Loading...
Larger font
Smaller font
Copy
Print
Contents
  • Results
  • Related
  • Featured
No results found for: "".
  • Weighted Relevancy
  • Content Sequence
  • Relevancy
  • Earliest First
  • Latest First
    Larger font
    Smaller font
    Copy
    Print
    Contents

    ಕರ್ತನಲ್ಲಿ ಉಲ್ಲಾ ಸಿಸಿರಿ

    ದೇವರ ಮಕ್ಕಳು ಕ್ರಿಸ್ತನ ಪ್ರತಿನಿಧಿಗಳಾಗಿರಲು ಕರೆಯಲ್ಪಟ್ಟಿದ್ದಾರೆ. ಮತ್ತು ಅವರು ಕರ್ತನ ಒಳ್ಳೇತನವನ್ನೂ ಕರುಣೆಯನ್ನೂ ಇತರರಿಗೆ ತೋರಿಸಬೇಕು. ಯೇಸುಸ್ವಾಮಿಯು ದೇವರ ನೈಜಗುಣವನ್ನು ನಮಗೆ ಪ್ರಕಟಿಸಿರುವಂತೆ ಆತನ ಕರುಣೆಯನ್ನು ತಿಳಿಯದ ಜನರಿಗೆ ನಾವು ತಿಳಿಸಲು ಬದ್ಧರಾಗಿದ್ದೇವೆ. ಆತನು ಹೀಗೆ ಹೇಳಿದ್ದಾನೆ --- “ನನ್ನನ್ನು ಲೋಕಕ್ಕೆ ಕಳುಹಿಸಿಕೊಟ್ಟಂತೆ ನಾನು ಇವರನ್ನು ಲೋಕಕ್ಕೆ ಕಳುಹಿಸಿಕೊಟ್ಟೆನು. ನಾನು ಅವರಲ್ಲಿಯೂ ನೀನು ನನ್ನಲ್ಲಿಯೂ ಇರಲಾಗಿ .................ನೀನು ನನ್ನನ್ನು ಕಳುಹಿಸಿಕೊಟ್ಟಿದ್ದಿ........................... ಎಂದು ಲೋಕಕ್ಕೆ ತಿಳಿದುಬರುವುದು.” ಅಪೋಸ್ತಲವಾದ ಪೌಲನು ಕ್ರಿಸ್ತನ ಶಿÀ್ಯರಿಗೆ ಹೀಗೆ ಹೇಳುತ್ತಾನೆ --- “ಕ್ರಿಸ್ತನು ನಮ್ಮ ಕೈಯಿಂದ ಬರಿಸಿಕೊಟ್ಟ ಪತ್ರ ವಾಗಿದ್ದೀರೆಂಬುವುದು ಪ್ರತ್ಯಕ್ಷವಾಗಿಯೇ ಇದೆ. ಆ ಪತ್ರವನ್ನು ಎಲ್ಲರು ಬಲ್ಲರು.” ತನ್ನ ಮಕ್ಕಳಲ್ಲಿ ಒಬ್ಬೊಬ್ಬನ ಮೂಲಕವೂ ಕ್ರಿಸ್ತನು ಒಂದು ಪತ್ರವನ್ನು ಲೋಕಕ್ಕೆ ಕಳುಹಿಸುತ್ತಾನೆ. ನೀನು ಕ್ರಿಸ್ತನ ಹಿಂಬಾಲಕನಾಗಿದ್ದರೆ ನಿನ್ನ ಮೂಲಕವೂ ನೀನು ವಾಸವಾಗಿರುವ ಹಳ್ಳಿಗೂ ನಿನ್ನ ಕುಟುಂಬಕ್ಕೂ ನಿನ್ನ ಬೀದಿಗೂ ಒಂದು ಪತ್ರವನ್ನು ಕಳುಹಿಸುತ್ತಾನೆ. ಕ್ರಿಸ್ತನು ನಿನ್ನಲ್ಲಿ ನೆಲಸಿ, ತನ್ನನ್ನು ತಿಳಿಯದವರಿಗೆ ನಿನ್ನ ಮೂಲಕ ಮಾತನಾಡಲು ಇÀ್ಟಪಡುತ್ತಾನೆ. ಬಹುಶ: ಅವರು ಸತ್ಯವೇದವನ್ನು ಓದುವುದಿಲ್ಲ, ಅಥವಾ ಪ್ರತಿ ಪುಟದಲ್ಲಿ ಕಾಣಬರುವ ಆತನ ಮಾತನ್ನು ತಿಳಿದುಕೊಂಡಿಲ್ಲ. ನೀನು ಕ್ರಿಸ್ತನ ನಿಜವಾದ ಪ್ರತಿನಿಧಿಯಾಗಿದ್ದರೆ ನಿನ್ನ ಮೂಲಕ ಕ್ರಿಸ್ತನ ಒಳ್ಳೇತನವನ್ನು ತಿಳಿದುಕೊಂಡು ಆತನನ್ನು ಪ್ರೀತಿಸಿ ಸೇವಿಸುವವರಾಗಬಹುದು.LI 104.1

    ಕ್ರೈಸ್ತರು ಇತರರಿಗೆ ಸ್ವರ್ಗದ ದಾರಿಗೆ ಬೆಳಕನ್ನು ತೋರಿಸುವವರಾಗಿರಬೇಕು. ಅವರ ಮೂಲಕ ಇತರರಿಗೆ ಕ್ರಿಸ್ತನ ಮತ್ತು ಆತನ ಸೇವೆಯ ವಿಚಾರ ಸರಿಯಾದ ಭಾವನೆಯುಂಟಾಗುವ ರೀತಿ ಅವರ ನಡತೆಯೂ ಜೀವಮಾನವೂ ಇರಬೇಕು.LI 105.1

    ನಾವು ನಿಜವಾಗಿಯೂ ಕ್ರಿಸ್ತನ ಪ್ರತಿನಿಧಿಗಳಾಗಿದ್ದರೆ ಆತನ ಸೇವೆಯನ್ನು ಆಕರ್Àಣೀಯವಾಗಿ ಮಾಡುತ್ತೇವೆ. ನಿಜವಾಗಿಯೂ ಅದು ಹಾಗೆಯೇ ಇದೆ. ಕ್ರೈಸ್ತರು ತಮ್ಮ ಆತ್ಮಗಳಿಗೆ ವೊಬ್ಬನ್ನೂ ವ್ಯಸನವನ್ನೂ ಕೂಡಿಹಾಕಿಕೊಂಡು ಗೊಣಗಾಡುತ್ತಲೂ ದೂರುತ್ತಲೂ ಇದ್ದರೆ, ದೇವರ ಮತ್ತು ಕ್ರೈಸ್ತಜೀವಮಾನದ ವಿಚಾರ ಸುಳ್ಳಾದ ಅಭಿಪ್ರಾಯವನ್ನು ಹುಟ್ಟಿಸುವ ಪ್ರತಿನಿಧಿಗಳಾಗಿದ್ದಾರೆ. ದೇವರು ತನ್ನ ಮಕ್ಕಳು ಹರ್Àಚಿತ್ತವುಳ್ಳವರಾಗಿರ ಬೇಕೆಂದು ಇÀ್ಟಪಡುತ್ತಾನೆ. ಆದರೆ ಈ ಅಭಿಪ್ರಾಯಕ್ಕೆ ವಿರುದ್ಧವಾದ ಭಾವನೆಯನ್ನು ಅವರು ಹುಟ್ಟಿಸುತ್ತಾರೆ. ಮತ್ತು ಅವರು ಆತನ ವಿಚಾರ ತಪ್ಪಾದ ಸಾಕ್ಷಿಯನ್ನು ಕೊಡುತ್ತಾರೆ. ದೇವರ ಮಕ್ಕಳನ್ನು ಸೈತಾನನು ನಿರಾಶೆ ಮತ್ತು ಅಪನಂಬಿಕೆಗಳಲ್ಲಿ ಬೀಳಿಸಿದಾಗ ಬಹು ಸಂಭ್ರಮಪಡುತ್ತಾನೆ. ನಾವು ದೇವರ ರಕ್ಷಣಾಶಕ್ತಿಯಲ್ಲಿ ಸಂಶಯಗ್ರಸ್ತರಾದರೆ ಸೈತಾನನಿಗೆ ಮತ್ತೂ ಆನಂದವಾಗುತ್ತದೆ. ದೇವರು ತನ್ನ ಪರಿಪಾಲನೆಯಲ್ಲಿ ನಮಗೆ ಕೇಡನ್ನುಂಟು ಮಾಡುತ್ತಾನೆಂದು ನಾವು ಭಾವಿಸುವಂತೆ ಮಾಡುವುದು ಸೈತಾನನಿಗೆ ಬಲುಪ್ರೀತಿ. ಕರ್ತನು ಸಾಕಾದÀ್ಟು ಕರುಣೆ ಮತ್ತು ಕೃಪೆಯಿಂದ ಕೂಡಿಲ್ಲದವನೆಂಬ ತಪ್ಪು ಅಭಿಪ್ರಾಯವನ್ನು ಉಂಟುಮಾಡುತ್ತಾನೆ. ಕರ್ತನ ಸಂಗತಿಗಳನ್ನು ಸುಳ್ಳುಸುಳ್ಳಾಗಿ ನಮಗೆ ಪ್ರಕಟಿಸುವವನು ಆತನೆ. ಕರ್ತನ ವಿಚಾರ ತಪ್ಪು ಊಹೆಗಳಿಗೆ ಕಾರಣಕರ್ತೃ ಆತನೆ. ನಾವು ಸತ್ಯಾಂಶಗಳನ್ನು ಧ್ಯಾನಿಸದೆ, ಸೈತಾನನು ನಮಗೆ ತಪ್ಪುತಪ್ಪಾಗಿ ಹೇಳಿಕೊಡುವ ಸಂಗತಿಗಳನ್ನು ಧ್ಯಾನಿಸಿ ಕರ್ತನನ್ನು ನಂಬದೆ ಗುಣಮಟ್ಟ ಆತನಿಗೆ ಅವಮಾನವನ್ನು ತರುತ್ತಿದ್ದೇವೆ. ಸೈತಾನನು ನಮ್ಮ ಮತದ (ಭಕ್ತಿಯ) ಜೀವವನ್ನು ವ್ಯಸನದಿಂದಲೂ ವೊಬ್ಬಿನಿಂದಲೂ ಕೂಡಿರಲೆಂದು ಆಶಿಸುತ್ತಾನೆ. ಕ್ರೈಸ್ತರು ಈ ತರಹ ಜೀವಮಾನವನ್ನು ತಮ್ಮ ಮತದ ಅನುÁ್ಟನಗಳಲ್ಲಿ ತೋರಿಸುತ್ತಾ ಇದ್ದರೆ ತಮ್ಮ ಅಪನಂಬಿಕೆಯಿಂದ ಸೈತಾನನ ಅಸತ್ಯವನ್ನು ನಿಜವೆಂದು ಒಪ್ಪಿಕೊಂಡ ಹಾಗಾಗುತ್ತದೆ.LI 105.2

