Go to full page →

ಪವಿತ್ರಾತ್ಮನು ಸುರಿಸುವುದಕ್ಕೆ ಮೊದಲು ನಮ್ಮಲ್ಲಿ ಐಕ್ಯತೆಯಿರಬೇಕು KanCCh 94

ಯೇಸುವಿನ ಶಿಷ್ಯರು ತಾವು ಹೆಚ್ಚಿನವರಾಗಬೇಕೆಂಬ ಆಸೆಯನ್ನು ಬಿಟ್ಟು, ಪರಿಪೂರ್ಣವಾದ ಐಕ್ಯತೆಹೊಂದಿದಾಗ, ಪವಿತ್ರಾತ್ಮನು ಅವರ ಮೇಲೆ ಸುರಿಸಲ್ಪಟ್ಟನೆಂಬುದನ್ನು ಗಮನಿಸಿ. ಅವರೆಲ್ಲರೂ ಏಕಮನಸ್ಸಿನಿಂದಿದ್ದರು. ಎಲ್ಲಾ ಭಿನ್ನಾಬಿಪ್ರಾಯಗಳನ್ನು ತೊರೆದರು. ಅವರಿಗೆ ಪವಿತ್ರಾತ್ಮನು ಕೊಡಲ್ಪಟ್ಟ ನಂತರ ತಿಳಿಸಲ್ಪಟ್ಟ ಸಾಕ್ಷಿಯೂ ಸಹ ಅದೇರೀತಿಯಿದೆ. “ನಂಬಿದ್ದ ಮಂಡಲಿಯವರ ಹೃದಯವೂ, ಪ್ರಾಣವೂ ಒಂದೇಆಗಿತ್ತು...” (ಅ.ಕೃತ್ಯಗಳು 4:32) ಎಂಬ ವಾಕ್ಯವನ್ನು ಗಮನಿಸಿ. ಪಾಪಿಗಳು ಬದುಕುವುದಕ್ಕಾಗಿ ತನ್ನ ಪ್ರಾಣವನ್ನೇ ಕೊಟ್ಟ ಕ್ರಿಸ್ತನ ಆತ್ಮನು ವಿಶ್ವಾಸಿಗಳ ಮಂಡಲಿಯನ್ನು ಉತ್ಸಾಹಗೊಳಿಸಿದನು. KanCCh 94.1

ಶಿಷ್ಯರು ಆಶೀರ್ವಾದವನ್ನು ತಮಗೋಸ್ಕರ ಕೇಳಿಕೊಳ್ಳಲಿಲ್ಲ. ಅವರಿಗೆ ಆತ್ಮಗಳ ರಕ್ಷಣೆಯು ಮುಖ್ಯವಾಗಿತ್ತು. ಸುವಾರ್ತೆಯು ಲೋಕದ ಕಟ್ಟಕಡೆಯವರೆಗೂ ಸಾರಲ್ಪಡಬೇಕಾಗಿತ್ತು ಮತ್ತು ಕ್ರಿಸ್ತನು ವಾಗ್ದಾನ ಮಾಡಿದ್ದ ಪವಿತ್ರಾತ್ಮನ ಶಕ್ತಿಗಾಗಿ ಅವರು ಬೇಡಿಕೊಂಡರು. ಆಗ ಪವಿತ್ರಾತ್ಮನು ಸುರಿಸಲ್ಪಟ್ಟು ಒಂದೇದಿನದಲ್ಲಿ ಸಾವಿರಾರುಜನರು ದೀಕ್ಷಾಸ್ನಾನ ಹೊಂದಿದರು. KanCCh 94.2

ಅದೇ ವಾಗ್ದಾನವೂ ಈಗಲೂಸಹ ಇದೆ. ಕ್ರೈಸ್ತರು ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಕೆಟ್ಟು ಹೋಗಿರುವವರನ್ನು ಹುಡುಕಿ ರಕ್ಷಿಸುವದಕ್ಕಾಗಿ ತಮ್ಮನ್ನು ದೇವರಿಗೆ ಒಪ್ಪಿಸಿಕೊಡಲಿ. ನಂಬಿಕೆಯಿಂದ ಅವರು ಬೇಡಿಕೊಂಡಲ್ಲಿ, ವಾಗ್ದಾನ ಮಾಡಲ್ಪಟ್ಟ ಆಶೀರ್ವಾದವು ಅವರಿಗೆ ಕೊಡಲ್ಪಡುವುದು. ಅಪೋಸ್ತಲರ ಕಾಲದಲ್ಲಿ ಸುರಿಸಲ್ಪಟ್ಟ ಪವಿತ್ರಾತ್ಮನ ವರವು ಮುಂಗಾರುಮಳೆಯಾಗಿದ್ದು, ಅದರ ಫಲಿತಾಂಶವು ಅಮೋಘವಾಗಿತ್ತು. ಆದರೆ ಹಿಂಗಾರುಮಳೆಯು ಇನ್ನೂ ಹೇರಳವಾಗಿ ಸುರಿಸಲ್ಪಡುವುದು. ಈ ಕೊನೆಯ ಕಾಲದಲ್ಲಿ ಜೀವಿಸುತ್ತಿರುವವರಿಗೆ ದೇವರ ವಾಗ್ದಾನವೇನು? “ಸುನಿರೀಕ್ಷೆಯುಂಟಾದ ಸೆರೆಯವರೇ, ನಿಮ್ಮ ದುರ್ಗಕ್ಕೆ ಹಿಂದಿರುಗಿರಿ. ನಿಮಗೆ ಎರಡರಷ್ಟು ಸುಖವನ್ನು ದಯಪಾಲಿಸುವೆನು” (ಜೆಕರ್ಯ 9:12). “ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನುಬೇಡಿಕೊಳ್ಳಿರಿ; ಯೆಹೋವನೇ ಮಿಂಚುಗಳನ್ನು ಉಂಟುಮಾಡುತ್ತಾನೆ. ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ. ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ” (ಜೆಕರ್ಯ 10:1). KanCCh 94.3