Go to full page →

ಪಾಪನಿವೇದನೆ ಯಾರಿಗೆ ಮಾಡಬೇಕು? KanCCh 327

ತಮ್ಮ ಪಾಪಗಳನ್ನು ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುವವರು ಸೈತಾನನ ಬಲೆಗೆಬೀಳುವರು. ಪಾಪ ನಿವೇದನೆ ಅಂದರೆ ಮಾಡಿದ ಪಾಪವನ್ನು ಪಶ್ಚಾತ್ತಾಪಪಟ್ಟುಒಪ್ಪಿಕೊಳ್ಳದಿದ್ದಲ್ಲಿ, ಅವು ಕ್ಷಮಿಸಲ್ಪಡುವುದಿಲ್ಲವಾದ್ದರಿಂದ, ಪರಲೋಕದ ಪುಸ್ತಕಗಳಲ್ಲಿಅವು ಹಾಗೆಯೇ ಉಳಿದಿರುವವು. ಅವರು ಉನ್ನತವಾದ ಹುದ್ದೆ ಹಾಗೂ ಗೌರವವಾದಅಧಿಕಾರದಲ್ಲಿದ್ದಷ್ಟು, ಅವರ ಪಾಪಗಳು ದೇವರ ದೃಷ್ಟಿಯಲ್ಲಿ ಅಷ್ಟೇ ಘೋರವಾಗಿರುವವು.ಅಂತವರ ಮೇಲೆ ವಿರೋಧಿಯಾದ ಸೈತಾನನು ಜಯಹೊಂದುವುದು ಖಚಿತ. ದೇವರಎರಡನೇಬರೋಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ತಡಮಾಡುವವರು ಸಂಕಟದಸಮಯದಲ್ಲಿಯಾಗಲಿ ಅಥವಾ ಅನಂತರದಲ್ಲಿಯಾಗಲಿ ತಮ್ಮ ಪಾಪಕ್ಕೆ ಪಶ್ಚಾತ್ತಾಪಪಟ್ಟುಅರಿಕೆ ಮಾಡಿಕೊಳ್ಳುವುದಕ್ಕೆ ಹಾಗೂ ಕ್ಷಮೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ.ಅಂತವರಿಗೆ ಯಾವುದೇ ನಿರೀಕ್ಷೆ ಇರುವುದಿಲ್ಲ. KanCCh 327.2

ನೀವು ಮಾಡಿರುವ ಪಾಪ ಹಾಗೂ ತಪ್ಪುಗಳನ್ನು ತಿಳಿಯದಿರುವವರ ಮುಂದೆಅವುಗಳನ್ನು ಒಪ್ಪಿಕೊಳ್ಳಬೇಕಾಗಿಲ್ಲ ಅಥವಾ ನಿವೇದನೆ ಮಾಡಬೇಕಾಗಿಲ್ಲ. ಅವಿಶ್ವಾಸಿಗಳುಸಂತೋಷಪಡುವಂತೆ ಈ ಪಾಪಗಳನ್ನು ಒಪ್ಪಿಕೊಳ್ಳುವುದು ನಿಮ್ಮ ಕೆಲಸವಲ್ಲ. ಆದರೆನಿಮ್ಮ ತಪ್ಪನ್ನು ದುರುಪಯೋಗ ಪಡಿಸಿಕೊಳ್ಳದಂತ ಯೋಗ್ಯವಾದ ವ್ಯಕ್ತಿಗೆ ದೇವರವಾಕ್ಯದ ಪ್ರಕಾರ ಅರಿಕೆ ಮಾಡಿಕೊಳ್ಳಿ, ಅವರು ನಿಮಗಾಗಿ ಪ್ರಾರ್ಥಿಸಲಿ, ದೇವರು ನಿಮ್ಮಕಾರ್ಯವನ್ನು ಅಂಗೀಕರಿಸುವವನು ಹಾಗೂ ನಿಮ್ಮ ಪಾಪವು ಕ್ಷಮಿಸಲ್ಪಡುವುದು ಮತ್ತುನೀವು ಸ್ವಸ್ಥರಾಗುವಿರಿ. ನಿಮ್ಮ ಆತ್ಮರಕ್ಷಣೆಗಾಗಿ ಎಲ್ಲಾ ವಿಧವಾದ ಅಹಂಕಾರ, ಹೆಮ್ಮೆಯನ್ನುಬಿಟ್ಟು ಸಭೆಯೆಂಬ ಮಂದೆಯೊಡನೆ ಸೇರಿಕೊಳ್ಳಿ, ಒಳ್ಳೆ ಕುರುಬನಾದ ಕ್ರಿಸ್ತನು ನಿಮ್ಮನ್ನುಸ್ವೀಕರಿಸಲು ಕಾಯುತ್ತಿದ್ದಾನೆ. ನಿಮ್ಮ ಪಾಪ, ತಪ್ಪುಗಳಿಗೆ ಪಶ್ಚಾತ್ತಾಪಪಟ್ಟು ತಿರುಗಿದೇವರ ಕೃಪೆಗೆ ಪಾತ್ರರಾಗಲು ಪ್ರಯತ್ನಿಸಬೇಕು. KanCCh 328.1