    ಅನೇಕರು ತಮ್ಮ ಜೀವಮಾನದ ತಪ್ಪುಗಳನ್ನೂ ಸೋಲುಗಳನ್ನೂ ಆಶಾಭಂಗಗಳನ್ನೂ ಬಹು ದೊಡ್ಡವಾಗಿ ಮಾಡಿಕೊಂಡು ವ್ಯಸನದಿಂದಲೂ ಅಧೈರ್ಯದಿಂದಲೂ ತುಂಬಿಹೋಗುತ್ತಾರೆ. ನಾನು ಯೂರೋಪ್ ಖಂಡದಲ್ಲಿದ್ದಾಗ ಒಬ್ಬನೊಬ್ಬ ಹೆಂಗಸು ಈ ತರಹ ಜೀವಮಾನದಲ್ಲಿ ಬದುಕುತ್ತಾ ಬಹಳ ವ್ಯಸನಕ್ಕೋಳಗಾಗಿದ್ದಳು. ಮತ್ತು ಆಕೆಯು ತನಗೆ ಸಮಾಧಾನವನ್ನೂ ಧೈರ್ಯವನ್ನೂ ಉಂಟುಮಾಡುವ ಒಂದು ಕಾಗದವನ್ನು ಬರೆಯಬೇಕೆಂದು ನನ್ನನ್ನು ಕೇಳಿಕೊಂಡಳು. ಆಕೆಯ ಕಾಗದವನ್ನು ನಾನು ಓದಿಕೊಂಡನಂತರ ಆ ರಾತ್ರಿ ನನಗೆ ಒಂದು ಕನಸು ಬಿದ್ದಿತು. ಆ ಕನಸಿನಲ್ಲಿ ನಾನು ಒಂದು ತೋಟದಲ್ಲಿದ್ದೆನು. ಅದರ ಮಾಲಿಕನು ನನ್ನನ್ನು ತೋಟದ ದಾರಿಗಳಲ್ಲಿ ನಡಿಸುತ್ತಿದ್ದನು. ನಾನು ಹೂವುಗಳನ್ನು ಕಿತ್ತು ಅವುಗಳನ್ನು ಮೂಸಿನೋಡಿ ಆನಂದಿಸುತ್ತಿದ್ದೆನು. ಹೀಗಿರುವಾಗ ನನ್ನ ಜೊತೆಯಲ್ಲಿದ್ದ ಆ ಹೆಂಗಸು ನನ್ನನ್ನು ಕರೆದು ನಮ್ಮ ರಸ್ತೆಯಲ್ಲಿ ಬೆಳೆದು ಹೋಗಲು ಅಡ್ಡಿ ಮಾಡುತ್ತಿದ್ದ ಕೆಲವು ಮುಳ್ಳುಗಿಡಗಳನ್ನು ನೋಡೆಂದು ಅವುಗಳ ಬಳಿ ಅಳುತ್ತಾ ನಿಂತಿದ್ದಳು. ಆಕೆ ದಾರಿತೋರಿಸುವವನ್ನು ಬಿಟ್ಟು ಮುಳ್ಳುಗಿಡಗಳ ನಡುವೆ ನಡೆಯುತ್ತಿದ್ದಳು. ಆಗ ಆಕೆ “ಮುಳ್ಳುಗಳಿಂದ ಈ ಸುಂದರವಾದ ತೋಟ ಹಾಳಾಗಿದೆಯಲ್ಲವೇ? ಇದು ಎÀ್ಟು ಶೋಚನೀಯ!” ಎಂದಳು. ಆಗ ತೋಟಗಾರನು ಹೀಗೆಂದನು - “ಮುಳ್ಳುಗಳನ್ನು ಅವುಗಳ ಪಾಡಿಗೆ ಬಿಡು, ಆದರೆ ಗುಲಾಬಿ ಹೂವುಗಳನ್ನೂ ನೈದಿಲೆಗಳನ್ನೂ ಪಾಟಲವರ್ಣದ ಹೂವುಗಳನ್ನೂ ಮಾತ್ರ ಅರಿಸಿ ಕೊಯ್ದುಕೋ; ಮುಳ್ಳುಗಳು ನಿನ್ನನ್ನು ಗಾಯಪಡಿಸುತ್ತವೆ.”LI 106.1

    ನಿನ್ನ ಜೀವಮಾನಲ್ಲಿ ಸಂತೋÀದ ಸಮಯಗಳು ಒದಗಿಲ್ಲವೋ? ದೇವರ ಆತ್ಮನ ಕರೆಯುವಿಕೆಗೆ ನಿನ್ನ ಹೃದಯವು ಸಂತೋÀದಿಂದ ಉಬ್ಬಿದ ಬೆಲೆಯುಳ್ಳ ಸಮಯಗಳು ನಿನಗೆ ಒದಗಿಲ್ಲವೋ? ನಿನ್ನ ಜೀವಮಾನವೆಂಬ ಪುಸ್ತಕದಲ್ಲಿ ಸಂತೋÀದ ಸಮಯಗಳೆಂಬ ಪುಟಗಳು ಇಲ್ಲವೋ? ದೇವರ ವಾಗ್ದಾನಗಳು ನಿನ್ನ ಜೀವಮಾನದ ಹಾದಿಯಲ್ಲಿ ಬೆಳೆದಿರುವ ಸುವಾಸನೆಯ ಪುÀ್ಪಗಳಂತಿಲ್ಲವೇ? ಅವುಗಳ ಸೌಂದರ್ಯವೂ ಸುವಾಸನೆಯೂ ನಿನ್ನ ಹೃದಯವನ್ನು ಸಂತೋÀದಿಂದ ತುಂಬಿಸಿಲ್ಲವೇ? ಮುಳ್ಳಿನ ಪೊದೆಗಳೂ, ಮುಳ್ಳುಗಳೂ ನಿನಗೆ ಗಾಯಮಾಡಿ ನಿನ್ನನ್ನು ವ್ಯಸನಗೊಳಿಸುವುವು. ನೀನು ಇವುಗಳನ್ನು ಮಾತ್ರ ಆರಿಸಿ ಇತರರಿಗೆ ಕೊಟ್ಟರೆ ದೇವರ ಕೃಪೆಯನ್ನು ನಿಕೃÀ್ಟವೆಂದು ಭಾವಿಸುವುದರ ಜೊತೆಗೆ ಇತರರನ್ನೂ ಸರಿಯಾದ ಹಾದಿಯಲ್ಲಿ ನಡೆಯುವಂತೆ ಅಡ್ಡಿ ಮಾಡುವುದಿಲ್ಲವೇ?LI 107.1

    ಜೀವಮಾನದಲ್ಲಿ ಹಿಂದೆ ಮಾಡಿದ ಅಪರಾಧಗಳನ್ನೂ ಒದಗಿದ ಆಶಾಭಂಗಗಳನ್ನೂ ಮರಳಿ ಜ್ಞಾಪಕಕ್ಕೆ ತರುವುದು ಬುದ್ಧಿವಂತಿಗೆ ಕೆಲಸವಲ್ಲ; ಅವುಗಳ ವಿಚಾರ ಮಾತನಾಡಿ ದು:ಖಿಸುವುದೂ, ದು:ಖದಲ್ಲಿಯೇ ಮುಳುಗಿ ಅಧೈರ್ಯಪಡುವುದೂ ಸರಿಯಲ್ಲ. ಅಧೈರ್ಯದ ಆತ್ಮವು ಕತ್ತಲಿನಿಂದ ಕೂಡಿರುತ್ತದೆ. ದೇವರ ಬೆಳಕನ್ನು ದೂಡುತ್ತದೆ. ಇತರರ ಜೀವಮಾನದ ಹಾದಿಗೂ ಕತ್ತಲನ್ನು ತಂದು ಹಾಕುತ್ತದೆ.LI 107.2

