Go to full page →

ಗೌರವ ಹಾಗೂ ಸೌಜನ್ಯತೆ ತೋರಿಸುವುದನ್ನು ಕಲಿಸಿರಿ KanCCh 245

ವಯಸ್ಸಾದವರನ್ನು ಗೌರವಿಸಬೇಕೆಂದು ದೇವರು ಅಪ್ಪಣೆ ಕೊಟ್ಟಿದ್ದಾನೆ. “ನರೆಗೂದಲೇ ಸುಂದರ ಕಿರೀಟವು; ಅದು ಧರ್ಮಮಾರ್ಗದಲ್ಲಿ ದೊರಕುವುದು” ಎಂದು ಸೊಲೊಮೋನನು ಹೇಳುತ್ತಾನೆ (ಜ್ಞಾನೋಕ್ತಿ 16:31), ವೃದ್ಧರು ಎದುರಿಸಿದ ಶೋಧನೆಗಳು, ಅದರಲ್ಲಿ ಪಡೆದ ಜಯ, ಸಹಿಸಿದ ದುಃಖಗಳನ್ನು ನರೆಗೂದಲು ತಿಳಿಸುತ್ತದೆ. ಅವರು ಇನ್ನೇನು ಸಾಯುತ್ತಾರೆಂಬುದನ್ನು ಅದು ತಿಳಿಸುತ್ತದೆ. ವಯಸ್ಸಾದವರ ಈ ಅನುಭವಗಳನ್ನು ಮಕ್ಕಳಿಗೆ ತಿಳಿಸಿಹೇಳಿ. ಆಗ ಮಕ್ಕಳು ಅವರನ್ನು ಗೌರವಿಸಿ, ಸೌಜನ್ಯತೆ ತೋರಿಸುವರು. “ತಲೆನರೆತ ವೃದ್ಧರ ಮುಂದೆ ಎದ್ದುನಿಂತು ಅವರನ್ನು ಸನ್ಮಾನಿಸಬೇಕು” ಎಂದು ಸತ್ಯವೇದವು ತಿಳಿಸುತ್ತದೆ (ಯಾಜಕಕಾಂಡ 19:31). ಈ ಆದೇಶವನ್ನು ಯೌವನಸ್ಥರು ಗೌರವಿಸಿದಾಗ, ಅವರಿಗೆ ಶೋಭೆ ತರುವುದು. KanCCh 245.1

ಸೌಜನ್ಯ ಅಥವಾ ವಿನಯತೆಯು ಪವಿತ್ರಾತ್ಮನ ವಚನಗಳಲ್ಲಿ ಒಂದಾಗಿದ್ದು, ನಾವೆಲ್ಲರೂ ಅದನ್ನು ಬೆಳೆಸಿಕೊಳ್ಳಬೇಕು. ಕಠಿಣವಾದ ಹೃದಯಗಳನ್ನು ಸಹ ಮೆದುಗೊಳಿಸುವ ಸಾಮರ್ಥ್ಯವು ವಿನಯತೆಗಿದೆ. ಕ್ರಿಸ್ತನ ಅನುಯಾಯಿಗಳೆಂದು ಹೇಳಿಕೊಳ್ಳುವವರು, ಒರಟರೂ, ಕರುಣೆಯಿಲ್ಲದವರೂ ಹಾಗೂ ಸೌಜನ್ಯತೆಯಿಲ್ಲದವರೂ ಆಗಿದ್ದಲ್ಲಿ, ಅವರು ಕ್ರಿಸ್ತನನ್ನು ಅರಿತವರಲ್ಲ. ಅವರು ಪ್ರಾಮಾಣಿಕರಾಗಿರಬಹುದು, ನೇರವಾದ ನಡವಳಿಕೆ ಹೊಂದಿ ಸತ್ಯಸಂಧರಾಗಿರಬಹುದು. ಆದರೆ ಅವರಲ್ಲಿ ಕರುಣೆ, ವಿನಯ ಇಲ್ಲದಿದ್ದಲ್ಲಿ ಏನೂ ಪ್ರಯೋಜನವಾಗುವುದಿಲ್ಲ. KanCCh 245.2

*****