Go to full page →

ನಿಜವಾದ ಪಶ್ಚಾತ್ತಾಪದಿಂದ ನಮ್ಮ ಹೃದಯಗಳನ್ನು ತಗ್ಗಿಸಿಕೊಳ್ಳಬೇಕು. ಕೊಕಾಘ 109

ನಿಜವಾದ ದೈವಭಕ್ತಿಯ ಪುನರುಜ್ಜಿವನವು ಇಂದು ನಮ್ಮೆಲ್ಲಾ ಅಗತ್ಯಗಳಿಗಿಂತ ಹೆಚ್ಚು ದೊಡ್ಡದ್ದು ಹಾಗೂ ತುರ್ತಿನದ್ದೂ ಆಗಿದೆ. ಇದನ್ನು ಹುಡುಕುವುದು ನಮ್ಮ ಮೊದಲ ಕರ್ತವ್ಯವಾಗಿರಬೇಕು. ದೇವರ ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕೆ ನಾವು ಮನಃಪೂರ್ವಕವಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆತನು ತನ್ನ ಆಶೀರ್ವಾದಕೂಡಲು ಸದಾಕಾಲವೂ ಸಿದ್ಧನಾಗಿದ್ದಾನೆ. ಆದರೆ ಅದನ್ನು ಪಡೆದುಕೊಳ್ಳಲು ನಾವು ಸಿದ್ಧರಾಗಿಲ್ಲ. ನಾವು ನಮ್ಮ ಮಕ್ಕಳಿಗೆ ಕೊಡುವ ಒಳ್ಳೆಯ ಬಹುಮಾನಕ್ಕಿಂತಲೂ ಹೆಚ್ಚಿನ ಪವಿತ್ರಾತ್ಮವರವನ್ನು ಪರಲೋಕದ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಕೊಡಲು ಬಯಸುತ್ತಾನೆ. ಆದರೆ ನಾವು ಪಾಪವನ್ನು ಅರಿಕೆ ಮಾಡಿ ನಮ್ಮನ್ನು ತಗ್ಗಿಸಿಕೊಂಡು, ಪಶ್ಚಾತ್ತಾಪ ಪಟ್ಟು ಮನಃಪೂರ್ವಕವಾಗಿ ಪ್ರಾರ್ಥಿಸಿ, ದೇವರು ನಮಗೆ ಕೊಡುತ್ತೇನೆಂದು ಹೇಳಿದ ಆಶೀರ್ವಾದದ ವಾಗ್ದಾನಗಳ ಶರತ್ತುಗಳನ್ನು ನೆರವೇರಿಸಬೇಕು. ಪ್ರಾರ್ಥನೆಗೆ ಉತ್ತರದ ಮೂಲಕ ಮಾತ್ರ ಪುನರುಜೀವನವನ್ನು ನಿರೀಕ್ಷಿಸಬಹುದು (ಸೆಲೆಕ್ಟೆಡ್ ಮೆಸೇಜಸ್, ಸಂಪುಟ 1, ಪುಟ 121, 1887). ಕೊಕಾಘ 109.4

ಅಡ್ವೆಂಟಿಸ್ಟರಾದ ನಮ್ಮಲ್ಲಿ ಸಂಪೂರ್ಣವಾದ ಪುನರುಜ್ಜಿವನ ಉಂಟಾಗಬೇಕೆಂದು ಶ್ರೀಮತಿ ವೈಟಮ್ಮನವರು ಹೇಳುತ್ತಾರೆ, ಪರಿವರ್ತನೆ ಮಾಡುವ ಸೇವೆಯಿರಬೇಕು. ಪಾಪಗಳನ್ನು ಒಪ್ಪಿ ಅರಿಕೆ ಮಾಡಿಕೊಂಡು ಅದಕ್ಕೆ ಪಶ್ಚಾತ್ತಾಪ ಪಟ್ಟು ಸಂಪೂರ್ಣ ಮನಃಪರಿವರ್ತನೆಯಾಗಬೇಕು. ದೇವರ ವಾಕ್ಯವನ್ನು ಬೋಧಿಸುವ ಅನೇಕರಿಗೆ ತಮ್ಮ ಹೃದಯಗಳನ್ನು ಬದಲಾವಣೆ ಮಾಡುವ ಕ್ರಿಸ್ತನ ಕೃಪೆಯ ಅಗತ್ಯವಿದೆ. ತುಂಬಾ ತಡವಾಗುವುದಕ್ಕೆ ಮೊದಲು ಅವರು ಸಂಪೂರ್ಣವಾದ ಸೇವೆ ಮಾಡುವಾಗ ಯಾವುದೇ ಅಡೆತಡೆಯು ಉಂಟಾಗದಂತೆ ನೋಡಿಕೊಳ್ಳಬೇಕು, ಕೊಕಾಘ 109.5