Go to full page →

ಅಧ್ಯಾಯ-49 — ದೀಕ್ಷಾಸ್ನಾನ KanCCh 358

ಪರಿಶುದ್ಧದೀಕ್ಷಾಸ್ನಾನ ಹಾಗೂ ಕರ್ತನಭೋಜನ ಎಂಬ ಈ ಎರಡು ಧಾರ್ಮಿಕಸಂಸ್ಕಾರಗಳು ಕ್ರೈಸ್ತಸಭೆಯ ಆಧಾರ ಸ್ತಂಭಗಳಾಗಿವೆ. ಈ ಎರಡು ಧಾರ್ಮಿಕ ಕ್ರಿಯೆಗಳಲ್ಲಿಕ್ರಿಸ್ತನು ಸತ್ಯದೇವರ ಹೆಸರನ್ನು ಬರೆದು ನಮೂದಿಸಿದ್ದಾನೆ. KanCCh 358.1

ಕ್ರಿಸ್ತನು ದೀಕ್ಷಾಸ್ನಾನವನ್ನು ತನ್ನ ಆತ್ಮೀಕರಾಜ್ಯದ ಪ್ರವೇಶಕ್ಕೆ ಒಂದು ಗುರುತನ್ನಾಗಿಮಾಡಿದ್ದಾನೆ. ಇದನ್ನು ಆತನು ಒಂದುಸಕಾರಾತ್ಮಕ ಶರತ್ತಾಗಿ ಮಾಡಿದ್ದಾನೆ. ತಂದೆ,ಮಗ ಹಾಗೂ ಪರಿಶುದ್ಧಾತ್ಮನ ಅಧಿಕಾರದಲ್ಲಿದ್ದೇವೆಂದು ಗುರುತಿಸಲ್ಪಡಲುಬಯಸುವವರೆಲ್ಲರೂ ದೀಕ್ಷಾಸ್ನಾನವನ್ನುತೆಗೆದುಕೊಳ್ಳಬೇಕೆಂಬ ದೇವರಅಪ್ಪಣೆಯನ್ನುಪಾಲಿಸಲೇಬೇಕು. ಒಬ್ಬನು ಸಭೆಯಲ್ಲಿ ಸದಸ್ಯನಾಗಿ ಅದು ತನ್ನ ಮನೆಯೆಂದು ಕಂಡುಕೊಳ್ಳುವಮೊದಲು ಮತ್ತು ದೇವರ ಆತ್ಮೀಕ ರಾಜ್ಯಕ್ಕೆ ಪ್ರವೇಶಿಸುವ ಮೊದಲು “ಯೆಹೋವನೇನಮ್ಮ ಸದ್ಧರ್ಮ (ಅಂದರೆ ನೀತಿ)” ಎಂಬ ದೈವೀಕ ಹೆಸರಿನ (ಯೆರೆಮೀಯ 23:6)ವಿಶಿಷ್ಟವಾದ ಮುದ್ರೆಯನ್ನು ಪಡೆದುಕೊಳ್ಳಬೇಕು. KanCCh 358.2

ದೀಕ್ಷಾಸ್ನಾನವು ಈ ಲೋಕದ ಸಂಬಂಧವನ್ನು ತ್ಯಜಿಸಿ ಸ್ವಾರ್ಥತ್ಯಾಗ ಮಾಡುವಒಂದು ಅತ್ಯಂತ ಗಂಭೀರವಾದ ಸಂಸ್ಕಾರವಾಗಿದೆ. ತೈಯೇಕದೇವರಾದ ತಂದೆ, ಮಗಹಾಗೂ ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ತೆಗೆದುಕೊಂಡವರು ಕ್ರೈಸ್ತ ಜೀವನಕ್ಕೆಪ್ರವೇಶ ಮಾಡುವಾಗ, ತಾವು ಸೈತಾನನ ಸೇವೆಯನ್ನು ಬಿಟ್ಟು ಪರಲೋಕರಾಜನ ಮಕ್ಕಳಾಗಿರಾಜವಂಶದ ಕುಟುಂಬದ ಸದಸ್ಯರಾಗಿದ್ದೇವೆಂದು ಎಲ್ಲರಮುಂದೆ ಸಾರಿಹೇಳುತ್ತಾರೆ.“ಆದುದರಿಂದ ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದಯಾವುದನ್ನೂ ಮುಟ್ಟದಿರಿ... ನಾನು ನಿಮ್ಮನ್ನು ಸೇರಿಸಿಕೊಂಡು ನಿಮಗೆತಂದೆಯಾಗಿರುವೆನು; ನೀವು ನನಗೆ ಕುಮಾರಕುಮಾರಿಯರು ಆಗಿರುವಿರಿ....” ಎಂಬಸರ್ವಶಕ್ತನಾದ ಕರ್ತನ ಆಜ್ಞೆಗೆ ದೀಕ್ಷಾಸ್ನಾನ ತೆಗೆದುಕೊಂಡವರು ವಿಧೇಯರಾಗುತ್ತಾರೆ.(2 ಕೊರಿಂಥ 6:17,18). KanCCh 358.3

