Go to full page →

ಸಭಾನಾಯಕರು ತಮ್ಮ ಕರ್ತವ್ಯ ತೊರೆಯುವುದು ಕೊಕಾಘ 103

ನಮ್ಮ ಸಭೆಯ ಅನೇಕ ನಾಯಕರನ್ನು ಅವರ ಸತ್ಯವೇದದ ಜ್ಞಾನ ಹಾಗೂ ನಾಯಕತ್ವದ ಗುಣಕ್ಕಾಗಿ ನಾವು ಮೆಚ್ಚುಗೆ ವ್ಯಕ್ತಪಡಿಸುತ್ತೇವೆ. ಆದರೆ ಅವರು ಸತ್ಯದ ಜ್ಞಾನವನ್ನು ತೊರೆದು ಆತ್ಮೀಕ ಕತ್ತಲೆಯನ್ನು ಆರಿಸಿಕೊಳ್ಳುವರು (ಪೇಟ್ರಿಯಾರ್ಕ್ ಅಂಡ್ ಕಿಂಗ್ಸ್ 188, 1914). ದೇವರು ಬಹಳವಾಗಿ ಗೌರವಿಸಿದ್ದ ಜನರು ಈ ಲೋಕದ ಇತಿಹಾಸದ ಮುಕ್ತಾಯದ ದೃಶ್ಯಗಳಲ್ಲಿ ಹಳೆಯ ಒಡಂಬಡಿಕೆಯ ಕಾಲದ ಇಸ್ರಾಯೇಲ್ಯರನ್ನು ಅನುಸರಿಸುವರು. ಯೇಸುಕ್ರಿಸ್ತನು ತನ್ನ ಬೋಧನೆಗಳಲ್ಲಿ ತಿಳಿಸಿದ ಮಹಾಸಿದ್ಧಾಂತಗಳನ್ನು ತ್ಯಜಿಸಿ, ಮನುಷ್ಯರ ಯೋಜನೆಗಳಂತೆ ಇವರು ಕೆಲಸ ಮಾಡುವರು. ಲೂಸಿಫರನೆಂಬ ಸೈತಾನನ ಉದ್ದೇಶ ಪೂರ್ವಕವಾಗಿ ವ್ಯತಿರಿಕ್ತವಾದ ಪರಿಣಾಮಗಳನ್ನು ಅನುಸರಿಸುವ ನಮ್ಮ ಸಭೆಯಲ್ಲಿ ಗೌರವ ಹಾಗೂ ಉನ್ನತಸ್ಥಾನಮಾನ ಹೊಂದಿದ್ದ ನಾಯಕರು ತಮ್ಮ ತಪ್ಪಾದ ಕ್ರಿಯೆಗಳನ್ನು ಸಮರ್ಥಿಸಿಕೊಳ್ಳಲು ಸತ್ಯವೇದವನ್ನು ತಪ್ಪಾಗಿ ಉಪಯೋಗಿಸುವರು. ಇವುಗಳಿಂದ ಜನರು ಕ್ರಿಸ್ತನ ಬೋಧನೆಗಳನ್ನು ಅಪಾರ್ಥ ಮಾಡಿಕೊಳ್ಳುವರು ಹಾಗೂ ಅವರನ್ನು ತಪ್ಪಾದ ನಡವಳಿಕೆಗಳಿಂದ ದೂರವಿಡಲು ಅಗತ್ಯವಾದ ಸತ್ಯವು ತೂತಾದ ಪಾತ್ರೆಯಿಂದ ನೀರು ಹೊರಟು ಹೋಗುವಂತೆ, ಅವರಿಂದ ಹೊರಟು ಹೋಗುವುದು. ಕೊಕಾಘ 103.1

ಅನೇಕರು ತಾವು ಲೋಕದ ಪಾಲಿಗೆ ಸತ್ತಿಲ್ಲವೆಂದೂ ಹಾಗೂ ಕ್ರಿಸ್ತನೊಂದಿಗೆ ಒಂದಾಗಿಲ್ಲವೆಂದು ತೋರಿಸುವದು. ಸಭೆಯಲ್ಲಿ ಜವಾಬ್ದಾರಿಯುತ ಸ್ಥಾನ ಹೊಂದಿರುವವರು ಸತ್ಯವನ್ನು ಬಿಟ್ಟು ಮತಭ್ರಷ್ಟರಾಗುವ ಸಂಭವವು ಹೆಚ್ಚಾಗಿರುತ್ತದೆ (ರಿವ್ಯೂ ಅಂಡ್ ಹೆರಾಲ್ಡ್, ಸೆಪ್ಟೆಂಬರ್ 11, 1888). ಕೊಕಾಘ 103.2