    ದೇವರು ನಮಗೆ ಈ ಜೀವಮಾನದಲ್ಲಿ ಕೊಟ್ಟಿರುವ ಸಂತೋÀಗಳಿಗಾಗಿಯೂ, ನಿರೀಕ್ಷೆಗಳಿಗಾಗಿಯೂ ಸ್ತೋತ್ರ ಸಲ್ಲಿಸುವ, ದೇವರು ನಮಗೆ ಕೊಟ್ಟಿರುವ ಭರವಸೆಗಳನ್ನು ಒಟ್ಟುಗೂಡಿಸಿ ಅವುಗಳನ್ನು ಸದಾ ನೋಡುತ್ತಿರೋಣ. ದೇವಕುಮಾರನು ಸಿಂಹಾಸನವನ್ನು ಬಿಟ್ಟಿದ್ದು, ತನದೈವತ್ವಕ್ಕೆ ಮಾನುÀತ್ವವನ್ನು ಸೇರಿಸಿಕೊಂಡದ್ದು, ಮನುÀ್ಯನನ್ನು ಸೈತಾನನ ಶಕ್ತಿಯಿಂದ ಬಿಡಿಸಿದ್ದು, ನಮ್ಮ ಪರವಾಗಿ ಆತನು ಜಯಶಾಲಿಯಾದದ್ದು, ಸ್ವರ್ಗದ ಹಾದಿಯನ್ನು ಮನುÀ್ಯರಿಗೆ ಸರಾಗ ಮಾಡಿದ್ದು, ದೇವರು ಎಲ್ಲಿ ತನ್ನ ಮಹಿಮೆಯನ್ನು ತೋರಿಸುತ್ತಾನೋ ಅಂಥ ಸ್ವರ್ಗದ ದರ್ಶನವನ್ನು ಪ್ರಕಟಿಸಿದ್ದು, ಪಾಪದ ಹಳ್ಳದಲ್ಲಿ ಬಿದ್ದಿದ್ದ ಮಾನವ ಜನಾಂಗವನ್ನು ಮೇಲಕ್ಕೆತ್ತಿ ಉದ್ಧರಿಸಿ ಅವರನ್ನು ಮರಳಿ ದೇವರ ಸಂಗಡ ಒಂದು ಮಾಡಿದ್ದು, ಮತ್ತು ನಮ್ಮ ರಕ್ಷಕನ ಕೃಪೆಯಿಂದ ನಾವು ದೈವಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕ್ರಿಸ್ತನ ಪರಿಶುದ್ಧತ್ವವೆಂಬ ಬಟ್ಟೆಯನ್ನು ಧರಿಸಿ ಆತನ ಸಿಂಹಾಸನದ ಬಳಿಗೆ ಎತ್ತಲ್ಪಡುವುದು ಎಂಬ ಈ ಸಂಗತಿಗಳನ್ನು ದೇವರು ನಮ್ಮೆದುರಿಗೆ ಚಿತ್ರಿಸಿ ಇವುಗಳನ್ನು ನಾವು ಧ್ಯಾನಿಸಬೇಕೆಂದು ಇÀ್ಟಪಡುತ್ತಾನೆ.LI 107.3

    ದೇವರ ಪ್ರೀತಿಯ ವಿಚಾರ ನಾವು ಸಂಶಯಪಟ್ಟು ಆತನ ವಾಗ್ದಾನಗಳನ್ನು ನಾವು ನಂಬದೆ ಹೋದರೆ ಆತನನ್ನು ಅವಮಾನ ಪಡಿಸಿದ ಹಾಗಾಯಿತು; ಮತ್ತು ನಾವು ಪವಿತ್ರಾತ್ಮನನ್ನು ನೋಯಿಸುತ್ತೇವೆ. ಒಬ್ಬ ತಾಯಿಯು ತನ್ನ ಮಕ್ಕಳಿಗೆ ತನ್ನ ಜೀವವನ್ನೇ ತೇಯುತ್ತಿದ್ದರೂ ಆಕೆಯ ವಿಚಾರದಲ್ಲಿ ನಮಗೆ ಒಳ್ಳೇದನ್ನೇ ಮಾಡುತ್ತಾ ಇಲ್ಲವೆಂದು ಆ ಮಕ್ಕಳು ದೂರಿದರೆ ಆಕೆಯು ಎÀ್ಟು ಮನನೊಂದು ಕೊಳ್ಳಬಹುದು. ಬಹುಶ: ಆಕೆಯ ಪ್ರೀತಿಯ ವಿಚಾರ ಮಕ್ಕಳು ಸಂಶಯಪಟ್ಟರೆ ಆಕೆಯ ಎದೆಯೇ ಒಡೆದುಹೋಗುವುದು. ಈ ರೀತಿ ನಮ್ಮ ಮಕ್ಕಳು ವರ್ತಿಸಿದರೆ ತಂದೆತಾಯಿಗಳ ಮನಸ್ಸೇನಾಗಬಹುದು? ನಾವು ಜೀವ ಹೊಂದಲು ತನ್ನ ಏಕಪುತ್ರನನ್ನು ನಮಗಾಗಿ ಕೊಟ್ಟ ತಂದೆಯ ಪ್ರೀತಿಯನ್ನು ನಾವು ನಂಬದೆ ಹೋದರೆ ಆತನು ನಮ್ಮ ವಿಚಾರ ಹೇಗೆ ವರ್ತಿಸುವನು? ಅಪೋಸ್ತಲನು ಹೀಗೆ ಬರೆಯುತ್ತಾನೆ - “ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲ. ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?” ಹೀಗಿದ್ದರೂ ಅನೇಕರು ತಮ್ಮ ಕ್ರಿಯೆಗಳಿಂದ ಇಲ್ಲವೇ ತಮ್ಮ ಮಾತುಗಳಿಂದ ಹೀಗೆ ಹೇಳುವವರಾಗಿದ್ಧಾರೆ. - “ದೇವರು ನನ್ನ ವಿಚಾರವಾಗಿ ಹೀಗೆ ಹೇಳುವುದಿಲ್ಲ. ಆತನು ನನ್ನನ್ನು ಪ್ರೀತಿಸದೆ ಇತರರನ್ನು ಪ್ರೀತಿಸುತ್ತಾನೆ.”LI 108.1

    ಇವುಗಳೆಲ್ಲವು ನಿನ್ನ ಆತ್ಮನಿಗೆ ಕೇಡನ್ನುಂಟು ಮಾಡುತ್ತವೆ; ನೀನು ಸಂಶಯಪಟ್ಟಾಗಲೆಲ್ಲಾ ಸೈತಾನನ್ನು ಆಹ್ವಾನಿಸಿದಂತಾಯಿತು. ನಿನ್ನ ಸಂಶಯ ಭಾವವನ್ನು ಬಲಪಡಿಸಿ, ಊಳಿಗ ಮಾಡುವ ದೇವದೂತರ ಮನಸ್ಸನ್ನೂ ನೋಯಿಸುತ್ತದೆ. ಸೈತಾನನು ನಿನ್ನನ್ನು ಶೋಧಿಸುವಾಗ ಸಂಶಯದ ಅಥವಾ ಕತ್ತಲಿನ ಒಂದು ಶಬ್ದವನ್ನಾದರೂ ಹೇಳಬೇಡ. ಅವರು ಸೂಚಿಸುವ ವಿಚಾರಗಳಿಗೆ ಸ್ವಲ್ಪ ದಾರಿ ಕೊಟ್ಟರೆ ನಿನ್ನ ಮನಸ್ಸು ಸಂಶಯದಿಂದಲೂ ತಿರುಗಿಬೀಳುವ ವಿಚಾರಗಳಿಂದಲೂ ತುಂಬುತ್ತದೆ. ನೀನು ನಿನ್ನ ಸಂಶಯಗಳ ವಿಚಾರ ಪದೇ ಪದೇ ಇತರರ ಎದುರಿಗೆ ಮಾತನ್ನಾಡುತ್ತಾ ಇದ್ದರೆ ಅದು ನಿನ್ನನ್ನು ಕೆಡಿಸುವುದಲ್ಲದೆ ಇತರರನ್ನೂ ಕೆಡಿಸಿ ಅವರನ್ನು ಉತ್ತಮ ಸ್ಥಿತಿಗೆ ತರಲು ಸಾಧ್ಯವಾಗದೆ ಹೋಗುವುದು. ನೀನು ಮುಂದಕ್ಕೆ ಸೈತಾನನ ಉರ್ಲಿನಿಂದ ಪಾರಾದರೂ ಇತರರು ನಿನ್ನ ಮಾತುಗಳ ಅಭಿಪ್ರಾಯದಿಂದ ಕೆಟ್ಟುಹೋಗಿರುವುದರಿಂದ ತಮ್ಮ ಅಪನಂಬಿಕೆಯಿಂದ ಪಾರಾಗದೆ ಹೋಗಬಹುದು. ಆದುದರಿಂದ ಇತರರಿಗೆ ಅಪನಂಬಿಕೆ ಯನ್ನುಂಟು ಮಾಡುವ ಮಾತುಗಳನ್ನಾಡದೆ ಆತ್ಮಕ್ಕೆ ಬಲವನ್ನೂ ಜೀವವನ್ನೂ ಕೊಡುವ ಮಾತುಗಳನ್ನು ಮಾತ್ರ ಆಡುವುದು ಎÀ್ಟು ಅವಶ್ಯಕವಾದುದು.LI 108.2

