ಅನೇಕರು ಯೇಸುವಿನ ವಿಷಯವಾದ ಸಾಕ್ಷಿಯಾದ ಪ್ರವಾದನಾಆತ್ಮನಿಂದ ಪ್ರೇರಿತವಾದ ಶ್ರೀಮತಿ ವೈಟಮ್ಮನವರು ಬರೆದ ಪುಸ್ತಕಗಳಲ್ಲಿ ದೇವರು ತನ್ನ ಜನರಿಗೆ ಕೊಟ್ಟಿರುವ ಬೆಳಕಿಗೆ ವಿರುದ್ಧವಾಗಿ ನಡೆಯುತ್ತಾರೆ. ಯಾಕೆಂದರೆ ಗದರಿಕೆಯ, ಮುಂಜಾಗ್ರತೆಯ ಹಾಗೂ ಎಚ್ಚರಿಸುವ ಬೆಳಕು ಮತ್ತು ಜ್ಞಾನ ಹೊಂದಿರುವ ಇವುಗಳನ್ನು ಅವರು ಓದುವುದಿಲ್ಲ. ಲೌಕಿಕವಾದ ಚಿಂತೆ, ತಮ್ಮ ಜೀವನ ಶೈಲಿ, ಉಡುಪು ವ್ಯವಹಾರ ಮೊದಲಾದವುಗಳಲ್ಲಿ ವ್ಯಾಮೋಹ ಮತ್ತು ಕ್ರೈಸ್ತಧರ್ಮದ ಬಗ್ಗೆ ಇರಬೇಕಾದ ತಿಳುವಳಿಕೆಯ ಕೊರತೆ ಇವುಗಳ ಕಾರಣದಿಂದ ದೇವರು ಮಹಾಕೃಪೆಯಿಂದಲೇ ಕೊಟ್ಟಿರುವ ಯೇಸುವಿನ ವಿಷಯವಾದ ಸಾಕ್ಷಿಯ ಬೆಳಕಿನಿಂದ ಅವರ ಗಮನವು ಬೇರೆಕಡೆ ಹೋಗಿದೆ. ಆದರೆ ರಂಜನೀಯ ಕತೆಗಳು, ಕಾಲ್ಪನಿಕವಿಷಯಗಳನ್ನು ಒಳಗೊಂಡ ವಾರ, ಮಾಸಪತ್ರಿಕೆಗಳು ಎಲ್ಲಾ ಕಡೆ ಪ್ರಸಾರಗೊಳ್ಳುತ್ತವೆ. ಧರ್ಮದಲ್ಲಿ ಸಂಶಯ, ಶ್ರದ್ಧೆ, ಇಲ್ಲದಿರುವುದು, ನಾಸ್ತಿಕತೆ ಎಲ್ಲೆಡೆ ಹೆಚ್ಚಾಗುತ್ತಿದೆ. ದೇವರ ಸಿಂಹಾಸನದಿಂದ ಬರುವ ಅಮೂಲ್ಯವಾದ ದೈವೀಕ ಬೆಳಕನ್ನು ಕೊಳಗದಲ್ಲಿ ಮುಚ್ಚಿಡಲಾಗಿದೆ. ಈ ನಿರ್ಲಕ್ಷ್ಯತೆಗೆ ದೇವರು ತನ್ನ ಜನರನ್ನು ಹೊಣೆಗಾರರನ್ನಾಗಿ ಮಾಡುತ್ತಾನೆ. ನಮ್ಮ ಮಾರ್ಗದಲ್ಲಿ ಪ್ರಕಾಶಿಸುವ ದೈವೀಕ ಬೆಳಕಿಗೆ- ಅದನ್ನು ನಾವು ಆತ್ಮೀಕ ಬೆಳವಣಿಗೆಗೆ ಉಪಯೋಗಿಸುತ್ತೇವೆಯೋ ಅಥವಾ ನಿರಾಕರಿಸುತ್ತೇವೆಯೋಇವೆಲ್ಲವುಗಳಿಗೆ ನಾವು ದೇವರಿಗೆ ಲೆಕ್ಕ ಕೊಡಬೇಕಾಗಿದೆ. KanCCh 87.3
ಶ್ರೀಮತಿ ವೈಟಮ್ಮನವರು ಬರೆದ ಪ್ರವಾದನಾ ಆತ್ಮನಿಂದ ಪ್ರೇರಿತ ಪುಸ್ತಕಗಳನ್ನು ಸಬ್ಬತ್ತನ್ನು ಕೈಕೊಂಡುನಡೆಯುವ ಪ್ರತಿಯೊಬ್ಬರಿಗೂ ಅದರ ಮಹತ್ವವನ್ನು ತಿಳಿಸಿ ಅದನ್ನು ಓದುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬರ ಮನೆಯಲ್ಲಿಯೂ ಈ ಪುಸ್ತಕಗಳು ಇರಬೇಕು ಹಾಗೂ ಅವುಗಳನ್ನು ಪದೇಪದೇ ಓದಬೇಕು. ಇವುಗಳಲ್ಲಿರುವ ಎಚ್ಚರಿಕೆ, ಗದರಿಕೆ ಹಾಗೂ ಉತ್ತೇಜಕವಾದ ಬುದ್ಧಿಮಾತುಗಳಲ್ಲಿ ನಾವು ಅಪನಂಬಿಕೆ ವ್ಯಕ್ತಪಡಿಸಿದಲ್ಲಿ, ದೇವರ ಬೆಳಕನ್ನು ನಾವು ನಂದಿಸಿದಂತಾಗುತ್ತದೆ. ಅಪನಂಬಿಕೆಯ ದೆಸೆಯಿಂದ ಅವರು ಆತ್ಮೀಕವಾಗಿ ಕುರುಡರಾಗುವುದರಿಂದ ತಮ್ಮ ನಿಜ ಪರಿಸ್ಥಿತಿಯ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ದೇವರಾತ್ಮ ಪ್ರೇರಿತವಾಗಿ ಬರೆಯಲ್ಪಟ್ಟ ಶ್ರೀಮತಿ ವೈಟಮ್ಮನವರ ಪುಸ್ತಕಗಳಲ್ಲಿ ಕೊಡಲ್ಪಟ್ಟಿರುವ ಎಚ್ಚರಿಕೆ, ಗದರಿಕೆಗಳು ಅಧಿಕ ಪ್ರಸಂಗಿತನದ್ದು, ಅನಾವಶ್ಯಕವೂ ಆಗಿದ್ದು ತಮಗೆ ಸಂಬಂಧಪಟ್ಟಿದ್ದಲ್ಲವೆಂದು ಅವರು ಎಣಿಸುತ್ತಾರೆ. ಅಂತವರಿಗೆ ತಮ್ಮ ಆತ್ಮೀಕ ಜ್ಞಾನದ ಕೊರತೆಯನ್ನು ಕಂಡುಕೊಳ್ಳುವ ಸಲುವಾಗಿ ದೇವರ ಕೃಪೆಯ ಅಗತ್ಯ ಬಹಳವಾಗಿದೆ. KanCCh 88.1
ತಮಗೆ ಯೇಸುವಿನ ವಿಷಯವಾದ ಸಾಕ್ಷಿಯಾದ ಪ್ರವಾದನಾಆತ್ಮ ಪ್ರೇರಿತವಾಗಿ ಬರೆಯಲ್ಪಟ್ಟ ಶ್ರೀಮತಿ ವೈಟಮ್ಮನವರ ಪುಸ್ತಕಗಳಲ್ಲಿ ನಂಬಿಕೆಯಿಲ್ಲದಿರುವುದರಿಂದಲೇ ತಾವು ಸತ್ಯದಿಂದ ದೂರಹೋಗಿ ಪುನಃ ಪಾಪದಲ್ಲಿ ಬೀಳುವುದಕ್ಕೆ ಕಾರಣವೆಂದು ಅನೇಕರು ಹೇಳುತ್ತಾರೆ. ಈಗ ಅಂತವರಿಗೆ ಒಂದು ಪ್ರಶ್ನೆ ಕೇಳಬೇಕಾಗಿದೆ. ದೇವರಿಗೆ ಅಸಹ್ಯವಾದ ವಿಗ್ರಹಾರಾಧನೆಗೆ ಸಮವಾದ ಲೌಕಿಕ ಆಸೆಗಳನ್ನು ತ್ಯಜಿಸುವರೇ? ಅಥವಾ ದೇವರು ಕೊಟ್ಟ ಬೆಳಕನ್ನು ತಿರಸ್ಕರಿಸಿ ಲೌಕಿಕವಾದ ಸುಖಭೋಗಗಳಲ್ಲಿ ಇನ್ನೂ ಮುಂದುವರಿಯುವರೇ? ನನ್ನನ್ನು ನಾನೇ ನಿರಾಕರಿಸಿ, ನನ್ನ ಪಾಪಗಳನ್ನು ಖಂಡಿಸುವ ಯೇಸುವಿನ ವಿಷಯವಾದ ಸಾಕ್ಷಿಯಾದ ಪ್ರವಾದನಾ ಆತ್ಮಪ್ರೇರಿತ ಪುಸ್ತಕಗಳನ್ನು ದೇವರಿಂದ ಬಂತೆಂದು ಅಂಗೀಕರಿಸಲೇ? ಅಥವಾ ಅವು ನನ್ನ ಪಾಪಗಳನ್ನು ಖಂಡಿಸುವುದರಿಂದ ಅವುಗಳನ್ನು ತಿರಸ್ಕರಿಸಲೇ? ಎಂಬ ಪ್ರಶ್ನೆಗಳನ್ನು ಸತ್ಯವನ್ನು ಬಿಟ್ಟು ಹೋಗಿರುವವರು ತಿರುಗಿ ಹಾಕಿಕೊಳ್ಳಬೇಕಾಗಿದೆ. KanCCh 88.2