ಮೋಸಹೋಗಬೇಡಿರಿ, ದೇವರು ತಿರಸ್ಕಾರ ಸಹಿಸುವವನಲ್ಲ. ಪರಿಶುದ್ಧತೆ ಹೊರತು ಬೇರೆಯಾವುದೂ ನಿಮ್ಮನ್ನು ಪರಲೋಕಕ್ಕೆ ಸಿದ್ಧಗೊಳಿಸುವುದಿಲ್ಲ. ಪ್ರಾಮಾಣಿಕವಾದ ಮತ್ತು ನಿಜವಾದ ದೈವಭಕ್ತಿ ಮಾತ್ರ ನಿಮ್ಮ ಸ್ವಭಾವಗಳನ್ನು ಪರಿಶುದ್ಧಗೊಳಿಸಿ ಉನ್ನತಕ್ಕೇರಿಸುವುದು. ಇದರಿಂದ ನೀವು ಯಾರೂ ಸೇರಲಾರದ ಅಗಮ್ಯವಾದ ಬೆಳಕಿನಲ್ಲಿ ವಾಸಿಸುವ ದೇವರ ಸನ್ನಿಧಾನಕ್ಕೆ ಪ್ರವೇಶಿಸಬಹುದು. ಪರಲೋಕದ ಗುಣಸ್ವಭಾವಗಳನ್ನು ಈ ಲೋಕದಲ್ಲಿಯೇ ಪಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಎಂದಿಗೂ ಅದನ್ನು ಪಡೆದುಕೊಳ್ಳಲಾಗದು. ಆದುದರಿಂದ ಈಗಲೇ ಅಂತಹ ಗುಣಸ್ವಭಾವಗಳನ್ನು ಬೆಳೆಸಿಕೊಳ್ಳಲು ಆರಂಭಿಸಿ. ಒಂದು ಸಮಯ ಬರಲಿದೆ, ಆಗ ಅವುಗಳನ್ನು ಸುಲಭವಾಗಿ ಪಡೆದುಕೊಳ್ಳುವ ಯತ್ನವನ್ನು ಮನಃಪೂರ್ವಕವಾಗಿ ಆರಂಭಿಸಬಹುದೆಂದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿ. ಪ್ರತಿಯೊಂದು ದಿನವೂ ನಿಮ್ಮನ್ನು ದೇವರಿಂದ ಇನ್ನೂ ದೂರ ಮಾಡುತ್ತದೆ. ಹಿಂದೆಂದೂ ಕಂಡಿರದಂತ ಉತ್ಸಾಹದಿಂದ ನಿತ್ಯಜೀವಕ್ಕಾಗಿ ಸಿದ್ಧತೆ ಮಾಡಿಕೊಳ್ಳಿ, ಸತ್ಯವೇದವನ್ನು ಓದುವುದು, ಪ್ರಾರ್ಥಿಸುವುದು ಹಾಗೂ ಅದನ್ನು ಧ್ಯಾನಮಾಡುವುದರಲ್ಲಿ ಆಸಕ್ತಿಹೊಂದಿ, ಪರಲೋಕದ ಭವನದಲ್ಲಿ ದೇವದೂತರೊಂದಿಗೆ ಸೇರಿ ನೀವು ಅವರ ಗಾನವೃಂದದಲ್ಲಿ ದೇವರನ್ನು ಸ್ತುತಿಸಬೇಕಾದಲ್ಲಿ ಪರಲೋಕಭಾವ ಧರಿಸಿಕೊಳ್ಳಿರಿ. ಅದರ ಮೇಲೆ ನಿಮ್ಮ ಮನಸ್ಸಿರಲಿ. KanCCh 222.2