    ನೀನು ನಿನ್ನ ಯಜಮಾನನ ವಿಚಾರ ಯಾವ ಸಾಕ್ಷಿಯನ್ನು ಪ್ರಪಂಚಕ್ಕೆ ಕೊಡುತ್ತಿದ್ದಿ ಎಂದು ದೇವದೂತರೂ ಕೇಳುತ್ತಿದ್ದಾರೆ. ನಿಮ್ಮ ಸಂಭಾÀಣೆಗಳು ನಿಮ್ಮ ಮಧ್ಯಸ್ಥನಾದ ಜೀವಿಸುವ ಕ್ರಿಸ್ತನಿಗೋಸ್ಕರವಾಗಿರಲಿ. ನೀನು ನಿನ್ನ ಸ್ನೇಹಿತನ ಕೈಕುಲಕಿ ಆತನ ಕ್ಷೇಮಸಮಾಚಾರವನ್ನು ವಿಚಾರಿಸುವಾಗಲೂ ನಿನ್ನ ಬಾಯಲ್ಲಿ ಹೃದಯಪೂರ್ವಕವಾದ ದೈವಸ್ತೋತ್ರವು ವೊದಲು ಹೊರಡಲಿ. ನೀನು ಹಾಗೆ ಮಾಡುವುದು ಆತನನ್ನು ಕ್ರಿಸ್ತನ ಬಳಿಗೆ ಎಳೆದಾರಿಯಾಗುವುದು. ಸರ್ವರಿಗೂ ತೊಂದರೆಗಳೂ ಸಹಿಸಲು ಕÀ್ಟಕರವಾದ ವ್ಯಸನಗಳೂ ಎದುರಾಯಿಸಲು ಅಸಾಧ್ಯವಾದ ಶೋಧನೆಗಳೂ ಇದ್ದೆ ಇರುತ್ತವೆ. ಈ ತೊಂದರೆಗಳನ್ನು ಮರಣಾಧೀನರಾದ ನಿನ್ನ ಸ್ನೇಹಿತರಿಗೆ ಹೇಳುತ್ತಾ ಹೋಗದೆ ಪ್ರಾರ್ಥನಾ ದ್ವಾರದ ಮೂಲಕ ದೇವರಿಗೆ ಹೇಳು. ಸಂಶಯದ ಮತ್ತು ಅಧೈರ್ಯವನ್ನುಂಟು ಮಾಡುವ ಒಂದು ಮಾತನ್ನಾದರೂ ಆಡಬಾರದೆಂಬ ಒಂದು ಸೂತ್ರವನ್ನು ಮಾಡಿಕೋ. ನೀನು ನಿರೀಕ್ಷೆ ಮತ್ತು ಪರಿಶುದ್ಧವಾದ ಸಂತೋÀವನ್ನು ಕೊಡುವ ಮಾತುಗಳನ್ನೇ ಆಡುವುದರಿಂದ ಇತರರ ಜೀವಮಾನವು ಉಲ್ಲಾಸಗೊಳ್ಳುವುದಲ್ಲದೆ ಬಲವನ್ನು ಸಹ ಹೊಂದುವುದು.LI 109.1

    ಧೈರ್ಯದಿಂದ ತುಂಬಿರುವ ಅನೇಕ ಆತ್ಮಗಳು ಶೋಧನೆಗಳಿಂದ ಬಹಳವಾಗಿ ಒತ್ತಾಯ ಮಾಡಲ್ಪಟ್ಟು ಸ್ವಾರ್ಥದೊಂದಿಗೂ ಕೆಟ್ಟತನದ ಶಕ್ತಿಗಳೊಡನೆಯೂ ಮಾಡುವ ಯುದ್ಧದಲ್ಲಿ ಮೂರ್ಚೆ ಹೋಗುವ ಸಂಭವಗಳಿರಬಹುದು. ಅಂಥವರನ್ನು ಅಧೈರ್ಯಪಡಿಸಬೇಡ. ಅಂಥವರು ತಮ್ಮ ಯುದ್ಧದಲ್ಲಿ ಧೈರ್ಯದಿಂದ ಮುಂದುವರಿಸುವಂತೆ ನಿರೀಕ್ಷೆಯ ಮಾತುಗಳಿಂದ ಧೈರ್ಯಗೊಳಿಸು. “ನಮ್ಮಲ್ಲಿ ಒಬ್ಬನಾದರೂ ತನಗಾಗಿ ಬದುಕುವುದಿಲ್ಲ.”1 ನಮ್ಮ ಪ್ರೇರಣೆಯು ನಮಗೆ ತಿಳಿಯದ ರೀತಿಯಲ್ಲಿ ಇತರರಿಗೆ ಧೈರ್ಯವನ್ನುಂಟುಮಾಡಿ ಅವರನ್ನು ಬಲಪಡಿಸಬಹುದು. ಇಲ್ಲವೆ ಇದಕ್ಕೆ ವ್ಯತಿರಿಕ್ತವಾಗಿಯಾದರೂ ಮಾಡಬಹುದು; ಹೀಗಾಗಿ ಅವರು ಕ್ರಿಸ್ತನನ್ನೂ ಆತನ ಸತ್ಯವನ್ನೂ ಸ್ವೀಕರಸಿಬಹುದು ಇಲ್ಲವೇ ತ್ಯಜಿಸಬಹುದು.LI 109.2

    ಅನೇಕರು ಕ್ರೈಸ್ತ ಜೀವಮಾನ ಮತ್ತು ನಡತೆಯ ವಿಚಾರ ತಪ್ಪು ಅಭಿಪ್ರಾಯವುಳ್ಳರಾಗಿದ್ದಾರೆ. ಅವರು ಆತನಲ್ಲಿ ಸಂತೋÀ, ಪ್ರೀತಿ, ದಯೆ ಇವುಗಳಿಲ್ಲದೆ ಕಾಠಿಣ್ಯ ನಿರ್ದಯಗಳಿಂದ ಕೂಡಿದವನೆಂದು ಭಾವಿಸುತ್ತಾರೆ. ಅನೇಕ ಸಂದರ್ಭಗಳಲ್ಲಿ ಅವರ ಮತದ (ಭಕ್ತಿಯ) ಜೀವಮಾನದ ಅನುಭವವು ಈ ತರದ ಅಭಿಪ್ರಾಯಗಳಿಂದ ಕೂಡಿರುತ್ತದೆ.LI 110.1

    ಆತನು ಅನೇಕಾವರ್ತಿ ಅತ್ತನು ಆದರೆ ಒಂದು ಸಲವಾದರೂ ನಗೆವೋರೆಯನ್ನು ತೋರಿಸಲಿಲ್ಲವೆಂದು ಕೆಲವರು ಹೇಳುತ್ತಾರೆ. ನಮ್ಮ ರಕ್ಷಕನು ನಿಜವಾಗಿಯೂ ವ್ಯಸನದ ಮನುÀ್ಯನೂ ದು:ಖದಿಂದ ಪೀಡಿತನಾದವನೂ ಆಗಿದ್ದನು. ಯಾಕಂದರೆ ಆತನು ಸರ್ವರ ದು:ಖದಲ್ಲಿ ತಾನೂ ಭಾಗಿಯಾಗಿದ್ದನು. ಆತನ ಜೀವಮಾನವೂ ತನ್ನನ್ನು ಅಲ್ಲಗಳೆಯುವಂಥಾದ್ದು, ನೋವು ಚಿಂತೆಗಳಿಂದ ಕೂಡಿದ್ದೂ ಆಗಿದ್ದರೂ ಆತನ ಧೈರ್ಯವು ಎಂದೂ ಕುಗ್ಗಿ ಹೋಗಲಿಲ್ಲ. ಆತನ ಮುಖದಲ್ಲಿ ಚಿಂತೆ ಮತ್ತು ಕಳವಳಗಳ ಭಾವಗಳು ಕಂಡುಬರದೆ ಶಾಂತದ ಗಂಭೀರತೆಯು ಕಾಣಬರುತ್ತಿತ್ತು. ಆತನ ಹೃದಯವು ಜೀವದ ಬುಗ್ಗೆಯಾಗಿತ್ತು. ಆತನು ಹೋದಡೆಯಲ್ಲೆಲ್ಲಾ ಶಾಂತಿ, ಉಲ್ಲಾಸ ಮತ್ತು ಸಂತೋÀಗಳು ತಾಂಡವಾಡುತ್ತಿದ್ದವು.LI 110.2

