Go to full page →

ಲೋಕದೊಂದಿಗೆ ವ್ಯಾಪಾರ ಸಂಬಂಧ KanCCh 72

ಲೌಕಿಕ ವಿಷಯಗಳನ್ನು ಜಾಣತನದಿಂದ ನಿರ್ವಹಿಸುವುದರಲ್ಲಿ ಕೆಲವರಿಗೆ ಸಮಯೋಚಿತ ಜ್ಞಾನವಿರುವುದಿಲ್ಲ. ಅವರಿಗೆ ಅಗತ್ಯವಾದ ಅರ್ಹತೆಯಿಲ್ಲದ್ದರಿಂದ, ಸೈತಾನನ ಅವುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಾನೆ. ವಿಷಯವು ಹೀಗಿರುವಾಗ, ಅಂತವರು ತಮ್ಮ ಕಾರ್ಯದ ಬಗ್ಗೆ ಅಜ್ಞಾನಿಗಳಾಗಿರಬಾರದು. ಅವರು ತಮ್ಮ ಯೋಜನೆಗಳನ್ನು ಜಾರಿಗೆತರುವುದಕ್ಕೆ ಮೊದಲೇ ತಮ್ಮನ್ನು ತಗ್ಗಿಸಿಕೊಂಡು. ವಿನಯದಿಂದ ತಮ್ಮ ಸಹೋದರರ ಸಲಹೆ, ಬುದ್ಧಿಮಾತುಗಳನ್ನು ಕೇಳಬೇಕು. ಅಲ್ಲದೆ ಅವುಗಳಲ್ಲಿ ವಿಶ್ವಾಸ ಹೊಂದಿರಬೇಕು. “ಒಬ್ಬರ ಭಾರವನ್ನು ಮತ್ತೊಬ್ಬರು ಹೊತ್ತುಕೊಳ್ಳಲಿ” (ಗಲಾತ್ಯ 6:2). ಕೆಲವರು ಇತರರ ವಿವೇಕಯುತವಾದ ಸಲಹೆ ತೆಗೆದುಕೊಳ್ಳುವುದಕ್ಕೆ ಅವರ ಅಹಂಕಾರ ಅಡ್ಡ ಬರುತ್ತದೆ. ಆದುದರಿಂದ ಅವರು ತಮ್ಮದೇ ಆದ ಯೋಜನೆಗಳನ್ನು ಅನುಸರಿಸುತ್ತಾರೆ. ಆದರೆ ಕೊನೆಯಲ್ಲಿ ಕಷ್ಟ ಬಂದಾಗ ಯೋಗ್ಯ ಸಲಹೆಗಳನ್ನು ಪಡೆದುಕೊಳ್ಳುವುದರ ಪ್ರಾಮುಖ್ಯತೆ ಅರಿವಾಗುತ್ತದೆ. ಆದರೆ ಈಗ ಅವರ ಭಾರ ಮೊದಲಿಗಿಂತ ಹೆಚ್ಚಾಗಿರುತ್ತದೆ. ಕ್ರೈಸ್ತಸಹೋದರರು ಸಾಧ್ಯವಾದಷ್ಟು ಮಟ್ಟಿಗೆ ನ್ಯಾಯಾಲಯಕ್ಕೆ ಹೋಗುವುದನ್ನು ತಡೆಗಟ್ಟಬೇಕು. ಹೋದಲ್ಲಿ ಸೈತಾನನಿಗೆ ಅವಕಾಶ ಕೊಟ್ಟಂತಾಗಿ, ಅವರು ಗಲಿಬಿಲಿಗೆ ಒಳಗಾಗುತ್ತಾರೆ. ನಷ್ಟವಾದರೂ ಸರಿಯೇ, ಕ್ರೈಸ್ತ ಸಹೋದರರು ಪರಸ್ಪರ ತಮ್ಮಲ್ಲಿಯೇ ಭಿನ್ನಾಭಿಪ್ರಾಯ ಪರಿಹರಿಸಿಕೊಳ್ಳುವ ಒಂದು ಒಪ್ಪಂದ ಮಾಡಿಕೊಳ್ಳುವುದು ಒಳ್ಳೆಯದು. KanCCh 72.1

ತನ್ನ ಜನರು ಅನ್ಯರಿಗೆ ಜಾಮೀನಾಗಿ ನಿಲ್ಲುವುದು ದೇವರಿಗೆ ಅಸಂತೋಷ ತರುವುದೆಂದು ಶ್ರೀಮತಿ ವೈಟಮ್ಮನವರಿಗೆ ದರ್ಶನದಲ್ಲಿ ತೋರಿಸಲಾಯಿತು. ದೇವರು ಈ ವಾಕ್ಯಗಳಿಗೆ ಅವರ ಗಮನ ಸೆಳೆದನು. “ಕೈಮೆಲೆ ಕೈಹಾಕಿ ಸಾಲಕ್ಕೆ ಹೊಣೆಯಾಗುವವರಲ್ಲಿ ನೀನೂ ಒಬ್ಬನಾಗಬೇಡ” (ಜ್ಞಾನೋಕ್ತಿ 22:26). “ಹೆರರಿಗೆ ಹೊಣೆಯಾಗುವವರಲ್ಲಿ ನೀನೂ ಒಬ್ಬನಾಗಬೇಡ” (ಜ್ಞಾನೋಕ್ತಿ 22:26). “ಹೆರರಿಗೆ ಹೊಣೆಯಾದರೆ ಹಾನಿ, ಹೊಣೆಗೆ ಅಸಹ್ಯಪಟ್ಟರೆ ನಿರ್ಭಯ” (ಜ್ಞಾನೋಕ್ತಿ 11:15). ಅಪನಂಬಿಗಸ್ತರಾದ ಮನೆವಾರ್ತೆಯವರು ಪರಲೋಕದ ತಂದೆಗೆ ಸೇರಿರುವವುಗಳಿಗೆ ಹೊಣೆಯಾಗುತ್ತಾರೆ ಮತ್ತು ಸೈತಾನನು ತನ್ನನ್ನು ಅನುಸರಿಸುವವರಿಗೆ, ಅದನ್ನು ಕಿತ್ತುಕೊಳ್ಳಲು ಸಹಾಯಮಾಡಲು ಸಿದ್ಧವಾಗಿರುತ್ತಾನೆ. ಸಬ್ಬತ್ತನ್ನು ಅನುಸರಿಸುವವರು ಅವಿಶ್ವಾಸಗಳೊಂದಿಗೆ ಪಾಲುದಾರರಾಗಬಾರದು. ದೇವರಮಕ್ಕಳು ಅನ್ಯರ ಮಾತುಗಳಮೇಲೆ ಹೆಚ್ಚು ಭರವಸೆ ಇಡುತ್ತಾರೆ ಹಾಗೂ ಅವರ ಸಲಹೆ ಬುದ್ದಿವಾದಗಳನ್ನು ಕೇಳುತ್ತಾರೆ. ಹಾಗೆ ಎಂದಿಗೂ ಮಾಡಬಾರದು. ಯಾಕೆಂದರೆ ಸೈತಾನನು ಅವರನ್ನು ತನ್ನ ಏಜೆಂಟರುಗಳನ್ನಾಗಿ ಮಾಡಿಕೊಂಡು ದೇವರಮಕ್ಕಳನ್ನು ಗೊಂದಲಕ್ಕೆ ಒಳಪಡಿಸುವನು. KanCCh 72.2

*****