Go to full page →

ಭೂಕಂಪಗಳು ಮತ್ತು ಪ್ರವಾಹಗಳು ಕೊಕಾಘ 14

ಸೈತಾನನು ಹಿಂದೆಯೂ ನಾಶದ ಕಾರ್ಯಮಾಡಿದ್ದಾನೆ, ಈಗಲೂ ಮಾಡುತ್ತಿದ್ದಾನೆ. ಅವನು ಮಹಾಶಕ್ತಿಯಿಂದ ಬಂದಿದ್ದಾನೆ, ದೇವರ ಪರಿಶುದ್ಧಾತ್ಮನು ಲೋಕದಿಂದ ತೆಗೆಯಲ್ಪಟ್ಟಿದ್ದಾನೆ. ದೇವರ ಕೃಪಾಹಸ್ತವು ತೆಗೆಯಲ್ಪಟ್ಟಿದೆ. ಶ್ರೀಮತಿ ವೈಟಮ್ಮನವರು ಮತ್ತು ಇತರ ಅಡ್ರೆಂಟಿಸ್ಟ್ ವಿಶ್ವಾಸಿಗಳು ಅಮೆರಿಕಾ ದೇಶದ ಪೆನ್ಸಿಲ್ವೇನಿಯಾ ರಾಜ್ಯದ ಜಾನ್ಸ್‌ಟೌನ್ ಎಂಬ ಪಟ್ಟಣದ ಕಡೆಗೆ ಗಮನ ಹರಿಸಿದ್ದಾರೆ. ಅನೇಕ ದಿನಗಳ ಭಾರಿಮಳೆಯ ನಂತರ ಒಂದು ಅಣೆಕಟ್ಟು ಒಡೆದುಹೋಗಿ ಜಾನ್ಸ್‌ಟೌನ್ ಎಂಬ ಊರಿನಲ್ಲಿ ಪ್ರವಾಹದಿಂದ ಮೇ 31, 1899 ರಲ್ಲಿ ಸುಮಾರು 2200 ಮಂದಿ ಸತ್ತರು. ಸೈತಾನನು ಸಂಪೂರ್ಣವಾಗಿ ಆ ಊರನ್ನು ನಾಶಮಾಡುವಾಗ, ದೇವರು ಅವನನ್ನು ತಡೆಯಲಿಲ್ಲ. ಇಂತಹ ವಿಪತ್ತುಗಳು ಜಗತ್ತಿನ ಇತಿಹಾಸ ಮುಕ್ತಾಯವಾಗುವವರೆಗೂ ಹೆಚ್ಚಾಗುತ್ತಲೇ ಇರುತ್ತವೆ (ಸೆರ್ಮನ್ಸ್ ಅಂಡ್ ಟಾಕ್ಸ್, ಸಂಪುಟ 1, ಪುಟ 109 (1889). ಕೊಕಾಘ 14.3

ಮಹಾ ಭೂಕಂಪಗಳಾಗುವವು, ತಮ್ಮ ಕಾರ್ಮಿಕರಿಗೆ ಕಡಿಮೆ ಕೂಲಿಕೊಟ್ಟು, ಹೆಚ್ಚು ದುಡಿಮೆ ಮಾಡಿಸಿಕೊಂಡು ಶೋಷಣೆ ಮಾಡಿದ ಮಾಲೀಕರು ಅನೇಕ ವರ್ಷಗಳಿಂದ ಕೂಡಿಟ್ಟ ಸಂಪತ್ತು ನಾಶವಾಗುವುದು. ಎಲ್ಲವುಗಳ ಅಂತ್ಯ ಹತ್ತಿರವಾಗಿರುವುದರಿಂದ ಕ್ರೈಸ್ತದೇಶಗಳೂ ಸಹ ಇದರಿಂದ ಬಾಧೆಗೊಳಗಾಗುವವು (1891). ಒಂದು ಕ್ಷಣದಲ್ಲಿ ಗಟ್ಟಿಯಾದ ಭೂಮಿಯಲ್ಲಿರಬಹುದು. ಆದರೆ ಮರುಕ್ಷಣದಲ್ಲಿ ನಮ್ಮ ಕಾಲುಗಳ ಕೆಳಗೆ ಭೂಕಂಪದ ಅನುಭವವಾಗುವಂತ ಸಮಯ ಈಗ ಬಂದಿದೆ. ನೆನಸದಂತ ಸಮಯದಲ್ಲಿ ಭೂಕಂಪಗಳು ಉಂಟಾಗುವವು (ಟೆಸ್ಟಿಮೊನೀಸ್‌ ಟು ಮಿನಿಸ್ಟರ್ಸ್, ಪುಟ 421, 1896). ಕೊಕಾಘ 14.4

ಬೆಂಕಿಯ ಅನಾಹುತಗಳು, ಪ್ರವಾಹಗಳು, ಭೂಕಂಪಗಳು, ಸಮುದ್ರದಲ್ಲಿ ಮತ್ತು ಭೂಮಿಯಲ್ಲಿ ಉಂಟಾಗುವ ನೈಸರ್ಗಿಕ ವಿಪತ್ತುಗಳು ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವುದಿಲ್ಲ’ ಎಂದು ದೇವರು ನೀಡಿದ ಎಚ್ಚರಿಕೆಯನ್ನು (ಆದಿಕಾಂಡ 63) ನಮ್ಮ ನೆನಪಿಗೆ ತರುವವು (1897). ಮನುಷ್ಯಕುಮಾರನು ಆಕಾಶದ ಮೇಘಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಮೊದಲು ಪ್ರಕೃತಿಯ ಎಲ್ಲವೂ ಉಗ್ರವಾದ ಕ್ಷೋಭೆಗೆ ಒಳಗಾಗುವವು. ಪರಲೋಕದಿಂದ ಬರುವ ಮಿಂಚು ಭೂಮಿಯ ಬೆಂಕಿಯೊಡನೆ ಸೇರಿ ಬೆಟ್ಟಗಳಲ್ಲಿ ಜ್ವಾಲಾಮುಖಿ ಉಂಟಾಗಿ, ಕಾಲುವೆಯಂತ ಲಾವಾರಸವು ಪಟ್ಟಣ, ಹಳ್ಳಿಗಳ ಮೇಲೆ ಸುರಿಯುವವು. ಭೂಮಿಯೊಳಗಿಂದ ಉರಿಯುವ ಬಂಡೆಗಳು ನದಿಸಮುದ್ರಗಳಿಗೆ ಎಸೆಯಲ್ಪಟ್ಟು, ನೀರು ಸಹಿಸಲಸಾಧ್ಯವಾದಂತೆ ಕುದಿಯುತ್ತಾ ಮಣ್ಣು ಮತ್ತು ಬಂಡೆಗಳು ಭೂಮಿಯ ಮೇಲಕ್ಕೆ ರಭಸದಿಂದ ಎಸೆಯಲ್ಪಡುವವು. ದೊಡ್ಡಭೂಕಂಪಗಳುಂಟಾಗಿ ಬಹಳಷ್ಟು ಜನರು ಸಾಯುವರು (ಅಡ್ವೆಂಟಿಸ್ಟ್ ಬೈಬಲ್ ವ್ಯಾಖ್ಯಾನ, ಸಂಪುಟ 7, ಪುಟ 946 (1907). ಕೊಕಾಘ 14.5