    ನಮ್ಮ ರಕ್ಷಕನು ಬಹು ಗಾಂಭೀರ್ಯವುಳ್ಳವನೂ ತನ್ನ ಕೆಲಸದಲ್ಲಿ ಆಸಕ್ತಿಯುಳ್ಳವನೂ ಆಗಿದ್ದದ್ದು ನಿಜ; ಆದರೆ ಸಿಡುವೋರೆಯವನೂ ಜೋಲುಮುಖದವನೂ ಆಗಿರಲೇ ಇಲ್ಲ. ಆತನ ಜೀವಮಾನವನ್ನು ಅನುಸರಿಸುವವರು ಸರಿಯಾದ ಉದ್ದೇಶಗಳನ್ನು ಹೊಂದಿದವರಾಗಿರುತ್ತಾರೆ; ಅವರು ತಮ್ಮ ಜವಾಬ್ದಾರಿಯ ವಿಚಾರ ಪೂರ್ಣಗಮನ ಕೊಡುವವರ ರಾಗಿದ್ದಾರೆ. ಚಪಲತೆಯನ್ನು ತ್ಯಜಿಸುತ್ತಾರೆ. ಗದ್ದಲದ ಸಂತೋÀವು ಇರುವುದಿಲ್ಲ, ಒರಟಾದ ಅಪಹಾಸ್ಯಗಳಿರುವುದಿಲ್ಲ. ಕ್ರಿಸ್ತನ ಮತವು ನದಿಯಂತೆ ಶಾಂತಿಯನ್ನು ಕೊಡುತ್ತದೆ. ಅದು ಸಂತೋÀದ ಬೆಳಕನ್ನು ಕುಂದಿಸುವುದಿಲ್ಲ; ಹರ್Àವನ್ನು ಮನಸ್ಸಿನಿಂದ ತೆಗೆದುಹಾಕುವುದಿಲ್ಲ, ಮುಖದ ಸಂತೋÀದ ವರ್ಚಸ್ಸನ್ನು ಕಾಂತಿಗೆಡಿಸುವುದಿಲ್ಲ. ಕ್ರಿಸ್ತನು ಸೇವೆ ಮಾಡಿಸಿಕೊಳ್ಳುವುದಕ್ಕೆ ಬಾರದೆ ಸೇವೆ ಮಾಡಲು ಬಂದನು; ಮತ್ತು ಆತನ ಪ್ರೀತಿಯು ನಮ್ಮ ಹೃದಯಗಳನ್ನು ಆಳುತ್ತಿದ್ದರೆ ನಾವು ಆತನನ್ನು ಹಿಂಬಾಲಿಸುವೆವು.LI 110.3

    ನಾವು ಇತರರ ಕ್ರೂರವಾದ ಮತ್ತು ಅನ್ಯಾಯವಾದ ಕೆಲಸಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಇದ್ದರೆ ಕ್ರಿಸ್ತನು ನಮ್ಮನ್ನು ಪ್ರೀತಿಸಿದಂತೆ ಅವರನ್ನು ನಾವು ಪ್ರೀತಿಸಲಾರೆವು; ಆದರೆ ಕ್ರಿಸ್ತನ ಅದ್ಭುತ ಪ್ರೀತಿ ಕರುಣೆಗಳನ್ನು ನಾವು ಧ್ಯಾನಿಸುತ್ತಾ ಹೋದರೆ ಅದೇ ತರದ ಮನಸ್ಸನ್ನು ಇತರರಿಗೂ ತೋರಿಸಬೇಕೆಂದು ನಮ್ಮಲ್ಲಿ ಹುಟ್ಟುತ್ತದೆ. ನಾವು ಇತರರಲ್ಲಿ ಅಪರಾಧಗಳನ್ನು ಕಂಡಾಗ್ಯೂ ಅವರನ್ನು ಮರ್ಯಾದಿಸಬೇಕು ಮತ್ತು ಪ್ರೀತಿಸಬೇಕು; ಅವರ ಅಸಂಪೂರ್ಣತೆಗಳನ್ನೂ ಅಪರಾಧಗಳನ್ನೂ ನಾವು ಕಾಣದಿರಲು ಸಾಧ್ಯವಿಲ್ಲ. ದೈನ್ಯತೆ, ಸ್ವಾರ್ಥವನ್ನು ನಂಬದಿರುವುದು ಮತ್ತು ಇತರರ ತಪ್ಪುಗಳ ವಿಚಾರ ಶಾಂತಭಾವವನ್ನು ವಹಿಸುವುದು ಈ ಗುಣಗಳನ್ನು ನಾವು ಅಭ್ಯಾಸಿಸಬೇಕು. ಈ ಗುಣಗಳು ನಮ್ಮಲ್ಲಿರುವ ಸಂಕುಚಿತಭಾವದ ಸ್ವಾರ್ಥತೆಯನ್ನು ಕೊಂದು ಓದಾರ್ಯವನ್ನೂ ಉದಾರತ್ವವನ್ನೂ ಉಂಟುಮಾಡುತ್ತವೆ.LI 110.4

    ಕೀರ್ತನೆಗಾರನು ಹೀಗೆ ಹೇಳುತ್ತಾನೆ - “ಯೆಹೋವನಲ್ಲಿ ಭರವಸೆÀವಿಟ್ಟು ಒಳ್ಳೇದನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.” “ಕರ್ತನಲ್ಲಿ ಭರವಸೆವಿಡಿರಿ.” ಪ್ರತಿ ದಿನದಲ್ಲೂ ನಮಗೆ ಚಿಂತೆ, ºಗಲಿಬಿಲಿಗಳು ಇದ್ದೇ ಇರುತ್ತವೆ. ನಾವು ಒಬ್ಬರನ್ನೊಬ್ಬರು ಸಂಧಿಸಿದಾಗ ನಮ್ಮ ತೊಂದರೆಗಳ ಮತ್ತು ಶೋಧನೆಗಳ ವಿಚಾರ ಮಾತನಾಡಲು ಸದಾ ಸಿದ್ಧರಾಗಿಯೇ ಇರುವೆವು. ನಮ್ಮ ನಾನಾ ತೊಂದರೆಗಳು, ಭಯಗಳು, ವ್ಯಾಕುಲಗಳು ಇವುಗಳನ್ನು ಕೇಳುವ ಮತ್ತೊಬ್ಬನು ನಮ್ಮ ಪ್ರೀತಿಯ ರಕ್ಷಕನು ಕರುಣಾರಹಿತನೆಂದೂ, ನಮ್ಮ ಪ್ರಾರ್ಥನೆಗಳನ್ನು ಕೇಳದವನೆಂದೂ ನಮ್ಮ ಎಲ್ಲಾ ಕÀ್ಟಕಾಲದಲ್ಲಿ ಅಗತ್ಯವಾಗಿ ಸಹಾಯ ಮಾಡದವನೆಂದೂ ಅಭಿಪ್ರಾಯ ಪಡಬಹುದು.LI 111.1

    ಕೆಲವರು ಯಾವಾಗಲೂ ಹೆದರುತ್ತಲೂ ತೊಂದರೆಗಳನ್ನು ಎರವಾಗಿ ತೆಗೆದುಕೊಳ್ಳುತ್ತಲೂ ಇರುವರು. ಪ್ರತಿದಿನವೂ ದೈವಪ್ರೀತಿಯ ನಿದರ್ಶನಗಳು ಅವರಿಗೆ ದೊರಕುತ್ತಿರುತ್ತವೆ. ಪ್ರತಿದಿನವೂ ಅವರು ದೈವಪರಿಪಾಲನೆಯ ವರಗಳಲ್ಲಿ ಆನಂದಿಸುತ್ತಿರುತ್ತಾರೆ. ಹೀಗಿದ್ದರೂ ತಾವು ಪಡೆದವುಗಳನ್ನು ಮರೆತುಬಿಡುತ್ತಾರೆ. ತಮಗೊಪ್ಪದಿರುವ ಸಂಗತಿಗಳನ್ನು ಅವರು ಸದಾ ಯೋಚಿಸುತ್ತಿರುತ್ತಾರೆ ಮತ್ತು ಅವು ತಮಗೆ ಪ್ರಾಪ್ತವಾಗಬಹುದೆಂದು ಹೆದರುತ್ತಾರೆ. ಅವರಿಗೆ ಯಾವುದಾದರೂ ಒಂದು ಸಣ್ಣ ತೊಂದರೆಯು ನಿಜವಾಗಿಯೂ ಇರಬಹುದು. ಇದು ದೇವರ ಉಪಕಾರಗಳಿಗೆ ಇವರು ಕೃತಜ್ಞತೆ ತೋರಿಸದಂತೆ ಮಾಡಬಹುದು. ಅವರಿಗೆ ಪ್ರಾಪ್ತವಾಗುವ ತೊಂದರೆಗಳು ಸರ್ವಸಹಾಯಗಳಿಗೂ ಒಬ್ಬನೇ ಮೂಲನಾದ ದೇವರ ಬಳಿಗೆ ನಡಿಸದೆ ಅವನಿಂದ ಅವರನ್ನು ದೂರಮಾಡುತ್ತವೆ. ಯಾಕಂದರೆ ಅವು ಅವರಲ್ಲಿ ಅಶಾಂತಿಯನ್ನೂ ಚಿಂತೆಯನ್ನು ಉಂಟುಮಾಡುತ್ತವೆ.LI 111.2

