Go to full page →

ಯೇಸುವಿನ ವಿಷಯವಾದ ಸಾಕ್ಷಿಯ ನಿರಾಕರಣೆ ಮತಭ್ರಷ್ಟತೆಗೆ ಕಾರಣವಾಗುತ್ತದೆ ಕೊಕಾಘ 102

ಸೈತಾನನ ವಶಕ್ಕೊಳಗಾದ ಸೆವೆಂತ್ ಡೇ ಅಡ್ವೆಂಟಿಸ್ಟ್ ಕ್ರೈಸ್ತರು ದೇವರ ಪರಿಶುದ್ಧಾತ್ಮನ ಸಾಕ್ಷಿಯಾದ ಸತ್ಯವೇದದಲ್ಲಿ ತಿಳಿಸಿರುವ ಎಚ್ಚರಿಕೆಗಳು ಹಾಗೂ ಖಂಡನೆಯ ಮೇಲಣ ನಂಬಿಕೆಯನ್ನು ಮೊದಲು ಬಿಡುವುದು ನಿಶ್ಚಯವೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ (ಸೆಲೆಕ್ಟೆಡ್ ಮಸೇಜಸ್ ಸಂಪುಟ 3, ಪುಟ 84, 1903). ಕೊಕಾಘ 102.3

ದೇವರ ಪವಿತ್ರಾತ್ಮನ ಸಾಕ್ಷಿಯನ್ನು ಪರಿಣಾಮವಿಲ್ಲದಂತೆ ಮಾಡುವುದೇ ಸೈತಾನನ ಕೊನೆಯ ಮೋಸವಾಗಿದೆ. “ದೇವದರ್ಶಕರಿಲ್ಲದಿರುವಲ್ಲಿ ಜನರು ಅಂಕೆ ಮೀರುವರು…’ (ಜ್ಞಾನೋಕ್ತಿ 29:18), ಸೈತಾನನು ವಿವಿಧ ರೀತಿಯಲ್ಲಿ ತನ್ನ ವಿವಿಧ ಮಧ್ಯವರ್ತಿಗಳ ಮೂಲಕ ದೇವರ ಪವಿತ್ರಾತ್ಮನ ನಿಜಸಾಕ್ಷಿಯ ಮೇಲೆ ದೇವರ ಉಳಿದ ಜನರು ಇಟ್ಟಿರುವ ವಿಶ್ವಾಸವನ್ನು ಅಲುಗಾಡಿಸಲು ಬಹಳ ಬುದ್ದಿವಂತಿಕೆಯಿಂದ ಕಾರ್ಯ ಮಾಡುವನು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 48, 1890). ಕೊಕಾಘ 102.4

ವೈರಿಯಾದ ಸೈತಾನನು ನಮ್ಮ ಅಡ್ವೆಂಟಿಸ್ಟರು ಯೇಸುವಿನ ವಿಷಯವಾದ ಸಾಕ್ಷಿಗಳ ಮೇಲಿಟ್ಟಿರುವ ನಂಬಿಕೆಯನ್ನು ಅಸ್ತವ್ಯಸ್ತಗೊಳಿಸಲು ಬಹಳ ಕೌಶಲದ ಪ್ರಯತ್ನಗಳನ್ನು ಮಾಡುವನು. ಇದು ಸೈತಾನನ ಆಲೋಚನೆಯಂತಿರುವುದು. ದೇವರ ಪವಿತ್ರಾತ್ಮನ ಸಾಕ್ಷಿಗಳ ಎಚ್ಚರಿಕೆ ಹಾಗೂ ಖಂಡನೆಗಳಿಗೆ ಜನರು ಗಮನ ಕೊಡಬಾರದೆಂದು ಬೋಧಿಸುವವರು. ಎಲ್ಲಾ ವಿಧವಾದ ತಪ್ಪುಗಳು ಸಮುದ್ರದ ಅಲೆಗಳಂತೆ ಬರುವುದನ್ನು ಕಾಣುವರು (ಸೆಲೆಕ್ಟಡ್ ಮೆಸೇಜಸ್, ಸಂಪುಟ 3, ಪುಟ 83, 1890). ಕೊಕಾಘ 102.5

ದೇವಜನರು ಪವಿತ್ರಾತ್ಮನ ಹಾಗೂ ಯೇಸುವಿನ ವಿಷಯವಾದ ಸಾಕ್ಷಿಗಳ ಮೇಲೆ ನಂಬಿಕೆಯನ್ನು ಬಲಹೀನಗೊಳಿಸುವುದು ಸೈತಾನನ ಯೋಜನೆಯಾಗಿದೆ. ಅನಂತರ ನಮ್ಮ ನಂಬಿಕೆಗೆ ಆಧಾರವಾಗಿರುವ ಸಿದ್ದಾಂತಗಳ ಪ್ರಮುಖ ಅಂಶಗಳ ಬಗ್ಗೆ ಅನುಮಾನ ಬರುವಂತೆ ಮಾಡಿ, ಪವಿತ್ರ ಸತ್ಯವೇದದ ಬಗ್ಗೆ ಸಂದೇಹ ತಂದು ನಮ್ಮನ್ನು ನಾಶಮಾಡುವುದೇ ಸೈತಾನನ ಆಲೋಚನೆಯಾಗಿದೆ. ಒಂದು ಸಾರಿ ವಿಶ್ವಾಸವಿಟ್ಟಿದ್ದ ಪರಿಶುದ್ಧಾತ್ಮನ ಸಾಕ್ಷಿಗಳ ಬಗ್ಗೆ ಸಂದೇಹಪಟ್ಟು ಅದನ್ನು ಬಿಟ್ಟಾಗ, ಇಂತಹ ವಂಚನೆಗೊಳಗಾದವರು ಅಷ್ಟಕ್ಕೆ ನಿಲ್ಲುವುದಿಲ್ಲವೆಂದು ಅವನಿಗೆ ಚೆನ್ನಾಗಿ ತಿಳಿದಿದೆ. ಆದುದರಿಂದ ಅವನು ತನ್ನ ಪ್ರಯತ್ನಗಳನ್ನು ಇಮ್ಮಡಿಗೊಳಿಸಿ ಅವರು ದೇವರ ವಿರುದ್ಧವಾಗಿ ದಂಗೆಯೇಳುವಂತೆ ಮಾಡುವನು. ಇದು ಅವರ ನಾಶದಲ್ಲಿ ಅಂತ್ಯ ಕಾಣುವುದು (ಟೆಸ್ಟಿಮೊನೀಸ್ ಫಾರ್ ದಿ ಚರ್ಚ್, ಸಂಪುಟ 4, ಪುಟ 211). ಕೊಕಾಘ 102.6