Go to full page →

ನಮ್ಮ ಸಂಸ್ಥೆಗಳ ನೈತಿಕ ಬೆಂಬಲ KanCCh 249

ತಂದೆ ತಾಯಿಯರು ತಮ್ಮ ಮಕ್ಕಳು ದೇವರ ಮಾರ್ಗದಲ್ಲಿ ಬೆಳೆಯುವಂತೆಶ್ರದ್ಧೆಯಿಂದಲೂ, ಆಸಕ್ತಿಯಿಂದಲೂ ಕೆಲಸ ಮಾಡುತ್ತಾ, ಶಿಕ್ಷಕರಿಗೆ ಎಲ್ಲಾ ವಿಧವಾದಸಹಕಾರ ನೀಡಬೇಕು. ಅವರು ತಮ್ಮ ಕುಟುಂಬದಲ್ಲಿ ಆತ್ಮೀಕ ಆಸಕ್ತಿಯು ದಿನದಿಂದದಿನಕ್ಕೆ ಹೊಚ್ಚ ಹೊಸದಾಗಿಯೂ, ಹಾಗೂ ಹಿತಕರವಾಗಿರುವಂತೆಯೂ ಶ್ರಮವಹಿಸಿ,ಮಕ್ಕಳನ್ನು ದೇವರ ಎಚ್ಚರಿಕೆ ಮತ್ತು ಪೋಷಣೆಯಲ್ಲಿ ಬೆಳೆಸಬೇಕು. ದಿನದಲ್ಲಿ ಸ್ವಲ್ಪಸಮಯವನ್ನು ತಂದೆತಾಯಿಯರು ಅಧ್ಯಯನಕ್ಕೆ ಮೀಸಲಾಗಿರಿಸಿ, ತಮ್ಮ ಮಕ್ಕಳೊಂದಿಗೆತಾವೂ ಸಹ ಕಲಿಯಬೇಕು. ಇದರಿಂದ ಮಕ್ಕಳಿಗೆ ಶಿಕ್ಷಣವು ಪ್ರಯೋಜನಕರವೂ ಮತ್ತುಸಂತೋಷಕರವೂ ಆಗುವುದಲ್ಲದೆ, ಇಂತಹ ವಿಧಾನವು ಅವರ ಆತ್ಮವಿಶ್ವಾಸವನ್ನುಹೆಚ್ಚಿಸುವುದು. KanCCh 249.2

ಕೆಲವು ವಿದ್ಯಾರ್ಥಿಗಳು ಮನೆಗೆಬಂದಾಗ ನಮ್ಮ ಶಾಲಾಕಾಲೇಜುಗಳ ಬಗ್ಗೆಗುಣುಗುಟ್ಟುತ್ತಾ, ದೂರುಹೇಳುತ್ತಾರೆ. ತಂದೆ ತಾಯಿಯರು ಮತ್ತು ಸಭಾ ಸದಸ್ಯರು ಈವಿದ್ಯಾರ್ಥಿಗಳ ಏಕಪಕ್ಷೀಯವಾದ ಉತ್ತೇಕ್ಷಿತ ಹೇಳಿಕೆಗಳಿಗೆ ಹೆಚ್ಚು ಗಮನ ಕೊಡುತ್ತಾರೆ.ಕತೆಗೆ ಎರಡು ಮುಖಗಳಿವೆ ಎಂಬುದನ್ನು ಪೋಷಕರು ಗಮನದಲ್ಲಿಟ್ಟು ಮಕ್ಕಳ ಹೇಳಿಕೆಗಳನ್ನುವಿವೇಚಿಸದೆ ಸಂಪೂರ್ಣವಾಗಿ ನಂಬಬಾರದು. ಆದರೆ ಇದಕ್ಕೆ ಬದಲಾಗಿ ತಮ್ಮ ಮಕ್ಕಳುದುರುದ್ದೇಶದಿಂದ ಹೇಳಿದ ವರದಿಗಳನ್ನು ನಂಬಿ ಶಾಲಾ ಕಾಲೇಜುಗಳ ಬಗ್ಗೆ ಅವರಲ್ಲಿಆಸಕ್ತಿ ಕಡಿಮೆಯಾಗುವಂತೆ ವರ್ತಿಸುತ್ತಾರೆ. ತಮ್ಮ ಮಕ್ಕಳ ಬಗ್ಗೆ ಇಲ್ಲಸಲ್ಲದ ಭಯ ಹೊಂದಿ, ಅಡ್ವೆಂಟಿಸ್ಟ್ ಕಾಲೇಜುಗಳ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾರೆ. ಪೋಷಕರಇಂತಹ ಅಭಿಪ್ರಾಯವು ಬಹಳ ಹಾನಿಯುಂಟು ಮಾಡುತ್ತದೆ. ಅವರ ಅತೃಪ್ತಿಯಮಾತುಗಳು ಸಾಂಕ್ರಾಮಿಕ ರೋಗದಂತೆ ಬೇಗ ಹರಡುವುದರಿಂದ, ವಿದ್ಯಾರ್ಥಿಗಳಮನಸ್ಸಿನಲ್ಲಿ ಉಂಟುಮಾಡುವ ಪರಿಣಾಮಗಳನ್ನು ಅಷ್ಟೊಂದು ಸುಲಭವಾಗಿತೆಗೆದುಹಾಕಲಾಗದು. ಇದು ಒಬ್ಬರಿಂದ ಒಬ್ಬರಿಗೆ ಉತ್ತೇಕ್ಷಿತ ರೀತಿಯಲ್ಲಿ ವೇಗವಾಗಿಹರಡಿ, ಕೊನೆಯಲ್ಲಿ ವಿಚಾರಿಸಿ ನೋಡಿದಾಗ ಶಾಲಾ ಕಾಲೇಜುಗಳ ಶಿಕ್ಷಕರಲ್ಲಿ ಯಾವುದೇತಪ್ಪು ಕಂಡುಬರುವುದಿಲ್ಲ. ಶಿಕ್ಷಕರು ಹಾಗೂ ಪ್ರಾಧ್ಯಾಪಕರು ಶಾಲಾ ಕಾಲೇಜುಗಳನಿಯಮಗಳನ್ನು ಪಾಲಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರಷ್ಟೇಹೊರತು, ಕಠಿಣವಾಗಿ ವರ್ತಿಸಿಲ್ಲ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಅನುಸರಿಸಬೇಕು. KanCCh 249.3