    ನಮ್ಮ ಅಪನಂಬಿಕೆಯಿಂದ ನಮಗೇನಾದರೂ ಒಳ್ಳೇದಾಗುತ್ತದೋ? ನಾವೇ ತಕ್ಕೆ ಅವಿಶ್ವಾಸಿಗಳಾಗಿಯೂ ಕೃತಜ್ಞತೆಯಿಲ್ಲದವರಾಗಿಯೂ ಇರಬೇಕು? ಕ್ರಿಸ್ತನು ನಮ್ಮ ಸ್ನೇಹಿತನು, ಸ್ವರ್ಗವೆಲ್ಲವೂ ನಮ್ಮ ಸೌಖ್ಯದ ವಿಚಾರ ಕುತೂಹಲ ಪಡುತ್ತಿದೆ. ನಾವೇತಕ್ಕೆ ನಮ್ಮ ಜೀವಮಾನದ ಗಲಿಬಿಲಿಗಳು ಮತ್ತು ಕÀ್ಟಗಳು ನಮ್ಮನ್ನು ವ್ಯಸನಗೊಳಿಸಲು ಅವಕಾಶ ಕೊಡಬೇಕು? ನಾವು ಹೀಗೆ ಮಾಡಿದರೆ ಸದಾ ದು:ಖವೇ ನಮ್ಮ ಗತಿಯಾಗುವುದು. ನಮ್ಮನ್ನು ಕಂಗಾಲಾಗ ಮಾಡುವ ಮತ್ತು ಸವೆಯಿಸುವ ಏಕಾಂತದಲ್ಲಿ ನಾವು ಏತಕ್ಕೆ ಇರಬೇಕು? ಈ ಏಕಾಂತದಿಂದ ನಮಗೆ ಯಾವ ಸಹಾಯವೂ ಶೋಧನೆಗಳನ್ನು ಜೈಸುವ ಶಕ್ತಿಯೂ ದೊರೆಯಲಾರದು.LI 112.1

    ನಿನ್ನ ಕೆಲಸಗಳಲ್ಲಿ ನಿನಗೆ ಕಳವಳಗಳು ಬರಬಹುದು, ಭವಿÀ್ಯದ ನಿರೀಕ್ಷೆಗಳು ಮಂಕಾಗಬಹದು. ನಿನಗೆ ನÀ್ಟವಾಗುವ ಸೂಚನೆಯು ಕಂಡುಬಂದು ಭಯಭ್ರಾಂತನಾಗಬಹುದು. ಆದರೆ ಆಧೈರ್ಯಪಡಬೇಡ, ನಿನ್ನ ಚಿಂತೆಗಳನ್ನು ದೇವರ ಮೇಲೆ ಹೊಯ್ಯಿ ಮತ್ತು ಸಂತೋÀದಿಂದಲೂ ಶಾಂತಿಯಿಂದಲೂ ಇರು. ನಿನ್ನ ಕೆಲಸಕಾರ್ಯಗಳನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಲು ಜ್ಞಾನವನ್ನು ಕೊಡುವಂತೆ ದೇವರಿಗೆ ಪ್ರಾರ್ಥಿಸು. ಇದರಿಂದ ನಿನ್ನ ಕÀ್ಟವನ್ನೂ ದುರ್ದಶೆಯನ್ನೂ ತಪ್ಪಿಸಿಕೊಳ್ಳು”. ನಿನಗೆ ಅನುಕೂಲವಾದ ಫಲಗಳು ದೊರಕಲು ನಿನ್ನ ಕೈಲಾದುದನ್ನೆಲ್ಲಾ ಮಾಡು. ಕ್ರಿಸ್ತನು ತನ್ನ ಸಹಾಯವನ್ನು ಕೊಡುವೆನೆಂದು ವಾಗ್ದಾನ ಮಾಡಿದ್ದಾನೆ; ಆದರೆ ನಿನ್ನ ಯತ್ನವನ್ನು ನೀನು ಮಾಡಬೇಕು. ಸ್ವರ್ಗದ ತಂದೆಯನ್ನು ನಂಬಿ ನಿನ್ನ ಕೈಲಾಗುವುದನ್ನೆಲ್ಲಾ ನೀನು ಮಾಡಿದ್ದಿ ಆದುದರಿಂದ ಬರುವ ಪ್ರತಿಫಲವನ್ನು ಸಂತೋÀದಿಂದ ಸ್ವೀಕರಿಸು.LI 112.2

    ತನ್ನ ಮಕ್ಕಳು ವ್ಯಸನಗಳಲ್ಲಿ ಮುಳುಗಿಹೋಗಲೆಂಬುದು ದೇವರ ಇÀ್ಟವಿಲ್ಲ. ಕರ್ತನು ನಮ್ಮನ್ನು ವೋಸಪಡಿಸುವವನಲ್ಲ. ಆತನು ನಮಗೆ ಹೀಗೆ ಹೇಳುವವನಲ್ಲ “ಹೆದರಬೇಡಿರಿ, ನಿಮ್ಮ ಹಾದಿಗಳಲ್ಲಿ ನಿಮಗೆ ಅಪಾಯಗಳಿಲ್ಲ.” ನಮಗೆ ಅವು ಸಂಭವಿಸುತ್ತವೆಂದು ಆತನಿಗೆ ಗೊತ್ತು. ಆ ವಿಚಾರವನ್ನು ಆತನು ಪರಿÁ್ಕರ ಮಾಡಿದ್ದಾನೆ. ತನ್ನ ಜನರನ್ನು ಪಾಪದಿಂದಲೂ ಕೆಟ್ಟತನದಿಂದಲೂ ತುಂಬಿರುವ ಲೋಕದಿಂದ ಹೊರಗೆ ತೆಗೆದುಕೊಂಡು ಹೋಗುತ್ತೇನೆಂದು ಹೇಳದೆ ತಮಗೆ ಶಾಶ್ವತವಾದ ಕೋಟೆಯ ಕಡೆಗೆ ತಮ್ಮ ಗಮನವನ್ನು ಇಡಬೇಕೆಂದು ಹೇಳುತ್ತಾನೆ. ಕ್ರಿಸ್ತನು ತನ್ನ ಶಿÀ್ಯರ ಪರವಾಗಿ ಹೀಗೆ ಪ್ರಾರ್ಥಿಸಿದನು - “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೋಳ್ಳುವುದಿಲ್ಲ; ಕೆಡಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳತ್ತೇನೆ.” ಮತ್ತು ಆತನು ಹೀಗೆ ಹೇಳುತ್ತಾನೆ. “ಲೋಕದಲ್ಲಿ ನಿಮಗೆ ಸಂಕಟವುಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.”LI 112.3

