Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಪಾಪದ ಅರಿಕೆ

    “ದೋÀಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟು ಬಿಡುವವರನಿಗೆ ಕರುಣೆ ದೊರೆಯುವುದು.”LI 31.1

    ದೇವರ ಕೃಪೆಯನ್ನು ಪಡೆದುಕೊಳ್ಳಬಹುದಾದ ಶರತ್ತುಗಳು ಸಾಮಾನ್ಯವಾದವುಗಳಾಗಿವೆ. ಅವು ನ್ಯಾಯವಾದವುಗಳಾಗಿವೆ. ಪಾಪಪರಿಹಾರವನ್ನು ಹೊಂದಲು ನಾವು ಬಹಳ ದೊಡ್ಡ ಕೆಲಸಗಳನ್ನೇ ಮಾಡಬೇಕೆಂದು ದೇವರು ನಮಗೆ ಹೇಳುವುದಿಲ್ಲ. ದೂರವೂ ಮತ್ತು ಬಹು ಪ್ರಯಾಕರವೂ ಆದ ತೀರ್ಥಯಾತ್ರೆಗಳನ್ನು ನಾವು ಮಾಡಬೇಕಾಗಿರುವುದಿಲ್ಲ; ಇಲ್ಲವೇ ಘೋರ ತಪಸ್ಸನ್ನೂ ಮಾಡಬೇಕಾದ ಅಗತ್ಯವೂ ಇಲ್ಲ. ಆದರೆ ಯಾರು ತಮ್ಮ ಅಪರಾಧಗಳನ್ನು ಒಪ್ಪಿಕೊಂಡು ಅವುಗಳನ್ನು ತ್ಯಜಿಸುವರೋ ಅವರಿಗೆ ದೈವಕೃಪೆಯು ದೊರಕುವುದು.LI 31.2

    “ನೀವು ಸ್ವಸ್ಥವಾಗುವಂತೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರೊಬ್ಬರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ” ಎಂದು ಪೌಲನ ಹೇಳುತ್ತಾನೆ.LI 32.1

    ದೇವರಿಗೆ ನಿಮ್ಮ ಪಾಪಗಳನ್ನು ಅರಿಕೆ ಮಾಡಿರಿ. ಆತನೊಬ್ಬನೇ ಕ್ಷಮಿಸಬಲ್ಲನು; ಮತ್ತು ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿರಿ. ನೀವು ನಿಮ್ಮ ನೆರೆಯವನಿಗೆ ವಿರೋಧವಾಗಿ ತಪ್ಪು ಮಾಡಿದ್ದರೆ ಅದನ್ನು ಅವರಿಗೆ ಅರಿಕೆ ಮಾಡತಕ್ಕದ್ದು. ಮತ್ತು ನೆರೆಯವನು ನಿನ್ನನ್ನು ಕ್ಷಮಿಸುವುದು ಆತನ ಕರ್ತವ್ಯ ತರುವಾಯ ನೀನು ದೇವರ ಎದುರಿಗೆ ಅದನ್ನು ಒಪ್ಪಿಕೊಳ್ಳಬೇಕು. ನಿನ್ನ ಸಹೋದರನನ್ನು ನೋಯಿಸಿದ್ದರಿಂದ ನೀನು