Go to full page →

ಅಧ್ಯಾಯ-14 — ಪರಿಶುದ್ಧಾತ್ಮನು KanCCh 93

ಯೇಸುಕ್ರಿಸ್ತನ ಎರಡನೇ ಬರೋಣವನ್ನು ಎದುರು ನೋಡುವುದು ಮಾತ್ರವಲ್ಲ. ಅದು ಶೀಘ್ರವಾಗಿ ಆಗುವಂತೆ ಮಾಡುವುದೂ ಸಹ ಪ್ರತಿಯೊಬ್ಬ ಕ್ರೈಸ್ತನ ವಿಶೇಷ ಗೌರವವೂ, ಸದಾವಕಾಶವೂ ಆಗಿದೆ. ಯೇಸುಕ್ರಿಸ್ತನ ಹೆಸರು ಹೇಳುವವರೆಲ್ಲರೂ, ಆತನ ಮಹಿಮೆಯ ಫಲವನ್ನು ಕೊಡುವುದಾದರೆ, ಬಹಳ ವೇಗವಾಗಿ ಸುವಾರ್ತೆ ಎಂಬ ಬೀಜವು ಲೋಕದಲ್ಲಿ ಬಿತ್ತಲ್ಪಡುವುದು. ಅತಿ ಶೀಘ್ರವಾಗಿ ಕೊನೆಯ ಬೆಳೆಯು ಕೊಯ್ಲಿಗೆ ಬರುವುದು ಹಾಗೂ ಕ್ರಿಸ್ತನು ಅಮೂಲ್ಯವಾದ ತನ್ನ ಬೆಳೆಯನ್ನು ಕೂಡಿಸಲು ಬರುವನು. KanCCh 93.1

ಸಹೋದರ, ಸಹೊದರಿಯರೇ, ಪವಿತ್ರಾತ್ಮನ ಸುರಿಸುವಿಕೆಗಾಗಿ ಬೇಡಿಕೊಳ್ಳಿರಿ. ದೇವರು ತಾನುಮಾಡಿದ ಪ್ರತಿಯೊಂದು ವಾಗ್ದಾನಗಳನ್ನು ನೆನಪಿನಲ್ಲಿಟ್ಟು ಕೊಂಡಿದ್ದಾನೆ. ಸತ್ಯವೇದವನ್ನು ಕೈಯಲ್ಲಿಡಿದುಕೊಂಡು “ನೀನು ಹೇಳಿರುವುದನ್ನು ನಾನುಮಾಡಿದ್ದೇನೆ. “ಬೇಡಿಕೊಳ್ಳಿರಿ ನಿಮಗೆ ದೊರೆಯುವುದು; ಹುಡುಕಿರಿ ನಿಮಗೆ ಸಿಕ್ಕುವುದು; ತಟ್ಟಿರಿ ನಿಮಗೆ ತೆರೆಯುವುದು” ಎಂಬ ನಿನ್ನ ವಾಗ್ದಾನಕ್ಕಾಗಿ ಕಾದುಕೊಂಡಿದ್ದೇನೆ” ಎಂದು ಹೇಳಿರಿ. KanCCh 93.2

“ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ, ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ಹೇಳುತ್ತೇನೆ” (ಮತ್ತಾಯ 11:24) ಎಂದು ಯೇಸುಕ್ರಿಸ್ತನು ವಾಗ್ದಾನ ಮಾಡಿದ್ದಾನೆ. “ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಏನೇನು ಬೇಡಿಕೊಳ್ಳುವಿರೋ, ಅದನ್ನು ನೆರವೇರಿಸುವೆನು; ಹೀಗೆ ಮಗನ ಮೂಲಕವಾಗಿ ತಂದೆಗೆ ಮಹಿಮೆ ಉಂಟಾಗುವುದು” ಎಂದೂ ಸಹ ಕ್ರಿಸ್ತನು ಹೇಳಿದ್ದಾನೆ (ಯೋಹಾನ 14:13). KanCCh 93.3

ಕ್ರಿಸ್ತನು ತನ್ನ ಸೇವಕರಿಗೆ ತನ್ನ ಚಿತ್ತವನ್ನು ತಿಳಿಸಲು ಸಂದೇಶಕರನ್ನು ಜಗತ್ತಿನ ಎಲ್ಲಾಕಡೆಗೂ ಕಳುಹಿಸುತ್ತಾನೆ. ಆತನು ತನ್ನ ಸಭೆಗಳ ನಡುವೆ ತಿರುಗಾಡುತ್ತಾನೆ. ತನ್ನ ಅನುಯಾಯಿಗಳನ್ನು ಪರಿಶುದ್ಧಗೊಳಿಸಿ ಉನ್ನತ ಸ್ಥಾನಕ್ಕೇರಿಸಲು ಹಾಗೂ ಶ್ರೇಷ್ಠರನ್ನಾಗಿ ಮಾಡಲು ಬಯಸುತ್ತಾನೆ. ಕ್ರಿಸ್ತನು ತನ್ನ ಬಲಗೈಯಲ್ಲಿ ನಕ್ಷತ್ರಗಳನ್ನು ಹಿಡಿದುಕೊಂಡಿದ್ದಾನೆ ಹಾಗೂ ತನ್ನ ಹಿಂಬಾಲಕರ ಮೂಲಕ ಜಗತ್ತಿಗೆ ತನ್ನ ಬೆಳಕು ಪ್ರಕಾಶಿಸಬೇಕೆಂಬುದು ಆತನ ಉದ್ದೇಶವಾಗಿದೆ. ಈ ರೀತಿಯಾಗಿ ಆತನು ತನ್ನ ಜನರನ್ನು ಪರಲೋಕದಲ್ಲಿ ಉನ್ನತಸೇವೆಗೆ ಸಿದ್ಧಪಡಿಸಲು ಬಯಸುತ್ತಾನೆ. ನಮಗೆ ಮಾಡಲು ಒಂದು ಮಹಾಕಾರ್ಯವನ್ನು ಆತನು ಕೊಟ್ಟಿದ್ದಾನೆ. ಅದನ್ನು ಪ್ರಾಮಾಣಿಕತೆಯಿಂದ ಮಾಡೋಣ. ದೈವೀಕಕೃಪೆಯು ಮಾನವಜನಾಂಗಕ್ಕೆ ಏನು ಮಾಡಬಹುದೆಂಬುದನ್ನು ನಮ್ಮ ಜೀವನದ ಮೂಲಕ ತೋರಿಸೋಣ. KanCCh 93.4