    ಸ್ವಾಮಿಯು ತನ್ನ ಪರ್ವತಪ್ರಸಂಗದಲ್ಲಿ ದೇವರಲ್ಲಿ ನಂಬಿಕೆಯಿಡಬೇಕಾದ ಅವಶ್ಯಕತೆಯ ವಿಚಾರ ಬೆಲೆಯುಳ್ಳ ಪಾಠಗಳನ್ನು ಕಲಿಸಿದ್ದಾನೆ. ಈ ಬೋಧನೆಗಳು ಸರ್ವಕಾಲದಲ್ಲೂ ದೇವರ ಮಕ್ಕಳು ಅನುಸರಿಸಬೇಕೆಂದು ಹೇಳಲ್ಪಟ್ಟಿವೆ. ಮತ್ತು ಈಗಿನವರೆಗೂ ಅವು ಜ್ಞಾನದಾಯಕವಾಗಿಯೂ ಆತ್ಮಸೌಖ್ಯವನ್ನುಂಟು ಮಾಡುವಂಥವು ಗಳಾಗಿಯೂ ಇವೆ. ಜೀವಮಾನದ ಚಿಂತೆಯಲ್ಲದೇ ದೇವರಿಗೆ ತಮ್ಮ ಸ್ತೋತ್ರಗಳನ್ನು ಹಾಡುತ್ತಿದ್ದ ಪಕ್ಷಿಗಳನ್ನು ಕ್ರಿಸ್ತನು ನೋಡಿ ಹೀಗೆ ಹೇಳುತ್ತಾನೆ. “ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ ಹಾಗಿದ್ದರೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ.” ಕ್ರಿಸ್ತನು ನಮ್ಮನ್ನು ಕುರಿತು ಹೀಗೆ ಹೇಳುತ್ತಾನೆ - “ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ?”3 ದೊಡ್ಡ ಪರಿಪಾಲಕನು (ದೇವರು) ಮನುÀ್ಯರಿಗೂ ಮೃಗಗಳಿಗೂ ಬೇಕಾದುದೆಲ್ಲವನ್ನೂ ಒದಗಿಸಿಕೊಡುತ್ತಾನೆ. ಪಕ್ಷಿಗಳೂ ಆತನ ಗಮನಕ್ಕೆ ಬಂದಿವೆ. ಆತನು ಅವುಗಳ ಬಾಯಿ ತೆರೆದು ಆಹಾರವನ್ನು ತುತ್ತು ತುತ್ತಾಗಿ ಹಾಕುವುದಿಲ್ಲ. ಆದರೆ ಆಹಾರವನ್ನು ಒದಗಿಸುತ್ತಾನೆ. ಆತನು ಅವುಗಳಿಗಾಗಿ ಹಾಕಿರುವ ಆಹಾರವನ್ನು ಅವುಗಳೇ ಅಂದುಕೊಳ್ಳಬೇಕು. ತಮ್ಮ ಗೂಡುಗಳನ್ನು ತಾವೇ ಸಂಗ್ರಹಿಸಿದ ಸಾಮಾನುಗಳಿಂದ ಕಟ್ಟಬೇಕು. ತಮ್ಮ ಮರಿಗಳನ್ನು ತಾವೇ ಸಾಕಬೇಕು. ಅವು ತಮ್ಮ ಕೆಲಸಗಳಿಗೆ ಹಾಡುತ್ತಾ ಹೋಗುತ್ತವೆ. ಯಾಕಂದರೆ “ಪರಲೋಕದಲ್ಲಿರುವ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ.” ಬುದ್ಧಿಶಾಲಿಗಳಾಗಿಯೂ ಆತ್ಮರೂಪದಲ್ಲಿ ಆರಾಧಿಸುವವರಾಗಿಯೂ ಇರುವ ನೀವು ಹೆಚ್ಚಿನ ಬೆಲೆಯುವರಲ್ಲವೇ? ಸೃಷ್ಟೀಶನೂ ನಮ್ಮ ಪರಿಪಾಲಕನೂ ತನ್ನ ರೂಪದಲ್ಲಿ ನಮ್ಮನ್ನುಂಟು ಮಾಡಿದ ವನೂ ಆಗಿರುವ ದೇವರು ನಾವು ಆತನನ್ನು ನಂಬಿದರೆ ನಮಗೆ ಬೇಕಾದುದನ್ನು ಅನುಗ್ರಹಿಸದಿರುವನೇ? ಕ್ರಿಸ್ತನು ಹೂವುಗಳ ಕಡೆಗೆ ತನ್ನ ಗಮನವನ್ನು ಎಳೆಯುತ್ತಾನೆ. ಅವು ಮೈದಾನಗಳಲ್ಲಿ ಹೆಚ್ಚಾಗಿ ಬೆಳೆದು ತಮ್ಮ ಸೌಂದರ್ಯವನ್ನು ಬೀರುತ್ತವೆ. ಈ ಸೌಂದರ್ಯವು ಸೃಷ್ಟಿಕರ್ತನಿಂದ ಅವುಗಳಿಗೆ ಬಂದುದು. ಮತ್ತು ಇದನ್ನು ಪ್ರೀತಿಯ ಗುರುತಿಗಾಗಿ ಕೊಟ್ಟಿದ್ದಾನೆ. ಆತನು ಈ ಹೂವುಗಳ ವಿಚಾರ ಹೀಗೆ ಹೇಳುತ್ತಾನೆ. “ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ನೋಡಿರಿ ಅವು ದುಡಿಯುವುದಿಲ್ಲ, ನೂಲುವುದಿಲ್ಲ, ಅದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವÀ್ಟು ಅಲಂಕಾರವು ಅರಸನಾದ ಸೊಲೋವೋನನಿಗೆ ಸಹ ಅವನು ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.” ಈ ಸಾಮಾನ್ಯತೆಯನ್ನೂ ಅಲಂಕಾರವನ್ನೂ ಭೂಲೋಕದ ಅತ್ಯಂತ ಸುಂದರವಾದ ಮತ್ತು ವೈಭವದ ಬಟ್ಟೆಯಲ್ಲಿ ಅತಿ ಚತುರನಾದ ಕೆಲಸಗಾರನೂ ಮಾಡಿತೋರಿಸಲಾರನು. ದೇವರ ಸ್ವಾಭಾವಿಕವಾದ ಸೌಂದರ್ಯವು ಮಾನವನ ಅತ್ಯಂತ ಚತುರತೆಯ ಸೌಂದರ್ಯಕ್ಕೆ ಮೀರಿದ್ದು ಮತ್ತು ಒಂದಕ್ಕೊಂದು ಸಾಟಿಯಾಗಲಾರದು. ಸ್ವಾಮಿಯು ಹೀಗೆ ಹೇಳುತ್ತಾನೆ. “ಎಲೈ ಅಲ್ಪವಿಶ್ವಾಸಿಗಳೇ ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಉಡಿಸಿದರೆ ಅದಕ್ಕಿಂತ ಎÉ್ಟೂೀ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ?” ಒಂದು ದಿನದಲ್ಲಿ ನಾಶವಾಗುವ ಹೂವಿಗೆ ದೈವಿಕಶಿಲ್ಪಿಯಾದ ದೇವರು ವಿಚಿತ್ರವಾದ ಬಣ್ಣಗಳ ಅಲಂಕಾರವನ್ನು ಕೊಟ್ಟರೆ ತನ್ನ ಸ್ವರೂಪದಲ್ಲಿ ಉಂಟು ಮಾಡಲ್ಪಟ್ಟಿರುವವರಿಗಾಗಿ ಎÀ್ಟು ಚಿಂತಿಸುತ್ತಾನೆ? ಜೀವಮಾನದ ಚಿಂತೆ, ಗಲಿಬಿಲಿ ಮತ್ತು ಸಂಶಯಗಳಿಂದ ತುಂಬಿರುವವರಿಗೆ ಇದು ಕ್ರಿಸ್ತನ ಗದರಿಕೆಯ ಪಾಠವಾಗಿದೆ.LI 113.1

    ಕರ್ತನು ತನ್ನ ಮಕ್ಕಳೆಲ್ಲರೂ ಸಂತೋÀ, ಶಾಂತಿ ಮತ್ತು ವಿಧೇಯತೆಯಿಂದ ಕೂಡಿದ ಮಕ್ಕಳಾಗಿರಬೇಕೆಂದು ಆಶೆಪಡುತ್ತಾನೆ. ಆತನು ಹೀಗೆ ಹೇಳುತ್ತಾನೆ. “ಶಾಂತಿಯನ್ನು ಬಿಟ್ಟುಹೋಗುತ್ತೇನೆ, ನನ್ನಲ್ಲಿರುವ ಶಾಂತಿಯನ್ನು ನಿಮಗೆ ಕೊಡುತ್ತೇನೆ, ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ ಹೆದರದಿರಲಿ ನನ್ನಲ್ಲಿರುವ ಆನಂದವು ನಿಮ್ಮಲ್ಲಿರಬೇಕೆಂತಲೂ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ.”LI 114.1

    ಕರ್ತವ್ಯದೃಷ್ಟಿಯಿಂದಲ್ಲದೆ ಸ್ವಾರ್ಥಕ್ಕಾಗಿ ಆನಂದವನ್ನು ಹೊಂದುವುದು ಸ್ವಲ್ಪಕಾಲವಿರುವು ದಾಗಿಯೂ ಚಂಚಲವಾದುದಾಗಿಯೂ ಅಶಾಂತಿಯನ್ನುಂಟು ಮಾಡುವುದಾಗಿಯೂ ಇರುತ್ತದೆ. ಅದು ಜಾಗ್ರತೆ ಅದೃÀ್ಯವಾಗಿ ಆತ್ಮವು ಒಂಟಿಯಾಗಿಯೂ ವ್ಯಸನದಿಂದ ಕೂಡಿದ್ದಾಗಿಯೂ ಇರುವಂತೆ ಮಾಡುತ್ತದೆ. ಆದರೆ ದೈವಸೇವೆಯಿಂದ ಆನಂದವೂ ತೃಪ್ತಿಯೂ ಉಂಟಾಗುತ್ತದೆ. ಕ್ರೈಸ್ತನು ಗೊತ್ತು ಗುರಿಯಿಲ್ಲದೆ ದಾರಿಯಲ್ಲಿ ನಡೆಯಬೇಕಾದುದಿಲ್ಲ; ಆತನು ನಿರರ್ಥಕವಾದ ವ್ಯಸನಗಳಲ್ಲಿಯೂ ಆಶಾಭಂಗಗಳಲ್ಲಿಯೂ ಬಿಡಲ್ಪಡನು. ಈ ಜೀವಮಾನದಲ್ಲಿ ಬೇಕಾದ ಸುಖಸಂತೋÀಗಳಿಲ್ಲವಾದರೂ ಮರಣಾನಂತರದ ಮುಂದಿನ ಜೀವಮಾನವನ್ನು ನಿರೀಕ್ಷಿಸುತ್ತಾ ಹರ್Àವುಳ್ಳವರಾಗಿರಬೇಕು.LI 115.1

