ಕ್ರೈಸ್ತರು ತಾವು ಆಡುವ ಮಾತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮ್ಮ ಸ್ನೇಹಿತನು ತನ್ನ ಇನ್ನೊಬ್ಬ ಸ್ನೇಹಿತನ ಬಗ್ಗೆ ಮಾಡಿದ ಟೀಕೆ, ಖಂಡನೆ ಹಾಗೂ ಕೆಟ್ಟ ಮಾತುಗಳನ್ನು ನೀವು ಅವನಿಗೆ ತಿಳಿಸಲೇಬಾರದು. ಅದರಲ್ಲಿಯೂ ಅವರಿಬ್ಬರ ನಡುವೆ ಅಷ್ಟೊಂದು ಉತ್ತಮ ಸಂಬಂಧ ಇಲ್ಲದಿರುವಾಗ ಇಂತಹ ವಿಷಯಗಳನ್ನು ಖಂಡಿತವಾಗಿಯೂ ರದು. ಈ ಸ್ನೇಹಿತನ ಬಗ್ಗೆ ನಿಮಗೆ ಎಲ್ಲವೂ ತಿಳಿದಿರುವಂತ ರೀತಿಯಲ್ಲಿ ಮತ್ತೊಬ್ಬನು ಆಡಿದ ಕೆಟ್ಟ ಮಾತುಗಳ ಸುಳಿವು ನೀಡುವುದಾಗಲಿ ಇಲ್ಲವೆ ಪರೋಕ್ಷವಾಗಿ ತಿಳಿಸುವುದಾಗಲಿ ಕ್ರೂರವಾದದ್ದು ಹಾಗೂ ಇತರರ ಬಾಧೆಯನ್ನು ನೋಡಿ ವಿಕೃತವಾದ KanCCh 203.1
ಸಂತೋಷಪಡುವಂತ ಕೆಟ್ಟಗುಣವಾಗಿದೆ. ಈ ರೀತಿಯಾಗಿ ಮಾಡುವುದರಿಂದ ಆ ಸ್ನೇಹಿತರ ನಡುವಣ ಗೆಳೆತನದಲ್ಲಿ ಬಿರುಕು ಉಂಟಾಗಿ ಅವರಿಬ್ಬರಲ್ಲಿ ಮತ್ತೆಂದೂ ಉತ್ತಮ ಸಂಬಂಧ ಉಂಟಾಗದಿರಬಹುದು. ಸಭಿಕರು ಮಾಡುವಂತ ಇಂತಹ ಮೂರ್ಖತನದಿಂದ ಕ್ರಿಸ್ತನಸಭೆಯಲ್ಲಿ ಎಂತಹ ಹಾನಿಯುಂಟಾಗಿದೆಯಲ್ಲವೇ! ಸಭಿಕರ ಇಂತಹ ಅಸಂಗತವಾದ ಹಾಗೂ ತಿಳಿಗೇಡಿತನದ ವರ್ತನೆಯಿಂದ ಸಭೆಯ ಐಕ್ಯತೆಯು ನೀರಿನಂತೆ ದುರ್ಬಲಗೊಳ್ಳುತ್ತದೆ. ಒಬ್ಬರು ಮತ್ತೊಬ್ಬರ ಬಗ್ಗೆ ಮಾಡಿದ ದೂಷಣೆ, ಕೆಟ್ಟ ಮಾತುಗಳನ್ನು ಇನ್ನೊಬ್ಬನು ತಿಳಿಸುವಾಗ ಕೆಲವು ಸಂದರ್ಭಗಳಲ್ಲಿ ಕೇಡಾಗ ಬೇಕೆಂಬ ಉದ್ದೇಶ ಅವನಲ್ಲಿ ಇಲ್ಲದಿರಬಹುದು. ಆದರೂ ಸಭಿಕರ ವಿಶ್ವಾಸಕ್ಕೆ ದ್ರೋಹಮಾಡಿದಂತಾಗುತ್ತದೆ. ಅವಿವೇಕದಿಂದ ದುಡುಕಿ ಮಾತಾಡುವುದು ಹೆಚ್ಚಿನ ಹಾನಿಯುಂಟು ಮಾಡಬಲ್ಲದು. ಕ್ರೈಸ್ತವಿಶ್ವಾಸಿಗಳು ಆತ್ಮೀಕ ಹಾಗೂ ದೈವೀಕ ವಿಷಯಗಳ ಬಗ್ಗೆ ಸಂಭಾಷಿಸಬೇಕು. KanCCh 203.2
ಆದರೆ ಅವರ ಮಾತು ಅವುಗಳಿಗೆ ಸಂಬಂಧಪಟ್ಟಿರುವುದಿಲ್ಲ. ಕ್ರೈಸ್ತ ಸ್ನೇಹಿತರ ಮಾತುಕತೆಯು ಮುಖ್ಯವಾಗಿ ಹೃದಯ ಹಾಗೂ ಮನಸ್ಸುಗಳ ಆತ್ಮೀಕ ಬೆಳವಣಿಗೆಗೆ ಪೂರಕವಾಗಿದ್ದಲ್ಲಿ, ಅದು ಎಲ್ಲರಿಗೂ ಹಿತಕರವಾದ ತೃಪ್ತಿ ತರುತ್ತದೆ, ಯಾವುದೇ ವಿಷಾದಕ್ಕೆ ಕಾರಣವಾಗುವುದಿಲ್ಲ. ಆದರೆ ಹರಟೆ ಮಾತುಗಳಿಂದ ಕಾಲಹರಣ ಮಾಡಿದಾಗ, ಅಮೂಲ್ಯವಾದ ಸಮಯವನ್ನು ಇತರರ ಚಾರಿತ್ರ್ಯ ವಧೆ ಅಂದರೆ ಕೆಟ್ಟದಾಗಿ ಮಾತನಾಡುವುದಕ್ಕೆ ಉಪಯೋಗಿಸಿದಲ್ಲಿ ಇದರಿಂದ ಕೆಟ್ಟತನಕ್ಕೆ ಕಾರಣವಾಗುತ್ತದೆ. KanCCh 203.3