ದೀಕ್ಷಾಸ್ನಾನ ತೆಗೆದುಕೊಳ್ಳುವಾಗ ನಾವು ಮಾಡುವ ಪ್ರತಿಜ್ಞೆಯು ಬಹಳಷ್ಟನ್ನುಒಳಗೊಂಡಿದೆ. ತಂದೆ, ಮಗ ಹಾಗೂ ಪವಿತ್ರಾತ್ಮನ ಹೆಸರಿನಲ್ಲಿ ನಾವು ಕ್ರಿಸ್ತನ ಮರಣದಹೋಲಿಕೆಯಲ್ಲಿ ಹೂಣಲ್ಪಟ್ಟೆವು ಹಾಗೂ ಆತನ ಪುನರುತ್ಥಾನದ ಸಾದೃಶ್ಯವಾಗಿ ನಾವೂಸಹ ಮರಣದಿಂದ ಎಬ್ಬಿಸಲ್ಪಡುತ್ತೇವೆ. ಆದುದರಿಂದ ನಾವು ಹೊಸಬರಾಗಿ ಜೀವಿಸಬೇಕು.ಕ್ರಿಸ್ತನ ಜೀವಿತದೊಂದಿಗೆ ನಮ್ಮ ಜೀವಿತವೂ ಬಂಧಿಸಲ್ಪಡಬೇಕು. ದೀಕ್ಷಾಸ್ನಾನತೆಗೆದುಕೊಂಡಂದಿನಿಂದ ವಿಶ್ವಾಸಿಯು ತಾನು ತಂದೆ, ಮಗ ಹಾಗೂ ಪರಿಶುದ್ಧಾತ್ಮನಿಗೆಪ್ರತಿಷ್ಠಾಪಿಸಲ್ಪಟ್ಟಿದ್ದೇನೆಂಬುದನ್ನು ಮನಸ್ಸಿನಲ್ಲಿಡಬೇಕು. ಹೊಸದಾದ ಈ ಸಂಬಂಧದಲ್ಲಿಲೌಕಿಕವಾದ ಎಲ್ಲಾ ವಿಷಯಗಳು ಎರಡನೇ ಸ್ಥಾನ ಪಡೆದುಕೊಳ್ಳಬೇಕು. ಅಂತವನುಎಲ್ಲರ ಮುಂದೆ ತಾನು ಅಹಂಕಾರಿ ಮತ್ತು ಸ್ವಾರ್ಥಿಯಾಗಿ ಜೀವಿಸುವುದಿಲ್ಲವೆಂದುಪ್ರಕಟಿಸಿದ್ದಾನೆ. ಅವನು ಇನ್ನೆಂದಿಗೂ ಅಸಡ್ಡೆ ಹಾಗೂ ಉದಾಸೀನವಾಗಿ ಜೀವಿಸಬಾರದು.ಅವನು ದೇವರೊಂದಿಗೆ ಒಂದು ಒಡಂಬಡಿಕೆ (ಒಪ್ಪಂದ) ಮಾಡಿಕೊಂಡಿದ್ದಾನೆ. ಅವನುಈ ಲೋಕದಪಾಲಿಗೆ ಸತ್ತಿದ್ದಾನೆ. ತನಗೆ ಕೊಡಲ್ಪಟ್ಟಿರುವ ಎಲ್ಲಾ ಸಾಮರ್ಥ್ಯ, ತಲಾಂತುಗಳನ್ನುದೀಕ್ಷಾಸ್ನಾನ ತೆಗೆದುಕೊಂಡವನು ದೇವರಿಗಾಗಿ ಉಪಯೋಗಿಸಬೇಕು ಮತ್ತು ಆತನಿಗಾಗಿಜೀವಿಸಬೇಕು. ತಾನು ದೇವರ ರಾಜ್ಯದ ಪ್ರಜೆಯಾಗಿದ್ದೇನೆ ಹಾಗೂ ದೈವೀಕ ಸ್ವಭಾವದಲ್ಲಿಪಾಲುಗಾರನಾಗಿದ್ದೇನೆಂಬುದನ್ನು ಅವನು ಎಂದಿಗೂ ಮರೆಯಬಾರದು, ತನಗಿರುವುದೆಲ್ಲವನ್ನೂ ದೇವರಿಗೆ ಒಪ್ಪಿಸಿಕೊಟ್ಟು, ಆತನ ನಾಮದಮಹಿಮೆಗಾಗಿ ಎಲ್ಲಾವರಗಳನ್ನು ಉಪಯೋಗಿಸಬೇಕು. KanCCh 358.4