    ಆದರೆ ಈ ಲೋಕದಲ್ಲೇ ಕ್ರೈಸ್ತರು ಕ್ರಿಸ್ತನ ಸಹವಾಸದ ಸಂತೋÀದಲ್ಲಿರಬಹುದು. ಅವರು ಆತನ ಪ್ರೀತಿಯ ಬೆಳಕನ್ನೂ ಆತನ ಸುಮ್ಮುಖದಿಂದ ಸದಾ ದೊರಕುವ ಆನಂದವನ್ನೂ ಹೊಂದಬಹುದು. ಜೀವಮಾನದ ಒಂದೊಂದು ಹೆಜ್ಜೆಯೂ (ಅಂತಸ್ತು) ನಮ್ಮನ್ನು ಕ್ರಿಸ್ತನ ಹತ್ತಿರತ್ತಿರಕ್ಕೆ ತರಬಹುದು ಹೆಚ್ಚಿನ ಅನುಭವವನ್ನು ಕೊಡಬಹುದು ಮತ್ತು ಆಶೀರ್ವಾದದಿಂದ ಕೂಡಿದ ಶಾಂತಿಯ ಮನೆಗೆ ಪ್ರತಿದಿನವೂ ಒಂದೊಂದು ಹೆಜ್ಜೆ ಸಮೀಪಿಸಬಹುದು. ನಾವು ನಮ್ಮ ನಂಬಿಕೆಯನ್ನು ಬಿಡದಿರೋಣ, ಹಿಂದಿನ ಭರವಸೆಕ್ಕಿಂತಲೂ ಹೆಚ್ಚಿನ ಭರವಸೆದಿಂದರೋಣ. ದೇವರು ಈವರೆಗೂ ನಮ್ಮ ಸಹಾಯಕನಾಗಿದ್ದಾನೆ. ಮತ್ತು ಅಂತ್ಯದವರೆಗೂ ನಮ್ಮ ಸಹಾಯಕನಾಗಿರುವನು. ನಮ್ಮನ್ನು ಕೆಡಕನ ಕೈಗೆ ತಪ್ಪಿಸಲೂ ನಮಗೆ ಆನಂದವನ್ನುಂಟು ಮಾಡಲೂ ಮಾಡಿರುವ ಸ್ಮಾರಕ ಕಂಭಗಳಂತಿರುವ ಸುಸಮಯಗಳನ್ನು ನಾವು ಜ್ಞಾಪಿಸಿಕೊಳ್ಳುವ ನಮ್ಮ ಕಣ್ಣೀರನ್ನು ಆತನು ಹಿರಿಸಿದ್ದು ನಮ್ಮ ಬಾಧೆಗಳನ್ನು ಆತನು ಪರಿಹಾರ ಮಾಡಿದ್ದು ನಮ್ಮ ಭಯಗಳನ್ನು ಆತನು ಹೋಗಲಾಡಿಸಿದ್ದು ನಮಗೆ ಬೇಕಾದುದನ್ನು ಆತನು ಅನುಗ್ರಹಿಸಿದ್ದು ನಮಗೆ ಆತನು ಕೊಟ್ಟ ಆಶೀರ್ವಾದಗಳು ಇವುಗಳನ್ನು ನಾವು ಜ್ಞಾಪದಲ್ಲಿರಿಸಿಕೊಂಡು ಆತನನ್ನು ಸ್ಮರಿಸಬೇಕು ಮತ್ತು ಈ ರೀತಿ ಕರ್ತನು ನಮ್ಮ ಮುಂದಿನ ಜೀವಮಾನದ ಯಾತ್ರೆಯನ್ನು ಮಾಡಲು ನಮ್ಮನ್ನು ಬಲಪಡಿಸುತ್ತಾನೆ.LI 115.2

    ಮುಂದಿನ ಹೋರಾಟದಲ್ಲಿ ನಮಗೆ ಬರುವ ಹೊಸ ಗಲಿಬಿಲಿಗಳ ವಿಚಾರ ನಾವು ಕಾದುಕೊಂಡಿರದೆ ಹಿಂದೆ ಕಳೆದುಹೋದ ಮತ್ತು ಮುಂದೆ ಬರಲಿಕ್ಕಿರುವ ವುಗಳ ವಿಚಾರ ಲಕ್ಷಿಸಿ ಹೀಗೆ ಹೇಳುವ “ಕರ್ತನು ಇಲ್ಲಿನವರೆಗೂ ಸಹಾಯಕನಾಗಿದ್ದಾನೆ ಮತ್ತು ನೀವು ಇರುವವರೆಗೂ ನಿಮಗೆ ಬಲವು ಇರುವುದು.” ನಮ್ಮ ಶಕ್ತಿಗೆ ಮೀರಿದ ಶೋಧನೆ ನಮಗೆ ಬರಲಾರದು. ನಮಗೆ ಕೆಲಸವು ಎಲ್ಲಿ ಸಿಕ್ಕಿದರೂ ಸರಿ ಅದನ್ನು ಸ್ವೀಕರಿಸಿ ಮಾಡುವ, ನಮಗೆ ಬರುವ ಶೋಧನೆಗಳನ್ನು ಜಯಿಸಲು ತಕ್ಕ ಪ್ರಮಾಣದ ಶಕ್ತಿಯು ಸಿಕ್ಕುತ್ತದೆಂದು ನಂಬುವ.LI 115.3

    ಕ್ರಮೇಣ ದೇವರ ಮಕ್ಕಳನ್ನು ಸೇರಿಸಲು ಸ್ವರ್ಗದ ಬಾಗಿಲು ತೆರೆಯಲ್ಪಡುವುದು. ಮಹಿಮೆಯ ರಾಜನ ಧ್ವನಿಯು ಬಹು ಇಂ¥ನಾದದಂತೆ ಅವರ ಕಿವಿಗಳಲ್ಲಿ ಈ ರೀತಿ ಬೀಳುವುದು. “ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ತೆಗೆದುಕೊಳ್ಳಿರಿ.”LI 116.1

    ಆಗ ರಕ್ಷಿಸಲ್ಪಟ್ಟವರು ಕ್ರಿಸ್ತನು ಸಿದ್ಧ ಮಾಡಿರುವ ಮನೆಗೆ ಸ್ವಾಗತಿಸಲ್ಪಡುವರು. ಅಲ್ಲಿನ ಅವರ ಸ್ನೇಹಿತರು ಈ ಭೂಲೋಕದವರಂತೆ ಸುಳ್ಳುಗಾರರೂ ವಿಗ್ರಹಾರಾಧಕರೂ ಅಶುದ್ಧರೂ ನಂಬಿಕೆಯಿಲ್ಲದವರೂ ನೀಚರೂ ಆಗಿರದೆ ದೈವಕರುಣೆಯಿಂದ ಸೈತಾನನನ್ನು ಗೆದ್ದು ಸಂಪೂರ್ಣವಾದ ಗುಣಗಳನ್ನು ಹೊಂದಿದವರಾಗಿರುವರು. ಇಲ್ಲಿ ಅವರನ್ನು ಕಾಡಿಸುತ್ತಿದ್ದ ಒಂದೊಂದು ಪಾಪದ ಆಶೆಯೂ ಕ್ರಿಸ್ತನ ರಕ್ತದಿಂದ ಹೋಗಲಾಡಿಸಲ್ಪಟ್ಟು ಸೂರ್ಯನ ಬೆಳಕನ್ನು ಧಿಕ್ಕರಿಸುವ ದೈವಮಹಿಮೆಯ ಬೆಳಕು ಅವರ ಮುಖಗಳಲ್ಲಿ ಕಂಡುಬರುವುದು. ಕ್ರಿಸ್ತನ ಸಂಪೂರ್ಣವಾದ ಮತ್ತು ನೀತಿಯ ಗುಣವು ಅವರ ಮುಖಗಳಲ್ಲಿ ತೇಜಸ್ಸಿನಿಂದ ಬೆಳಗುವುದು. ಇದು ಹೊರಗಿನ ತೋರಿಕೆಯ ಕಾಂತಿಗಿಂತಲೂ ಅತಿಶಯವಾದುದು.LI 116.2

    ಹೀಗೆ ಒಬ್ಬನಿಗೆ ಸ್ವಂತವಾಗಿ ಸಿಕ್ಕುವ ಈ ಮಹಿಮಾಸ್ವಾಸ್ಥ್ಯಕ್ಕೆ ಬದಲು ಏನನ್ನು ಆತನು ಕೊಟ್ಟಾನು? “ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?”3 ಒಬ್ಬ ಮನುÀ್ಯನು ಬಡವನಾಗಿರಬಹುದು. ಆದರೆ ಆತನಲ್ಲೇ ಈ ಪ್ರಪಂಚವು ಕೊಡಲಾರದ ಒಂದು ನಿಧಿಯೂ ಮತ್ತು ಘನತೆಯೂ ಉಂಟು. ತನ್ನ ಶಕ್ತಿಯನ್ನೆಲ್ಲಾ ದೇವರ ಸೇವೆಗೆ ಧಾರೆಯೆರೆದು ಪಾಪದಿಂದ ಶುದ್ಧಮಾಡಲ್ಪಟ್ಟು ರಕ್ಷಣೆ ಹೊಂದಿದ ಒಂದು ಆತ್ಮನ ಬೆಲೆಯನ್ನು ಕಟ್ಟಲು ಅಸಾಧ್ಯ; ಸ್ವರ್ಗದಲ್ಲಿ ದೇವರ ಮತ್ತು ದೇವದೂತರ ಸಭೆಯಲ್ಲಿ ರಕ್ಷಿಸಲ್ಪಟ್ಟ ಒಬ್ಬ ಪಾಪಿಯ ವಿಚಾರ ಸಂತೋÀವುಂಟಾಗುವುದು; ಈ ಸಂತೋÀವು ಪರಿಶುದ್ಧ ಜಯದ ಗೀತವಾಗಿರುವುದು.LI 116.3

    Larger font
    Smaller font
    Copy
    Print
    Contents