ಶ್ರೀಮತಿ ವೈಟಮ್ಮನವರು ಮೊದಲು ಬರೆದ ಕೆಲವು ಪುಸ್ತಕಗಳು ದೇವಜನರಿಗೆ ಕೊಡಲ್ಪಟ್ಟಿರುವ ದೈವೀಕಬೆಳಕನ್ನು ವಿವೇಕವಿಲ್ಲದ ರೀತಿಯಲ್ಲಿ ಉಪಯೋಗಿಸುವುದರ ವಿರುದ್ಧ ಎಚ್ಚರಿಕೆ ನೀಡಿವೆ. ಕೆಲವರು ಇವುಗಳನ್ನು ವಿವೇಚನೆಯಿಲ್ಲದೆ ಉಪಯೋಗಿಸಿದ್ದಾರೆ. ತಮ್ಮ ನಂಬಿಕೆಯ ಬಗ್ಗೆ ಇವರು ಅವಿಶ್ವಾಸಿಗಳೊಂದಿಗೆ ಮಾತಾಡಿದಾಗ ಅವರು ಸಾಕ್ಷ್ಯಾಧಾರ ಕೇಳಿದರು. ಅದಕ್ಕೆ ಅಡ್ವೆಂಟಿಸ್ಟರು ಸತ್ಯವೇದದಿಂದ ಸಾಕ್ಷ್ಯಾಧಾರ ಕೊಡುವುದಕ್ಕೆ ಬದಲಾಗಿ, ಶ್ರೀಮತಿ ವೈಟಮ್ಮನವರ ಬರಹಗಳನ್ನು ಓದಿ ತಿಳಿಸಿದ್ದಾರೆ. ಇದೊಂದು ಅವಿವೇಕತನದ ನಡವಳಿಕೆಯಾಗಿದ್ದು, ನಂಬಿಕೆಯಿಲ್ಲದವರು ಸತ್ಯಕ್ಕೆ ವಿರುದ್ಧವಾಗಿ ಪೂರ್ವಗ್ರಹ ಪೀಡಿತ ಅಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ಪರಿಶುದ್ಧಾತ್ಮನ ಬಗ್ಗೆ ಏನೂ ತಿಳಿಯದವರಿಗೆ ಶ್ರೀಮತಿ ವೈಟಮ್ಮನವರ ಪುಸ್ತಕಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಂತವರಿಗೆ ಈ ಪುಸ್ತಕಗಳನ್ನು ಎಂದೂ ಸಹ ಉದ್ಧರಿಸಿ ಹೇಳಬಾರದು. ಇವುಗಳನ್ನು ವಿವೇಚನಾರಹಿತವಾಗಿ ಉಪಯೋಗಿಸುವುದರ ವಿರುದ್ಧ ಶ್ರೀಮತಿ ವೈಟಮ್ಮನವರು ಸ್ವತಃ ಕೆಳಕಂಡ ಎಚ್ಚರಿಕೆಗಳನ್ನು ನೀಡಿದ್ದಾರೆ. KanCCh 89.1
“ಕೆಲವು ಬೋಧಕರು ಬಹಳ ದೂರದಲ್ಲಿದ್ದಾರೆ. ಪ್ರವಾದನಾಆತ್ಮ ಪ್ರೇರಿತ ಪುಸ್ತಕಗಳನ್ನು ನಂಬುತ್ತೇವೆಂದು ಅವರು ಹೇಳಿಕೊಳ್ಳುತ್ತಾರೆ. ಆದರೆ ಇವುಗಳ ಬಗ್ಗೆ ಏನೂ ತಿಳಿಯದಿರುವವರಿಗೆ ಇದನ್ನು ತಪ್ಪಾಗಿ ತಿಳಿಸಿ ಶ್ರೀಮತಿ ವೈಟಮ್ಮನವರು ತಿಳಿಸಿರುವ ಈ ಎಚ್ಚರಿಕೆ ಮಾತುಗಳನ್ನು ಬಹಳ ಕಠಿಣವಾದ ರೀತಿಯಲ್ಲಿ ಕೈಕೊಂಡು ನಡೆಯಬೇಕೆಂದು ಹೇಳುತ್ತಾರೆ. ಆದರೆ ಸ್ವತಃ ಈ ಬೋಧಕರು ಅವುಗಳನ್ನು ಅನುಸರಿಸುವುದಿಲ್ಲ. ಅಲ್ಲದೆ ಪದೇಪದೇ ಅವುಗಳನ್ನು ಅಸಡ್ಡೆಯಿಂದ ನಿರಾಕರಿಸಿದ್ದಾರೆ. KanCCh 89.2
“ಇತರರ ಪಾಪದೋಷಗಳ ಬಗ್ಗೆ ದೇವರು ಹೇಳಿರುವುದರ ಬಗ್ಗೆ ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಶ್ರೀಮತಿ ವೈಟಮ್ಮನವರಿಗೆ ದೇವರು ತೋರಿಸಿದ ಈ ವಿಷಯದಲ್ಲಿ ಅತಿಯಾದ ಅರ್ಥವನ್ನು ಕಲ್ಪಿಸಿ, ಬಲವಾದ ರೀತಿಯಲ್ಲಿ ಇತರರ ದೋಷಾಪರಾಧಗಳನ್ನು ಎತ್ತಿಹೇಳುತ್ತಾರೆ. ಇದರಿಂದ ಅನೇಕರು ದೇವರ ನಂಬಿಕೆಯಲ್ಲಿ ಬಲಹೀನಗೊಂಡು, ಹತಾಶೆಗೊಳ್ಳುತ್ತಾರೆ. ಅಲ್ಲದೆ ಇದರಿಂದ ಸಭೆಯೂ ಸಹ ನಿರುತ್ಸಾಹಗೊಳ್ಳುವಂತೆ ಮಾಡುತ್ತಾರೆ. KanCCh 89.3