Go to full page →

ದೇವರ ಹತೋಟಿಯಲ್ಲಿ ಶಿಕ್ಷಕರು KanCCh 251

ತಮ್ಮನ್ನು ದೇವರ ಸೇವೆಗೆ ಸಮರ್ಪಿಸಿಕೊಂಡ ಪ್ರತಿಯೊಬ್ಬ ಶಿಕ್ಷಕನೊಂದಿಗೂ ದೇವರುಕೆಲಸಮಾಡುತ್ತಾನೆ. ಶಿಕ್ಷಕರು ತಮ್ಮ ಒಳಿತಿಗಾಗಿ ಇದನ್ನು ಅರಿಯಬೇಕು. ದೇವರಹತೋಟಿಯಲ್ಲಿರುವ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಪರ್ಕ ಸಾಧಿಸುವಂತೆ ಬೇಕಾದಕೃಪೆ ಹಾಗೂ ಸತ್ಯವನ್ನು ಪವಿತ್ರಾತ್ಮನಿಂದ ಪಡೆದುಕೊಳ್ಳುತ್ತಾರೆ. ಅವರು ಜಗತ್ತಿನಮಹಾನ್‌ಗುರುವಿನಹತೋಟಿಯಲ್ಲಿರುವುದರಿಂದ, ಮಕ್ಕಳೊಂದಿಗೆ ಕರುಣೆಯಿಲ್ಲದೆ ಒರಟಾಗಿವರ್ತಿಸುವುದು ಮತ್ತು ಸಿಡುಕುವುದು ಅವರ ಯೋಗ್ಯತೆಗೆ ಉಚಿತವಲ್ಲ. ಇದರಿಂದಶಿಕ್ಷಕರು ತಮ್ಮ ದೋಷಗಳನ್ನು ವಿದ್ಯಾರ್ಥಿಗಳು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುವಂತೆಮಾಡುತ್ತಾರೆ. KanCCh 251.1

ದೇವರು ತನ್ನ ಪವಿತ್ರಾತ್ಮನ ಮೂಲಕ ನಮ್ಮೊಂದಿಗೆ ಸಂಪರ್ಕ ಮಾಡುತ್ತಾನೆ. “ನನ್ನಕಣ್ಣು ತೆರೆ; ಆಗ ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವೆನು” ಎಂಬವಾಕ್ಯವನ್ನು (ಕೀರ್ತನೆ 119:18) ಅಧ್ಯಯನ ಮಾಡುವಾಗ, ಭಯಭಕ್ತಿಯಿಂದ ಪ್ರಾರ್ಥಿಸಿರಿ.ಶಿಕ್ಷಕರು ಪ್ರಾರ್ಥನೆಯಮೂಲಕ ದೇವರಲ್ಲಿ ಆತುಕೊಂಡಾಗ, ಅವರ ಮೇಲೆ ಕ್ರಿಸ್ತನಆತ್ಮನಬಲ ಉಂಟಾಗುವುದು. ಆಗ ದೇವರು ತನ್ನ ಆತ್ಮನಿಂದ ವಿದ್ಯಾರ್ಥಿಗಳ ಮನಸ್ಸಿನಲ್ಲಿಶಿಕ್ಷಕರ ಮೂಲಕ ಕಾರ್ಯ ಮಾಡುವನು. ಪರಿಶುದ್ಧಾತ್ಮನು ಶಿಕ್ಷಕರ ಮನಸ್ಸು ಹಾಗೂಹೃದಯಗಳನ್ನು ನಿರೀಕ್ಷೆ, ಧೈರ್ಯ ಮತ್ತು ಸತ್ಯವೇದದ ನಿರೂಪಣೆಗಳಿಂದ ತುಂಬಿ,ಅವುಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವರು. ದೇವರ ಸತ್ಯವಾಕ್ಯವುಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದು ಹಾಗೂ ಶಿಕ್ಷಕರು ಕನಸಿನಲ್ಲಿಯೂ ನೆನಸಿರದರೀತಿಯಲ್ಲಿ ಆ ಸತ್ಯವಾಕ್ಯವು ಪರಿಪೂರ್ಣ ಅರ್ಥಪಡೆದುಕೊಳ್ಳುವುದು. ದೇವರವಾಕ್ಯದಅತ್ಯುತ್ತಮ ಮಾದರಿಯು ಮನಸ್ಸು ಮತ್ತು ಸ್ವಭಾವದಲ್ಲಿ ಬದಲಾವಣೆ ತರುವಂತ ಪ್ರಭಾವ ಬೀರುವುದು. ಪರಲೋಕದ ದೈವೀಕ ಪ್ರೀತಿಯು ಉತ್ತೇಜಿಸುವ ರೀತಿಯಲ್ಲಿಮಕ್ಕಳ ಹೃದಯಗಳಲ್ಲಿ ಸುರಿಸಲ್ಪಡುವುದು. ಶಿಕ್ಷಕರಾದವರು ದೇವರ ಹತೋಟಿಯಲ್ಲಿದ್ದು,ಮಕ್ಕಳಿಗಾಗಿ ಸೇವೆಮಾಡಿದಲ್ಲಿ, ಸಾವಿರಾರುಮಕ್ಕಳನ್ನು ಕ್ರಿಸ್ತನ ಬಳಿಗೆ ತರಬಹುದು. KanCCh 251.2

