂದಲು ತುಂಬಾ ತಡವಾಗಿದೆ. ಅವರು ಸತ್ಯದೊಂದಿಗೆ ಸಾಮರಸ್ಯ ಹೊಂದಿರಲಿಲ್ಲ. ತಮಗೆ ದೊರೆತ ಪ್ರಾಮಾಣಿಕವಾದ ಸಾಕ್ಷಿಯನ್ನು ಅವರು ತಿರಸ್ಕರಿಸಿದರು ಮತ್ತು ಈ ಸಾಕ್ಷಿಯ ಮೂಲಕ ಬುದ್ದಿವಾದ ಹೇಳುವವರನ್ನು ಕೊಲೆ ಮಾಡಿ ಅವರ ಧ್ವನಿ ಅಡಗಿಸಿದಾಗ, ಸಂತೋಷ ಪಡುವರು (ಟೆಸ್ಟಿಮೊನಿಸ್, ಸಂಪುಟ 3, ಪುಟ 272, 1873). ಕೊಕಾಘ 101.2

ಹಿಂದೆ ಕೊಟ್ಟಂತ ಪ್ರಾಮಾಣಿಕವಾದ ಸಾಕ್ಷಿಯನ್ನು ತಿರುಗಿ ಕೊಡಬೇಕೆಂದು ದೇವರು ಕರೆಯುತ್ತಾರೆ. ಆತ್ಮೀಕ ಜೀವನದಲ್ಲಿ ಬದಲಾವಣೆಯಾಗಬೇಕೆಂದು ಆತನು ಹೇಳುತ್ತಾನೆ. ಆತನ ಜನರ ಆತ್ಮೀಕ ಚೈತನ್ಯವು ಬಹಳ ಕಾಲದಿಂದ ನಿರುತ್ಸಾಹದಿಂದ ಮರಗಟ್ಟಿ ಹೋಗಿದೆ. ಆದರೆ ಮರಣ ಹೊಂದುವುದಕ್ಕೆ ಮೊದಲು ಆತ್ಮೀಕ ಚೈತನ್ಯವು ಪುನರುಜ್ಜಿವನಗೊಳ್ಳಬೇಕಾಗಿದೆ. ಪ್ರಾರ್ಥನೆ ಹಾಗೂ ಪಾಪಗಳನ್ನು ಒಪ್ಪಿ ಅರಿಕೆ ಮಾಡಿಕೊಳ್ಳುವುದರಿಂದ ನಾವು ರಾಜನ ಮಾರ್ಗವನ್ನು ಸಿದ್ಧಪಡಿಸಬೇಕಾಗಿದೆ (ಟೆಸ್ಟಿಮೊನೀಸ್‌ ಸಂಪುಟ 8, ಪುಟ 297, 1904). ಕೊಕಾಘ 101.3