Go to full page →

ಅಧ್ಯಾಯ-64 — ಇಗೋ, ಬೇಗ ಬರುತ್ತೇನೆ KanCCh 460

ಶ್ರೀಮತಿ ವೈಟಮ್ಮನವರಿಗೆ ಒಂದು ರಾತ್ರಿಯಲ್ಲಿ ಪವಿತ್ರಾತ್ಮನ ದರ್ಶನವಾಯಿತು. ನಾವು ನಂಬಿರುವಂತೆಯೇ, ಯೇಸುಕರ್ತನು ಅತಿಶೀಘ್ರವಾಗಿ ಬಂದಲ್ಲಿ, ಹಿಂದೆಂದಿಗಿಂತಲೂ ಹೆಚ್ಚಾಗಿ ನಾವು ಜನರಿಗೆ ಸತ್ಯವನ್ನು ತಿಳಿಸುವುದರಲ್ಲಿ ಕಾರ್ಯನಿರತರಾಗಬೇಕೆಂದು ಅವರಿಗೆ ತಿಳಿಸಲ್ಪಟ್ಟಿತು. KanCCh 460.1

ಈ ದರ್ಶನಕ್ಕೆ ಸಂಬಂಧಪಟ್ಟಂತೆ, ಶ್ರೀಮತಿ ವೈಟಮ್ಮನವರಿಗೆ 1843 ಹಾಗೂ 1844ನೇ ಇಸವಿಗಳಲ್ಲಿ ಕ್ರಿಸ್ತನ ಬರೋಣವನ್ನು ಎದುರು ನೋಡುತ್ತಿದ್ದ ಅಡ್ವೆಂಟಿಸ್ಟ್ ವಿಶ್ವಾಸಿಗಳ ಸೇವೆಯು ನೆನಪಿಗೆ ಬಂತು. ಆ ಸಮಯದಲ್ಲಿ ಮನೆಯಿಂದ ಮನೆಗೆ ಹೆಚ್ಚು ಭೇಟಿಕೊಡಲಾಗುತ್ತಿತ್ತು. ದೇವರ ವಾಕ್ಯದಲ್ಲಿ ತಿಳಿಸಿರುವ ವಿಷಯಗಳ ಬಗ್ಗೆ ಜನರಿಗೆ ಎಚ್ಚರಿಕೆನೀಡಲು ಅಡ್ವೆಂಟಿಸ್ಟ್ ವಿಶ್ವಾಸಿಗಳು ದಣಿವರಿಯದೆ ಸೇವೆ ಮಾಡಿದರು. ಮೊದಲನೆ ದೇವದೂತನ ವರ್ತಮಾನವನ್ನು ಪ್ರಾಮಾಣಿಕವಾಗಿ ಸಾರಿದ ಅವರಿಗಿಂತಲೂ ಹೆಚ್ಚಿನಪ್ರಯತ್ನವನ್ನು ನಾವುಮಾಡಬೇಕು. ಈ ಲೋಕದ ಅಂತ್ಯವು ಶೀಘ್ರವಾಗಿ ಮುಕ್ತಾಯವಾಗಲಿದೆ. ಯೇಸುಕ್ರಿಸ್ತನು ನಿಜವಾಗಿಯೂ ಶೀಘ್ರವಾಗಿ ಬರುತ್ತಾನೆಂದು ನಾವು ತಿಳಿದುಕೊಂಡಿರುವಾಗ, ಹಿಂದೆಂದಿಗಿಂತಲೂ ಹೆಚ್ಚಾಗಿ ಜನರನ್ನು ಎಚ್ಚರಿಸುವ ಕಾರ್ಯಮಾಡಬೇಕಾಗಿದೆ. ಜನರನ್ನು ಮುಂದೆ ಬರಲಿರುವ ಜಗತ್ತಿನ ಅಂತ್ಯದ ಬಗ್ಗೆ ಮನವರಿಕೆ ಮಾಡಲು ನಾವು ಅವರನ್ನು ಬಡಿದೆಬ್ಬಿಸಬೇಕಾಗಿದೆ. ನಮ್ಮ ವೈಯಕ್ತಿಕ ಜೀವನದಲ್ಲಿ ಸತ್ಯ ಹಾಗೂ ನೀತಿಯ ಬಲವನ್ನು ನಾವು ತೋರಿಸಬೇಕಾಗಿದೆ. ಹತ್ತುಆಜ್ಞೆಗಳನ್ನು ಮೀರಿದ ಈ ಲೋಕದ ಜನರು ಆ ಮಹಾಆಜ್ಞೆಗಳನ್ನು ನೀಡಿದ ಕರ್ತನನ್ನು ಬೇಗನೆ ಸಂಧಿಸಲಿದ್ದಾರೆ. ಆತನ ನೀತಿನಿಯಮಗಳ ಉಲ್ಲಂಘನೆಯನ್ನು ಬಿಟ್ಟು ಅವುಗಳಿಗೆ ವಿಧೇಯರಾದವರು ಮಾತ್ರ ಕ್ಷಮೆ ಹಾಗೂ ಶಾಂತಿಯನ್ನು ನಿರೀಕ್ಷಿಸಬಹುದು. KanCCh 460.2