ಆತನ ಸೃಷ್ಟಿಕರ್ತನನ್ನೂ ರಕ್ಷಕನನ್ನೂ ನೋಯಿಸಿದಂತಾಯಿತು. ನಮ್ಮ ಮಧ್ಯಸ್ಥನೂ, ಮಹಾಯಾಕನೂ ಆದ ಕ್ರಿಸ್ತನ ಬಳಿಗೆ ಈ ವಿಚಾರಣೆಯ ಬರಬೇಕು. ಯಾಕಂದರೆ ಆತನು ‘ನಮ್ಮ ಹಾಗೆ ಶೋಧನೆಗೆ ಗುರಿಯಾದನು ಆದರೆ ಪಾಪ ಮಾತ್ರ ಮಾಡಲಿಲ್ಲ’ “ಮತ್ತು ನಮ್ಮ ನಿರ್ಬಲಾವಸ್ಥೆಯನ್ನು ಕಂಡು ಅನತಾಪಪಡದವನಲ್ಲ” ಆತನು ನಮ್ಮನ್ನು ನಮ್ಮ ಪಾಪಗಳನ್ನು ಒಪ್ಪಿಕೊಂಡು ದೇವರಿಗೆ ತೊಳೆಯುವವನಾಗಿದ್ದಾನೆ. ಯಾರು ತಮ್ಮ ಪಾಪಗಳನ್ನು ಒಪ್ಪಿಕೊಂಡು ದೇವರಿಗೆ ತಮ್ಮನ್ನು ತಗ್ಗಿಸಿಕೊಳ್ಳುವುದಿಲ್ಲವೋ ಅಂಥವರು ಆತನ ಸ್ವೀಕಾರದ ವೊದಲನೆಯ Àರತ್ತನ್ನು ಪಾಲಿಸಿಲಿಲ್ಲ. ನಾವು ಪಟ್ಟ ಮಾನಸಾಂತರವು ಸರಿಯೆಂದು ಅನುಭವಕ್ಕೆ ಬರದಿದ್ದರೆ, ಪಾಪವನ್ನು ದ್ವೇಷಿಸಿ ದೈನ್ಯತೆಯಿಂದಲೂ ಜಜ್ಜಿದ ಹೃದಯದಿಂದಲೂ ನಮ್ಮ ಅಪರಾಧಗಳನ್ನು ಒಪ್ಪಿ ಕೊಳ್ಳದಿದ್ದರೆ, ನಾವು ಪಾಪಪರಿಹಾರಕ್ಕಾಗಿ ನಿಜವಾಗಿಯೂ ಪ್ರಯಾಸಪಟ್ಟವರಲ್ಲ; ನಾವು ಹಾಗೆ ಪ್ರಯಾಸ ಪಡದಿದ್ದರೆ, ದೈವಶಾಂತಿಯು ನಮಗೆ ದೊರಕುವುದಿಲ್ಲ. ದೇವರ ಎದುರಿಗೆ ನಮ್ಮ ಹೃದಯಗಳನ್ನು ತಗ್ಗಿಸಿ ಆತನ ಶರತ್ತುಗಳನ್ನು ಪಾಲಿಸದಿರುವುದರಿಂದ ನಾವು ಮಾಡಿದ ಪಾಪಗಳ ಕ್ಷಮೆಯು ನಮಗೆ ದೊರಕುವುದಿಲ್ಲವೆಂದು ತಿಳಿಯಬೇಕಾಗಿದೆ. ಈ ವಿಚಾರದಲ್ಲಿ ಸತ್ಯವೇದ ಬೋಧನೆಯು ನಮಗೆ ಬಹು ಪರಿÁ್ಕರವಾವಿ ಕೊಡಲ್ಪಟ್ಟಿದೆ. ಅಂತರಂಗದಲ್ಲಾಗಿಲಿ ಬಹಿರಂಗದಲ್ಲಾಗಲಿ ನಾವು ಮಾಡುವ ಅರಿಕೆಯು ಸಂಪೂರ್ಣ ಮನ:ಪೂರ್ವಕವಾಗಿರಬೇಕು. ಇದಕ್ಕಾಗಿ ಬಲತ್ಕಾರವಿರ ಬಾರದು. ಅಲಕ್ಷ್ಯ ಭಾವನೆಯಿಂದಾಗಲಿ ವಾಚಾಳತನ ದಿಂದಲಾಗಲಿ ಪಾಪದ ಅರಿಕೆಯನ್ನು ಮಾಡಬಾರದು. ಪಾಪದ ನಿಜಲಕ್ಷಣವನ್ನು ಅನುಭವಪೂರ್ವಕವಾಗಿ ಗ್ರಹಿಸಿಕೊಳ್ಳಲಾರದವರಿಂದ ಬಲಾತ್ಕಾರವಾಗಿ ಪಾಪದ ಅರಿಕೆಯನ್ನು ಮಾಡಿಸಬಾರದು. ಹೃತ್ಪೂರ್ವಕ ವಾಗಿಯೂ ಅಂತರಾತ್ಮನ ಪೂರ್ವಕವಾಗಿಯೂ ಮಾಡುವ ಅರಿಕೆಗೆ ದೇವರ ಕೃಪೆಯು ದೊರೆಯುತ್ತದೆ. “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ ಕುಗ್ಗಿ ಹೋದವರನ್ನು ಉದ್ಧಾರ ಮಾಡುತ್ತಾನೆ” ಎಂದು ಕೀರ್ತನೆಗಾರನು ಹೇಳುತ್ತಾನೆ. LI 32.2

    ನಿಜವಾದ ಪಾಪದ ಅರಿಕೆಯು ವಿಶೇÀವಾದ ಒಂದು ಲಕ್ಷಣವನ್ನು ಹೊಂದಿ ಪಾಪವನ್ನು ಬಯಲಿಗೆ ತರುತ್ತದೆ. ಅಂಥವುಗಳು ಮಾತ್ರ ದೇವರಿಗೆ ಒಪ್ಪತಕ್ಕವುಗಳಾಗಿರಬಹುದು; ನಮ್ಮಿಂದ ಇತರರು ನೊಂದವರುಗಳಾಗಿರ ಬಹುದು, ಇಲ್ಲವೇ ಸಾರ್ವಜನಿಕರ ಮನಸ್ಸುಗಳನ್ನು ನೋಯಿಸಿರಬಹುದು; ಸರ್ವರನ್ನೂ ನೋಯಿಸಿರುವ ಪಾಪಗಳನ್ನು ಸರ್ವರ ಎದುರಿನಲ್ಲೇ ಅರಿಕೆ ಮಾಡಿಕೊಳ್ಳಬೇಕು. ಎಲ್ಲಾ ಅರಿಕೆಗಳೂ ಸೂಕ್ತವಾಗಿಯೂ ಸ್ವÀ್ಟವಾಗಿಯೂ ಇರಬೇಕು. ಮತ್ತು ಮಾಡಿರುವ ಸರ್ವ ಅಪರಾಧಗಳೂ ದೇವರ ಮುಂದೆ ಬಯಲಿಗೆ ಬರುವಂತವುಗಳಾಗಿರಬೇಕು. ಸಮುವೇಲನ ಕಾಲದಲ್ಲಿ ಜನರು ದೇವರಿಗೆ ದೂರವಾದರು. ಅವರು ತಮ್ಮ ಅಪರಾಧಗಳ ಸಲುವಾಗಿ ಬಾಧೆಯನ್ನು ಅನುಭವಿಸುತ್ತಿದ್ದರು. ಯಾಕಂದರೆ ಅವರಲ್ಲಿ ದೈವನಂಬಿಕೆಯು ಮಾಯವಾಯಿತು. ಆತನು ತನ್ನ ಜನಾಂಗವನ್ನು ಅಳಲು ಶಕ್ತನೂ ಜ್ಞಾನಿಯೂ ಎಂಬ ತಿಳುವಳಿಕೆಯನ್ನು ಅವರನ್ನು ಶತೃಗಳಿಂದ ಕಾಯ್ದು ಅವರ ನ್ಯಾಯವನ್ನು ತೀರಿಸುವನೆಂಬ ನಂಬಿಕೆಯನ್ನೂ ಕಳೆದುಕೊಂಡರು. ಪ್ರಪಂಚವನ್ನೇ ಆಳುವ ತಮ್ಮ ರಾಜನಾದ ದೇವರನ್ನು ಬಿಟ್ಟು, ಸುತ್ತಮುತ್ತಣ ಜನಾಂಗದವರ ಹಾಗೆ ಅವರು ಭೂರಾಜರಿಂದ ಆಳಲ್ಪಡಬೇಕೆಂದು ಇÀ್ಟಪಟ್ಟು. “ನಮಗೊಬ್ಬ ಅರಸನು