Loading...
Larger font
Smaller font
Copy
Print
Contents
 • Results
 • Related
 • Featured
No results found for: "".
 • Weighted Relevancy
 • Content Sequence
 • Relevancy
 • Earliest First
 • Latest First
  Larger font
  Smaller font
  Copy
  Print
  Contents

  ನಂಬಿಕೆ ಮತ್ತು ಪುತ್ರ ಸ್ವೀಕಾರ

  ನಿನ್ನ ಮನಸ್ಸಾಕ್ಷಿಯು ಪವಿತ್ರಾತ್ಮನಿಂದ ಎಚ್ಚರಿಸಲ್ಪಟ್ಟಿರುವುದರಿಂದಲೂ ವಿವೇಕದಿಂದ ಸ್ವಲ್ಪಮಟ್ಟಿಗಾದರೂ ಪಾಪದ ಕೆಟ್ಟತನವನ್ನೂ ಅದರ ಶಕ್ತಿಯನ್ನೂ ಅದರಿಂದುಂಟಾಗುವ ತೊಂದರೆಯನ್ನೂ ನೀನು ಗ್ರಹಿಸಿಕೊಂಡಿರುತ್ತೀ, ಮತ್ತು ಅದನ್ನು ದ್ವೇಷಿಸುತ್ತೀ. ಪಾಪವು ದೇವರಿಂದ ದೂರ ಮಾಡಿದೆಯೆಂದೂ ನೀನು ಅದಕ್ಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತೀಯೋ ಅÀ್ಟರಮಟ್ಟಿಗೂ ನಿನಗೆ ತಪ್ಪಿಸಿಕೊಳ್ಳಲು ತ್ರಾಣವಿಲ್ಲವೆಂದು ಮನವರಿಕೆ ಮಾಡಿಕೊಳ್ಳುವೆ. ನಿನ್ನ ಉದ್ದೇಶಗಳು ಅಪವಿತ್ರವಾದವುಗಳು, ಹೃದಯವು ಕೊಳಕಾಗಿದೆ, ಜೀವಮಾನವು ಸ್ವಾರ್ಥದಿಂದಲೂ ಪಾಪದಿಂದಲೂ ಕೂಡಿರುವುದು, ನೀನು ಕ್ಷಮೆಯನ್ನು ಹೊಂದಿ ಶುದ್ಧನಾಗಿ ಪಾಪದಿಂದ ಬಿಡುಗಡೆಯಾಗಲು ಇÀ್ಟಪಡುವಿಯಾದರೆ ದೇವರ ಸಂಗಡ ಅನ್ಯೋನ್ಯತೆಯನ್ನು ಪಡೆದಕೊಳ್ಳುವುದಕ್ಕೂ ಆತನ ಸಾರೂಪ್ಯವನ್ನು ಮುಟ್ಟುವುದಕ್ಕೂ ಏನು ಮಾಡುವೆ?LI 42.1

  ದೈವಪ್ರೇಮ, ಶಾಂತಿ, ಮತ್ತು ಕ್ಷಮಾಗುಣಗಳೇ ಬೇಕಾದವು. ಹಣದಿಂದಾಗಲಿ ಬುದ್ಧಿಜ್ಞಾನಗಳಿಂದಾಗಲಿ ಇವು ನಿನಗೆ ದೊರಕಲಾರವು. ಸ್ವಶಕ್ತಿಯಿಂದ ಇವುಗಳನ್ನು ಪಡೆಯುವ ಭರವಸೆಯೂ ನಿನಗಿಲ್ಲ. ಆದರೆ ದೇವರು “ಈ ವರ ವನ್ನು ಹಣವಿಲ್ಲದೆ ಯಾವ ಕ್ರಯವನ್ನೂ ಕೇಳದೆ” ನಿನಗೆ ಕೊಡುವನು. ನೀನು ಕೈಚಾಚಿ ಸ್ವೀಕಾರ ಮಾಡಿದರೆ ಅದು ನಿನ್ನದಾಗುವುದು. ಕರ್ತನು ಹೀಗೆ ಹೇಳುತ್ತಾನೆ - “ನಿಮ್ಮ ಪಾಪಗಳು ಕಡುಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು ಕಿರಿಮಂಜಿ ಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು.”LI 42.2

