Go to full page →

ಅಧ್ಯಾಯ-31 — ಸಂಗೀತ KanCCh 201

ಪ್ರವಾದಿಮಂಡಳಿಗಳಲ್ಲಿ ಪವಿತ್ರವಾದ ಹಾಡುಗಳನ್ನು ಶ್ರದ್ಧೆಯಿಂದ ಕಲಿಸಲಾಗುತ್ತಿತ್ತು. ಅಲ್ಲಿ ಯಾವುದೇ ವಿಧವಾದ ಕ್ಷುಲ್ಲಕವಾದ ಸಂಗೀತವಾಗಲಿ ಇಲ್ಲವೆ ದೇವರಿಂದ ಗಮನವನ್ನು ದೂರಮಾಡಿ ಮನುಷ್ಯನನ್ನು ಸ್ತುತಿಸುವಂತ ಗಾಂಭೀರ್ಯವಿಲ್ಲದ ಗಾಯನವಾಗಲಿ ಕೇಳಿ ಬರುತ್ತಿರಲಿಲ್ಲ. ಆದರೆ ಸೃಷ್ಟಿಕರ್ತನಾದ ದೇವರನಾಮವನ್ನು ಮಹಿಮೆಪಡಿಸಿ, ಆತನ ಅದ್ಭುತ ಕಾರ್ಯಗಳನ್ನು ನೆನಪಿಸಿಕೊಳ್ಳುವಂತ ಪವಿತ್ರವಾದ ಹಾಗೂ ಗಂಭೀರವಾದ ಕೀರ್ತನೆಗಳ ಮೂಲಕ ಆತನಿಗೆ ಸ್ತೋತ್ರ ಸಲ್ಲಿಸಲಾಗುತ್ತಿತ್ತು. KanCCh 201.1

ಈ ರೀತಿಯಲ್ಲಿ ಸಂಗೀತವನ್ನು ಶ್ರೇಷ್ಟವೂ, ಉನ್ನತವೂ ಆದ ಪರಿಶುದ್ಧ ಆಲೋಚನೆಗಳ ಮೂಲಕ ದೇವರಿಗೆ ಭಯಭಕ್ತಿ ಹಾಗೂ ಕೃತಜ್ಞತೆ ತೋರಿಸುವಂತ ಪವಿತ್ರ ಉದ್ದೇಶಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಪರಲೋಕದಲ್ಲಿಯೂ ಸಹ ಸಂಗೀತವು ದೇವಾರಾಧನೆಯ ಒಂದು ಭಾಗವಾಗಿದ್ದೆ ನಮ್ಮ ಸ್ತುತಿಗೀತೆಗಳು ಸಾಧ್ಯವಾದಷ್ಟುಮಟ್ಟಿಗೆ ಪರಲೋಕದ ಗಾಯನ ವೃಂದಕ್ಕೆ ಸಾಮರಸ್ಯ ತರುವಂತೆ ಪ್ರಯತ್ನ ಮಾಡಬೇಕು. ಸರಿಯಾದ ತರಬೇತಿಯು ಪ್ರಾಮುಖ್ಯವಾಗಿದ್ದು, ಅದನ್ನು ನಿರ್ಲಕ್ಷಿಸಬಾರದು. ಧಾರ್ಮಿಕ ಆರಾಧನೆಯ ಭಾಗವಾಗಿರುವ ಸಂಗೀತವು ಪ್ರಾರ್ಥನೆಯಂತೆಯೇ ಆರಾಧನೆಯ ಒಂದು ಕ್ರಮವಾಗಿದೆ. ಹೃದಯವು ಸರಿಯಾದ ಭಾವನೆ ವ್ಯಕ್ತಪಡಿಸುವಂತೆ ಹಾಡಿನ ಮಾಧುರ್ಯವನ್ನು ಅನುಭವಿಸಬೇಕು. KanCCh 201.2

