Go to full page →

ಧಾರ್ಮಿಕ ಸುಧಾರಣೆಯೊಂದಿಗೆ ಪುನರುಜ್ಜಿವನವೂ ಉಂಟಾಗಬೇಕು ಕೊಕಾಘ 110

ಪರಿಶುದ್ಧಾತ್ಮನ ಮಾರ್ಗದರ್ಶನದಲ್ಲಿ ಒಂದು ಧಾರ್ಮಿಕ ಸುಧಾರಣೆ ಹಾಗೂ ಪುನರುಜ್ಜಿವನ ಉಂಟಾಗಬೇಕು. ಇವೆರಡೂ ಬೇರೆ ಬೇರೆಯಾಗಿವೆ. ಧಾರ್ಮಿಕ ಸುಧಾರಣೆಯು ನಮ್ಮ ಆಲೋಚನೆ, ಸಿದ್ದಾಂತಗಳು, ಅಭ್ಯಾಸಗಳು ಹಾಗೂ ನಡವಳಿಕೆಗಳು ಸಂಪೂರ್ಣವಾದ ಪುನರ್‌ವ್ಯವಸ್ಥೆ ಉಂಟಾಗುವುದನ್ನು ಸೂಚಿಸುತ್ತದೆ. ಆದರೆ ಪುನರುಜ್ಜೀವನವು ಆತ್ಮೀಕ ಜೀವನವು ಸಂಪೂರ್ಣ ಹೊಸದಾಗಿ ಮಾರ್ಪಟ್ಟು ಮನಸ್ಸು ಹಾಗೂ ಹೃದಯಗಳು ಚೈತನ್ಯಗೊಂಡು, ಆತ್ಮೀಕ ಮರಣದಿಂದ ಪುನರುತ್ಥಾನಗೊಳ್ಳುವುದನ್ನು ಸೂಚಿಸುತ್ತದೆ. ಧಾರ್ಮಿಕ ಸುಧಾರಣೆಯು ಆತ್ಮೀಕ ಪುನರುಜ್ಜೀವನದೊಂದಿಗೆ ಸಂಬಂಧ ಹೊಂದಿರದಿದ್ದಲ್ಲಿ, ಅದು ನೀತಿ ಉತ್ತಮವಾದ ಫಲವನ್ನು ತರುವುದಿಲ್ಲ. ಧಾರ್ಮಿಕ ಸುಧಾರಣೆ ಮತ್ತು ಪುನರುಜ್ಜಿವನವು ತಮಗೆ ನೇಮಿಸಿದ ಕಾರ್ಯಗಳನ್ನು ಮಾಡಬೇಕು ಹಾಗೂ ಈ ಕಾರ್ಯ ಮಾಡುವಾಗ ಇವೆರಡೂ ಒಂದಾಗಬೇಕು (ರಿವ್ಯೂ ಅಂಡ್ ಹೆರಾಲ್ಡ್ ಫೆಬ್ರವರಿ 25, 1902). ಕೊಕಾಘ 110.1