  “ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು.”LI 43.1

  ನೀವು ನಿಮ್ಮ ಪಾಪಗಳನ್ನು ಒಪ್ಪಿಕೊಂಡಿದ್ದಿರಿ, ಅವುಗಳನ್ನು ನಿಮ್ಮ ಹೃದಯಗಳಿಂದ ದೂರಮಾಡಿರಿ. ನೀವು ನಿಮ್ಮನ್ನು ದೇವರಿಗೆ ಒಪ್ಪಿಸಲು ತೀರ್ಮಾನ ಮಾಡಿಕೊಂಡಿದ್ದಿರಿ; ನೀವು ಈಗ ಆತನ ಬಳಿಗೆ ಬಂದು ನಿಮ್ಮ ಪಾಪಗಳನ್ನು ಕ್ಷಮಿಸುವಂತೆಯೂ, ನಿಮಗೆ ಹೊಸ ಹೃದಯವನ್ನು ಕೊಡುವಂತೆಯೂ ಪ್ರಾರ್ಥಿಸಿರಿ. ಆತನು ನಿಮ್ಮನ್ನು ಶುದ್ಧ ಮಾಡಬಲ್ಲನೆಂದು ನಂಬಿರಿ. ಯಾತಕ್ಕಂದರೆ ಆತನು ವಾಗ್ದಾನ ಮಾಡಿರುತ್ತಾನೆ. ಕ್ರಿಸ್ತನು ಭೂಲೋಕದಲ್ಲಿದ್ದಾಗ ಈ ಸತ್ಯಾಂಶವನ್ನು ನಮಗೆ ಬೋಧಿಸಿದನು. ಆತನು ವಾಗ್ದಾನದ ವರಗಳನ್ನು ದಯಪಾಲಿಸುತ್ತಾನೆಂದು ನಾವು ನಂಬಬೇಕು. ಆಗ ಆತನು ದಯವಿಟ್ಟು ಕೊಡುವ ವರವು ನಮ್ಮದಾಗುವುದು.LI 43.2

  ಖಾಯಿಲೆಯಾದವರನ್ನು ಅವರಲ್ಲಿ ನಂಬಿಕೆ ಹುಟ್ಟಿದುದರಿಂದಲೇ ಕ್ರಿಸ್ತನು ಗುಣಪಡಿಸಿದನು. ನಂಬಿಕೆಯ ಮೂಲಕವೇ ಪಾಪಕ್ಷಮೆಯನ್ನು ಅವರು ಹೊಂದಬಹುದೆಂಬುದನ್ನು ಆತನು ಅವರಿಗೆ ತೋರಿಸಿದನು. ಪಾಶ್ರ್ವವಾಯುರೋಗಿಯನ್ನು ವಾಸಿಮಾಡಿದುದರಲ್ಲಿ ಈ ಶಕ್ತಿಯು ಕಂಡುಬಂದಿತು. “ಪಾಪಗಳನ್ನು ಕ್ಷಮಿಸಿ ಬಿಡುವುದಕ್ಕೆ ಮನುÀ್ಯ ಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿ ಆ ಪಾಶ್ರ್ವವಾಯುರೋಗಿಯನ್ನು ನೋಡಿ “ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ” ಅಂದನು. ಅಪೋಸ್ತಲನಾದ ಶ್ರೀ ಯೋಹಾನನು ಸ್ವಾಮಿಯ ಅದ್ಭುತಗಳನ್ನು ನೋಡಿ ಹೀಗೆ ಬರಿಯುತ್ತಾನೆ - “ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕ ಜೀವವನ್ನು ಪಡೆದುಕೊಳ್ಳುವಂತೆಯೂ ಇÉ್ಟಲ್ಲಾ ಬರೆದಿದೆ” ಖಾಯಿಲೆಯವರನ್ನು ವಾಸಿ ಮಾಡಿದನು ಎಂದು ಸತ್ಯವೇದದಲ್ಲಿ ಬರೆದಿರುವುದನ್ನು ಸಾಮಾನ್ಯ ರೂಪದಲ್ಲಿ ನೋಡಿದರೆ - ಆತನಲ್ಲಿ ನಂಬಿಕೆಯಿಟ್ಟು, ಪಾಪದಿಂದ ಪಾರಾಗುವುದು ಹೇಗೆ ಎಂಬುದನ್ನು ಸ್ವಲ್ಪ ಮಟ್ಟಿಗಾದರೂ ತಿಳಿದುಕೊಳ್ಳಬಹುದು. ಬೇತ್ಸಥಾ ಎಂಬ ಕೊಳದ ಬಳಿ ಒಬ್ಬ ಪಾಶ್ರ್ವವಾಯು ರೋಗಿಯನ್ನು ಯೇಸುಸ್ವಾಮಿಯು ಗುಣಪಡಿಸಿದ ವಿಚಾರವನ್ನು ನೋಡುವ, ಸಹಾಯಶೂನ್ಯನೂ, ನಿರ್ಭಾಗ್ಯನೂ ಆದ ಆ ರೋಗಿಯು ಅಲ್ಲಿ ಮುವತ್ತೆಂಟು ವರುÀಗಳಿಂದಲೂ ಬಿದ್ದುಕೊಂಡಿದ್ದನು. ಅವನು ನಡೆದಾಡಲಾರದೆ ಅಲ್ಲಿ ಬಿದ್ದಿದ್ದನು. ಹೀಗಿದ್ದರೂ ಸ್ವಾಮಿಯು ಅವನಿಗೆ “ಎದ್ದು ನಿನ್ನ ಹಾಗೆಯನ್ನು ಹೊತ್ತುಕೊಂಡು ನಡೆ” ಎಂದನು. ಆ ರೋಗಿಯು ಸ್ವಾಮಿಗೆ “ನೀನು ನನ್ನನ್ನು ವಾಸಿಮಾಡಿದರೆ ನಾನು ನಡೆಯುತ್ತೇನೆ” ಎಂದು ಹೇಳಬಹುದಾಗಿತ್ತು; ಆದರೆ ಆ ರೋಗಿಯು ಹಾಗೆ ಹೇಳದೆ ಆತನನ್ನು ಪೂರ್ಣವಾಗಿ ನಂಬಿದನು. ಮತ್ತು ನಡೆಯಲು ತಕ್ಷಣ ಯತ್ನಿಸಿದನು; ನಡೆಯಬೇಕಂಬ ಮನಸ್ಸನ್ನು ಮಾಡಿದನು. ಕ್ರಿಸ್ತನ ಮಾತಿನಂತೆ ಆತನು ನಂಬಿ ನಡೆದುದರಿಂದ ದೇವರ ಆತನಿಗೆ ಶಕ್ತಿಯನ್ನು ಕೊಟ್ಟನು. ಆತನ ರೋಗವೂ ವಾಸಿಯಾಯಿತು.LI 43.3