ತಂದೆ ತಾಯಿಯರು ಒಂದು ವೇಳೆ ತಾವೇ ಶಿಕ್ಷಕರ ಸ್ಥಾನದಲ್ಲಿ ನಿಂತುಕೊಂಡುವಿವಿಧ ವಯಸ್ಸಿನ ನೂರಾರು ಮಕ್ಕಳ ನಿರ್ವಹಣೆಯು ಎಷ್ಟೊಂದು ಕಷ್ಟಕರವಾಗಿದೆಎಂದು ಅರಿತುಕೊಂಡಲ್ಲಿ, ನಮ್ಮ ಸಂಸ್ಥೆಗಳ ಶಿಕ್ಷಕರು ಹಾಗೂ ಪ್ರಾಧ್ಯಾಪಕರುಗಳ ಬಗ್ಗೆಅವರ ಅಭಿಪ್ರಾಯ ಬದಲಾಗುತ್ತದೆ. ಕೆಲವು ವಿದ್ಯಾರ್ಥಿಗಳನ್ನು ಮನೆಯಲ್ಲಿ ಶಿಸ್ತುಕ್ರಮಕ್ಕೆಒಳಪಡಿಸುವುದು ಎಂದಿಗೂ ಸಾಧ್ಯವಿಲ್ಲವೆಂಬುದನ್ನು ತಂದೆ ತಾಯಿಯರುನೆನಪಿನಲ್ಲಿಡಬೇಕು. ಅವಿವೇಕಿಗಳಾದ ತಂದೆತಾಯಿಯರು ಇಂತಹ ಮಕ್ಕಳನ್ನು ಎಂದಿಗೂವಿಧೇಯರಾಗಿರುವಂತೆ ಮಾಡಲು ಸಾಧ್ಯವಿಲ್ಲದ್ದರಿಂದ, ಇವರನ್ನು ಸೇನೆಯಲ್ಲಿ ಸೈನಿಕರನ್ನುಶಿಸ್ತಿಗೆ ಒಳಪಡಿಸುವ ರೀತಿಯಲ್ಲಿ, ಶಾಲಾ ಕಾಲೇಜುಗಳ ನಿಯಮಗಳನ್ನು ಕಠಿಣವಾಗಿಪಾಲಿಸುವಂತೆ ಮಾಡಲು ಪ್ರಾಧ್ಯಾಪಕರು ಹಾಗೂ ಶಿಕ್ಷಕರಿಗೆ ಒಪ್ಪಿಸುವುದು ಮಕ್ಕಳಿಗೂಹಾಗೂ ತಂದೆ ತಾಯಿಗಳಿಗೂ ಪ್ರಯೋಜನವಾಗಿದೆ. ಅಪ್ರಮಾಣಿಕರಾದ ಪೋಷಕರಿಂದನಿರ್ಲಕ್ಷಿಸಲ್ಪಟ್ಟ ಇಂತಹಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಗಮನನೀಡದಿದ್ದಲ್ಲಿ, ಇವರು ಎಂದಿಗೂಕ್ರಿಸ್ತನನ್ನು ಅಂಗೀಕರಿಸುವುದಿಲ್ಲ. ಇವರಿಗೆ ವಿಶೇಷ ಗಮನ ನೀಡಿ, ವಿಧೇಯರಾಗುವಂತೆಮಾಡದಿದ್ದಲ್ಲಿ, ಮಕ್ಕಳು ಈ ಜೀವನದಲ್ಲಿ ಅಯೋಗ್ಯರಾಗುವುದಲ್ಲದೆ, ಪರಲೋಕದಲ್ಲಿಅವರಿಗೆ ಪಾಲಿರುವುದಿಲ್ಲ. KanCCh 250.1