ಬೇಕೆಂದು ನವು ಬೇಡಿಕೊಂಡದ್ದರಿಂದ ನಮ್ಮ ಪಾಪಗಳಿಗೆ ಮತ್ತೊಂದು ಪಾಪವು ಕೂಡಿತು” ತಾವು ಮಾಡಿದ ಪಾಪಗಳನ್ನೇ ಅವರು ಅರಿಕೆ ಮಾಡಬೇಕಾಯಿತು. ಅವರ ಕೃತಘ್ನತೆಯು ಅವರ ಆತ್ಮಗಳನ್ನು ನೋಯಿಸಿತು ಮತ್ತು ಅವರನ್ನು ದೇವರಿಂದ ದೂರ ಮಾಡಿತು.LI 33.1

    ನಿಜವಾದ ಮಾನಸಾಂತರ ಮತ್ತು ಹೃದಯ ಪರಿವರ್ತನೆಯಿಲ್ಲದ ಅರಿಕೆಯನ್ನು ದೇವರು ಸ್ವೀಕರಿಸುವುದಿಲ್ಲ. ಮನ:ಪೂರ್ವಕವಾದ ಬದಲಾವಣೆಯಾಗಬೇಕು. ದೇವರಿಗೆ ವಿರುದ್ಧವಾದದ್ದನ್ನು ತ್ಯಜಿಸಬೇಕು. ಇದೇ ನಿಜವಾದ ಮಾನಸಾಂತರದ ಫಲ. ನಾವು ಮಾಡಬೇಕಾದ ಕಾರ್ಯಗಳು ಪರಿÁ್ಕರವಾಗಿಯೂ ತೋರಿಸಲ್ಪಟ್ಟಿವೆ.LI 33.2

    “ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿ ಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುÀ್ಕøತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ; ಸದಾಚಾರವನ್ನು ಅಭ್ಯಾಸ ಮಾಡಿರಿ, ನ್ಯಾಯನಿರತವಾಗಿರಿ, ಹಿಂಸಕನನ್ನು ತಿದ್ದಿ ಸರಿಪಡಿಸಿರಿ, ಅನಾಥರಿಗೆ ನ್ಯಾಯ ತೀರಿಸಿರಿ, ವಿಧವೆಯ ಪಕ್ಷವಾಗಿ ವಾದಿಸಿರಿ.” “ದುÀ್ಟನು ಒತ್ತೆಯನ್ನು ಬಿಗಿಹಿಡಿಯದೆ ದೋಚಿಕೊಂಡದ್ದನ್ನು ಹಿಂದಕ್ಕೆ ಕೊಟ್ಟು ಜೀವಾಧಾನವಾದ ವಿಧಿಗಳನ್ನು ಅನುಸರಿಸಿ ಸಕಲ ದುÀ್ಕøತ್ಯಗಳಿಗೂ ದೂರವಾಗಿರುವ ಪಕ್ಷದಲ್ಲಿ ಸಾಯನು, ಬಾಳೇಬಾಳುವವನು.”LI 34.1

    ಪೌಲನು ಮಾನಸಾಂತರದ ಕಾರ್ಯಗಳನ್ನು ಕುರಿತು ಹೀಗೆ ಹೇಳುತ್ತಾನೆ, “ನೀವು ದೇವರ ಚಿತ್ತಾನುಸಾರವಾಗಿ ಪಟ್ಟ ದು:ಖವು ನಿಮಗೆ ಎಂಥಾ ಜಾಗರೂಕತೆಯನ್ನುಂಟು ಮಾಡಿತು. ನೋಡಿರಿ, ನೀವು ನಿರ್ದೋಷಿಗಳೆಂದು ಸ್ಥಾಪಿಸುವುದಕ್ಕೆ ಎÉ್ಟೂೀ ಪ್ರಯಾಸಪಟ್ಟಿರಿ, ಎÉ್ಟೂೀ ಮನೋವ್ಯಥೆಯನ್ನು ಅನುಭವಿಸಿದಿರಿ, ಎಂಥಾ ಭಯವನ್ನೂ ಹಂಬಲವನ್ನೂ ತೋರಿಸಿದಿರಿ, ಮಾಹಾನಿಗಾಗಿ ಎÉ್ಟೂೀ ರೋÀಪಟ್ಟು ಶಿಕ್ಷೆ ಮಾಡಿದಿರಿ, ನೀವು ಈ ಕಾರ್ಯಕ್ಕೆ ಸೇರಿದವರಲ್ಲವೆಂಬುದನ್ನು ಎಲ್ಲ ವಿಧದಲ್ಲಿಯೂ ತೋರಿಸಿದಿರಿ.”LI 34.2

    ಪಾಪಾತ್ಮನಲ್ಲಿರುವ ಧರ್ಮಜ್ಞಾನದ ಅರುಹು ಸತ್ತುಹೋದರೆ ಆತನು ತನ್ನಲ್ಲಿರುವ ನ್ಯೂನಾತಿರಿಕ್ತಗಳನ್ನು ತಿಳಿಯಲಾರನು. ತಾನು ಎಂತಹ ಅಪರಾಥವನ್ನು ಮಾಡಿರುವನೆಂಬ ಗ್ರಹಿಕೆಯಾಗಲಿ, ಅಥವಾ ತನ್ನ ತಪ್ಪನ್ನು ತೋರಿಸಿ ಕೊಡುವ ಪವಿತ್ರಾತ್ಮನು ಹುಟ್ಟಿಸುವ ಪಾಪದ ಅರುಹನ್ನಾಗಲಿ ಪಡೆಯಲಾದರ ಅಂಧಕಾರ ಸ್ಥಿತಿಯಲ್ಲಿರುವನು. ಇಂತವನ ಅರಿಕೆಗಳು ಸತ್ಯವಾದವುಗಳೂ ಮನ:ಪೂರ್ವಕವಾದವುಗಳೂ ಆಗಿರುವುದಿಲ್ಲ. ಇವರು ಅರಿಕೆ ಮಾಡುವಾಗಲೆಲ್ಲಾ ತನ್ನ ಅರಿಕೆಗೆ ಒಂದು ನೆಪವನ್ನು ಸೇರಿಸುತ್ತಾನೆ; ಮತ್ತು ತನ್ನ ಕಾರ್ಯಗಳು ವ್ಯತಿರಿಕ್ತವಾಗಿರುವುದರಿಂದ ಆತನನ್ನು ಅಪರಾಧಗಳಿಗಾಗಿ ಗದರಿಸುವಾಗ ತಾನು ಹೀಗೆ ಹಾಗೆ ಮಾಡಿದನೆಂಬದಾಗಿ ತಿಳಿಸುತ್ತಾನೆ.LI 34.3

    ದೇವರಿಂದ ನಿÉೀಧಿಸಲ್ಪಟ್ಟ ಹಣ್ಣನ್ನು ತಿಂದ ಅದಮನೂ ಹವ್ವಳೂ ಭೀತಿಯಿಂದಲೂ ನಾಚಿಕೆಯಿಂದಲೂ ಕೂಡಿದವರಾದರು. ತಮ್ಮ ಪಾಪಕ್ಕೆ ನೆವವನ್ನು ಹೇಳಿ ಭಯಂಕರವಾದ ಮರಣದಿಂದ ಪಾರಾಗುವುದು ಹೇಗೆ ಎಂದು ಎಲ್ಲಕ್ಕಿಂತಲೂ ವೊದಲು ಯೋಚಿಸಿದರು. ದೇವರು ಅದಮನನ್ನು ಆತನ ಪಾಪಗಳ ವಿಚಾರ ಕೇಳಿದಾಗ ಸ್ವಲ್ಪ ತಪ್ಪನ್ನು ದೇವರ ಮೇಲೂ, ಸ್ವಲ್ಪ ತಪ್ಪನ್ನು ತನ್ನ ಜೊತೆಯ ಸ್ತ್ರೀ ಮೇಲೂ ಹೇಳಿದನು. “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಸ್ತ್ರೀಯು