  ಇದರಂತೆಯೇ ನೀನು ಒಬ್ಬ ಪಾಪಾತ್ಮ, ಅಪರಾಧಿ, ನಿನ್ನ ಪಾಪಗಳಿಗೆ ನೀನೇ ಈಡುಕೊಡಲಾರೆ; ನಿನ್ನ ಹೃದಯವನ್ನು ನೀನೇ ಬದಲಾಯಿಸಿ ಕೊಳ್ಳಲಾರೆ ಮತ್ತು ನಿನ್ನನ್ನು ನೀನೇ ಶುದ್ಧ ಮಾಡಿಕೊಳ್ಳಲಾರೆ; ಆದರೆ ದೇವರು ತಾನು ಇದನ್ನೆಲ್ಲಾ ನಿನಗಾಗಿ ಕ್ರಿಸ್ತನ ಮೂಲಕ ಮಾಡುತ್ತಾನೆಂದು ವಾಗ್ದಾನ ಮಾಡಿದ್ದಾನೆ. ನೀನು ಆ ವಾಗ್ದಾನವನ್ನು ನಂಬು. ನಿನ್ನ ಪಾಪಗಳನ್ನು ಒಪ್ಪಿಕೊ, ನಿನ್ನನ್ನು ಆತನಿಗೆ ಒಪ್ಪಿಸು, ಆತನು ನಿನ್ನಲ್ಲಿ ಜೀವಿಸಲು ನೀನು ಮನಸ್ಸು ಮಾಡು, ನೀನು ಇದರ ವಿಚಾರ ಎÀ್ಟು ಸತ್ಯಪರನಾಗಿರುತ್ತೀಯೋ ಅÀ್ಟರಮಟ್ಟಿಗೂ ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆಂಬುದನ್ನು ನಂಬು. ದೇವರ ವಾಗ್ದಾನದಲ್ಲಿ ನಿನಗೆ ನಂಬಿಕೆಯಿದ್ದರೆ ಈಗಲೇ ನೀನು ಆತನಿಂದ ಕ್ಷಮಾಪಣೆಯನ್ನೂ, ಪರಿಶುದ್ಧತ್ವವನ್ನೂ ಹೊಂದಿರುವಿ ಎಂದು ನಂಬು; ಕ್ರಿಸ್ತನನ್ನು ನಂಬಿದ ಪಾಶ್ರ್ವವಾಯು ರೋಗಿಗೆ ಆತನು ವಾಸಿಯಾದುದಕ್ಕೆ ನಿದರ್ಶನವಾಗಿ ಆತನಿಗೆ ನಡೆಯಬಹುದಾದ ಶಕ್ತಿಯನ್ನು ಕೊಟ್ಟಂತೆ ದೇವರು ಈಗಲೂ ನಿನ್ನ ಸ್ಥಿತಿಗೆ ನಿದರ್ಶನ ಕೊಡುವವನಾಗಿದ್ದಾನೆ.LI 44.1

  ಸ್ವಸ್ಥವಾಯಿತೆಂದು ನಿನ್ನ ಮನಸ್ಸಿಗೆ ತಾಕುವವರೆಗೆ ಕಾದಿರಬೇಡ; ಆದರೆ ಹೀಗೆ ಹೇಳು “ನಾನು ಸ್ವಾಮಿಯ ಮಾತನ್ನು ನಂಬುತ್ತೇನೆ. ಆ ಮಾತು ನನ್ನ ಮನಕ್ಕೆ ತಾಕಿದುದರಿಂದಲ್ಲ, ಆದರೆ ದೇವರು ಹಾಗೆ ವಾಗ್ದಾನ ಮಾಡಿರುವುದರಿಂದಲೇ ಹಾಗೆ ನೆರವೇರುತ್ತದೆ.”LI 44.2

