Go to full page →

ಅಪರಾಧಗಳು, ಬರಗಾಲಗಳು ಮತ್ತು ಅಂಟುರೋಗಗಳು ಕೊಕಾಘ 15

ಸೈತಾನನು ಪರಿಸರದ ಮೇಲೆ ನಿಯಂತ್ರಣ ಹೊಂದಿ ಅದನ್ನು ವಿಷಯುಕ್ತವನ್ನಾಗಿ ಮಾಡುವನು. ನಮ್ಮ ಈಗಿನ ಹಾಗೂ ನಿತ್ಯಜೀವಕ್ಕಾಗಿ ನಾವು ಇಂತಹ ಸಮಯದಲ್ಲಿ ಸಂಪೂರ್ಣವಾಗಿ ದೇವರ ಮೇಲೆ ಆತುಕೊಳ್ಳಬೇಕು. ನಾವು ಸಂಪೂರ್ಣ ಎಚ್ಚರದಿಂದಿದ್ದು, ಮಾನಸಾಂತರಗೊಂಡು ಭಯಭಕ್ತಿಯಿಂದ ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ಆದರೆ ಇಂತಹ ಸಮಯದಲ್ಲಿ ನಾವು ಲಕ್ವ ಹೊಡೆದವರಂತೆ ಕುಳಿತಿದ್ದೇವೆ. ಪರಲೋಕದ ದೇವರೇ, ನಮ್ಮನ್ನು ಎಚ್ಚರಗೊಳಿಸು! (ಸೆಲೆಕ್ಟೆಡ್ ಮೆಸೇಜಸ್ ಸಂಪುಟ 2, ಪುಟ 52 (1890). ಕೊಕಾಘ 15.1

ಜೀವ ಮತ್ತು ಪೋಷಕಾಂಶಗಳ ಮೂಲಗಳಲ್ಲಿ ಒಂದಾದ ಗಾಳಿಯನ್ನು ಮಲಿನಗೊಳಿಸಿ ಮಾರಣಾಂತಿಕವಾದ ಕೆಟ್ಟ ವಾಸನೆಗೆ ಕಾರಣವಾಗುತ್ತಿರುವ ಅಂಧಕಾರದ ಶಕ್ತಿಗಳ (ಸೈತಾನನ) ಈ ಭಯಾನಕ ಕಾರ್ಯವನ್ನು ದೇವರು ತಡೆಯುತ್ತಿಲ್ಲ. ಸಸ್ಯಜೀವಿಗಳು ಹಾನಿಗೊಳಗಾಗಿರುವುದು ಮಾತ್ರವಲ್ಲದೆ, ಮನುಷ್ಯನೂ ಸಹ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾನೆ. ಈ ಕಾರ್ಯಗಳು ದೇವರ ಉಗ್ರಕೋಪವೆಂಬ ಪಾತ್ರೆಯಿಂದ ಬೀಳುವ ಹನಿಗಳು ಈ ಲೋಕದ ಮೇಲೆ ಚಿಮುಕಿಸಿದ ಪರಿಣಾಮದಿಂದ ಉಂಟಾಗುತ್ತವೆ. ಇದು ಮುಂದೆ ಬರಲಿರುವ ದೇವರ ಉಗ್ರಕೋಪದ ಸಂಪೂರ್ಣ ಫಲಿತಾಂಶವನ್ನು ತಿಳಿಸುತ್ತದೆ (ಸೆಲೆಕ್ಡೆಡ್ ಮೆಸೇಜಸ್ ಸಂಪುಟ 3, ಪುಟ 391 (1891) (ದೇವರು ಬರಮಾಡಲು ಅನುಮತಿ ಕೊಡುವ ಅಥವಾ ತಡೆಯದಂತ ಉಪದ್ರವಗಳಿಗೆ ಸ್ವತಃ ತಾನೇ ಜವಾಬ್ದಾರಿ ತೆಗೆದುಕೊಳ್ಳುತ್ತಾನೆ. ವಿಮೋಚನಕಾಂಡ 7:3; 8:32: 1 ಪೂ.ಕಾ ವೃತ್ತಾಂತ 10:4, 13, 14) ಕೊಕಾಘ 15.2

ಬರಗಾಲಗಳು ಹೆಚ್ಚಾಗುವವು. ಅಂಟುರೋಗಗಳಿಂದ ಲಕ್ಷಾಂತರ ಜನರು ಸಾಯುವರು. ಎಲ್ಲಾ ಕಡೆಯಿಂದಲೂ ಸೈತಾನನ ಮುಖಾಂತರ ಅಪಾಯಗಳು ಉಂಟಾಗುವವು, ಆದರೆ ಈಗ ದೇವರು ತನ್ನ ಶಕ್ತಿಯಿಂದ ಅವುಗಳನ್ನು ನಿಯಂತ್ರಿಸುವನು (1897): ಈ ಲೋಕದಿಂದ ಪರಿಶುದ್ಧಾತ್ಮನು ತೆಗೆಯಲ್ಪಟ್ಟದ್ದನ್ನು ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ನೋಡಿದರು. ದೇವರಾಜ್ಞೆಗಳನ್ನು ತಿರಸ್ಕರಿಸುತ್ತಿರುವವರಿಗೆ, ದೇವರ ರಕ್ಷಣೆಯು ದೊರೆಯುವುದಿಲ್ಲ ಮೋಸ, ವಂಚನೆ, ಕೊಲೆ ಸುಲಿಗೆ ಹಾಗೂ ಎಲ್ಲಾ ರೀತಿಯ ಅಪರಾಧಗಳ ವರದಿಗಳು. ಪ್ರತಿದಿನವೂ ಬರುತ್ತಲಿವೆ. ಅಧರ್ಮ, ದುಷ್ಟತನ, ಅನ್ಯಾಯ, ಪಾಪಕಾರ್ಯಗಳು ಎಷ್ಟೊಂದು ಸಾಮಾನ್ಯವಾಗಿದೆ ಎಂದರೆ, ಅದು ಮೊದಲಿನಂತೆ ಈಗ ನಮ್ಮ ಮನಸ್ಸಿನಲ್ಲಿ ದುಃಖವೇದನೆ ತರುವುದಿಲ್ಲ (1907). ಕೊಕಾಘ 15.3