Go to full page →

ಸತ್ಯವೇದ ಅಧ್ಯಯನವು ಬೌದ್ಧಿಕಶಕ್ತಿಯನ್ನು ಬಲಗೊಳಿಸುತ್ತದೆ KanCCh 79

ಸತ್ಯವೇದವನ್ನು ಗೌರವದಿಂದಲೂ, ಪ್ರಾರ್ಥನಾಪೂರ್ವಕವಾಗಿಯೂ ಹಾಗೂ ಭಕ್ತಿಭಾವದಿಂದ ಅಧ್ಯಯನಮಾಡಿದಾಗ, ನಾವು ಬೌದ್ಧಿಕವಾಗಿ ಬಲ ಹೊಂದುತ್ತೇವೆ. ದೇವರ ವಾಕ್ಯದಲ್ಲಿ ನಿರೂಪಿಸಿರುವ ವಿಷಯಗಳು, ಅವುಗಳಲ್ಲಿರುವ ಗಾಂಭೀರ್ಯವಾದ ಸರಳತೆ, ಮನಸ್ಸಿಗೆ ತೋರಿಬರುವ ಉನ್ನತವಾದ ಹಾಗೂ ಶ್ರೇಷ್ಠವಾದ ಆಲೋಚನೆಗಳು ನಮ್ಮ ಎಲ್ಲಾ ಅಂಗಾಂಗಗಳ ಆತ್ಮೀಕ ಬೆಳವಣಿಗೆಗೆ ಕಾರಣವಾಗುತ್ತವೆ. ಬೇರೆ ಯಾವ ವಿಧದಿಂದಲೂ ಅವು ಆತ್ಮೀಕವಾಗಿ ಬೆಳವಣಿಗೆ ಹೊಂದಲಾರವು. ಸತ್ಯವೇದದಲ್ಲಿ ಸೃಜನಶೀಲ ಶಕ್ತಿಯ ಬೆಳವಣಿಗೆಗೆ ಅಪಾರವಾದ ಅವಕಾಶವಿದೆ. ಮನುಷ್ಯರು ಬರೆದ ಇತರ ಯಾವುದೇ ಪುಸ್ತಕಗಳನ್ನು ಓದುವುದರಿಂದ ದೊರೆಯಲಾಗದಂತ ಉನ್ನತವೂ ಹೆಚ್ಚು ಪರಿಶುದ್ಧವೂ ಆದ ಆಲೋಚನೆಗಳು ಮತ್ತು ಭಾವನೆಗಳು ಸತ್ಯವೇದ ಓದುವುದರಿಂದ ದೊರೆಯುತ್ತದೆ. ಜ್ಞಾನವಿವೇಕದ ಅತ್ಯುನ್ನತ ಮೂಲವಾದ ದೇವರ ವಾಕ್ಯವನ್ನು ಯೌವನಸ್ಥರು ಅಲಕ್ಷಿಸಿದಾಗ, ಅವರು ಆತ್ಮೀಕವಾಗಿ ಅತ್ಯಂತ ಶ್ರೇಷ್ಠವಾದ ಬೆಳವಣಿಗೆ ಹೊಂದುವುದರಲ್ಲಿ ವಿಫಲರಾಗುತ್ತಾರೆ. ದೇವರಿಗೆ ಭಯಪಡದಿರುವುದರಿಂದ, ಆತನನ್ನು ಪ್ರೀತಿಸದಿರುವುದರಿಂದ ಹಾಗೂ ನಮ್ಮ ಜೀವನದಲ್ಲಿ ಕ್ರೈಸ್ತಧರ್ಮದ ಸಿದ್ಧಾಂತಗಳನ್ನು ಅನುಸರಿಸದಿರುವುದರಿಂದಲೇ ಸ್ಥಿರವಾದ ಮತ್ತು ಒಳ್ಳೆಯ ಮನಸ್ಸುಳ್ಳವರು ಕಡಿಮೆ ಸಂಖ್ಯೆಯಲ್ಲಿ ನಮ್ಮಲ್ಲಿ ಇರುವುದಕ್ಕೆ ಕಾರಣವಾಗಿದೆ. KanCCh 79.3

ನಮ್ಮ ಬೌದ್ಧಿಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವ ಮತ್ತು ಬಲಗೊಳಿಸುವ ಎಲ್ಲಾ ವಿಧಾನಗಳನ್ನು ಉಪಯೋಗಿಸಿಕೊಳ್ಳಬೇಕೆಂದು ದೇವರು ಬಯಸುತ್ತಾನೆ. ಸತ್ಯವೇದವನ್ನು ಹೆಚ್ಚಾಗಿ ಅಧ್ಯಯನ ಮಾಡಿದಾಗ, ಅದರಲ್ಲಿರುವ ಸತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಾಗ, ನಾವು ಹೆಚ್ಚಾದ ಜ್ಞಾನ, ವಿವೇಕ, ಬುದ್ಧಿಯುಳ್ಳವರಾಗುತ್ತೇವೆ. ಸತ್ಯವೇದವನ್ನು ಆಸಕ್ತಿಯಿಂದ ಹುಡುಕಿದಾಗ, ನಮಗೆ ಶಕ್ತಿಬರುತ್ತದೆ. KanCCh 80.1

ಸತ್ಯವೇದವನ್ನು ಬೋಧಿಸುವುದರಿಂದ ಈ ಜೀವನದಲ್ಲಿ ಮನುಷ್ಯರ ಎಲ್ಲಾ ವಿಷಯಗಳ ಅಭಿವೃದ್ಧಿಯಲ್ಲಿ ಪ್ರಾಮುಖ್ಯವಾದ ಪರಿಣಾಮ ಉಂಟಾಗುತ್ತದೆ. ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯವಾದ ಮೂಲೆಗಲ್ಲಾದ ಸಿದ್ಧಾಂತಗಳು ಸತ್ಯವೇದದಲ್ಲಿವೆ. ಸಮಾಜದ ಯೋಗಕ್ಷೇಮ, ಕುಟುಂಬದ ಸುರಕ್ಷತೆಗೆ ಕಾರಣವಾದ ಸಿದ್ಧಾಂತಗಳಿಲ್ಲದಿದ್ದಲ್ಲಿ, ಈ ಲೋಕದಲ್ಲಿ ನಾವು ಗೌರವ, ಸಂತೋಷ ಉಪಯುಕ್ತತೆ ಪಡೆಯಲಾಗದು ಅಥವಾ ಮುಂದಿನ ನಿತ್ಯಜೀವದ ನಿರೀಕ್ಷೆಯೂ ನಮ್ಮಲ್ಲಿರಲಾರದು. ಜೀವನದ ಸೂಕ್ತವಾದ ಸ್ಥಾನಮಾನ ಮತ್ತು ನಮ್ಮ ಅನುಭವಗಳಿಗೆ ಅತ್ಯಗತ್ಯವಾದ ಬೋಧನೆಯು ಸತ್ಯವೇದದಲ್ಲಿದೆ. KanCCh 80.2