Go to full page →

ದೀಕ್ಷಾಸ್ನಾನ ತೆಗೆದುಕೊಳ್ಳುವವರಿಗೆ ಸಂಪೂರ್ಣ ಸಿದ್ಧತೆ ನೀಡಬೇಕು KanCCh 359

ದೀಕ್ಷಾಸ್ನಾನ ತೆಗೆದುಕೊಳ್ಳುವ ಅಭ್ಯರ್ಥಿಗಳು ಸಂಪೂರ್ಣವಾದ ಸಿದ್ಧತೆ ಮಾಡಿಕೊಳ್ಳಬೇಕು.ಸಾಮಾನ್ಯವಾಗಿ ಕೊಡುವ ಸಲಹೆಗಳಿಗಿಂತಲೂ ಹೆಚ್ಚಿನ ವಿಶ್ವಾಸಾರ್ಹವಾದ ಸೂಚನೆಗಳನ್ನು ಅವರಿಗೆ ನೀಡಬೇಕು. ಹೊಸದಾಗಿ ಸತ್ಯವನ್ನು ಅಂಗೀಕರಿಸಿಕೊಂಡವರಿಗೆ ಕ್ರೈಸ್ತೀಯಜೀವನದ ತತ್ವಗಳನ್ನು ಸರಳವಾಗಿ ತಿಳಿಸಿ ಹೇಳಬೇಕು. ನಾನು ಸತ್ಯದಲ್ಲಿ ನಂಬಿಕೆಇಟ್ಟಿದ್ದೇನೆಂದು ಹೇಳುವುದು ಮಾತ್ರವಲ್ಲ. ಅದನ್ನು ಜೀವನದಲ್ಲಿ ಅನುಸರಿಸಿ ನಡೆಯಬೇಕು.ನಮ್ಮ ಮಾತುಗಳು, ನಡತೆ ಹಾಗೂ ನಮ್ಮ ಸ್ವಭಾವಗಳು ಕ್ರಿಸ್ತನ ಚಿತ್ರಕ್ಕೆ ಅನುಗುಣವಾಗಿದ್ದಲ್ಲಿಮಾತ್ರ ನಾವು ಆತನೊಂದಿಗೆ ಆತ್ಮೀಕ ಸಂಬಂಧ ಹೊಂದಿರುತ್ತೇವೆಂದು ಸಾಕ್ಷಾಧಾರಕೊಡುತ್ತೇವೆ. ಧರ್ಮಶಾಸ್ತ್ರ ಅಂದರೆ ಹತ್ತು ಆಜ್ಞೆಗಳನ್ನು ಮೀರಿ ನಡೆಯುವುದು ಪಾಪವಾಗಿದೆ.ಯಾರಾದರೂ ಪಾಪವನ್ನು ತ್ಯಜಿಸಿದಲ್ಲಿ, ಅವನು ತನ್ನ ಜೀವನದಲ್ಲಿ ಧರ್ಮಶಾಸ್ತ್ರಕ್ಕೆಅನುಗುಣವಾಗಿ ಪರಿಪೂರ್ಣ ವಿಧೇಯತೆ ತೋರಿಸುತ್ತಾನೆ, ಇದು ಪವಿತ್ರಾತ್ಮನಕಾರ್ಯವಾಗಿದೆ. ದೇವರವಾಕ್ಯವೆಂಬ ಬೆಳಕನ್ನು ಎಚ್ಚರಿಕೆಯಿಂದ ಅಧ್ಯಯನಮಾಡಿದಾಗ,ಮನಸ್ಸಾಕ್ಷಿಯ ಸ್ವರ ಹಾಗೂ ಪವಿತ್ರಾತ್ಮನ ಪ್ರೇರಣೆಯು ಒಬ್ಬನ ಹೃದಯದಲ್ಲಿ ತನಗಾಗಿಪ್ರಾಣಕೊಟ್ಟ ಕ್ರಿಸ್ತಯೇಸುವಿನ ಬಗ್ಗೆ ಯಥಾರ್ಥವಾದ ಪ್ರೀತಿಯನ್ನು ಹುಟ್ಟಿಸುತ್ತದೆ.ವಿಧೇಯತೆಯ ಮೂಲಕ ಪ್ರೀತಿಯು ಪ್ರಕಟಿಸಲ್ಪಡುತ್ತದೆ. ದೇವರನ್ನು ಪ್ರೀತಿಸಿಆತನ ಆಜ್ಞೆಗಳನ್ನುಕೈಕೊಂಡುನಡೆಯುವವರು ಮತ್ತು ಆತನನ್ನು ಪ್ರೀತಿಸದೆ ಆತನಆಜ್ಞೆಗಳನ್ನುಉಲ್ಲಂಘಿಸುವವರ ನಡುವಣ ವ್ಯತ್ಯಾಸವು ಸ್ಪಷ್ಟವಾಗಿ ಕಂಡುಬರುತ್ತದೆ. KanCCh 359.1

ಯಾರೂಸಹ ದೇವರಿಗೆ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿ ಕೊಡಬಾರದೆಂಬುದುಸೈತಾನನ ಉದ್ದೇಶ. ಯಾರಾದರೂ ತಮ್ಮನ್ನು ದೇವರಿಗೆ ಒಪ್ಪಿಸಿಕೊಡದಿದ್ದಲ್ಲಿ, ಅವರುಪಾಪವನ್ನು ತ್ಯಜಿಸಲಾಗದು, ಅವರು ಲೈಂಗಿಕ ಕಾಮನೆಗಳನ್ನು ತೀರಿಸಿಕೊಳ್ಳುವ ಅಪೇಕ್ಷೆಹಾಗೂ ಬಲವಾದ ಮನೋವಿಕಾರಕ್ಕೆ (Passion) ದಾಸರಾಗುವರು. ಯಥಾರ್ಥವಾದಬದಲಾವಣೆ ಅವರಲ್ಲಿ ಉಂಟಾಗದಂತೆ, ಶೋಧನೆಗಳು ಅವರ ಮನಸ್ಸಾಕ್ಷಿಯನ್ನುಗಲಿಬಿಲಿಗೊಳಿಸುವವು. ನಮ್ಮನ್ನು ಮೋಸವಂಚನೆಗಳೆಂಬ ಆಕರ್ಷಣೆಯ ಬಲೆಯಲ್ಲಿಬೀಳಿಸಲು ಪ್ರಯತ್ನಿಸುವ ಸೈತಾನನ ದುಷ್ಟಶಕ್ತಿಗಳ ವಿರುದ್ಧವಾಗಿ ಎಲ್ಲರೂ ಬಲವಾದಹೋರಾಟ ಮಾಡಬೇಕು.ಆದುದರಿಂದ ಹೊಸದಾಗಿ ದೀಕ್ಷಾಸ್ನಾನ ತೆಗೆದುಕೊಂಡುನಂಬಿಕೆಯಲ್ಲಿ ಇನ್ನೂಶಿಶುಗಳಾಗಿರುವವರಿಗಾಗಿ ಸಭೆಯ ಸದಸ್ಯರು ಹೆಚ್ಚಾಗಿ ಉತ್ತೇಜನನೀಡಬೇಕು. KanCCh 359.2