  ಯೇಸು ಈ ಕಾರಣದಿಂದ ಹೇಳಿರುವ ವಾಕ್ಯವಿದು - ಆದಕಾರಣ ನೀವು ಪ್ರಾರ್ಥನೆಯಲ್ಲಿ ಏನೇನು ಬೇಕೆಂದು ಕೇಳಿಕೊಳ್ಳುವಿರೋ ಅದನ್ನು ಹೊಂದಿದ್ದೇವೆಂದು ನಂಬಿರಿ; ಅದು ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ.1 ಈ ವಾಗ್ದಾನಕ್ಕೆ ಒಂದು ಶಕ್ತಿಯು ಇರುವುದಲ್ಲವೆ? ಆ ಶಕ್ತಿಯು ಯಾವುದಂದರೆ -- ನಾವು ದೇವರ ಚಿತ್ತಾನುಸಾರ ಪ್ರಾರ್ಥಿಸುವುದೇ ಆ ಶಕ್ತಿಯಾಗಿದೆ. ಆದರೆ ದೇವರ ಚಿತ್ತವು ಹೀಗಿದೆ --- ನಾವು ನಮ್ಮ ಪಾಪಗಳನ್ನು ಬಿಟ್ಟು ಶುದ್ಧರಾಗಬೇಕು; ನಾವು ಆತನ ಮಕ್ಕಳಾಗಿ ಶುದ್ಧ ಜೀವಮಾನದಲ್ಲಿ ನಡೆಯುವವರಾಗಬೇಕು; ಈ ವರಗಳಿಗಾಗಿ ನಾವು ದೇವರನ್ನು ಪ್ರಾರ್ಥಿಸಿ, ಹೊಂದಿರುತ್ತೇವೆಂದು ನಂಬುವವರಾಗಬೇಕು. ದೇವರಿಂದ ಈ ವರಗಳು ನಮಗೆ ದೊರೆತಿರುವುವೆಂದು ನಾವು ಆತನಿಗೆ ನಮ್ಮ ಕೃತಜ್ಞತೆಯ ವಂದನೆಗಳನ್ನು ಸಲ್ಲಿಸೋಣ. ನಾವು ಕ್ರಿಸ್ತನ ಬಳಿಯನ್ನು ಸೇರಿ ಆತನಿಂದ ಪಾಪಪರಿಹಾರವನ್ನೂ, ಶುದ್ಧತ್ವವನ್ನೂ ಹೊಂದಿ, ನಾಚಿಕೆ ವ್ಯಸನಗಳಿಲ್ಲದೆ ಆತನ ಧರ್ಮಶಾಸ್ತ್ರದ ಎದುರಿಗೆ ನಿಲ್ಲುವುದು ನಮ್ಮ ಹಕ್ಕಾಗಿರುವುದು. “ಆದುದರಿಂದ ಕ್ರಿಸ್ತಯೇಸುವಿನಲ್ಲಿರುವವರಿಗೆ ಅಪರಾಧ ನಿರ್ಣಯವು ಈಗ ಇಲ್ಲವೇ ಇಲ್ಲ.” ಅವರು ಮಾಂಸಾಧೀನರಾಗಿ ನಡೆಯದೆ ಆತ್ಮಾಧೀನರಾಗಿ ನಡೆಯುವರು.LI 45.1

  ಇನ್ನು ಮುಂದೆ ನೀವು ನಿಮ್ಮವರಲ್ಲ, ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು. “ನಿಮ್ಮ ಹಿರಿಯರು ಕಲಿಸಿಕೊಟ್ಟ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ಬೆಳ್ಳಿ ಬಂಗಾರ ವೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ. ಪೂರ್ಣಾಂಗವಾದ ನಿÀ್ಕಳಂಕ ಯಜ್ಞದ ಕುರಿಯ ರಕ್ತದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ಬಲ್ಲಿರಲ್ಲವೇ? ಆತನು ಜಗದುತ್ಪತ್ತಿಗೆ ವೊದಲೇ ಗೊತ್ತು ಮಾಡಲ್ಪಟ್ಟು ಅಂತ್ಯಕಾಲದಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.” ನೀವು ನಂಬುವ ಮಾತ್ರದಿಂದಲೇ ಪವಿತ್ರಾತ್ಮನು ನಿಮ್ಮನ್ನು ನೂತನ ಸೃಷ್ಟಿಯನ್ನಾಗಿ ಮಾಡುವನು. ನೀವು ದೈವಕುಟುಂಬಕ್ಕೆ ಸೇರಿರುತ್ತೀರಿ; ನಿಮ್ಮನ್ನು ದೇವರು ತನ್ನ ಮಗನಂತೆ ಪ್ರೀತಿಸುತ್ತಾನೆ. ನೀನು ಈಗ ನಿನ್ನನ್ನು ಕ್ರಿಸ್ತನಿಗೆ ಒಪ್ಪಿಸಿಕೊಟ್ಟಿರುವುದರಿಂದ, ಮತ್ತೆ ನೀನು ಹಿಮ್ಮುಖನಾಗದೇ, ದಿನದಿನವೂ “ನಾನು ಕ್ರಿಸ್ತನವನಾಗಿದ್ದೇನೆ, ಆತನಿಗೆ ನನ್ನನ್ನೇ ಒಪ್ಪಿಸಿಕೊಟ್ಟಿದ್ದೇನೆ” ಎಂದು ಹೇಳು. ಆತನು ನಿನಗೆ ತನ್ನ ಆತ್ಮವನ್ನು ಕೊಟ್ಟು ಕರುಣಾ ಮಾರ್ಗದಲ್ಲಿ ನಡೆಯಿಸಲು ಪ್ರಾರ್ಥಿಸು. ನಿನ್ನನ್ನು ಆತನಿಗೆ ಒಪ್ಪಿಸಿಕೊಟ್ಟದ್ದರಿಂದ ನೀನು ಆತನ ಮಗನಾಗಿದ್ದೀ, ನೀನು ಆತನಲ್ಲಿ ಜೀವಿಸುತ್ತಿರಬೇಕು. ಈ ಕಾರಣದಿಂದ ಪೌಲನು “ನೀವು ಕರ್ತನಾದ ಯೇಸುಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದು ಕೊಳ್ಳಿರಿ” ಎಂದು ಹೇಳುತ್ತಾನೆ.LI 45.2