ಶ್ರೀಮತಿ ವೈಟಮ್ಮನವರು ದರ್ಶನದಲ್ಲಿ ಪರಲೋಕದಲ್ಲಿ ಪರಿಪೂರ್ಣವಾದ ಕ್ರಮಬದ್ ವ್ಯವಸ್ಥೆಯನ್ನು ನೋಡಿದರು. ಅಲ್ಲದೆ ದೇವದೂತರ ಅತ್ಯಂತ ಮಧುರವಾದ ಗಾನವನ್ನು ಕೇಳಿ ಆನಂದದಿಂದ ಮೈಮರೆತೆನು ಎಂದು ಹೇಳುತ್ತಾರೆ. ದರ್ಶನದ ನಂತರ ಇಲ್ಲಿ ಹಾಡುವ ಹಾಡು ಅತ್ಯಂತ ಕರ್ಕಶವೂ ಹಾಗೂ ಅಸಂಗತವಾಗಿಯೂ ಅವರಿಗೆ ಕಂಡುಬಂದಿತು. ದೇವದರ್ಶನದಲ್ಲಿ ಶ್ರೀಮತಿ ವೈಟಮ್ಮನವರು ಪರಲೋಕದಲ್ಲಿ ದೇವದೂತರು ಪ್ರತಿಯೊಬ್ಬರೂ ಬಂಗಾರದ ಕಿನ್ನರಿಯನ್ನು ಹಿಡಿದುಕೊಂಡು ಬೊಗಸೆಯಕಾರದ ವೃತ್ತದಲ್ಲಿ ನಿಂತಿರುವುದನ್ನು ಕಂಡರು. ಕಿನ್ನರಿ ಥವಾ ತಂತಿವಾದ್ಯದ ಕೊನೆಯಲ್ಲಿ ಅದರ ಸ್ವರವನ್ನು ಬದಲಾಯಿಸುವ ಅಥವಾ ಅದನ್ನು ಇಡುವಂತ ಒಂದು ಸಾಧನವಿತ್ತು (Instru-ment), ದೇವದೂತರ ಬೆರಳುಗಳು ಕಿನ್ನರಿಯ ತಂತಿಗಳನ್ನು ಅಲಕ್ಷದಿಂದ ಮೀಟುತ್ತಿರಲಿಲ್ಲ. ಬದಲಾಗಿ ವಿವಿಧವಾದ ತಂತಿಗಳನ್ನು ಮೀಟೆ ಅದರಿಂದ ವಿವಿಧವಾದ ಮಧುರ ಶಬ್ದಗಳನ್ನು ಹೊರಡಿಸುತ್ತಿದ್ದರು. ಅವರಿಗೆ ಮುಖ್ಯಸ್ಥನಾದ ಒಬ್ಬ ದೇವದೂತನು ಮೊದಲು ತಂತಿ ವೀಟಿ ಸ್ವರಹೊರಡಿಸಿದಾಗ, ಉಳಿದೆಲ್ಲಾ ದೇವದೂತರು ತಮ್ಮ ತಂತಿ ವಾದ್ಯಗಳನ್ನು ಬಾರಿಸುತ್ತಾ ಪರಲೋಕದ ಅತ್ಯಂತ ಮಧುರವಾದ ಸಂಗೀತ ಹೊರಡಿಸುತ್ತಿದ್ದರು. ಅದರ ವರ್ಣನೆಯನ್ನು ಯಾರೂ ಸಹ ವರ್ಣಿಸಲಾರರು. ಅದರ ದೈವೀಕ ಮಾಧುರ್ಯ, ಹಾಡುತ್ತಿದ್ದ ದೇವದೂತರ ಮುಖದಿಂದ ಹೊರಡುತ್ತಿದ್ದ ಕ್ರಿಸ್ತನ ದೈ ವೀಕ ಸ್ವರೂಪದ ಕಿರಣಗಳು ಅತ್ಯಂತ ಮಹಿಮೆಯಿಂದ ಹೊಳೆಯುತ್ತಿದ್ದು, ಅದನ್ನು ಹೇಳಲಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. KanCCh 201.3

ಕ್ರೈಸ್ತ ಯೌವನಸ್ಥರು ಉನ್ನತವಾದ ನಿಲುವು ತೆಗೆದುಕೊಂಡು ದೇವರ ವಾಕ್ಯವು ಅವರ ಆಪ್ತಮಿತ್ರನೂ, ಸಲಹೆಗಾರನೂ ಹಾಗೂ ಮಾರ್ಗದರ್ಶಕವೂ ಆಗಿರುವಂತೆ ಮಾಡಿಕೊಳ್ಳಬೇಕೆಂದು ಶ್ರೀಮತಿ ವೈಟಮ್ಮನವರಿಗೆ ದೇವರು ದರ್ಶನದಲ್ಲಿ ತಿಳಿಸಿದ್ದಾನೆ. ಯೌವನಸ್ಥರ ಮೇಲೆ ಒಂದು ಗಂಭೀರವಾದ ಜವಾಬ್ದಾರಿಯಿದೆ. ಆದರೆ ಅವರು ಅದನ್ನು ಹಗುರವಾಗಿ ಎಣಿಸುತ್ತಾರೆ. ಅವರು ಮನೆಯಲ್ಲಿ ಕೇಳುವ ಸಂಗೀತವು ಪರಿಶುದ್ಧತೆ ಮತ್ತು ಆತ್ಮೀಕ ಬೆಳವಣಿಗೆಗೆ ಸಹಕಾರಿಯಾಗುವ ಬದಲು, ಅವರ ಮನಸ್ಸನ್ನು ಸತ್ಯದಿಂದ ದೂರ ಮಾಡುತ್ತಿದೆ. ಇಂದಿನ ಅಶ್ಲೀಲ ಸಂಗೀತ, ದ್ವಂದ್ವಾರ್ಥ ನೀಡುವ ಹಾಡುಗಳು KanCCh 202.1

ತಮ್ಮ ಅಭಿರುಚಿಗೆ ಹಿತಕರವಾಗಿ ಹೊಂದುವಂತಿದೆ ಎಂದು ಅವರಿಗೆ ಅನಿಸುತ್ತದೆ. ಸಂಗೀತವನ್ನು ಸರಿಯಾಗಿ ಉಪಯೋಗಿಸಿದಾಗ, ಅದು ಒಂದು ದೊಡ್ಡ ಆಶೀರ್ವಾದ, ಆದರೆ ತಪ್ಪಾಗಿ ಅದನ್ನು ಉಪಯೋಗಿಸಿದಾಗ ಅದು ಭಯಂಕರ ಶಾಪವಾಗಿ ಪರಿಣಮಿಸುತ್ತದೆ. ಸಂಗೀತವು ಪ್ರಚೋದಿಸುತ್ತದೆ ಆದರೆ ಬಲ ಮತ್ತು ನೈತಿಕ ಧೈರ್ಯ ಕೊಡುವುದಿಲ್ಲ. ಸೈತಾನನ ಬಲವಾದ ಶೋಧನೆಗಳನ್ನು ಎದುರಿಸಲು ಶಕ್ತರಾಗುವಂತೆ, ಪರಲೋಕದ ಬಲ ಹಾಗೂ ಕೃಪೆಯನ್ನು ದೇವರಿಂದ ಹೊಂದಿಕೊಳ್ಳಬೇಕಾದಲ್ಲಿ ಕ್ರೈಸ್ತರು ತಮ್ಮನ್ನು ತಾವೇ ತಗ್ಗಿಸಿಕೊಂಡು ಕಣ್ಣೀರಿಟ್ಟು ಬಲವಾಗಿ ದೇವರಿಗೆ ಮೊರೆಯಿಟ್ಟು ಪ್ರಾರ್ಥಿಸಬೇಕು. “ಅಯ್ಯೋ, ಸೈತಾನನ ಬಲವಾದ ತಿಳಿಗೇಡಿತನದಿಂದ ಯೌವನಸ್ಥರು KanCCh 202.2

ತಮ್ಮನ್ನು ಬಿಡಿಸಿಕೊಳ್ಳುವಂತೆ ಅವರಿಗೆ ಮಾರ್ಗದರ್ಶನ ನೀಡಲು ನಾನೇನು ಹೇಳಲಿ?” ಎಂದು ಶ್ರೀಮತಿ ವೈಟಮ್ಮನವರು ದುಃಖದಿಂದ ಹೇಳುತ್ತಾರೆ. ಸೈತಾನನು ಬಹಳ ಕುಶಾಗ್ರಮತಿಯಾದ ವಂಚಕನಾಗಿದ್ದು, ಯೌವನಸ್ಥರನ್ನು ನಾಶಕ್ಕೆ ನಡೆಸುತ್ತಾನೆ. KanCCh 202.3

*****