Go to full page →

ಕ್ರಿಸ್ತನನ್ನು ರಕ್ಷಕನೆಂದು ಅರಿಕೆ ಮಾಡುವುದು ಅಥವಾ ನಿರಾಕರಿಸುವುದು KanCCh 67

ನಮ್ಮ ಕುಟುಂಬ, ಸಮುದಾಯ, ಸಮಾಜ, ಕೆಲಸ ಮಾಡುವ ಸ್ಥಳ ಅಥವಾ ಸಂಬಂಧ ಹೊಂದಿರುವ ಇನ್ನಾವುದೇ ಸ್ಥಳದಲ್ಲಿಯಾಗಲಿ ನಮ್ಮ ಕರ್ತನನ್ನು ರಕ್ಷಕನೆಂದು ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಅನೇಕ ಅವಕಾಶಗಳು ಕಂಡುಬರುತ್ತವೆ. ನಮ್ಮ ಮಾತುಗಳಮೂಲಕ ಇತರರ ಬಗ್ಗೆ ಕೆಟ್ಟಮಾತು ಆಡುವುದರಿಂದ, ಮೂರ್ಖತನದ ಹರಟೆ ಮಾತುಗಳು, ಕೀಳಾದ ಹಾಸ್ಯದಿಂದ, ಒರಟುಮಾತುಗಳಿಂದ, ಸತ್ಯಕ್ಕೆ ವಿರುದ್ಧವಾಗಿ ಮಾತಾಡುವುದು, ತಪ್ಪು ದಾರಿಗೆಳೆಯುವಂತೆಯೂ ಹಾಗೂ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದಾಗ ನಾವು ಕ್ರಿಸ್ತನನ್ನು ನಿರಾಕರಿಸುತ್ತೇವೆ. ಕ್ರಿಸ್ತನು ನಮ್ಮಲ್ಲಿ ವಾಸವಾಗಿಲ್ಲವೆಂದು ನಮ್ಮಮಾತುಗಳ ಮೂಲಕ ನಾವು ಒಪ್ಪಿಕೊಳ್ಳಬಹುದು. ಸುಖಜೀವನ ಪ್ರೀತಿಸುವುದು, ಜೀವನದ ಕರ್ತವ್ಯಗಳನ್ನು ಮಾಡದಿರುವುದು ಪಾಪಭೋಗಗಳಲ್ಲಿ ಸಂತೋಷಿಸುವುದರ ಮೂಲಕ ನಾವು ದೇವರನ್ನು ನಿರಾಕರಿಸಬಹುದು. ನಮ್ಮ ಉಡುಗೆ ತೊಡುಗೆಗಳ ಬಗ್ಗೆ ಹೆಮ್ಮೆ ಪಡುವುದು, ಲೌಕಿಕ ಆಶಾಪಾಶಗಳಲ್ಲಿ ಮುಳುಗಿರುವುದು ಮತ್ತು ಅಸಭ್ಯ ನಡವಳಿಕೆ ಮೂಲಕವೂ ಕ್ರೈಸ್ತರಾದ ನಾವು ದೇವರನ್ನು ತಿರಸ್ಕರಿಸುತ್ತೇವೆ. ನಮ್ಮ ಅಭಿಪ್ರಾಯಗಳು ಮಾತ್ರ ಸರಿ ಎಂದು ಒತ್ತಿ ಹೇಳುವ ಮೂಲಕ ಹಾಗೂ ಸ್ವಾರ್ಥಿಗಳಾಗಿ ಜೀವಿಸುವುದಲ್ಲದೆ ಅದನ್ನು ಸಮರ್ಥಿಸಿಕೊಳ್ಳುವುದರಿಂದಲೂ ನಾವು ಕ್ರಿಸ್ತನನ್ನು ನಿರಾಕರಿಸಬಹುದು. ಮುಂದೆ ಬರಬಹುದಾದ ಕಷ್ಟಕರ ಜೀವನ ಮತ್ತು ಶೋಧನೆಗಳ ಬಗ್ಗೆ ಅನಗತ್ಯವಾಗಿ ಚಿಂತಿಸುವುದು ಮತ್ತು ಮನಸ್ಸಿನಲ್ಲಿ ವಿರಹವೇದನೆಯ ಭಾವುಕತೆಯನ್ನು ತುಂಬಿಕೊಂಡಿರುವುದರ ಮೂಲಕವೂ ನಾವು ದೇವರನ್ನು ನಿರಾಕರಿಸುತ್ತೇವೆ. ಕ್ರಿಸ್ತಯೇಸುವಿನಲ್ಲಿದ್ದಂತ ಮನಸ್ಸು ಮತ್ತು ಆತ್ಮವು ಇಲ್ಲದಿದ್ದಲ್ಲಿ, ಯಾರೂ ಸಹ ಲೋಕದಮುಂದೆ ತಾನು ಕ್ರಿಸ್ತನಿಗೆ ಸೇರಿದವನೆಂದು ನಿಜವಾಗಿಯೂ ಒಪ್ಪಿಕೊಳ್ಳುವುದಿಲ್ಲ. ನಮ್ಮಲ್ಲಿಲ್ಲದಿರುವುದನ್ನು ಇತರರೊಂದಿಗೂ ಹಂಚಿಕೊಳ್ಳುವುದು ಅಸಾಧ್ಯ. ನಮ್ಮ ಸಂಭಾಷಣೆಯು ಸವತ್ತಾಗಿಯೂ ಇಂಪಾಗಿಯೂ ಇರಬೇಕು. ಹಾಗೂ ನಮ್ಮ ನಡತೆಯಲ್ಲಿ ಸತ್ಯಮತ್ತು ಘನತೆಯು ಎದ್ದುಕಾಣುವಂತೆ ವ್ಯಕ್ತವಾಗಬೇಕು. ಹೃದಯವು ಪರಿಶುದ್ಧವೂ, ನಮ್ರತೆಯೂ, ವಿಧೇಯತೆಯೂ ಉಳ್ಳದ್ದಾಗಿದ್ದರೆ, ಅದರ ಫಲಗಳು ಕಂಡುಬರುತ್ತವೆ. ಇದು ಕ್ರಿಸ್ತನನ್ನು ಒಪ್ಪಿಕೊಂಡು ಅರಿಕೆ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. KanCCh 67.1

*****