  ತಾವು ಒಂದು ಪರೀಕ್ಷಾವಧಿಯಲ್ಲಿರುವರೆಂದೂ, ಆತನ ಆಶೀರ್ವಾದ ಗಳನ್ನು ಪಡೆಯುವ ವೊದಲು ತಮ್ಮ ನಡತೆಯು ಮಾರ್ಪಾಟಾಗಿದೆ ಎಂಬುದಕ್ಕೆ ತಾವು ನಿದರ್ಶನಗಳನ್ನು ಕೊಡಬೇಕೆಂದೂ ಕೆಲವರು ಯೋಚಿಸುತ್ತಾರೆ; ಆದರೆ ಅವರು ಈಗಲೇ ದೇವರ ಆಶೀರ್ವಾದಗಳನ್ನು ಕೇಳಬಹುದು, ಅವರಿಗೆ ಆತನ ಕರುಣೆಯೂ, ಆತನ ಆತ್ಮವೂ ವೊದಲು ಅವರ ರೋಗಗಳನ್ನು ಪರಿಹರಿಸಬೇಕು; ಇಲ್ಲದಿದ್ದರೆ ಅವರು ಶೋಧನೆಗಳನ್ನು ಎದುರಿಸಲಾರರು. ನಾವಿರುವ ಸ್ಥಿತಿಯಲ್ಲಿಯೇ ಕ್ರಿಸ್ತನು ನಮ್ಮ ಬಳಿಗೆ ಬರಲು ಇÀ್ಟಪಡುತ್ತಾನೆ. ನಾವು ಪಾಪಾತ್ಮರಾಗಿಯೂ, ಸಹಾಯಶೂನ್ಯರಾಗಿಯೂ ಇರಬಹುದು, ಅಥವಾ ಮತ್ತೊಬ್ಬರ ಮೇಲೆ ಅತುಕೊಂಡವರಾಗಿರಬಹುದು, ನಮ್ಮ ಬಲಹೀನತೆ, ತಿಳಿಗೇಡಿತನ ಮತ್ತು ಪಾಪಗಳೊಂದಿಗೆ ನಾವು ಆತನ ಬಳಿ ಸೇರಿ ಆತನ ಅಡಿದಾವರೆಗಳನ್ನು ಆಶ್ರಯಿಸಿ, ಮಾನಸಾಂತರದಿಂದ ಆತನಿಗೆ ನಮ್ಮನ್ನು ಒಪ್ಪಿಸಿಕೊಡುವುದಾದರೆ ತನ್ನ ಮಹಿಮಾಸ್ತಗಳಿಂದ ನಮ್ಮನ್ನು ಆಶೀರ್ವದಿಸುತ್ತಾನೆ. ಮತ್ತು ಶುದ್ಧೀಕರಿಸುತ್ತಾನೆ.LI 46.1

