Go to full page →

ಅಧ್ಯಾಯ-57 — ದೋಷಪೂರಿತವಿಜ್ಞಾನ-ಸೈತಾನನ ಆಧುನಿಕ ಮೋಸಗಾರಿಕೆಯ ಅಸ್ತ್ರ KanCCh 407

ತಪ್ಪಾದ ಅಂದರೆ ದೋಷಪೂರಿತ ವಿಜ್ಞಾನವು ಸೈತಾನನು ಪರಲೋಕದಲ್ಲಿ ಉಪಯೋಗಿಸಿದ ವಂಚನೆಗಳಲ್ಲಿ ಒಂದಾಗಿದ್ದು, ಇಂದೂ ಸಹ ಅವನು ಅದನ್ನು ಉಪಯೋಗಿಸುತ್ತಿದ್ದಾನೆ. ದೇವದೂತರ ಮುಂದೆ ಅವನು ಮಾಡಿದ ತಪ್ಪಾದ ಸಮರ್ಥನೆ, ಚತುರೋಪಾಯದ ವೈಜ್ಞಾನಿಕ ಸಿದ್ಧಾಂತಗಳು ಅವರಲ್ಲಿ ಅನೇಕರನ್ನು ದೇವರ ಮೇಲಿನ ನಿಷ್ಠೆಯನ್ನು ಬದಲಾಯಿಸುವಂತೆ ಮಾಡಿತು. KanCCh 407.1

ಪರಲೋಕದಲ್ಲಿ ಸ್ಥಾನತಪ್ಪಿದ ಮೇಲೆ, ಸೈತಾನನು ನಮ್ಮ ಆದಿ ತಂದೆ ತಾಯಿಯರಿಗೆ ತನ್ನ ಶೋಧನೆಯನ್ನು ತೋರಿಸಿದನು. ಆದಾಮ ಹವ್ವಳು ಶತ್ರುವಿನ ಶೋಧನೆಗೆ ಒಳಗಾಗಿ ಅವರ ಅವಿಧೇಯತೆಯಿಂದ ಮಾನವಕುಲವು ದೇವರಿಂದ ದೂರವಾಯಿತು ಹಾಗೂ ಈ ಲೋಕವು ಪರಲೋಕದಿಂದ ಬೇರ್ಪಟ್ಟಿತು. ಆದಾಮ ಹವ್ವಳು ಒಂದು ವೇಳೆ ದೇವರು ತಿನ್ನಬಾರದೆಂದು ಹೇಳಿದ್ದ ಮರದ ಹಣ್ಣನ್ನು ತಿಂದಿರದಿದ್ದಲ್ಲಿ, ದೇವರು ಅವರಿಗೆ ನಿತ್ಯವಾದ ಆನಂದ ತರುವಂತ ಮತ್ತು ಪಾಪ ಹಾಗೂ ಶಾಪವಿಲ್ಲದಂತ ಜ್ಞಾನವನ್ನು ದಯಪಾಲಿಸುತ್ತಿದ್ದನು. ಪಾಪ ಹಾಗೂ ಅದರ ಭಯಾನಕ ಪರಿಣಾಮಗಳೇ ಆದಾಮಹವ್ವಳು ತಮ್ಮ ಅವಿಧೇಯತೆಯಿಂದ ಗಳಿಸಿಕೊಂಡ ಲಾಭ. KanCCh 407.2

ಆದಿ ತಂದೆತಾಯಿಯರಿಗೆ ಮಾಡಿದಂತ ವಂಚನೆಯನ್ನೇ ಸೈತಾನನು ಇಂದೂ ಸಹ ಮನುಷ್ಯರಿಗೆ ಮಾಡಲು ಪ್ರಯತ್ನಿಸುತ್ತಿದ್ದಾನೆ. ತಲೆಬುಡವಿಲ್ಲದ ಆಕರ್ಷಣೀಯವಾದ ಕಲ್ಪಿತ ಕತೆಗಳನ್ನು ಅವನು ಈ ಲೋಕದಲ್ಲಿ ಪ್ರವಾಹದಂತೆ ತುಂಬಿಸಿದ್ದಾನೆ. ತನ್ನಲ್ಲಿರುವ ಎಲ್ಲಾ ಶಕ್ತಿಸಾಮರ್ಥ್ಯಗಳನ್ನು ಉಪಯೋಗಿಸಿ ಜನರು ದೇವರ ಜ್ಞಾನ ಅಂದರೆ ರಕ್ಷಣೆಯನ್ನು ಪಡೆಯಬಾರದೆಂದು ಅವರನ್ನು ತಡೆಯಲು ಪ್ರಯತ್ನಿಸುತ್ತಾನೆ. KanCCh 407.3