ಆ ಮರದ ಹಣ್ಣನ್ನು ನನಗೆ ಕೊಟ್ಟಳು; ನಾನೂ ತಿಂದೆನು ಎಂದು ಹೇಳಿದನು. ಯೆಹೋವ ದೇವರು ಸ್ತ್ರೀಯನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಸ್ತ್ರೀಯು ಸರ್ಪವು ನನ್ನನ್ನು ವಂಚಿಸಿತು, ನಾನು ತಿಂದೆನು” ಎಂದು ಉತ್ತರ ಕೊಟ್ಟಳು. ಸರ್ಪವನ್ನು ಏತಕ್ಕೆ ಮಾಡಿದೆ? ಅದು ಏಡ ತೋಟದೊಳಕ್ಕೆ ಏತಕ್ಕೆ ಬಂದಿತು? ಎಂಬೀ ಪ್ರಶ್ನೆಗಳು ಹವ್ವಳ ಉತ್ತದಲ್ಲಿ ಕಂಡು ಬರುವ ಪ್ರಶ್ನೆಗಳಾಗಿವೆ ಎಂದು ನಮಗೆ ಕಂಡುಬರುವುದು. ಹವ್ವಳು ತನ್ನ ಪಾಪಕ್ಕೆ ದೇವರನ್ನು ಜವಾಬ್ದಾರನನ್ನಾಗಿ ಮಾಡಲು ಯತ್ನಿಸಿದಳು. ನಾನು ನಿರ್ದೋಷಿಯೆಂದು ಹೇಳುವ ಆತ್ಮಗೌರವದ ಜಂಭವು ಸುಳ್ಳಿನ ತಂದೆಯಾದವನಿಂದ ಪ್ರಾರಂಭವಾಗಿ ಇಂದಿನವರೆಗೂ ಅದಮನ ಮಕ್ಕಳ ಸಂತಾನದಲ್ಲಿ ಉಳಿದಿದೆ. ಈ ವಿಧವಾದ ಅರಿಕೆಗಳು ದೇವಾತ್ಮನ ನಡೆಯಿಸುವಿಕೆಯಿಂದುಂಟಾದುವಲ್ಲ; ಮತ್ತು ಇವು ದೈವಸ್ವೀಕಾರಕ್ಕೆ ಯೋಗ್ಯವಾದವುಗಳೂ ಅಲ್ಲ. ನಿಜವಾದ ಅರಿಕೆಯು ಯಾವುದೆಂದರೆ - ಮನುÀ್ಯನು ತಾನು ಮಾಡಿದ ಅಪರಾಧಗಳನ್ನು ಯಾವ ಕಪಟ ಮತ್ತು ವೋಸವಿಲ್ಲದೆ ತನ್ನ ಮೇಲೆ ಆರೋಪ ಮಾಡಿಕೊಳ್ಳುವುದೇ ನಿಜವಾದ ಅರಿಕೆಯಾಗಿದೆ. ಮುಖವನ್ನು ಮೇಲಕ್ಕೆ ಎತ್ತಲು ಧೈರ್ಯಗೊಳ್ಳದ ಸುಂಕದವನು “ದೇವರೇ ಪಾಪಿಯಾದ ನನ್ನನ್ನು ಕರುಣಿಸು” ಎಂದು ಹೇಳಿದಂತೆ ಯಾರು ನಿಜವಾದ ಅರಿಕೆ ಮಾಡುವರೋ ಅವರು ನಿರಪರಾಧಿಗಳೆಂದು ತೀರ್ಮಾನಿಸಲ್ಪಡುವರು; ಯಾಕಂದರೆ ತನ್ನ ರಕ್ತದ ಮೂಲಕ ಮಾನಸಾಂತರದಿಂದ ರೂಪಾಂತರ ಹೊಂದಿದುದಕ್ಕೆ ನಿದರ್ಶನಗಳು ದೊರೆಯುತ್ತವೆ. ಸ್ವನೀತಿಯನ್ನಾಶ್ರಯಿಸಿರುವುದೂ, ನೆವಗಳನ್ನು ಹೇಳುವುದೂ ಆ ನಿದರ್ಶನಗಳಲ್ಲಿ ಕಂಡು