  ಕ್ರಿಸ್ತನು ತಾನೇ ನಮ್ಮನ್ನು ಕ್ಷಮಿಸುತ್ತಾನೆಂಬುದನ್ನು ಅನೇಕರು ನಂಬುವುದಿಲ್ಲ. ಸಾವಿರಾರು ಜನರು ಈ ವಿಚಾರ ತಪ್ಪು ಅಭಿಪ್ರಾಯವನ್ನು ಮಾಡಿಕೊಂಡಿದ್ದಾರೆ. ಇವರು ದೇವರ ಮಾತುಗಳನ್ನು ನಂಬುವುದಿಲ್ಲ. ಎಲ್ಲಾ ಪಾಪಗಳಿಗೂ ಪ್ರತಿಫಲವಿಲ್ಲದೆಯೇ ಪಾಪಕ್ಷಮೆಯು ದೊರಕುತ್ತದೆಂಬುದನ್ನು ದೇವರ ಶರತ್ತುಗಳನ್ನು ಒಪ್ಪುವವರೆಲ್ಲರೂ ಮನದಟ್ಟು ಮಾಡಿಕೊಳ್ಳಬೇಕಾಗಿದೆ. ದೇವರ ವಾಗ್ದಾನಗಳು ನಮಗೆ ದೊರೆಯುವುದಿಲ್ಲವೆಂಬ ಸಂಶಯವನ್ನು ವೊಟ್ಟ ವೊದಲು ನಾವು ತ್ಯಜಿಸಬೇಕು. ಕೃಪೆಯೂ ಬಲವೂ ಕ್ರಿಸ್ತನಿಂದ ನಮಗೆ ಸಿದ್ಧ ಮಾಡಲ್ಪಟ್ಟಿದೆ. ಊಳಿಗದ ದೇವದೂತರನ್ನು ನಂಬುವವರಿಗೆಲ್ಲಾ ಇವು ದೊರಕುತ್ತವೆ. ಬಲವೂ ಪರಿಶುದ್ಧತೆಯೂ ಮತ್ತು ನೀತಿಯೂ ಕ್ರಿಸ್ತನಿಂದ ದೊರಕುವುದಿಲ್ಲ ಎಂದು ಹೇಳುವ ಪಾಪಾತ್ಮರಿಗಿಂತಲೂ ಬೇರೆ ಪಾಪಾತ್ಮರಿರುವುದಿಲ್ಲ. ಪಾಪದ ಕಲೆಯಿಂದ ಉಂಟಾದ ಅವರ ಮಲಿನ ವಸ್ತ್ರಗಳನ್ನು ತೆಗೆದು ತನ್ನ ಪರಿಶುದ್ಧ ನೀತಿಯ ವಸ್ತ್ರವನ್ನು ಹೊದಿಸಲು ಆತನು ಸದಾ ಸಿದ್ಧನಾಗಿರುತ್ತಾನೆ. ಇವರು ಸಾಯದೆ ನಿತ್ಯಜೀವವನ್ನು ಪಡೆಯಬೇಕೆÀಂದು ಆತನು ಅಪೇಕ್ಷಿಸುತ್ತಾನೆ.LI 46.2

  ಪರಿಮಿತಿಯ ಒಂದು ಸ್ಥಿತಿಗೆ ಒಳಪಟ್ಟ ನಾವು ಒಬ್ಬರ ಸಂಗಡಲೊಬ್ಬರು ವರ್ತಿಸುವಂತೆ ದೇವರು ನವ್ಮೊಡನೆ ವರ್ತಿಸುವುದಿಲ್ಲ. ಆತನ ಯೋಚನೆಗಳು ಕೃಪೆಯಿಂದಲೂ, ದಯೆಯಿಂದಲೂ ಮತ್ತು ಕರುಣೆಯಿಂದಲೂ ಕೂಡಿರುತ್ತವೆ. ಯೆಹೋವನು ಈ ರೀತಿಯಲ್ಲಿ ಹೇಳುವವನಾಗಿದ್ದಾನೆ-- “ದುÀ್ಟನು ತನ್ನ ದುಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಯನ್ನು ತ್ಯಜಿಸಲಿ, ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವರನ್ನು ಕರುಣಿಸುವವನು; ನಮ್ಮ ದೇವರನ್ನು ಆಶ್ರಿಯಿಸಲಿ, ಆತನು ಮಹಾ ಕೃಪೆಯಿಂದ ಕ್ಷಮಿಸುವನು” “ನಿನ್ನ ದ್ರೋಹಗಳನ್ನು ಮಂಜಿನಂತೆ ಪರಿಹರಿಸಿದ್ದೇನೆ, ನಿನ್ನ ಪಾಪಗಳನ್ನು ವೋಡದಂತೆ ಹಾರಿಸಿದ್ದೇನೆ; ನಿನ್ನನ್ನು ವಿವೋಚಿಸಿದ್ದೇನೆ, ನನ್ನ ಕಡೆಗೆ ತಿರುಗಿಕೋ” “ಸಾಯುವವರ ಸಾವಿನಲ್ಲಿ ನನಗೆ ಸಂತೋÀವಿಲ್ಲ; ತಿರುಗಿಕೊಂಡು ಬಾಳಿರಿ; ಇದು ಕರ್ತನಾದ ಯೆಹೋವನ ನುಡಿ.” ದೇವರು ಅನುಗ್ರಹಿಸಿರುವ ಭರವಸೆಯನ್ನು ಸೈತಾನನು ನಿನ್ನಿಂದ ಅಪಹರಿಸಲು ಪ್ರಯತ್ನ ಪಡುತ್ತಾನೆ. ನಿನ್ನ ಆತ್ಮದಲ್ಲಿ ಬೇರೂರಿರುವ ನಿರೀಕ್ಷೆ ಮತ್ತು ಬೆಳಕಿನ ಒಂದೊಂದು ಅಣುವನ್ನೂ ಸೈತಾನನು ತೆಗೆದು ಹಾಕಲು ಸಿದ್ಧನಾಗಿರುತ್ತಾನೆ. ಆದರೆ ನೀನು ಇದಕ್ಕೆ ಆಸ್ಪದ ಕೊಡಬೇಡ. ಸೈತಾನನ ಮಾತಿಗೆ ಕಿವಿಗೊಡದೆ ಆತನಿಗೆ - “ನಾನು ಬದುಕಲೆಂದು ಕ್ರಿಸ್ತನು ನನಗಾಗಿ ಸತ್ತು ಜೀವಿಸುವವನಾದನು.” ಕ್ರಿಸ್ತನು ನಮ್ಮನ್ನು ಪ್ರೀತಿಸುವುದರಿಂದ ನಮ್ಮ ನಾಶನದಲ್ಲಿ ಆತನು ಎಂದಿಗೂ ಇÀ್ಟಪಡನು. ಸ್ವರ್ಗಪಿತನಿಗೆ ನನ್ನ ಮೇಲೆ ಕರುಣೆಯುಂಟು, ನಾನು ಆತನ ಪ್ರೀತಿಯನ್ನು ದುರುಪಯೋಗ ಪಡಿಸಿಕೊಂಡಿದ್ದರೂ, ಆತನ ಆಶೀರ್ವಾದವನ್ನು ಹಾಳು ಮಾಡಿಕೊಂಡಿದ್ದರೂ, ನಾನೆದ್ದು ಆತನ ಬಳಿಗೆ ಹೋಗಿ ಈ ರೀತಿ ಹೇಳಬೇಕಾಗಿದೆ - “ಅಪ್ಪಾ ಪರಲೋಕಕ್ಕೆ ವಿರೋಧವಾಗಿಯೂ, ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನ್ನಿಸಿಕೊಳ್ಳಲು ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬರಂತೆ ಮಾಡು’ ಈ ಸಾಮ್ಯದಲ್ಲಿ ತಪ್ಪಿ ಅಲೆದಾಡುವವನು ಹೇಗೆ ಸ್ವೀಕರಿಸಲ್ಪಟ್ಟನೆಂಬುದು ವರ್ಣಿತವಾಗಿದೆ. ಆ ಮಗನು ಇನ್ನೂ ಅತಿ ದೂರದಲ್ಲಿರುವಾ ಗಲೇ ತಂದೆಯು ಆತನನ್ನು ಆಶೀರ್ವದಿಸಿ ಆತನ ಮೇಲೆ ಕನಿಕರಗೊಂಡು ಓಡಿ ಆ ಮಗನನ್ನು ಅಪ್ಪಿಕೊಂಡು ಮುದ್ದಾಡಿದನು.LI 47.1

