Go to full page →

ಸತ್ಯವೇದದಲ್ಲಿ ಕ್ರಿಸ್ತನೇ ಸರ್ವಸ್ವ KanCCh 80

ಶಿಲುಬೆಗೇರಿಸಲ್ಪಟ್ಟ ರಕ್ಷಕನೂ, ನಿತ್ಯಜೀವ ಕೊಡುವುದಕ್ಕೆ ಸಮರ್ಥನೂ ಆಗಿರುವ ಕ್ರಿಸ್ತನನ್ನು ಜನರಿಗೆ ತಿಳಿಸಬೇಕು. ಹಳೇಒಡಂಬಡಿಕೆಯೂ ಸಹ ಹೊಸ ಒಡಂಬಡಿಕೆಯಂತೆಯೇ ಸಾಂಕೇತಿಕವಾಗಿಯೂ, ಮಾದರಿಯಾಗಿಯೂ ಇರುವ ಸುವಾರ್ತೆಯಾಗಿದೆ ಎಂದು ತೋರಿಸಬೇಕು. ಹೊಸ ಒಡಂಬಡಿಕೆಯು ಹೊಸಧರ್ಮ ಪರಿಚಯಿಸುವುದಿಲ್ಲ; ಅಥವಾ ಹಳೇ ಒಡಂಬಡಿಕೆಯು ಹೊಸ ಒಡಂಬಡಿಕೆಯಿಂದ ರದ್ದು ಮಾಡಲ್ಪಟ್ಟಿರುವ ಧರ್ಮವನ್ನು ಬೋಧಿಸುತ್ತಿಲ್ಲ. ಹೊಸ ಒಡಂಬಡಿಕೆಯು ಹಳೇ ಒಡಂಬಡಿಕೆಯು ಪ್ರಕಟಗೊಳಿಸಿದ ಮುಂದುವರಿದ ಭಾಗವಾಗಿದೆ. KanCCh 80.3

ಹೇಬೆಲನು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದನು. ಅವನೂ ಸಹ ಪೌಲ ಅಥವಾ ಪೇತ್ರನಂತೆಯೇ ಕ್ರಿಸ್ತನ ಶಕ್ತಿಯಿಂದ ರಕ್ಷಿಸಲ್ಪಟ್ಟನು. ಹನೋಕನೂ ಸಹ, ಪ್ರೀತಿಪಾತ್ರ ಶಿಷ್ಯನಾದ ಯೋಹಾನನಂತೆಯೇ ಕ್ರಿಸ್ತನ ಪ್ರತಿನಿಧಿಯಾಗಿದ್ದನು. ಹನೋಕನು ದೇವರೊಂದಿಗೆ ಅನ್ಯೋನ್ಯತೆಯಲ್ಲಿ ನಡೆದನು. ದೇವರು ಅವನನ್ನು ಪರಲೋಕಕ್ಕೆ ಕರೆದುಕೊಂಡನು. ಕ್ರಿಸ್ತನ ಎರಡನೇ ಬರೋಣದ ಶುಭವಾರ್ತೆ ಸಾರುವ ಅವಕಾಶ ಅವನಿಗೆ ದೊರೆಯಿತು. “ಆದಾಮನಿಗೆ ಏಳನೆಯ ತಲೆಯವನಾದ ಹನೋಕನು- ಇಗೋ, ಕರ್ತನು ಲಕ್ಷಾಂತರ ಪರಿಶುದ್ಧ ದೂತರನ್ನು ಕೂಡಿಕೊಂಡು ಎಲ್ಲರಿಗೂ ನ್ಯಾಯ ತೀರಿಸುವುದಕ್ಕೂ.... ಬಂದನು” ಎಂದು ಪ್ರವಾದಿಸಿದನು. (ಯೂದನು 14, 15ನೇ ವಚನಗಳು). ಹನೋಕನು ನೀಡಿದ ಕ್ರಿಸ್ತನ ಎರಡನೇಬರೋಣದ ಸಂದೇಶ ಮತ್ತು ಅವನು ಪರಲೋಕಕ್ಕೆ ಮರಣವನ್ನು ಕಾಣದೆ ಒಯ್ಯಲ್ಪಟ್ಟದ್ದು, ಅವನ ಕಾಲದಲ್ಲಿ ಜೀವಿಸಿದ್ದವರಿಗೆ ಮನವರಿಕೆ ಮಾಡಿಕೊಡುವ ಹಾಗೂ ದೃಢನಂಬಿಕೆ ಹುಟ್ಟಿಸುವ ಒಂದು ಸಾಕ್ಷ್ಯಾಧಾರವಾಗಿದೆ. ನೀತಿವಂತರು ಪರಲೋಕಕ್ಕೆ ಹೋಗುತ್ತಾರೆಂದು ತೋರಿಸುವುದಕ್ಕೆ ಹನೋಕನು ಹಾಗೂ ಅವನ ಮಗನಾದ ಮೆತೂಷೆಲಹನು ಈ ಉದಾಹರಣೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದರು. KanCCh 80.4