ಅನೇಕ ತಂದೆತಾಯಿಯರು ನಂಬಿಗಸ್ತರಾದ ಶಿಕ್ಷಕರ ಪ್ರಾಮಾಣಿಕ ಪ್ರಯತ್ನಗಳಿಗೆಒಪ್ಪದೆ, ತಪ್ಪುಮಾಡುತ್ತಾರೆ. ಮಕ್ಕಳು ಹಾಗೂ ಯೌವನಸ್ಥರ ಗ್ರಹಿಕೆಯುಅಪೂರ್ಣವಾಗಿರುವುದರಿಂದಲೂ, ಮತ್ತು ಅವರ ನಿರ್ಧಾರಗಳು ಅನೇಕ ಸಂದರ್ಭಗಳಲ್ಲಿತಪ್ಪಾಗಿರುವುದರಿಂದಲೂ, ತಮ್ಮ ಶಿಕ್ಷಕರ ಎಲ್ಲಾ ವಿಧಾನಗಳು ಹಾಗೂ ಯೋಜನೆಗಳನ್ನುಯಾವಾಗಲೂ ಅರ್ಥ ಮಾಡಿಕೊಳ್ಳಲಾರರು. ಶಾಲೆಯಲ್ಲಿ ನಡೆದ ವಿಷಯಗಳನ್ನುಮಕ್ಕಳು ಮನೆಯಲ್ಲಿ ತಿಳಿಸಿದಾಗ, ಕುಟುಂಬದವರೆಲ್ಲರೂ ಸೇರಿ ಚರ್ಚಿಸಿ, ಶಿಕ್ಷಕರೇತಪ್ಪು ಮಾಡಿದ್ದಾರೆಂದು ಅವರನ್ನು ಖಂಡಿಸುತ್ತಾರೆ. ಇಲ್ಲಿ ಮಕ್ಕಳು ಕಲಿಯುವ ಪಾಠವನ್ನು ಎಂದೆಂದಿಗೂ ಮರೆಯಲಾರರು. ಇಂತಹ ವಿದ್ಯಾರ್ಥಿಗಳನ್ನು ಶಾಲಾಕಾಲೇಜುಗಳ ನಿಯಮಅನುಸರಿಸುವಂತೆ ಹೇಳಿದಾಗ, ಅಥವಾ ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕೆಂದುಶಿಕ್ಷಕರು ತಿಳಿಸಿದಾಗ, ಇವರು ಅವಿವೇಕಿಗಳಾದ ತಮ್ಮ ತಂದೆ ತಾಯಿಯರಿಗೆ ತಿಳಿಸಿಅವರ ಅನುಕಂಪ ಗಳಿಸಿಕೊಳ್ಳಲು ಪ್ರಯತ್ನಿಸುವರು. ಇದರಿಂದಾಗಿ ಮಕ್ಕಳಲ್ಲಿಗೊಂದಲವುಂಟಾಗಿ ಅತೃಪ್ತಿಗೆ ಉತ್ತೇಜನ ನೀಡಿದಂತಾಗುವುದು. ಶಿಕ್ಷಕರ ಆತ್ಮಸ್ಥೆರ್ಯಕುಸಿಯುವುದಲ್ಲದೆ, ಅವರ ಹೊಣೆಗಾರಿಕೆ ಹೆಚ್ಚಾಗುವುದು. ಅಲ್ಲದೆ ತಂದೆ ತಾಯಿಯರುತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದಿರುವುದು ಎಲ್ಲಕ್ಕಿಂತಲೂ ದೊಡ್ಡ ನಷ್ಟವಾಗಿದೆ.ಮಕ್ಕಳ ಈ ದೋಷಪೂರಿತ ಗುಣಗಳನ್ನು ಸರಿಯಾದ ರೀತಿಯಲ್ಲಿ ತಿದ್ದಿಸರಿಪಡಿಸಬಹುದಾಗಿತ್ತು. ಆದರೆ ಈ ರೀತಿ ಮಾಡದಿದ್ದರಿಂದ, ಮಕ್ಕಳ ಭವಿಷ್ಯವೇಒಂದುವೇಳೆ ನಾಶವಾಗಬಹುದು. KanCCh 250.2