  ಕನಿಕರವನ್ನು ತೋರಿಸಿ, ಮನಸ್ಸನ್ನು ಸೆಳೆದು ಕಲಕುವ ಈ ಸಾಮ್ಯವು ಸಹ ದೇವರ ಅಮಿತವಾದ ಪ್ರೀತಿಯನ್ನು ವಿವರಿಸಲಾರದ್ದಾಗಿದೆ. ಪ್ರವಾದಿಯು ಹೀಗೆ ಹೇಳುತ್ತಾನೆ - “ನಾನು ನಿನ್ನನ್ನು ಪ್ರೀತಿಸಿರುವುದು ಶಾಶ್ವತ ಪ್ರೇಮದಿಂದಲೇ; ಆದಕಾರಣ ನಿನ್ನನ್ನು ಮಮತೆಯಿಂದ ಸೆಳೆದುಕೊಂಡಿದ್ದೇನೆ.” ಪಾಪಿಯು ತಂದೆಯ ಮನೆಯಿಂದ ದೂರನಾಗಿ, ತಂದೆಯ ಆಸ್ತಿಯನ್ನು ಹಾಳು ಮಾಡುತ್ತಿದ್ದರೂ, ತಂದೆಯ ಹೃದಯವು ಈ ಪಾಪಿಯ ವಿಚಾರದಲ್ಲಿ ಮರುಕವಾಗಿರುತ್ತದೆ. ಪಾಪಿಯ ಮನಸ್ಸಿನಲ್ಲಿರುವ ಎಚ್ಚರಿಕೆಯು ಪವಿತ್ರಾತ್ಮನ ಕರೆಯುವಿಕೆಯಾಗಿದೆ. ತಂದೆಯ ಪ್ರೀತಿಯಿಂದ ದೂರವಾಗಿರುವ ಪಾಪಿಯನ್ನು ಪವಿತ್ರಾತ್ಮನು ಹಿಡಿದು ಎಳೆತಂದು ತಂದೆಯ ಹೃದಯದ ಬಳಿಗೆ ಸೇರಿಸುತ್ತಾನೆ.LI 48.1