ಹನೋಕನೊಂದಿಗೆ ಅನ್ಯೋನ್ಯತೆಯಿಂದ ನಡೆದ ದೇವರು ನಮ್ಮ ಕರ್ತನೂ ರಕ್ಷಕನೂ ಆದ ಯೇಸುಕ್ರಿಸ್ತನೇ ಆಗಿದ್ದಾನೆ. ಆತನು ಆಗ ಲೋಕಕ್ಕೆ ಬೆಳಕಾಗಿದ್ದಂತೆಯೇ, ಈಗಲೂ ಸಹ ಬೆಳಕಾಗಿದ್ದಾನೆ. ನೋಹನು ಹಾಗೂ ಅನೇಕರು ಆತ್ಮೀಕವಾದ ಕ್ರೈಸ್ತರಾಗಿದ್ದರು. ಜಲಪ್ರಳಯಕ್ಕೆ ಮೊದಲು ಜೀವಿಸಿದ್ದ ಜನರಿಗೆ ಅವರು ಜೀವಮಾರ್ಗ ತೋರಿಸಿದ ಶಿಕ್ಷಕರಾಗಿದ್ದರು. ವಿಮೋಚನಕಾಂಡ ಹಾಗೂ ಯಾಜಕಕಾಂಡ ಪುಸ್ತಕಗಳಲ್ಲಿ ದೇವರಾಜ್ಞೆಗಳ ಮೂಲಕ ಸುವಾರ್ತೆಯು ಕೊಡಲ್ಪಟ್ಟಿತು. ಆ ಕಾಲದಂತೆಯೇ ಈಗಲೂ ಸಹ ಅವುಗಳಿಗೆ ದೃಢನಂಬಿಕೆಯಿಂದ ವಿಧೇಯತೆ ತೋರಿಸಬೇಕು. ಅಂದಮೇಲೆ ಇಂತಹ ದೇವರ ವಾಕ್ಯದ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಳ್ಳುವುದು ಎಷ್ಟೊಂದು ಅಗತ್ಯವಾಗಿದೆಯಲ್ಲವೇ! KanCCh 81.1

ಸಭೆಯಲ್ಲಿ ಕೊರತೆ ಇರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಅದಕ್ಕೆ ಉತ್ತರಹೀಗಿದೆ : ನಮ್ಮ ಮನಸ್ಸು ದೇವರವಾಕ್ಯದಿಂದ ದೂರವಾಗಿರುವುದೇ ಇದಕ್ಕೆ ಕಾರಣ. ಸತ್ಯವೇದವನ್ನು ನಮ್ಮ ಆತ್ಮೀಕ ಬೆಳವಣಿಗೆಗೆ ಜೀವಕರವಾದ ಆಹಾರದಂತೆ ತಿಂದಾಗ, ಅದಕ್ಕೆ ಅರ್ಹವಾಗಿ ಸಲ್ಲಬೇಕಾದ ಗೌರವ ಮತ್ತು ಮಾನ್ಯತೆತೋರಿದಾಗ, ನಾವು ಬೇರೆಯಾವುದೇ ಸಾಕ್ಷಿ ಕೊಡಬೇಕಾದ ಅಗತ್ಯವಿಲ್ಲ. KanCCh 81.2

*****