Go to full page →

ಕ್ರಿಸ್ತನು ನಿಮ್ಮ ವಿಮೋಚಕನು KanCCh 328

ಅಪಮಾನಗೊಳಿಸುವ ನಿಮ್ಮ ಪಾಪದ ಅರಿಕೆಯನ್ನು ಆತನು ಎಂದಿಗೂಹಂಗಿಸುವುದಿಲ್ಲ ಅಥವಾ ಧಿಕ್ಕರಿಸುವುದಿಲ್ಲ. ರಹಸ್ಯವಾದ ಯಾವುದೇ ಪಾಪ ಮಾಡಿದ್ದಲ್ಲಿ,ದೇವರಿಗೂ ಮತ್ತು ಮನುಷ್ಯನಿಗೂ ಏಕಮಾತ್ರ ಮಧ್ಯಸ್ಥನಾಗಿರುವ ಕ್ರಿಸ್ತನಿಗೆ ಮಾತ್ರಅರಿಕೆ ಮಾಡಿಕೊಳ್ಳಿ...” ಯಾವನಾದರೂ ಪಾಪ ಮಾಡಿದರೆ, ತಂದೆಯ ಬಳಿಯಲ್ಲಿಯೇಸುಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ” (1 ಯೋಹಾನನು 2:1) ಒಂದುವೇಳೆನೀವು ದೇವರಿಗೆ ಸಲ್ಲಿಸಬೇಕಾದ ದಶಾಂಶ ಹಾಗೂ ಕಾಣಿಕೆಗಳನ್ನು ಕೊಡದಿದ್ದಲ್ಲಿ,ಸಭೆಗೂ ಮತ್ತು ಕ್ರಿಸ್ತನಿಗೂ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿರಿ. “ನನ್ನ ಆಲಯವುಆಹಾರಶೂನ್ಯವಾಗದಂತೆ, ನೀವು ದಶಮಾಂಶ ಯಾವತ್ತನ್ನೂ ಭಂಡಾರಕ್ಕೆ ತೆಗೆದುಕೊಂಡುಬನ್ನಿರಿ.... (ಮಲಾಕಿಯ 3:10) ಎಂಬ ದೇವರ ವಾಕ್ಯಕ್ಕೆ ಗಮನಕೊಡಿರಿ. KanCCh 328.2

ದೇವರ ಮಕ್ಕಳು ವಿವೇಕದಿಂದ ವರ್ತಿಸಬೇಕು. ಪ್ರತಿಯೊಂದು ಪಾಪವನ್ನು ನೀವು ದೇವರ ಮುಂದೆ ಅರಿಕೆ ಮಾಡಿಕೊಳ್ಳಲೇಬೇಕು. ಆಗ ಅವರು ಕ್ರಿಸ್ತನು ತಮ್ಮಪಾಪನಿವೇದನೆಯನ್ನು ಅಂಗೀಕರಿಸಿಕೊಳ್ಳುತ್ತಾನೆಂಬ ದೃಢಭರವಸೆ ಹೊಂದಬಹುದು.ತಪ್ಪನ್ನು ಒಪ್ಪಿಕೊಳ್ಳಿ ಎಂದು ಇತರರು ನಿಮ್ಮನ್ನು ಒತ್ತಾಯ ಮಾಡುವ ತನಕ ಕಾಯದೆ,ಸ್ವತಃ ಪಾಪಮಾಡಿದವರೇ ಒಪ್ಪಿಕೊಳ್ಳಲು ಮುಂದಾಗಬೇಕು. ಇತರರ ಒತ್ತಾಯಕ್ಕೆ ಮಣಿದುಪಾಪ ಅರಿಕೆಮಾಡಿಕೊಂಡಲ್ಲಿ, ಅದು ಅಲ್ಪಕಾಲ ಮಾತ್ರವಿರುವುದು. ಪಶ್ಚಾತ್ತಾಪದಹೃದಯದಿಂದ ದೇವರು ನನ್ನ ಪ್ರಾರ್ಥನೆ ಕೇಳುತ್ತಾನೆಂಬ ಭರವಸೆಯಿಂದ ಪ್ರಾರ್ಥಿಸಬೇಕು.ನಂಬಿಕೆಯಿಂದ ಪ್ರಾರ್ಥಿಸಬೇಕು. ಎಲ್ಲಾ ಸಮಯಗಳಲ್ಲಿಯೂ ತಕ್ಷಣವೇ ನಿಮಗೆ ಉತ್ತರದೊರೆಯದಿರಬಹುದು; ಆದರೆ ನಿಮ್ಮ ನಂಬಿಕೆಯು ಪರೀಕ್ಷಿಸಲ್ಪಡುವ ಸಮಯವುಆದಾಗಿದೆ. KanCCh 328.3