  ಸತ್ಯವೇದದ ಮೂಲಕ ನಿನಗಾಗಿ ಮಾಡಲ್ಪಟ್ಟ ತಂದೆಯಾದ ದೇವರ ಅಮೂಲ್ಯ ವಾಗ್ದಾನಗಳ ವಿಚಾರ ನೀನು ಸಂಶಯಗ್ರಸ್ಥನಾಗಬಹುದೋ? ಪಾಪಿಯು ತನ್ನ ಪಾಪಗಳನ್ನು ಬಿಟ್ಟು, ತಂದೆಯಾದ ದೇವರ ಬಳಿಗೆ ಬರುವ ಅಧಿಕ ಆಶೆಯನ್ನು ತೋರಿಸಿದರೆ, ಮತ್ತು ಆತನು ನಿಜ ಪಶ್ಚಾತ್ತಾಪದಿಂದ ದೇವರ ಬಳಿಗೆ ಬಂದರೆ ದೇವರು ಅಂಥವನನ್ನು ತಳ್ಳುತ್ತಾನೆಂದು ನೀನು ಸಂದೇಹ ಪಡುವಿಯಾ? ತಂದೆಯಾದ ದೇವರ ವಿಚಾರ ಒಂದು ವೇಳೆ ನೀನು ಅಂತಹ ಯೋಚನೆಯನ್ನು ಹೊಂದಿದ್ದರೆ, ಅದನ್ನು ನಿನ್ನ ಹೃದಯದಿಂದ ದೂಡಿಬಿಡು. ಈ ಬಗೆಯ ದುರಾಲೋಚನೆಗಿಂತಲೂ ಬೇರೆ ಯಾವುದೂ ನಿನ್ನ ಆತ್ಮವನ್ನು ಅಧಿಕವಾಗಿ ನೋಯಿಸಲಾರದು: ದೇವರು ಪಾಪವನ್ನು ದ್ವೇಷಿಸಿದರೂ ಪಾಪಿಯನ್ನು ಅಧಿಕವಾಗಿ ಪ್ರೀತಿಸುತ್ತಾನೆ. ಇÀ್ಟ ಪಡುವವರೆಲ್ಲರೂ ರಕ್ಷಣೆಯನ್ನು ಹೊಂದಿ, ಮಹಿಮೆಯ ರಾಜ್ಯದಲ್ಲಿ ಶಾಶ್ವತವಾದ ಆಶೀರ್ವಾದಗಳನ್ನು ಪಡೆಯಲೆಂದು ತನ್ನನ್ನು ತಾನೇ ಕ್ರಿಸ್ತನ ರೂಪದಲ್ಲಿ ಅರ್ಪಿಸಿಕೊಂಡನು. ತಾಯಿಯು ತನ್ನ ಮಗುವನ್ನು ಪ್ರೀತಿಸುವ ರೀತಿಯಲ್ಲಿ ಯೆಹೋವನು ತನ್ನವರನ್ನು ಪ್ರೀತಿಸುತ್ತಾನೆ. ಸಂದೇಹ ಪಡಬೇಡ, ಕಣ್ಣೆತ್ತಿ ನೋಡು, ಕ್ರಿಸ್ತನು ನಿನಗಾಗಿ ಪ್ರಾರ್ಥಿಸುತ್ತಾ ಇದ್ದಾನೆ. ದೇವರು ತನ್ನ ಕುಮಾರನನ್ನು ಕೊಟ್ಟುದಕ್ಕಾಗಿ ನೀನು ಆತನನ್ನು ವಂದಿಸು. ಆತನ ಮರಣದ ಫಲವು ನಿರರ್ಥಕವಾಗದ ಹಾಗೆ ಪ್ರಾರ್ಥಿಸು. ಆತ್ಮವು ನಿನ್ನನ್ನು ಕರೆಯುತ್ತಿದ್ದಾನೆ. ನಿನ್ನ ಪೂರ್ಣ ಹೃದಯದಿಂದ ಆತನ ಬಳಿಗೆ ಬಾ ಮತ್ತು ಆತನಿಂದ ಆಶೀರ್ವಾದವನ್ನು ಬೇಡಿಕೋ. ಸತ್ಯವೇದದಲ್ಲಿ ದೇವರ ಅಪರಿಮಿತ ವಾಗ್ದಾನಗಳನ್ನು ನೋಡುವಾಗ, ಅವು ಅಸಮಾನವಾದ ಪ್ರೀತಿ ಕರುಣೆಯಿಂದ ಕೂಡಿರುತ್ತವೆಂದು ನೀನು ನೆನಪು ಮಾಡಿಕೋ. ದೇವರ ಅಗಾಧವಾದ ಪ್ರೀತಿಯು ಎಣೆಯಿಲ್ಲದ ಕರುಣೆಯಿಂದ ಪಾಪಾತ್ಮನ ಕಡೆಗೆ ತಿರುಗುತ್ತಾ ಇದೆ. “ಆತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು.” ಹೌದು ದೇವರು ನಿನ್ನ ಸಹಾಯಕನೆಂದು ನಂಬು, ದೇವರು ಮನುÀ್ಯನಲ್ಲಿ ಮರಳಿ ಧರ್ಮದ ಸ್ವರೂಪವನ್ನು ಇಡಲು ಇÀ್ಟಪಡುತ್ತಾನೆ. ನೀನು ಆತನನ್ನು ಮಾನಸಾಂತರದಿಂದಲೂ ಪಾಪದ ಅರಿಕೆಯಿಂದಲೂ ಸಮೀಪಿಸುವಿಯಾದರೆ ಆತನು ಕೃಪೆಯಿಂದಲೂ ಕ್ಷಮೆಯಿಂದಲೂ ನಿನ್ನ ಬಳಿಗೆ ಬರುವನು.LI 48.2

  Larger font
  Smaller font
  Copy
  Print
  Contents