Go to full page →

ಯಾರೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರರು KanCCh 405

ಕ್ರಿಸ್ತನು ನಮ್ಮ ಮುಂದೆ ದೇವರು ಮತ್ತು ಈ ಲೋಕ ಎಂಬ ಇಬ್ಬರು ಯಜಮಾನರುಗಳನ್ನು ಇಟ್ಟಿದ್ದಾನೆ. ಅಲ್ಲದೆ ನಾವು ಇಬ್ಬರು ಯಜಮಾನರಿಗೆ ಸೇವೆ ಮಾಡುವುದು ಸಂಪೂರ್ಣ ಅಸಾಧ್ಯವೆಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ಈ ಲೋಕದ ಮೇಲೆ ನಮ್ಮ ಆಸಕ್ತಿ ಹಾಗೂ ಪ್ರೀತಿ ಹೆಚ್ಚಾಗಿದ್ದಲ್ಲಿ, ದೈವೀಕ ವಿಷಯಗಳ ಬಗ್ಗೆ ನಾವು ಆಸಕ್ತಿ ತೋರಿಸುವುದಿಲ್ಲ ಅಥವಾ ಗಮನ ನೀಡುವುದಿಲ್ಲ. ಲೋಕದ ಮೇಲಣ ಪ್ರೀತಿಯು ದೇವರ ಮೇಲಣ ಪ್ರೀತಿಯನ್ನು ದೂರ ಮಾಡುವುದಲ್ಲದೆ, ಲೌಕಿಕ ಆಸಕ್ತಿಯು ಪರಲೋಕದ ಆಸಕ್ತಿಯನ್ನು ಸಂಪೂರ್ಣವಾಗಿ ಇಲ್ಲದಂತೆ ಮಾಡುತ್ತದೆ. ಈ ಕಾರಣದಿಂದ ನಮ್ಮ ಪ್ರೀತಿ ಹಾಗೂ ಭಕ್ತಿಯು ಇಲ್ಲವಾಗಿ ದೇವರಿಗೆ ನಾವು ಪ್ರಾಮುಖ್ಯತೆ ಕೊಡುವುದಿಲ್ಲ KanCCh 405.2

ಸೈತಾನನು ಕ್ರಿಸ್ತನವಿರುದ್ಧವಾದ ಹೋರಾಟದಲ್ಲಿ ಆಗಲೇ ಸೋತು ಹೋಗಿರುವುದರಿಂದ, ಅಡವಿಯಲ್ಲಿ ಕ್ರಿಸ್ತನನ್ನು ಶೋಧನೆಗೆ ಒಳಪಡಿಸಿದ್ದಕ್ಕಿಂತಲೂ ನಮ್ಮಮೇಲೆ ಹೆಚ್ಚಾದ ಎಚ್ಚರಿಕೆಯಿಂದ ವರ್ತಿಸಿ ಶೋಧಿಸುತ್ತಾನೆ. ಸೈತಾನನು ಕ್ರಿಸ್ತನಿಂದ ಸೋಲಿಸಲ್ಪಟ್ಟ ಶತ್ರುವಾಗಿದ್ದಾನೆ. ಅವನು ಮನುಷ್ಯರ ಬಳಿಗೆ ನೇರವಾಗಿ ಬಂದು ತೋರುವಿಕೆಯ ಆರಾಧನೆಯಿಂದ ತನಗೆ ಗೌರವ ನೀಡಬೇಕೆಂದು ಹಕ್ಕೊತ್ತಾಯ ಮಾಡುವುದಿಲ್ಲ. ಬದಲಾಗಿ ಜನರು ಈ ಲೋಕದ ಭೋಗವಸ್ತುಗಳ ಮೇಲೆ ತಮ್ಮ ಪ್ರೀತಿಯಿಡಬೇಕೆಂದು ಧಾರಣವಾಗಿ ಕೇಳಿಕೊಳ್ಳುತ್ತಾನೆ. ಇದರಲ್ಲಿ ಅವನು ಯಶಸ್ವಿಯಾದಲ್ಲಿ, ಪರಲೋಕದ ಮೇಲಿನ ಆಕರ್ಷಣೆ ಇಲ್ಲವಾಗುತ್ತದೆ. ಜನರೆಲ್ಲರೂ ತನ್ನ ವಂಚನೆ ಹಾಗೂ ಶೋಧನೆಗೆ ಒಳಗಾಗಿ ಈ ಲೋಕ ಮತ್ತು ಅದರ ಅಧಿಕಾರ, ಅಂತಸ್ತು, ಹಣವನ್ನು ಹೆಚ್ಚಾಗಿ ಪ್ರೀತಿಸಿ ಅವುಗಳ ಮೇಲೆ ಗಮನವಿಡಬೇಕೆಂದು ಸೈತಾನನು ಬಯಸುತ್ತಾನೆ. ಇದರಲ್ಲಿ ಅವನು ಯಶಸ್ವಿಯಾದಲ್ಲಿ, ಮನುಷ್ಯರ ಮೇಲೆ ಹಿಡಿತ ಸಾಧಿಸುತ್ತಾನೆ. KanCCh 406.1

*****