ಬರುವುದಿಲ್ಲ. ಶ್ರೀ ಪೌಲನು ಸಹ ತನ್ನ ಅಪರಾಧಗಳನ್ನು ಮುಚ್ಚಿಡದೆ ಅವುಗಳ ನೈಜರೂಪದಲ್ಲಿ ಒಪ್ಪಿಕೊಳ್ಳುತ್ತಾನೆ. “ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇಡಿಸಿ ಅವರಿಗೆ ಮರಣದ ತೀರ್ಪಾದಾಗ ನನ್ನ ಸಮ್ಮತಿಯನ್ನು ಸೂಚಿಸಿದೆನು. ಎಲ್ಲಾ ಸಭಾಮಂದಿರಗಳಲ್ಲಿಯೂ ನಾನು ಅನೇಕಾವರ್ತಿ ಅವರನ್ನು ದಂಡಿಸಿ ಅವರಿಂದ ದೂÀಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು” “ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವುದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವ ಅಂಗೀಕಾರಕ್ಕೆ ಯೋಗ್ಯ ವಾದದ್ದಾಗಿಯೂ ಅದ; ಆ ಪಾಪಿಗಳಲ್ಲಿ ನಾನೇ ಮುಖ್ಯನು.”LI 34.4

    ಯಥಾರ್ಥವಾಗಿಯೂ ಪಶ್ಚಾತ್ತಾಪ ಪಟ್ಟು ದೈನ್ಯತೆಯಿಂದ ಮುರಿದಂಥಾ ಹೃದಯವು ದೇವರ ನೈಜಪ್ರೀತಿಯನ್ನೂ, ಕಲ್ವಾರಿಯಲ್ಲಿ ಬಲಿಯಾದ ಕ್ರಿಸ್ತನ ಪ್ರೀತಿಯನ್ನೂ ಸ್ವಲ್ಪ ಮಟ್ಟಿಗಾದರೂ ಗ್ರಹಿಸುವುದು. ಒಬ್ಬ ಮಗನು ಜವಾದ ಮಾನಸಾಂತರದಿಂದ ತನ್ನ ತಂದೆಯ ಬಳಿಗೆ ಬಂದು ತನ್ನ ಅಪರಾಧಗಳನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ನಿಜವಾದ ಮಾನಸಾಂತರ ಪಡುವವರೆಲ್ಲರೂ ದೇವರ ಬಳಿಗೆ ಬಂದು ತಮ್ಮ ಪಾಪಗಳನ್ನು ಅರಿಕೆ ಮಾಡಿಕೊಳ್ಳುವರು. ಮತ್ತು ಸತ್ಯವೇದವು ಈ ರೀತಿಯಲ್ಲಿ ಹೇಳುತ್ತದೆ - “ಆತನು ನಂಬಿಗಸ್ತನೂ ನೀತಿವಂತನೂ ಆಗಿರುವುದರಿಂದ ನಮ್ಮನ್ನು ಸಕಲ ಪಾಪಗಳಿಂದ ಬಿಡಿಸಿ ನೀತಿವಂತರನ್ನಾಗಿ ಮಾಡುವನು.”LI 36.1

    Larger font
    Smaller font
    Copy
    Print
    Contents