ಜೀವದಾಯಕ ವಾಕ್ಯದ ಸತ್ಯವನ್ನು ಹೊಂದಿರುವವರು, ಆ ಸತ್ಯವನ್ನು ಹೊಂದಿಲ್ಲದವರಿಗೆ ಜ್ಞಾನೋದಯ ಮಾಡಲು ಶ್ರಮಿಸಿದಲ್ಲಿ, ಎಷ್ಟೋ ಒಳ್ಳೆಯದನ್ನು ಸಾಧಿಸಬಹುದಾಗಿತ್ತು. ಸಮಾರ್ಯದಸ್ತ್ರೀಯ ಮಾತನ್ನುಕೇಳಿ ಕ್ರಿಸ್ತನ ಬಳಿಗೆ ಆ ಊರಿನ ಜನರು ಬಂದಾಗ, ಆತನು ತನ್ನ ಶಿಷ್ಯರಿಗೆ ಹೊಲದ ಕೊಯ್ಲು ಸಿದ್ಧವಾಗಿದೆ ಎಂದು ಹೇಳಿದನು. “ಇನ್ನು ನಾಲ್ಕು ತಿಂಗಳಿಗೆ ಸುಗ್ಗಿ ಬರುವುದೆಂದು ನೀವು ಹೇಳುವುದುಂಟಷ್ಟೆ. ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ” (ಯೋಹಾನ 4:35). ಸಮಾರ್ಯದವರು ಸತ್ಯವಾಕ್ಯ ಕೇಳಲು ಆತ್ಮೀಕವಾಗಿ ಹಸಿದಿದ್ದರಿಂದ, ಕ್ರಿಸ್ತನು ಆ ಊರಿನಲ್ಲಿ ಎರಡುದಿವಸ ಇದ್ದನು. ಆತನ ಈ ಸೇವೆಯ ಫಲವಾಗಿ “ಹೆಚ್ಚು ಜನರು ಆತನು ವಾಕ್ಯವನ್ನು ಕೇಳಿ ಸಮಾರ್ಯದ ಹೆಂಗಸಿಗೆ- ನಾವು ಆತನನ್ನು ನಂಬಿರುವುದು ಇನ್ನು ನಿನ್ನ ಮಾತಿನ ಮೇಲೆ ಅಲ್ಲ; ನಾವು ಕಿವಿಯಾರೆ ಕೇಳಿ ಈತನು ಲೋಕರಕ್ಷಕನೇ ಹೌದೆಂದು ತಿಳಿದುಕೊಂಡಿದ್ದೇವೆ” ಎಂದು ಹೇಳಿದರು (ಯೋಹಾನ 4:41, 42). KanCCh 460.3