ಮಾನವರು ನಿಜವಾಗಿಯೂ ವಿವೇಕಿಗಳಾಗುವುದಕ್ಕೆ ಮೊದಲು, ತಾವು ಸಂಪೂರ್ಣವಾಗಿದೇವರ ಮೇಲೆ ಆತುಕೊಂಡಿದ್ದೇವೆಂದು ತಿಳಿದುಕೊಳ್ಳಬೇಕು. ದೇವರು ಬೌದ್ಧಿಕ ಮತ್ತುಆತ್ಮೀಕ ಶಕ್ತಿಯ ಮೂಲನಾಗಿದ್ದಾನೆ. ಮಹಾನ್ ವಿಜ್ಞಾನಿಗಳೆಂದು ಈ ಲೋಕವುಪರಿಗಣಿಸಿರುವವರನ್ನು ಶಿಷ್ಯನಾದ ಯೋಹಾನನೊಂದಿಗೆ ಅಥವಾ ಅಪೊಸ್ತಲನಾದಪೌಲನೊಂದಿಗೆ ಹೋಲಿಕೆ ಮಾಡಬಾರದು. ಬೌದ್ಧಿಕ ಮತ್ತು ಆತ್ಮೀಕ ಶಕ್ತಿಯು ಒಂದಾದಾಗ,ಮಾನವನು ಅತ್ಯುನ್ನತ ಮಟ್ಟ ಮುಟ್ಟುತ್ತಾನೆ. ಮನಸ್ಸನ್ನು ತರಬೇತಿಗೊಳಿಸುವ ಈಕಾರ್ಯ ಮಾಡಿದವರನ್ನು ದೇವರು ತನ್ನ ಜೊತೆ ಕೆಲಸಗಾರರೆಂದು ಸ್ವೀಕರಿಸುವನು. KanCCh 252.1

ದೇವರನ್ನು ಗೌರವಿಸುವ ಮಾದರಿಯನ್ನು ಜಗತ್ತಿನ ಮುಂದೆ ಇಡುವುದೇ ಇಂದುನಮ್ಮ ಶಿಕ್ಷಣ ಸಂಸ್ಥೆಗಳ ಅತ್ಯಂತ ಪ್ರಮುಖ ಕಾರ್ಯವಾಗಿದೆ. ದೇವದೂತರು ಮನುಷ್ಯರಮೂಲಕ ಕೆಲಸದ ಮೇಲೆ ಮೇಲ್ವಿಚಾರಣೆ ನಡೆಸುವರು. ಮತ್ತು ಪ್ರತಿಯೊಂದು ವಿಭಾಗವೂಸಹ ದೈವೀಕ ಶ್ರೇಷ್ಠತೆಯ ಗುರುತನ್ನು ಹೊಂದಬೇಕು. KanCCh 252.2